ಪ್ರತಿಭಟನೆ ವೇಳೆ 19 ಮಂದಿ ಸಾವು : ನೇಪಾಳ ಗೃಹ ಸಚಿವ ರಮೇಶ ಲೇಖಕ್ ರಾಜೀನಾಮೆ

ಕಠ್ಮಂಡು : ಸೋಮವಾರ ನಡೆದ ಹಿಂಸಾತ್ಮಕ ಜನರಲ್-ಝಡ್ ಪ್ರತಿಭಟನೆಗಳಲ್ಲಿ 19 ಜನರ ಜನರು ಸಾವಿಗೀಡಾದ ಘಟನೆಗೆ ನೈತಿಕ ಹೊಣೆ ಹೊತ್ತು ನೇಪಾಳದ ಗೃಹ ಸಚಿವ ರಮೇಶ ಲೇಖಕ್ ರಾಜೀನಾಮೆ ನೀಡಿದ್ದಾರೆ.
ಸೋಮವಾರ ಸಂಜೆ ನಡೆದ ಸಂಪುಟ ಸಭೆಯಲ್ಲಿ ಅವರು ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ ಎಂದು ಹಿರಿಯ ಸಚಿವರೊಬ್ಬರು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳು ಮತ್ತು ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಟೀಕೆಗಳಿಗೆ ಸರ್ಕಾರದ ನಿರ್ಬಂಧಗಳ ವಿರುದ್ಧ ಭುಗಿಲೆದ್ದ ಪ್ರತಿಭಟನೆಗಳು, ಕಠ್ಮಂಡು ಸೇರಿದಂತೆ ಹಲವು ನಗರಗಳಲ್ಲಿ ಹಿಂಸಾರೂಪ ಪಡೆಯಿತು.

ರಾಷ್ಟ್ರೀಯ ಸ್ವತಂತ್ರ ಪಕ್ಷ (ಆರ್‌ಎಸ್‌ಪಿ) ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ರಾಜೀನಾಮೆಗೆ ಒತ್ತಾಯಿಸುವ ಮೂಲಕ ರಾಜಕೀಯ ಒತ್ತಡವನ್ನು ತೀವ್ರಗೊಳಿಸಿತು. ಅಧಿಕೃತ ಹೇಳಿಕೆಯಲ್ಲಿ, ಆರ್‌ಎಸ್‌ಪಿ ಪ್ರಧಾನ ಕಾರ್ಯದರ್ಶಿ ಕಬೀಂದ್ರ ಬುರ್ಲಕೋಟಿ, ಜೆನ್-ಝಡ್ ಪ್ರತಿಭಟನಾಕಾರರ ಮೇಲೆ ಸರ್ಕಾರ ನಡೆಸುತ್ತಿರುವ “ಕ್ರೂರ ದಮನ”ವನ್ನು ಖಂಡಿಸಿದರು ಮತ್ತು ಹೊಸದಾಗಿ ಚುನಾವಣೆ ನಡೆಸುವಂತೆ ಕರೆ ನೀಡಿದರು.

ಆರೋಗ್ಯ ಮತ್ತು ಜನಸಂಖ್ಯಾ ಸಚಿವಾಲಯದ ಪ್ರಕಾರ, 19 ಪ್ರತಿಭಟನಾಕಾರರು ಸಾವಿಗೀಡಾಗಿದ್ದಾರೆ ಇದರಲ್ಲಿ ಕೇವಲ ಕಠ್ಮಂಡುವಿನಲ್ಲೇ 16 ಮಂದಿ ಸತ್ತಿದ್ದಾರೆ. ಹಾಗೂ 347 ಜನರು ದೇಶಾದ್ಯಂತ ಗಾಯಗೊಂಡಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರವು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಸ್ಥಗಿತಗೊಳಿಸಿರುವುದು ಮತ್ತು ಆಡಳಿತದಲ್ಲಿ ಭ್ರಷ್ಟಾಚಾರ ಮತ್ತು ಆರ್ಥಿಕ ಅಸಮಾನತೆಯ ಬಗ್ಗೆ ವ್ಯಾಪಕ ಹತಾಶೆಗೆ ಪ್ರತಿಕ್ರಿಯೆಯಾಗಿ ಪ್ರತಿಭಟನೆಗಳು ಭುಗಿಲೆದ್ದವು. ಹಲವಾರು ಕಡೆ ಕರ್ಫ್ಯೂ ವಿಧಿಸಲಾಗಿದ್ದು, ಸೇನೆ ನಿಯೋಜಿಸಲಾಗಿದೆ.

ಪ್ರಮುಖ ಸುದ್ದಿ :-   ಹಲ್ಲುಗಳ ನಡುವಿನ ಕೊಳೆ ತಾನೇ ಪತ್ತೆಹಚ್ಚಿ ಸ್ವಚ್ಛಗೊಳಿಸುವ ಎಐ(AI) ಕ್ಯಾಮೆರಾ-ಜೆಟ್ ತಂತ್ರಜ್ಞಾನದ ಟೂತ್‌ಬ್ರಶ್‌ ಈಗ ಲಭ್ಯ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement