ವೀಡಿಯೊ…| ಆಟೊರಿಕ್ಷಾ ತಡೆದಿದ್ದಕ್ಕೆ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು 120 ಮೀಟರ್​​ ದೂರ ಎಳೆದೊಯ್ದ ಚಾಲಕ…!

ಸತಾರಾ : ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಮದ್ಯದ ಅಮಲಿನಲ್ಲಿ ಆಟೋರಿಕ್ಷಾ ಚಲಾಯಿಸುತ್ತಿದ್ದ ಚಾಲಕನೊಬ್ಬ, ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ನಿಲ್ಲಿಸಲು ಹೇಳಿದ ನಂತರ ಅವರನ್ನು ಎಳೆದೊಯ್ದ ಅಜಾಗರೂಕ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಸೋಮವಾರ ಸಂಜೆ ನಡೆದಿದೆ ಎಂದು ವರದಿಯಾಗಿದೆ.
ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಮಾಹಿತಿಯ ಪ್ರಕಾರ, ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ಭಾಗ್ಯಶ್ರೀ ಜಾಧವ ಅವರು ಸತಾರಾದ ಖಂಡೋಬಾ ಮಾಲ್‌ನಿಂದ ಮಾರ್ಕೆಟ್ ಯಾರ್ಡ್ ವರೆಗಿನ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದಾಗ, ದೇವರಾಜ ಕಾಳೆ ಎಂದು ಗುರುತಿಸಲಾದ ಆಟೋ ಚಾಲಕನಿಗೆ ತಪಾಸಣೆಗಾಗಿ ನಿಲ್ಲಿಸುವಂತೆ ಸೂಚಿಸಿದ್ದರು.

ಆದರೆ ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದಕ್ಕಾಗಿ ದಂಡ ವಿಧಿಸಲಾಗುವುದು ಎಂಬ ಭಯದಿಂದ, ಕಾಳೆ ಆಟೋರಿಕ್ಷಾ ನಿಲ್ಲಿಸದೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಭಾಗ್ಯಶ್ರೀ ಆಟೋ ಹಿಡಿದುಕೊಂಡರು. ಆದರೆ ಚಾಲಕ ಆಟೋವನ್ನು ಓಡಿಸಿ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಅವರನ್ನು ಸುಮಾರು 120 ಮೀಟರ್‌ಗಳಷ್ಟು ಎಳೆದೊಯ್ದ ದೃಶ್ಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ದಾರಿಹೋಕರು ಇದನ್ನು ನೋಡಿ ಆಟೋ ಹಿಂದೆ ಓಡಿ ಹೋಗಿ ಆಟೊವನ್ನು ತಡೆದ ಕಾರಣ ಪೊಲೀಸ್ ಕಾನ್‌ಸ್ಟೆಬಲ್ ಅವರನ್ನು ಪಾರು ಮಾಡಿದರು. ನಂತರ ಆಕ್ರೋಶಿತ ಜನರು ಕಾಳೆಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದರು. ನಂತರ ಪೊಲೀಸರು ಚಾಲಕನನ್ನು ಬಂಧಿಸಿದರು. ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಮುಖ ಸುದ್ದಿ :-   ಕಾಕ್ರೋಚ್ ಜನತಾ ಪಾರ್ಟಿಗೆ ಠಕ್ಕರ್ ಕೊಡಲು ʼಲಾಲ್ ಹಿಟ್ ಜನತಾ ಪಾರ್ಟಿʼಯ ಉದಯ ! ಯಾವುದು ಈ ಸಂಘಟನೆ?

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement