ವೀಡಿಯೊ…| ಒಂದು ನಿಮಿಷದಲ್ಲಿ ಒಂದೇ ಕೈಯಿಂದ 122 ತೆಂಗಿನಕಾಯಿ ಒಡೆದು ಹಾಕಿದ ಕೇರಳದ ವ್ಯಕ್ತಿಯಿಂದ ʼಗಿನ್ನೆಸ್ ವಿಶ್ವ ದಾಖಲೆʼ-ವೀಕ್ಷಿಸಿ

ಒಂದು ನಿಮಿಷದಲ್ಲಿ ಒಂದೇ ಕೈಯಿಂದ ಅತಿ ಹೆಚ್ಚು ತೆಂಗಿನಕಾಯಿಗಳನ್ನು ಒಡೆದ ಕೇರಳದ ವ್ಯಕ್ತಿ ಅಭೀಷ್ ಪಿ. ಡೊಮಿನಿಕ್ ಅವರ ವೀಡಿಯೊವನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ ಹಂಚಿಕೊಂಡಿದೆ.
ಅಭೀಷ್‌ ಪಿ. ಡೊಮಿನಿಕ್ ಅವರು ಒಂದು ನಿಮಿಷದಲ್ಲಿ ಒಂದೇ ಕೈಯಿಂದ 122 ತೆಂಗಿನಕಾಯಿಗಳನ್ನು ಒಡೆಯುವ ಮೂಲಕ ಈ ಹಿಂದೆ ಒಂದು ನಿಮಿಷದಲ್ಲಿ 118 ತೆಂಗಿನಕಾಯಿಗಳನ್ನು ಒಡೆದಿದ್ದ ದಾಖಲೆಯನ್ನು ಮುರಿದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪೋಸ್ಟ್ ಮಾಡಿದ ವೀಡಿಯೊ ದಾಖಲೆಯ ವಿಶಿಷ್ಟತೆ ಮತ್ತು ಅಭೀಷ್ ಅವರ ಅದ್ಭುತ ಸಾಧನೆಗಾಗಿ ವ್ಯಾಪಕ ಗಮನ ಸೆಳೆಯುತ್ತಿದೆ.
ಕೇರಳದ ಕೊಟ್ಟಾಯಂ ನಗರದಲ್ಲಿ ಗೋಡೆಯ ಬಳಿ ಸಾಲಾಗಿ 140 ತೆಂಗಿನಕಾಯಿಗಳನ್ನು ಇಡಲಾಗಿದೆ. ಈ ತೆಂಗಿನಕಾಯಿಗಳನ್ನು ಈ ವ್ಯಕ್ತಿ ಒಂದೇ ಕೈಯಲ್ಲಿ ಒಡೆಯುತ್ತ ಹೋಗುವುದನ್ನು ವೀಡಿಯೊದಲ್ಲಿ ಕಾಣಬಹುದು. 60 ಸೆಕೆಂಡುಗಳ ಅವಧಿಯಲ್ಲಿ, ಅವರು ತಮ್ಮ ಒಂದು ಕೈಯನ್ನು ಮಾತ್ರ ಬಳಸಿ ಒಟ್ಟು 122 ತೆಂಗಿನಕಾಯಿಗಳನ್ನು ಒಡೆದಿದ್ದಾರೆ. ಅಂದರೆ ಅವರು ಒಂದು ಸೆಕೆಂಡಿನಲ್ಲಿ 2 ತೆಂಗಿನಕಾಯಿಗಳನ್ನು ಒಡೆಯುತ್ತ ಹೋದರು.

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸೋಶಿಯಲ್ ಮೀಡಿಯಾದಲ್ಲಿ ಇದಕ್ಕೆ ಸಂಬಂಧಪಟ್ಟ ವಿಡಿಯೊವನ್ನು ಪೋಸ್ಟ್ ಮಾಡಿದ್ದು, ಇದು ಈಗ ವೈರಲ್ ಆಗಿದೆ. ಅವರು ಈ ದಾಖಲೆಯನ್ನು 2017ರಲ್ಲಿ ಮಾಡಿದ್ದಾರೆ. ಇದಕ್ಕೂ ಮೊದಲು 2011ರಲ್ಲಿ 1 ನಿಮಿಷದಲ್ಲಿ ಒಂದೇ ಕೈಯಿಂದ 118 ತೆಂಗಿನಕಾಯಿಗಳನ್ನು ಒಡೆದು ಜರ್ಮನ್ ಮುಹಮ್ಮದ್ ಕಹ್ರಿಮಾನೋವಿಕ್ ಎಂಬವರು ದಾಖಲೆಯನ್ನು ಬರೆದಿದ್ದರು. ಅಭೀಷ್ ಅವರು ಈ ದಾಖಲೆಯನ್ನು ಮುರಿಯುವ ತನಕ ಅವರ ಈ ದಾಖಲೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಾಗಿರಲಿಲ್ಲ.

ಪ್ರಮುಖ ಸುದ್ದಿ :-   ಅಕ್ಟೋಬರ್‌ 15ರಿಂದ ಯುಪಿಐ ವಹಿವಾಟಿಗೆ ಶುಲ್ಕ ಜಾರಿ ; ಯಾರಿಗೆ ಶುಲ್ಕ, ಎಷ್ಟು ಶುಲ್ಕ, ಯಾರಿಗೆ ಫ್ರೀ? ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ಈ ನಿರ್ದಿಷ್ಟ ವಿಭಾಗದಲ್ಲಿ ಮುಹಮ್ಮದ್ ಕಹ್ರಿಮಾನೋವಿಕ್ 2005 ರಿಂದ 2011 ರ ಅವಧಿಯಲ್ಲಿ ಐದು ಬಾರಿ ದಾಖಲೆಯನ್ನು ಮುರಿಯುವ ಮೂಲಕ ಪ್ರಾಬಲ್ಯ ಸಾಧಿಸಿದ್ದರು. ಅವರು ಒಂದು ನಿಮಿಷದಲ್ಲಿ ಒಂದು ಕೈಯಲ್ಲಿ ತೆಂಗಿನಕಾಯಿ ಒಡೆಯುವ ಸಂಖ್ಯೆಯನ್ನು 65 ರಿಂದ 118 ಕ್ಕೆ ಏರಿಸಿದ್ದರು. ಅದನ್ನು ಅಭೀಷ್‌ ಮುರಿದ್ದಿದ್ದು, ಅದನ್ನು 122 ಕ್ಕೆ ಏರಿಸಿದ್ದಾರೆ.
ತಮ್ಮ ಕನಸಿನ ದಾಖಲೆಯನ್ನು ಸಾಧಿಸಿದ ನಂತರ, ಅಭೀಷ್‌ ಅವರು, “ನಾನು ಈ ದಾಖಲೆಯನ್ನು ಮುರಿಯಲು ನಿರ್ಧರಿಸಿದೆ ಏಕೆಂದರೆ ನಾನು ದೂರದ ಹಳ್ಳಿಯಿಂದ ಬಂದವನು ಮತ್ತು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ನಮ್ಮಲ್ಲಿ ಯಾರಿಗೇ ಆದರೂ ಕೇವಲ ಕನಸಾಗಿತ್ತು. ನಾನು ದೃಢನಿಶ್ಚಯದ ವ್ಯಕ್ತಿ ಮತ್ತು ಮನುಷ್ಯನ ಇಚ್ಛಾಶಕ್ತಿಯಲ್ಲಿ ನನಗೆ ಬಲವಾದ ನಂಬಿಕೆ ಇದೆ” ಎಂದು ಅವರು ಹೇಳಿದ್ದರು.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement