ಒಂದು ವರ್ಷದ ಮಗು ಕಚ್ಚಿ ನಾಗರಹಾವು ಸಾವು…ಬದುಕುಳಿದ ಮಗು : ಇದಕ್ಕೆ ಕಾರಣ ತಿಳಿಸಿದ ವೈದ್ಯರು

ಪಾಟ್ನಾ: ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬೆಟ್ಟಿಯಾ ಬಳಿಯ ಸಣ್ಣ ಹಳ್ಳಿಯಾದ ಮೊಹ್ಚಿ ಬಂಕಟ್ವಾದಲ್ಲಿ ಕಳೆದ ಗುರುವಾರ ಅಚ್ಚರಿಯ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಒಂದು ವರ್ಷದ ಬಾಲಕನೊಬ್ಬ ವಿಷದ ಹಾವನ್ನು ಕಚ್ಚಿದ ನಂತರ ಅದು ಸಾವಿಗೀಡಾಗಿದ್ದು, ಅದು ಹಾವು ನಾಗರಹಾವು ಎಂದು ಹೇಳಲಾಗಿದೆ.
ಗೋವಿಂದಕುಮಾರ ಎಂಬ ಬಾಲಕ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ, ಅವನ ತಾಯಿ ಹತ್ತಿರದಲ್ಲಿ ಕೆಲಸ ಮಾಡುತ್ತಿದ್ದಳು. ಕುಟುಂಬದ ಪ್ರಕಾರ, ಮಗು ನಾಗರಹಾವನ್ನು ಹಿಡಿದು ತನ್ನ ಹಲ್ಲುಗಳಿಂದ ಕಚ್ಚಿತು. ನಂತರ ಅದು ಸಾವಿಗೀಡಾಯಿತು. ಆ ಕ್ಷಣ ಸ್ಥಳೀಯರಿಗೆ ಭಯಾನಕ ಮತ್ತು ವಿಚಿತ್ರವಾಗಿತ್ತು.
ಮಗು ಗೋವಿಂದನ ಅಜ್ಜಿ ಮತಿಸಾರಿ ದೇವಿ ಮಾತನಾಡಿ, ಹಾವು ಬಂದಾಗ ಮಗು ಮರದ ರಾಶಿಯ ಬಳಿ ಕುಳಿತಿತ್ತು. ಅದನ್ನು ನೋಡಿ ನಾವು ಪ್ರತಿಕ್ರಿಯಿಸುವ ಮೊದಲೇ ಮಗು ಹಾವನ್ನು ಹಿಡದು ಕಚ್ಚಿತ್ತು. ಸ್ವಲ್ಪ ಸಮಯದ ನಂತರ, ಮಗು ಪ್ರಜ್ಞೆ ಕಳೆದುಕೊಂಡಿತು. ಕುಟುಂಬವು ಅವನನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಮತ್ತು ನಂತರ ಬೆಟ್ಟಿಯಾದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿತು ಎಂದು ತಿಳಿಸಿದ್ದಾರೆ.

ವೈದ್ಯರು ಗೋವಿಂದನಿಗೆ ಚಿಕಿತ್ಸೆ ನೀಡಿ ಕಣ್ಗಾವಲಿನಲ್ಲಿಟ್ಟರು. ಅದೃಷ್ಟವಶಾತ್, ಆತ ಬೇಗನೆ ಚೇತರಿಸಿಕೊಂಡನು. ಈ ಸುದ್ದಿ ಹರಡಿತು, ಸ್ಥಳೀಯ ನಿವಾಸಿಗಳು ಮತ್ತು ಮಾಧ್ಯಮಗಳಿಂದ ಗಮನ ಸೆಳೆಯಿತು.
ಶಿಶುವನ್ನು ಪರೀಕ್ಷಿಸಿದ ಸರ್ಕಾರಿ ವೈದ್ಯಕೀಯ ಕಾಲೇಜಿನ ಮಕ್ಕಳ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕುಮಾರಸೌರಭ ಅವರು ಮಾತನಾಡಿ, ಮಗುವನ್ನು ಕರೆತಂದಾಗ ಬಾಯಿಯ ಸುತ್ತಲೂ ಊತವಿತ್ತು, ಮಗು ಹಾವನ್ನು ಕಚ್ಚಿದ್ದು ಮಾತ್ರವಲ್ಲದೆ ಅದರ ಒಂದು ಭಾಗವನ್ನು ನುಂಗಿದೆ ಎಂದು ಕುಟುಂಬದವರು ವರದಿ ಮಾಡಿದ್ದಾರೆ ಎಂದು ತಿಳಿಸಿದರು.
ಮಗು ಬದುಕು ಉಳಿದಿದ್ದರ ಹಿಂದಿನ ವೈದ್ಯಕೀಯ ಅಂಶಗಳನ್ನು ವೈದ್ಯರು ವಿವರಿಸಿದ್ದು, ಹಾವು ವ್ಯಕ್ತಿಯನ್ನು ಕಚ್ಚಿದಾಗ, ವಿಷವು ರಕ್ತಪ್ರವಾಹಕ್ಕೆ ಪ್ರವೇಶಿಸಿ, ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಇದು ಗಂಭೀರ ತೊಡಕುಗಳು ಅಥವಾ ಸಾವಿಗೆ ಕಾರಣವಾಗಬಹುದು. ಆದರೆ, ಮಗು ಗೋವಿಂದನ ಪ್ರಕರಣದಲ್ಲಿ, ಹಾವಿನ ವಿಷವು ಜೀರ್ಣಾಂಗವ್ಯೂಹದ ಮೂಲಕ ಪ್ರವೇಶಿಸಿತು. ಮಾನವನ ಜೀರ್ಣಾಂಗ ವ್ಯವಸ್ಥೆಯು ಕೆಲವು ಸಂದರ್ಭಗಳಲ್ಲಿ ವಿಷವನ್ನು ತಡೆಯುವ ಮತ್ತು ತಟಸ್ಥಗೊಳಿಸುವ ಸಾಮರ್ಥ್ಯ ಹೊಂದಿದೆ, ಹಾನಿಯನ್ನು ತಡೆಯುತ್ತದೆ ಎಂದು ವೈದ್ಯರು ಹೇಳೀದ್ದನ್ನು ಉಲ್ಲೇಖಿಸಿ ಝೀ ನ್ಯೂಸ್‌ ವರದಿ ಮಾಡಿದೆ.

ಪ್ರಮುಖ ಸುದ್ದಿ :-   ಜೂನ್ 22ರ ವರೆಗೆ ದೇಶಾದ್ಯಂತ ಟೆಲಿಗ್ರಾಂ ಬಂದ್‌ ; ನೀಟ್ ಮರುಪರೀಕ್ಷೆ ಅಕ್ರಮ ತಡೆಗೆ ಕ್ರಮ : ತೊಂದರೆಗೆ ಕ್ಷಮೆ ಕೋರಿದ ಎನ್‌ಟಿಎ

ಆಹಾರ ಕೊಳವೆಯಲ್ಲಿ ಯಾವುದೇ ಹುಣ್ಣುಗಳು ಅಥವಾ ಆಂತರಿಕ ರಕ್ತಸ್ರಾವದ ಬಿಂದುಗಳಿದ್ದರೆ, ರಿಸಲ್ಟ್‌ ವಿಭಿನ್ನವಾಗಿರಬಹುದು, ಆದರೆ ಈ ಸಂದರ್ಭದಲ್ಲಿ, ಅಂತಹ ಯಾವುದೇ ಸಮಸ್ಯೆಗಳಿರಲಿಲ್ಲ. ಮಗು ಅದೃಷ್ಟಶಾಲಿಯಾಗಿತ್ತು ಎಂದು ವೈದ್ಯರು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
ಪಾಟ್ನಾ: ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬೆಟ್ಟಿಯಾ ಬಳಿಯ ಸಣ್ಣ ಹಳ್ಳಿಯಾದ ಮೊಹ್ಚಿ ಬಂಕಟ್ವಾದಲ್ಲಿ ಕಳೆದ ಗುರುವಾರ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ. ಒಂದು ವರ್ಷದ ಬಾಲಕನೊಬ್ಬ ಹಾವು ಕಚ್ಚಿ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ. ಆ ಹಾವು ನಾಗರಹಾವು ಎಂದು ಹೇಳಲಾಗಿದೆ.
ಈ ಘಟನೆಯು ಭಾರತದಲ್ಲಿ ಹಾವು ಕಡಿತದ ವ್ಯಾಪಕ ಸಮಸ್ಯೆಯ ಮೇಲೆ ಬೆಳಕು ಚೆಲ್ಲುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರತಿ ವರ್ಷ ಜಾಗತಿಕವಾಗಿ 80,000 ರಿಂದ 1,30,000 ಜನರು ಹಾವು ಕಡಿತದಿಂದ ಸಾಯುತ್ತಾರೆ. ಆ ಸಾವುಗಳಲ್ಲಿ ಭಾರತವೊಂದರಲ್ಲೇ ಸುಮಾರು 58,000 ಸಂಭವಿಸುತ್ತವೆ.
ಸರ್ಕಾರಿ ಅಂಕಿಅಂಶಗಳ ಪ್ರಕಾರ, ಬಿಹಾರದಲ್ಲಿ ಏಪ್ರಿಲ್ 2023 ಮತ್ತು ಮಾರ್ಚ್ 2024 ರ ನಡುವೆ 934 ಜನರು ಹಾವು ಕಡಿತದಿಂದ ಸಾವಿಗೀಡಾಗಿದ್ದಾರೆ.
ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಒಡಿಶಾ, ಉತ್ತರ ಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ ಮತ್ತು ಗುಜರಾತ್‌ನಂತಹ ಗ್ರಾಮೀಣ ರಾಜ್ಯಗಳಲ್ಲಿ ಹಾವು ಕಡಿತದಿಂದ ಹೆಚ್ಚಿನ ಸಾವುಗಳು ಸಂಭವಿಸುತ್ತವೆ.

ಪ್ರಮುಖ ಸುದ್ದಿ :-   ಭಾರತದ ಆಕಾಶದಲ್ಲಿಲ್ಲ ಮಳೆ ತರುವ ಮೋಡಗಳು ; ಆತಂಕಕಾರಿ ವಾಸ್ತವ ಬಿಂಬಿಸಿದ 3 ಉಪಗ್ರಹಗಳ ಚಿತ್ರಗಳು ; ಇದಕ್ಕೆ ಕಾರಣಗಳೇನು?

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement