
ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ ಬುಧವಾರ 8.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ ನಂತರ ವರ್ಷಗಳ ಹಿಂದೆ ಜಪಾನಿನ ಬಾಬಾ ವಂಗಾ ಎಂದೇ ಕರೆಯಲ್ಪಡುವ ರಿಯೋ ತತ್ಸುಕಿ ಅವರ ಮಂಗಾದ ಒಂದು ಭಯಾನಕ ಭವಿಷ್ಯವಾಣಿ ಮತ್ತೆ ಮುನ್ನೆಲೆಗೆ ಬಂದಿದೆ. ನ್ಯೂ ಬಾಬಾ ವಂಗಾ ಎಂದೂ ಕರೆಯಲ್ಪಡುವ ಮಂಗಾ ಕಲಾವಿದೆಯಾದ ರ್ಯೋ ತತ್ಸುಕಿ ಜುಲೈ 2025ರ ವಿಪತ್ತಿನ ಬಗ್ಗೆ ಎಚ್ಚರಿಕೆ ನೀಡಿದ್ದು ಜನರು ಗಮನಸೆಳೆದ ಕೆಲವೇ ವಾರಗಳ ನಂತರ, ಭೂಕಂಪ ಸಂಭವಿಸಿ ಸುನಾಮಿ ಅಲೆಗಳನ್ನು ಉಂಟುಮಾಡಿತು, ಅದು ಜಪಾನ್ನ ಕೆಲವು ಭಾಗಗಳಿಗೂ ಅಪ್ಪಳಿಸಿತು.
ಬುಧವಾರ ಮುಂಜಾನೆ ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ ಸಂಭವಿಸಿದ 8.8 ತೀವ್ರತೆಯ ಪ್ರಬಲ ಭೂಕಂಪ ಜಪಾನಿನ ಉತ್ತರ ದ್ವೀಪ ಹೊಕ್ಕೈಡೊ ಮತ್ತು ರಷ್ಯಾದ ಕುರಿಲ್ ದ್ವೀಪಗಳ ಮೇಲೆ ಬೃಹತ್ ಸುನಾಮಿ ಅಲೆಗಳನ್ನು ಎಬ್ಬಿಸಿದೆ.

ಈ ವಿನಾಶಕಾರಿ ಘಟನೆಯು ನೂತನ ಬಾಬಾ ವಂಗಾ ಎಂದೇ ಕರೆಯಲ್ಪಡುವ ಜಪಾನಿನ ರಿಯೋ ತತ್ಸುಕಿ ಅವರ 1999 ರ ಮಂಗಾ ಭವಿಷ್ಯವಾಣಿ ಬಗ್ಗೆ ಮತ್ತೆ ಆಸಕ್ತಿ ಕೆರಳಿಸಿದೆ. ಕೆಲವರು ಅವರ ಭವಿಷ್ಯವಾಣಿ ನಿಜವಾಗಿದೆ, ಅವರು ಹೇಳಿದ್ದು ಮೂರ್ನಾಲು ವಾರಗಳು ತಡವಾಗಿದೆ ಅಷ್ಟೆ ಎಂದು ಹೇಳಿದ್ದಾರೆ. ತತ್ಸುಕಿ ಅವರ ಮಂಗಾ “ದಿ ಫ್ಯೂಚರ್ ಐ ಸಾ” ಪ್ರಕಾರ, ಜುಲೈ 5, 2025 ರಂದು ದಕ್ಷಿಣ ಜಪಾನ್ನಲ್ಲಿ ಒಂದು ದೊಡ್ಡ ವಿಪತ್ತು ಸಂಭವಿಸುವ ಮುನ್ಸೂಚನೆ ಇತ್ತು.
ವಿಪತ್ತು ಜುಲೈ 5 ರಂದು ಸಂಭವಿಸದಿದ್ದರೂ, ರಿಯೋ ತತ್ಸುಕಿ ಅವರ ಭವಿಷ್ಯವಾಣಿಯು ನಿರ್ದಿಷ್ಟ ದಿನಾಂಕಕ್ಕಿಂತ ಹೆಚ್ಚಾಗಿ ಇಡೀ ತಿಂಗಳಿಗೆ ನೀಡಿದ್ದ ಎಚ್ಚರಿಕೆಯಾಗಿತ್ತೇ ಎಂದು ಈಗ ಹಲವರು ಆಶ್ಚರ್ಯ ಪಡುತ್ತಿದ್ದಾರೆ. ಕೇವಲ 25 ದಿನಗಳ ನಂತರ ಸಂಭವಿಸಿದ ಬೃಹತ್ ಭೂಕಂಪ ಮತ್ತು ಬೃಹತ್ ಸುನಾಮಿ ಅಲೆಗಳು ಉಂಟಾಗಿದ್ದು ಜನರು ಭವಿಷ್ಯವಾಣಿಯನ್ನು ಮರುಪರಿಶೀಲಿಸುತ್ತಿದ್ದಾರೆ. ಜುಲೈ 5 ರ ದಿನಾಂಕಕ್ಕೆ ಅದರ ಸಾಮೀಪ್ಯವನ್ನು ಗಮನಿಸಿ. ಇದು ವಿಶಾಲವಾದ ಸಮಯ ಚೌಕಟ್ಟನ್ನು ಉಲ್ಲೇಖಿಸುತ್ತಿದೆಯೇ ಎಂದು ಪ್ರಶ್ನಿಸುತ್ತಿದ್ದಾರೆ. ಸಮಯ ಅಸ್ಪಷ್ಟವಾಗಿರಬಹುದು, ಆದರೆ ಅದು ಸಂಭವಿಸಿದೆ ಎಂದು ಹೇಳಿದ್ದಾರೆ.
ಭೂಕಂಪದ ಸುದ್ದಿ ಹರಡುತ್ತಿದ್ದಂತೆ, ಗಮನವು 1999 ರಲ್ಲಿ ಮೊದಲು ಪ್ರಕಟವಾದ ತಾತ್ಸುಕಿಯ ಮಾಂಗಾ ವಾಟಾಶಿ ಗ ಮಿತಾ ಮಿರೈ (ನಾನು ನೋಡಿದ ಭವಿಷ್ಯ) ಮತ್ತೆ ಸುದ್ದಿಯಾಯಿತು. ತತ್ಸುಕಿ ಅವರು ಇದರಲ್ಲಿ ಈ ಹಿಂದಿನ ವಿಪತ್ತುಗಳನ್ನು ನಿಖರವಾಗಿ ಊಹಿಸಿದ್ದಾರೆ ಎಂದು ಅನೇಕ ಅಭಿಮಾನಿಗಳು ನಂಬುತ್ತಾರೆ. ತತ್ಸುಕಿ ಅವರ ಮಂಗಾ ಭವಿಷ್ಯವಾಣಿಯು ರಾಜಕುಮಾರಿ ಡಯಾನಾ ಮತ್ತು ಫ್ರೆಡ್ಡಿ ಮರ್ಕ್ಯುರಿಯ ಸಾವುಗಳು, ಕೋವಿಡ್-19 ಸಾಂಕ್ರಾಮಿಕದ ಉಲ್ಬಣ ಮತ್ತು ಅತ್ಯಂತ ಪ್ರಸಿದ್ಧವಾಗಿ, ಮಾರ್ಚ್ 2011 ರ ಭೂಕಂಪ ಮತ್ತು ಸುನಾಮಿಯಂತಹ ನಿಜ ಘಟನೆಗಳನ್ನು ಉಲ್ಲೇಖಿಸುವುದಕ್ಕೆ ಹೆಸರುವಾಸಿಯಾಗಿದೆ.
ಈ ವರ್ಷ, ತಾತ್ಸುಕಿಯ ಮಾಂಗಾ ಭವಿಷ್ಯವಾಣಿಯ ಹಲವಾರು ಅಭಿಮಾನಿಗಳು ಜುಲೈ 2025 ಕ್ಕೆ ಉಲ್ಲೇಖಿಸಲಾದ ಎಚ್ಚರಿಕೆಯನ್ನು ಫ್ಲ್ಯಾಗ್ ಮಾಡಿದ್ದರು. ಜುಲೈ 5 ರಂದು ಏನಾದರೂ ದೊಡ್ಡ ಘಟನೆ ಸಂಭವಿಸಬಹುದು ಎಂದು ಹಲವರು ಊಹಿಸಿದ್ದರು.
ಆದರೆ ಆ ದಿನಾಂಕವು ಯಾವುದೇ ಘಟನೆಯಿಲ್ಲದೆ ಬಂದು ಹೋದ ನಂತರ ಹೆಚ್ಚಿನ ಜನರು ಅದನ್ನು ತಿರಸ್ಕರಿಸಿ ಮುಂದುವರೆದರು. ಆದರೆ ಈಗ, ಬುಧವಾರದ ಬಲವಾದ ಭೂಕಂಪ ಮತ್ತು ಅದರ ಪರಿಣಾಮವಾಗಿ ಉಂಟಾದ ಸುನಾಮಿ ಅಲೆಗಳ ಬಗ್ಗೆ ಎಚ್ಚರಿಕೆ ನೀಡಿ ಲಕ್ಷಾಂತರ ಜನರನ್ನು ಜಪಾನ್ ಹಾಗೂ ರಷ್ಯಾದ ಕೆಲವು ಸಮುದ್ರತೀರ ಪ್ರದೇಶಗಳಿಂದ ಸ್ಥಳಾಂತರ ಮಾಡಿದ ನಂತರ ತತ್ಸುಕಿಯ ಮಂಗಾ ಭವಿಷ್ಯವಾಣಿಯ ಚರ್ಚೆಗಳು ಮುನ್ನೆಲೆಗ ಬಂದಿದೆ. ತತ್ಸುಕಿ ಅವರ ಭವಿಷ್ಯವಾಣಿ ನಿಖರವಾಗಿ ಜುಲೈ 5ರಂದು ಸಂಭವಿಸದಿದ್ದರೂ ಭವಿಷ್ಯವಾಣಿಯು ಜುಲೈ ತಿಂಗಳಲ್ಲಿಯೇ ಸಂಭವಿಸಿದೆ ಎಂದು ಹಲವರು ಆಶ್ಚರ್ಯ ಪಡುತ್ತಿದ್ದಾರೆ.
2011 ರ ಭೂಕಂಪದಂತೆಯೇ ಉತ್ತರ ಫೆಸಿಫಿಕ್ ಪ್ರದೇಶದಲ್ಲಿ ಮತ್ತೊಂದು ಭೂಕಂಪ ಸಂಭವಿಸಲಿದೆ, ಅದರಿಂದ ಸುನಾಮಿ ಉಂಟಾಗಿ ಹಾನಿಯಾಗಲಿದೆ ಎಂದು ಜಪಾನಿನ ತತ್ಸುಕಿ ದಶಕಗಳ ಮೊದಲೇ ಊಹಿಸಿದ್ದರು. ಬುಧವಾರ ರಷ್ಯಾದ ಕರಾವಳಿಯಲ್ಲಿ 8.8 ರ ಪ್ರಬಲ ಭೂಕಂಪ ಸಂಭವಿಸಿ 10–13 ಅಡಿಗಳಷ್ಟು ಎತ್ತರದ ಸಮುದ್ರದ ಅಲೆಗಳು ಉಂಟಾದ ನಂತರ ಹಲವರು ಅವರ ಭವಿಷ್ಯವಾಣಿ ನಿಜವಾಗಿದೆ ಹಾಗೂ ನಿಖರವಾಗಿದೆ ಎಂದು ಹೇಳುತ್ತಿದ್ದಾರೆ.
“ನಿಖರವಾದ ದಿನಾಂಕವಲ್ಲ, ಆದರೆ ನೀವು ರಿಯೋ ತತ್ಸುಕಿಯನ್ನು ಗೌರವಿಸಬೇಕು” ಎಂದು ಒಬ್ಬರು ಸಾಮಾಜಿಕ ಪೋಸ್ಟ್ನಲ್ಲಿ ಬರೆದಿದ್ದಾರೆ. “ನ್ಯೂ ಬಾಬಾ ವಂಗಾ, ರಿಯೋ ತತ್ಸುಕಿ, ಜುಲೈ 2025 ಕ್ಕೆ ಮೆಗಾ ಸುನಾಮಿಯನ್ನು ಹೇಗೆ ಊಹಿಸಿದರು? “ನೀವು ಪಶ್ಚಿಮ ಕರಾವಳಿಯಲ್ಲಿದ್ದರೆ, ನೀರಿನಿಂದ ದೂರವಿರಿ” ಎಂದು ವ್ಯಕ್ತಿಯೊಬ್ಬರು ಎಚ್ಚರಿಸಿದ್ದಾರೆ.
ರಷ್ಯಾದಲ್ಲಿ ಭಾರಿ ಭೂಕಂಪ
1952 ರ ನಂತರದ ರಷ್ಯಾದಲ್ಲಿ ಸಂಭವಿಸಿದ ಅತ್ಯಂತ ಪ್ರಬಲ ಭೂಕಂಪ ಎಂದು ವಿವರಿಸಲಾದ ಈ ಭೂಕಂಪವು ರಷ್ಯಾದ ದೂರದ ಪೂರ್ವದ ಕರಾವಳಿ ನಗರವಾದ ಪೆಟ್ರೋಪಾವ್ಲೋವ್ಸ್ಕ್-ಕಮ್ಚಾಟ್ಸ್ಕಿಯ ಆಗ್ನೇಯಕ್ಕೆ ಸುಮಾರು 125 ಕಿ.ಮೀ ದೂರದಲ್ಲಿ ಸಂಭವಿಸಿದೆ. ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಇದು 19.3 ಕಿ.ಮೀ ಆಳದಲ್ಲಿ ಸಂಭವಿಸಿದೆ. ನಂತರ, ರಷ್ಯಾದ ಕಮ್ಚಾಟ್ಕಾ ಕರಾವಳಿಯ ಕೆಲವು ಭಾಗಗಳಲ್ಲಿ 3 ರಿಂದ 4 ಮೀಟರ್ (10–13 ಅಡಿ) ವರೆಗಿನ ಸುನಾಮಿ ಅಲೆಗಳು ಎದ್ದಿವೆ.
ಜಪಾನ್ನಲ್ಲಿ ಸುನಾಮಿ ಎಚ್ಚರಿಕೆಗಳು
ಜಪಾನಿನ ಪೆಸಿಫಿಕ್ ಕರಾವಳಿಯಾದ್ಯಂತ ಕಂಪನಗಳು ಮತ್ತು ಅಲೆಗಳು ಸುನಾಮಿ ಎಚ್ಚರಿಕೆಗಳನ್ನು ನೀಡಲಾಗಿದೆ. ಜಪಾನ್ನ ಹವಾಮಾನ ಸಂಸ್ಥೆಯು ಕರಾವಳಿ ಪ್ರದೇಶಗಳನ್ನು 3 ಮೀಟರ್ (10 ಅಡಿ) ವರೆಗೆ ಅಲೆಗಳು ಅಪ್ಪಳಿಸಬಹುದು ಎಂದು ಎಚ್ಚರಿಕೆ ನೀಡಿದೆ. ಇಲ್ಲಿಯವರೆಗೆ, 30 ಸೆಂಟಿಮೀಟರ್ (ಒಂದು ಅಡಿ) ವರೆಗಿನ ಅಲೆಗಳು ಮುಖ್ಯ ಉತ್ತರ ದ್ವೀಪವಾದ ಹೊಕ್ಕೈಡೊವನ್ನು ಅಪ್ಪಳಿಸಿವೆ ಎಂದು ಪ್ರಸಾರಕ ಎನ್ಎಚ್ಕೆ (NHK) ವರದಿ ಮಾಡಿದೆ.
ಜಪಾನ್ನಲ್ಲಿ ಕೇವಲ ಸಣ್ಣ… ಸುನಾಮಿ ಅಲೆಗಳು ಮತ್ತು ಯಾವುದೇ ಗೋಚರ ಹಾನಿ ಇಲ್ಲ, ಯಾವುದೇ ತುರ್ತು ಸಂದರ್ಭದಲ್ಲಿ ಮಾಹಿತಿ ಸಂಗ್ರಹಣೆ ಮತ್ತು ಪ್ರತಿಕ್ರಿಯೆಗಾಗಿ ಕಾರ್ಯಪಡೆಯನ್ನು ಸ್ಥಾಪಿಸಿರುವುದಾಗಿ ಸರ್ಕಾರ ಹೇಳಿದೆ.


ನಿಮ್ಮ ಕಾಮೆಂಟ್ ಬರೆಯಿರಿ