ವೀಡಿಯೊ…| ಮಗ ಅಗ್ನಿ ಅವಘಡದಿಂದ ಪಾರಾಗಿದ್ದಕ್ಕೆ ತಿರುಪತಿಯಲ್ಲಿ ಮುಡಿಕೊಟ್ಟ ಆಂಧ್ರ ಡಿಸಿಎಂ ಪವನಕಲ್ಯಾಣ ಪತ್ನಿ ಅನ್ನಾ ಲೆಜ್ನೆವಾ ..

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ಜನಸೇನಾ ಪಕ್ಷದ ಮುಖ್ಯಸ್ಥ ಪವನಕಲ್ಯಾಣ ಅವರ ಪತ್ನಿ ಅನ್ನಾ ಲೆಜ್ನೆವಾ ಭಾನುವಾರ ಸಂಜೆ ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಉಪವಾಸವನ್ನು ಪೂರ್ಣಗೊಳಿಸಿದರು. ಸಿಂಗಾಪುರದ ಶಾಲೆಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ತಮ್ಮ ಮಗ ಮಾರ್ಕ್ ಶಂಕರ್ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆಯ ನಂತರ ತಿರುಪತಿಗೆ ಭೇಟಿ ನೀಡಿದ್ದಾರೆ. ಹಾಗೂ ದೇವರಿಗೆ ಮುಡಿಕೊಟ್ಟಿದ್ದಾರೆ.
ಸಿಂಗಾಪುರದ ಶಾಲೆಯಲ್ಲಿ ಸಂಭವಿಸಿದ ಬೆಂಕಿ ಅನಾಹುತದ ನಂತರ, ಪವನ ಕಲ್ಯಾಣ ಅವರು ತಮ್ಮ ಮಗನನ್ನು ಭಾರತಕ್ಕೆ ಕರೆತಂದರು.ಇತ್ತೀಚೆಗೆ ಸಿಂಗಾಪುರದ ಶಾಲೆಯೊಂದರಲ್ಲಿ ಸಂಭವಿಸಿದ ಬೆಂಕಿ ಅನಾಹುತವು ಅನೇಕ ಮಕ್ಕಳನ್ನು ಅಪಾಯಕ್ಕೆ ಸಿಲುಕಿಸಿತು. ಅದೃಷ್ಟವಶಾತ್, ಪವನ ಕಲ್ಯಾಣ ಮತ್ತು ಅನ್ನಾ ಲೆಜ್ನೆವಾ ಅವರ ಮಗ ಶಂಕರ ದೊಡ್ಡ ಅಪಾಯದಿಂದ ಪಾರಾಗಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಪಘಾತದ ಸುದ್ದಿ ತಿಳಿದ ತಕ್ಷಣ, ಪವನ ಕಲ್ಯಾಣ ಸಿಂಗಾಪುರಕ್ಕೆ ತೆರಳಿ ತಮ್ಮ ಮಗನನ್ನು ಭಾರತಕ್ಕೆ ಕರೆತಂದರು. ಇದಾದ ನಂತರ, ಅವರು ತಿರುಪತಿಯ ವೆಂಕಟರಮಣನ ಆಶೀರ್ವಾದದಿಂದ ಹೆಚ್ಚಿನ ಅಪಾಯ ಸಂಭವಿಸಲ್ಲ ಎಂಬ ನಂಬಿಕೆಯಿಂದ ದೇಗುಲಕ್ಕೆ ಭೇಟಿ ನೀಡಿದ್ದಾರೆ.
ತೆಲುಗು ಸೂಪರ್‌ ಸ್ಟಾರ್‌ ಪವನ ಕಲ್ಯಾಣ ಪತ್ನಿ ಅನ್ನಾ ಲೆಜ್ನೆವಾ ತಿರುಪತಿ ದೇಗುಲದ ಪ್ರತಿಯೊಂದು ನಿಯಮವನ್ನು ಪಾಲಿಸಿದರು, ಅವರು ಅಲ್ಲಿ ದೇವರಿಗೆ ಮುಡಿ (ಕೂದಲು) ಕೊಟ್ಟಿದ್ದಾರೆ. ಅನ್ನಾ ಲೆಜ್ನೆವಾ ಭಾನುವಾರ ಸಂಜೆ ದೇವಸ್ಥಾನವನ್ನು ತಲುಪಿ, ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ನಿಯಮಗಳ ಪ್ರಕಾರ ಗಾಯತ್ರಿ ಸದನದಲ್ಲಿ ಘೋಷಣೆಗೆ ಸಹಿ ಹಾಕಿದರು.

ಅವರು ಮೊದಲು ಶ್ರೀ ವರಾಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಇದಾದ ನಂತರ, ಅವರು ಪವಿತ್ರ ಪದ್ಮಾವತಿ ಕಲ್ಯಾಣ ಕಟ್ಟೆಯಲ್ಲಿ ದೇವರಿಗೆ ಮುಡಿಕೊಡುವ ಮೂಲಕ ತಮ್ಮ ಉಪವಾಸವನ್ನು ಪೂರ್ಣಗೊಳಿಸಿದರು.
ಸೋಮವಾರ ಬೆಳಿಗ್ಗೆ, ಅವರುವೆಂಕಟೇಶ್ವರನ ದರ್ಶನ ಪಡೆಯಲಿದ್ದು, ಸುಪ್ರಭಾತ ಸೇವೆಯಲ್ಲಿ ಭಾಗವಹಿಸಲಿದ್ದಾರೆ. ಇದಾದ ಬಳಿಕ ತಿರಿಗೊಂಡ ವೆಂಗಮಾಂಬ ಅನ್ನದಾನ ಕೇಂದ್ರದಲ್ಲಿ ಅನ್ನ ಪ್ರಸಾದದಲ್ಲಿ ಭಾಗವಹಿಸಿ ಟಿಟಿಡಿಯ ನಿತ್ಯ ಅನ್ನದಾನ ಕಾರ್ಯಕ್ರಮಕ್ಕೆ ದೇಣಿಗೆ ನೀಡಲಿದ್ದಾರೆ. ಅನ್ನಾ ಲೆಜ್ನೆವಾ ಮತ್ತು ಪವನ ಕಲ್ಯಾಣ ಅವರು ತಮ್ಮ ಮಗನ ಪವಾಡಸದೃಶ ಬದುಕುಳಿಯುವಿಕೆ ದೇವರ ದಯೆಯಿಂದ ಮಾತ್ರ ಸಾಧ್ಯ ಎಂದು ಅವರು ನಂಬುತ್ತಾರೆ.

ಪ್ರಮುಖ ಸುದ್ದಿ :-   ಹೈದರಾಬಾದ್‌ ಕ್ರಿಕೆಟ್‌ ಸ್ಟೇಡಿಯಂ ಸ್ಟ್ಯಾಂಡ್‌ ನಿಂದ ಮೊಹಮ್ಮದ್ ಅಜರುದ್ದೀನ್ ಹೆಸರು ತೆಗೆದುಹಾಕಲು ಆದೇಶ...

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement