ಅಪರೂಪದ ಫುಟ್ಬಾಲ್‌ ಪಂದ್ಯ | ಪರಿಣತರಂತೆ ಹುಡುಗನೊಂದಿಗೆ ಫುಟ್ಬಾಲ್ ಆಡುವ ಕಾಗೆ ; ಬೆರಗಾದ ಇಂಟರ್ನೆಟ್‌-ವೀಡಿಯೊ ವೀಕ್ಷಿಸಿ

ಕಾಗೆಯೊಂದು, ತನ್ನ ಕೊಕ್ಕನ್ನು ಬಳಸಿ ಚೆಂಡನ್ನು ಹಿಂದಕ್ಕೆ ಮತ್ತು ಮುಂದಕ್ಕೆ ಕಳುಹಿಸುತ್ತಾ ಹುಡುಗನೊಟ್ಟಿಗೆ ಫುಟ್ಬಾಲ್ ಆಡುತ್ತಿರುವುದನ್ನು ತೋರಿಸುವ ವೀಡಿಯೊವೊಂದು ಸಂಚಲನ ಮೂಡಿಸಿದೆ.ದಕ್ಷಿಣ ಗೋವಾದಲ್ಲಿ ಕಾಗೆಯು ಹುಡುಗನ ಜೊತೆ ಸಣ್ಣ ಚೆಂಡಿನಲ್ಲಿ ಫುಟ್ಬಾಲ್ ಆಡುವ ಹೃದಯಸ್ಪರ್ಶಿ ವೀಡಿಯೊ ಪ್ರಸ್ತುತ ಇಂಟರ್ನೆಟ್‌ ಅನ್ನು ಬೆರಗಾಗಿಸಿದೆ.
ಈ ಪಂದ್ಯವನ್ನು ಅತ್ಯಂತ ಮುದ್ದಾದ ಪಂದ್ಯ ಹಾಗೂ ಅಪರೂಪದಲ್ಲಿ ಅಪರೂಪದ ಪಂದ್ಯ ಎಂದು ಮಾತ್ರ ವಿವರಿಸಬಹುದಾದ ರೀತಿಯಲ್ಲಿ ಕಾಗೆಯು ಬಾಲಕನ ಜೊತೆ ಫುಟ್ಬಾಲ್‌ ಆಡುವುದು ಕಂಡುಬಂದಿದೆ.

ಕ್ಲಿಪ್‌ನಲ್ಲಿ, ಹುಡುಗ ಚೆಂಡನ್ನು ಕಾಗೆಯ ಕಡೆಗೆ ನಿಧಾನವಾಗಿ ಒದೆಯುತ್ತಾನೆ, ನಂತರ ಕಾಗೆ ತನ್ನ ಕೊಕ್ಕನ್ನು ಬಳಸಿ ಅದನ್ನು ಹಿಂದಕ್ಕೆ ಹುಡುಗನ ಕಡೆಗೆ ದೂಡಿ ಕಳುಹಿಸುತ್ತದೆ. ಇಬ್ಬರೂ ಚೆಂಡನ್ನು ಹಿಂದಕ್ಕೆ ಮತ್ತು ಮುಂದಕ್ಕೆ ಪಾಸ್ ಮಾಡುವುದನ್ನು ಮುಂದುವರಿಸುತ್ತಾರೆ. ಕಾಗೆ ಪರಿಣತರಂತೆ ತನ್ನ ಕೊಕ್ಕನ್ನು ಬಳಸಿ ನಿಖರವಾಗಿ ಚೆಂಡನ್ನು ಹಿಂದಕ್ಕೆ ಟ್ಯಾಪ್ ಮಾಡಿ ಬಾಲಕ ಇದ್ದಲ್ಲಿಗೆ ಕಳುಹಿಸುತ್ತದೆ .ಹೀಗೆ ಕೆಲವು ಕ್ಷಣದ ವರೆಗೆ ನಡೆಯುತ್ತದೆ.
ಈ ವೀಡಿಯೊವನ್ನು @thegoanonline ಎಂಬ ಹೆಸರಿನಲ್ಲಿ X ನಲ್ಲಿ ಹಂಚಿಕೊಳ್ಳಲಾಗಿದೆ. ನಂತರ @chakdefootballನವರು ಇನ್ಸ್ಟಾಗ್ರಾಂ(Instagram)ನಲ್ಲಿಯೂ ಇದನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಇದನ್ನು ನೋಡಿ ನಿಬ್ಬೆರಗಾಗಿದ್ದಾರೆ. “ಸ್ಟ್ರೈಕರ್ ಬೇಕೇ?” ಎಂಬಲ್ಲಿಂದ ಹಿಡಿದು “ಕ್ರೌನಾಲ್ಡೊ” ವರೆಗೆ ಕಾಮೆಂಟ್‌ಗಳು ಬಂದಿವೆ.

ಪ್ರಮುಖ ಸುದ್ದಿ :-   ದೇಶಭಕ್ತನಾಗುವುದು ಅಷ್ಟು ಕಷ್ಟವೇ?: ಕಾಂಗ್ರೆಸ್ ನಾಯಕರಿಗೆ ಕುಟುಕಿದ ಮಾಜಿ ಸಚಿವ ಸಲ್ಮಾನ್ ಖುರ್ಷಿದ್...!

ಕಾಗೆ ತನ್ನ ಅಸಾಮಾನ್ಯ ಸಾಮರ್ಥ್ಯಗಳಿಗಾಗಿ ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಮತ್ತೊಂದು ಕಾಗೆ ಮನುಷ್ಯ ಮಾತನಾಡುವ ರೀತಿಯನ್ನು ಅನುಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸುದ್ದಿ ಮಾಡಿದೆ.
ಇಂಡಿಯಾ ಟುಡೇ ವರದಿಯ ಪ್ರಕಾರ, 15 ದಿನಗಳ ಗಾಯಗೊಂಡ ಕಾಗೆಯೊಂದು ಮಾಂಗಲ್ಯ ಮುಂಕೆ ಅವರಿಗೆ ಮರದ ಕೆಳಗೆ ಪತ್ತೆಯಾಗಿತ್ತು, ಅವರು ಅದನ್ನು ಮನೆಗೆ ತೆಗೆದುಕೊಂಡು ಹೋದರು. ಕಾಗೆ ಶೀಘ್ರದಲ್ಲೇ ಅವರ ಕುಟುಂಬದ ಭಾಗವಾಯಿತು, ಮಕ್ಕಳೊಂದಿಗೆ ಬೆರೆಯಿತು ಮತ್ತು ಮನೆಯ ಸುತ್ತಲೂ ಮುಕ್ತವಾಗಿ ತಿರುಗಾಡಿತು. ಕಾಲಾನಂತರದಲ್ಲಿ, ಪಕ್ಷಿ ಮನುಷ್ಯರ ಮಾತನ್ನು ಅನುಕರಿಸಲು ಪ್ರಾರಂಭಿಸಿತು, “ಆಯಿ” (ತಾಯಿ), “ಬಾಬಾ” (ತಂದೆ), ಮತ್ತು “ನೀವು ಏನು ಮಾಡುತ್ತಿದ್ದೀರಿ?” ಮತ್ತು “ನೀವು ಮನೆಗೆ ಏಕೆ ಬಂದಿದ್ದೀರಿ?” ಮುಂತಾದ ಪದಗುಚ್ಛಗಳನ್ನು ಸಹ ಉಚ್ಚರಿಸುತ್ತಿದೆ.

ಪ್ರಮುಖ ಸುದ್ದಿ :-   ಹಾನಿಯಾದ ತೂಗು ಸೇತುವೆ ಮೇಲೆ ಭೋರ್ಗರೆವ ನದಿ ದಾಟಲು ಹುಚ್ಚು ಸಾಹಸ ಮಾಡಿದ ವ್ಯಕ್ತಿ : ಮೈ ಜುಂ ಎನ್ನುವ ದೃಶ್ಯದ ವೀಡಿಯೊ ವೈರಲ್‌

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement