ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿಸುತ್ತಿರುವುದಕ್ಕೆ ದಂಡನಾತ್ಮಕ ಕ್ರಮವಾಗಿ ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತ್ಯಧಿಕ 50%ರಷ್ಟು ಸುಂಕ ವಿಧಿಸುವ ಘೋಷಣೆ ಮಾಡಿದೆ. ಆದರೆ ಅಮೆರಿಕ ಸರ್ಕಾರದ ದತ್ತಾಂಶದ ಆಳವಾದ ತನಿಖೆಯೇ ಅಮೆರಿಕದ ಬೂಟಾಟಿಕೆಯನ್ನು ಬಹಿರಂಗಪಡಿಸಿದೆ…!
ರಷ್ಯಾವು ಉಕ್ರೇನ್ ಮೇಲೆ ಆಕ್ರಮಣ ಪ್ರಾರಂಭಿಸಿದ ಸುಮಾರು ನಾಲ್ಕು ವರ್ಷಗಳಲ್ಲಿ ಅಮೆರಿಕವು ತನ್ನ ಮಿತ್ರ ರಾಷ್ಟ್ರವಾದ ಉಕ್ರೇನ್‌ಗಿಂತ ಹೆಚ್ಚಿನ ವ್ಯಾಪಾರವನ್ನು ರಷ್ಯಾದ ಜೊತೆ ಮಾಡಿದೆ ಎಂದು ಅಮೆರಿಕದ ಜನಗಣತಿ ಬ್ಯೂರೋದ ಮಾಸಿಕ ವ್ಯಾಪಾರ ದತ್ತಾಂಶವು ತೋರಿಸಿದೆ…!
ಫೆಬ್ರವರಿ 2022 ರಲ್ಲಿ ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾಗುವ ಮೊದಲು, ರಷ್ಯಾದ ಜೊತೆಗಿನ ಅಮೆರಿಕದ ವ್ಯಾಪಾರವು ವ್ಯಾಪಾರವು USD 25.233 ಶತಕೋಟಿ ಆಗಿದ್ದರೆ, ಉಕ್ರೇನ್ ಜೊತೆಗೆ ಅದರ ವ್ಯಾಪಾರವು ಕೇವಲ USD 9.69 ಶತಕೋಟಿ ಆಗಿತ್ತು ಎಂದು ಅಂಕಿ ಅಂಶಗಳು ತೋರಿಸುತ್ತದೆ. ರಷ್ಯಾ-ಉಕ್ರೇನ್ ಯುದ್ಧದ ಆರಂಭದ ನಂತರ ಅಮೆರಿಕ ಮತ್ತು ರಷ್ಯಾ ನಡುವಿನ ವ್ಯಾಪಾರವು ತೀವ್ರವಾಗಿ ಕುಗ್ಗಿದ್ದರೂ, ಅದು ಅಮೆರಿಕ-ಉಕ್ರೇನಿಯನ್ ವ್ಯಾಪಾರಕ್ಕಿಂತ ಗಮನಾರ್ಹವಾಗಿ ಹೆಚ್ಚಿದೆ.
ಫೆಬ್ರವರಿ 2022 ರಿಂದ ನಾವು ಎರಡು ರಾಷ್ಟ್ರಗಳ ಆಮದು ಡೇಟಾವನ್ನು ನೋಡಿದರೆ, ಅಮೆರಿಕವು $22.55 ಶತಕೋಟಿ ರಷ್ಯಾದ ಸರಕುಗಳನ್ನು ಆಮದು ಮಾಡಿಕೊಂಡಿದೆ. ಅದೇ ಸಮಯದಲ್ಲಿ, ಉಕ್ರೇನ್ ನಿಂದ ಅಮೆರಿಕವು ಆಮದು ಮಾಡಿಕೊಂಡಿದ್ದು ಕೇವಲ $5 ಶತಕೋಟಿ ಆಗಿತ್ತು.
ವ್ಯಾಪಾರ ದತ್ತಾಂಶದ ಕಿರು ನೋಟ
2022 ರಲ್ಲಿ, ಅಮೆರಿಕವು ರಷ್ಯಾದಿಂದ $14.437 ಶತಕೋಟಿ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡರೆ, ಉಕ್ರೇನ್‌ನಿಂದ ಅದರ ಆಮದು $1.503 ಶತಕೋಟಿ ಆಗಿತ್ತು.
2023 ರಲ್ಲಿ, ಅಮೆರಿಕವು ರಷ್ಯಾದಿಂದ $4.570 ಶತಕೋಟಿ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡರೆ, ಉಕ್ರೇನ್‌ನಿಂದ ಅದರ ಆಮದು $1.319 ಶತಕೋಟಿ ಆಗಿತ್ತು
2024 ರಲ್ಲಿ, ಅಮೆರಿಕವು ರಷ್ಯಾದಿಂದ $3.007 ಬಿಲಿಯನ್ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡರೆ, ಉಕ್ರೇನ್‌ನಿಂದ ಅದರ ಆಮದು $1.179 ಬಿಲಿಯನ್ ಆಗಿತ್ತು
2025 ರಲ್ಲಿ, ಅಮೆರಿಕವು ರಷ್ಯಾದಿಂದ $2.496 ಶತಕೋಟಿ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡರೆ, ಉಕ್ರೇನ್‌ನಿಂದ ಅದರ ಆಮದು $769 ಮಿಲಿಯನ್ ಆಗಿತ್ತು
ಅಮೆರಿಕ ಡಬಲ್ ಸ್ಟ್ಯಾಂಡರ್ಡ್ಸ್
ಡೇಟಾ ಸ್ಪಷ್ಟವಾದ ಮಾದರಿಯನ್ನು ತೋರಿಸುತ್ತದೆ. ವ್ಯಾಪಾರವು ಗಣನೀಯವಾಗಿ ಕಡಿಮೆಯಾಗಿದ್ದರೂ, ಅಮೆರಿಕವು ಉಕ್ರೇನ್‌ಗಿಂತ ರಷ್ಯಾದ ಜೊತೆಗೆ ಹೆಚ್ಚಿನ ವ್ಯಾಪಾರ ಮಾಡಿದೆ. ಆದರೆ ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತವು ರಷ್ಯಾದಿಂದ ತೈಲವನ್ನು ಖರೀದಿಸುವ ಮೂಲಕ ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧಕ್ಕೆ ಹಣಕಾಸು ಒದಗಿಸುತ್ತಿದೆ ಎಂದು ಆರೋಪಿಸಿ ಭಾರತದ ಸರಕುಗಳ ಮೇಲೆ ಶೇ.50ರಷ್ಟು ಸುಂಕ ವಿಧಿಸಿದ್ದಾರೆ. ಇದನ್ನು ಭಾರತವು ಈ ಪಾಶ್ಚಿಮಾತ್ಯ ದೇಶಗಳ ಡಬಲ್ ಸ್ಟ್ಯಾಂಡರ್ಡ್ ಎಂದು ಕರೆದಿದೆ.
ಭಾರವು ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟಗಳು ರಷ್ಯಾದಿಂದ ಗಣನೀಯ ಪ್ರಮಾಣದ ಸರಕುಗಳನ್ನು ಆಮದು ಮಾಡಿಕೊಳ್ಳುತ್ತವೆ, ಅದರಲ್ಲಿ ಯುರೋಪ್ ಇಂಧನವನ್ನೂ ಆಮದು ಮಾಡಿಕೊಳ್ಳುತ್ತಿದೆ ಎಂದು ಹೇಳಿದೆ.


ನಿಮ್ಮ ಕಾಮೆಂಟ್ ಬರೆಯಿರಿ