ವಾಡಿಕೆಗಿಂತ ಒಂದು ವಾರಕ್ಕಿಂತ ಮೊದಲೇ ಕೇರಳಕ್ಕೆ ಆಗಮಿಸಿದ ನೈಋತ್ಯ ಮುಂಗಾರು ಮಳೆ…!

ನವದೆಹಲಿ: ನೈಋತ್ಯ ಮಾನ್ಸೂನ್ ಶನಿವಾರ ಕೇರಳವನ್ನು ತಲುಪಿದ್ದು, 2009 ರ ನಂತರ ಭಾರತದ ಮುಖ್ಯ ಭೂಭಾಗಕ್ಕೆ ನೈಋತ್ಯ ಮುಂಗಾರು ಮಳೆ ಇಷ್ಟು ಮೊದಲು ಆಗಮಿಸಿರುವುದು ಇದೇ ಮೊದಲು ಎಂದು ಭಾರತ ಹವಾಮಾನ ಇಲಾಖೆ (IMD) ತಿಳಿಸಿದೆ.
2009 ರಲ್ಲಿ, ಮಾನ್ಸೂನ್ ಮೇ 23 ರಂದು ಕೇರಳಕ್ಕೆ ಆಗಮಿಸಿತ್ತು, 1975 ರಿಂದ ಲಭ್ಯವಿರುವ ದತ್ತಾಂಶವು ಮಾನ್ಸೂನ್ 1990 ರಲ್ಲಿ (ಮೇ 19 ರಂದು) ಕೇರಳವನ್ನು ತಲುಪಿತು, ಇದು ಸಾಮಾನ್ಯವಾಗಿ ಮುಂಗಾರು ಕೇರಳವನ್ನು ಪ್ರವೇಶಿವುದಕ್ಕಿಂತ 14 ದಿನಗಳ ಮೊದಲು ಆಗಮಿಸಿತ್ತು. ಕಳೆದ ವರ್ಷ ಮೇ 30 ರಂದು; 2023 ರಲ್ಲಿ ಜೂನ್ 8; 2022 ರಲ್ಲಿ ಮೇ 29; 2021 ರಲ್ಲಿ ಜೂನ್ 3; 2020 ರಲ್ಲಿ ಜೂನ್ 1; 2019 ರಲ್ಲಿ ಜೂನ್ 8; ಮತ್ತು 2018 ರಲ್ಲಿ ಮೇ 29 ರಂದು ಕೇರಳವನ್ನು ಮಾನ್ಸೂನ್ ಪ್ರವೇಶಿಸಿತ್ತು ಎಂದು ಐಎಂಡಿ ದತ್ತಾಂಶವು ತೋರಿಸಿದೆ.
ನೈಋತ್ಯ ಮಾನ್ಸೂನ್ ಕೇರಳ ಕರಾವಳಿಯಲ್ಲಿ ಗಂಟೆಗೆ 35-45 ಕಿ.ಮೀ ವೇಗದಲ್ಲಿ ಗಾಳಿಯೊಂದಿಗೆ ಆಗಮಿಸಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ.

ಪ್ರಮುಖ ಸುದ್ದಿ :-   ಇಂಗ್ಲೆಂಡ್ ಟೆಸ್ಟ್ ಸರಣಿಗೆ ಭಾರತದ ಕ್ರಿಕೆಟ್‌ ತಂಡ ಪ್ರಕಟ ; ಶುಭಮನ್ ಗಿಲ್ ನೂತನ ನಾಯಕ

2025ರಲ್ಲಿ ದೇಶಾದ್ಯಂತ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ನೈಋತ್ಯ ಮಾನ್ಸೂನ್ (SWM) ಮೊದಲೇ ಪ್ರಾರಂಭವಾಗಲಿದೆ ಎಂದು ಅದು ಮೊದಲೇ ಮುನ್ಸೂಚನೆ ನೀಡಿತ್ತು. ಮಾನ್ಸೂನ್ ಮೇ 27 ರ ವೇಳೆಗೆ ಕೇರಳ ಕರಾವಳಿಗೆ ಆಗಮಿಸಲಿದೆ ಎಂದು ಐಎಂಡಿ ಮೇ 10 ರಂದು ಮುನ್ಸೂಚನೆ ನೀಡಿತ್ತು.
ಏಪ್ರಿಲ್ 15 ರಂದು ಬಿಡುಗಡೆಯಾದ ತನ್ನ ಆರಂಭಿಕ ಮಾನ್ಸೂನ್ ಮುನ್ಸೂಚನೆಯಲ್ಲಿ, ದೇಶಾದ್ಯಂತ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಐಎಂಡಿ ಅಂದಾಜಿಸಿದೆ. 2025 ರ ನೈಋತ್ಯ ಮಾನ್ಸೂನ್ ದೀರ್ಘಾವಧಿಯ ಸರಾಸರಿ (LPA) 105% ಕ್ಕಿಂತ ಹೆಚ್ಚಾಗಿರುತ್ತದೆ ಮತ್ತು ಮಾದರಿ ದೋಷದ ಅಂಚು ±5% ಆಗಿರುತ್ತದೆ ಎಂದು ಅದು ನಿರೀಕ್ಷಿಸುತ್ತದೆ.

ಸಾಮಾನ್ಯವಾಗಿ, ನೈಋತ್ಯ ಮಾನ್ಸೂನ್ ಜೂನ್ 1 ರ ವೇಳೆಗೆ ಕೇರಳವನ್ನು ಪ್ರವೇಶಿಸುತ್ತದೆ ಮತ್ತು ಜುಲೈ 8 ರ ವೇಳೆಗೆ ಇಡೀ ದೇಶವನ್ನು ಆವರಿಸುತ್ತದೆ. ಇದು ಸೆಪ್ಟೆಂಬರ್ 17 ರ ಸುಮಾರಿಗೆ ವಾಯುವ್ಯ ಭಾರತದಿಂದ ಹಿಮ್ಮೆಟ್ಟಲು ಪ್ರಾರಂಭಿಸುತ್ತದೆ ಮತ್ತು ಅಕ್ಟೋಬರ್ 15 ರ ವೇಳೆಗೆ ಸಂಪೂರ್ಣವಾಗಿ ಹಿಮ್ಮೆಟ್ಟುತ್ತದೆ.
ಐಎಂಡಿ ಪ್ರಕಾರ, 50 ವರ್ಷಗಳ ಸರಾಸರಿ 87 ಸೆಂ.ಮೀ.ಗಳಲ್ಲಿ ಶೇ. 96 ರಿಂದ ಶೇ. 104 ರಷ್ಟು ಮಳೆಯನ್ನು ‘ವಾಡಿಕೆ’ ಎಂದು ಪರಿಗಣಿಸಲಾಗುತ್ತದೆ.
ದೀರ್ಘಾವಧಿಯ ಸರಾಸರಿಯ ಶೇ. 90 ಕ್ಕಿಂತ ಕಡಿಮೆ ಮಳೆಯನ್ನು ‘ಕೊರತೆ’ ಎಂದು ಪರಿಗಣಿಸಲಾಗುತ್ತದೆ; ಶೇ. 90 ರಿಂದ ಶೇ. 95 ರ ನಡುವೆ ‘ವಾಡಿಕೆಗಿಂತ ಕಡಿಮೆ’; ಶೇ. 105 ರಿಂದ ಶೇ. 110 ರ ನಡುವೆ ‘ವಾಡಿಕೆಗಿಂತ ಹೆಚ್ಚು’; ಮತ್ತು ಶೇ. 110 ಕ್ಕಿಂತ ಹೆಚ್ಚು ಮಳೆಯನ್ನು ‘ಅಧಿಕ’ ಮಳೆ ಎಂದು ಪರಿಗಣಿಸಲಾಗುತ್ತದೆ.
2024 ರಲ್ಲಿ ಭಾರತದಲ್ಲಿ 934.8 ಮಿ.ಮೀ ಮಳೆಯಾಗಿದ್ದು, ಇದು ಸರಾಸರಿಯ ಶೇ. 108 ಮಳೆ ಆಗಿತ್ತು ಮತ್ತು 2020 ರ ನಂತರದ ಅತ್ಯಧಿಕ ಮಳೆಯಾಗಿದೆ.

ಪ್ರಮುಖ ಸುದ್ದಿ :-   ಬಹುಭಾಷಾ ನಟ ಮುಕುಲ್‌ ದೇವ ನಿಧನ

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement