ಗಾಜಾ ಶಾಂತಿ ಒಪ್ಪಂದ ಯೋಜನೆಗೆ ಟ್ರಂಪ್ ಅಭಿನಂದಿಸಿದ ಪ್ರಧಾನಿ ಮೋದಿ ; ಭಾರತ-ಅಮೆರಿಕ ವ್ಯಾಪಾರದ ಕುರಿತು ಚರ್ಚೆ

ನವದೆಹಲಿ: ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆ ನಡೆಯುತ್ತಿರುವ ವ್ಯಾಪಾರ ಮಾತುಕತೆಗಳ ಕುರಿತು ಚರ್ಚಿಸಲು ಮತ್ತು ಯಶಸ್ವಿಯಾಗಿ ಗಾಜಾ ಶಾಂತಿ ಒಪ್ಪಂದಕ್ಕಾಗಿ ಅವರನ್ನು ಅಭಿನಂದಿಸಲು ಅವರ ಜೊತೆ ಮಾತನಾಡಿದ್ದಾರೆ.
X ನಲ್ಲಿ ತಮ್ಮ ಸಂಭಾಷಣೆಯ ವಿವರಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ, ಇಬ್ಬರೂ ನಾಯಕರು ದ್ವಿಪಕ್ಷೀಯ ವ್ಯಾಪಾರ ಮಾತುಕತೆಗಳ ಪ್ರಗತಿಯನ್ನು ಪರಿಶೀಲಿಸಿದ್ದಾರೆ ಮತ್ತು ಮುಂಬರುವ ವಾರಗಳಲ್ಲಿ ನಿಕಟ ಸಂಪರ್ಕದಲ್ಲಿರಲು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ.
“ನನ್ನ ಸ್ನೇಹಿತ ಅಧ್ಯಕ್ಷ ಟ್ರಂಪ್ ಅವರ ಜೊತೆ ಮಾತನಾಡಿದ್ದೇನೆ ಮತ್ತು ಐತಿಹಾಸಿಕ ಗಾಜಾ ಶಾಂತಿ ಯೋಜನೆಯ ಯಶಸ್ಸಿಗೆ ಅವರನ್ನು ಅಭಿನಂದಿಸಿದ್ದೇನೆ. ವ್ಯಾಪಾರ ಮಾತುಕತೆಗಳಲ್ಲಿ ಸಾಧಿಸಲಾದ ಉತ್ತಮ ಪ್ರಗತಿಯನ್ನು ಸಹ ಪರಿಶೀಲಿಸಿದ್ದೇನೆ. ಮುಂಬರುವ ವಾರಗಳಲ್ಲಿ ನಿಕಟ ಸಂಪರ್ಕದಲ್ಲಿರಲು ಒಪ್ಪಿಕೊಂಡಿದ್ದೇನೆ” ಎಂದು ಪ್ರಧಾನಿ ಮೋದಿ ಬರೆದಿದ್ದಾರೆ.

ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಇಬ್ಬರು ನಾಯಕರ ನಡುವಿನ ಎರಡನೇ ಫೋನ್ ಕರೆ ಇದಾಗಿದೆ. ಅವರ ಮೊದಲ ಕರೆ ಸೆಪ್ಟೆಂಬರ್ 17 ರಂದು ಟ್ರಂಪ್ ಪ್ರಧಾನಿ ಮೋದಿ ಅವರಿಗೆ ಜನ್ಮದಿನದ ಶುಭಾಶಯ ಕೋರಲು ಕರೆ ಮಾಡಿದ್ದರು.
ಕದನ ವಿರಾಮ ಘೋಷಣೆಯನ್ನು ಸ್ವಾಗತಿಸಿದ ಹಲವಾರು ವಿಶ್ವ ನಾಯಕರಲ್ಲಿ ಪ್ರಧಾನಿ ಮೋದಿ ಕೂಡ ಒಬ್ಬರು, ಇದು ಈ ಪ್ರದೇಶದಲ್ಲಿ ಶಾಂತಿ ಸ್ಥಾಪನೆಯತ್ತ ಸಕಾರಾತ್ಮಕ ಹೆಜ್ಜೆಯಾಗಿದೆ ಎಂದು ಕರೆದರು. ಈ ಒಪ್ಪಂದವು ಅಕ್ಟೋಬರ್ 2023 ರಲ್ಲಿ ಪ್ರಾರಂಭವಾದ ಗಾಜಾದಲ್ಲಿ ಯುದ್ಧದ ಅಂತ್ಯದ ಆರಂಭ ಎಂದು ಗುರುತಿಸಬಹುದಾಗಿದೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

ಟ್ರಂಪ್ ಜೊತೆ ಮಾತನಾಡಿದ ನಂತರ, ಪ್ರಧಾನಿ ಮೋದಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಜೊತೆಯೂ ಮಾತನಾಡಿದ್ದಾರೆ. X ನಲ್ಲಿ ಪೋಸ್ಟ್ ಮಾಡಿರುವ ಮೋದಿ, “ಅಧ್ಯಕ್ಷ ಟ್ರಂಪ್ ಅವರ ಗಾಜಾ ಶಾಂತಿ ಯೋಜನೆಯಲ್ಲಿ ಸಾಧಿಸಿದ ಪ್ರಗತಿಗೆ ಅಭಿನಂದನೆ ಸಲ್ಲಿಸಲು ನನ್ನ ಸ್ನೇಹಿತ ಪ್ರಧಾನಿ ನೆತನ್ಯಾಹು ಅವರಿಗೆ ಕರೆ ಮಾಡಿದೆ. ಒತ್ತೆಯಾಳುಗಳ ಬಿಡುಗಡೆ ಮತ್ತು ಗಾಜಾದ ಜನರಿಗೆ ಹೆಚ್ಚಿದ ಮಾನವೀಯ ಸಹಾಯದ ಕುರಿತಾದ ಒಪ್ಪಂದವನ್ನು ನಾವು ಸ್ವಾಗತಿಸುತ್ತೇವೆ. ಯಾವುದೇ ರೂಪದಲ್ಲಿ ಅಥವಾ ಅಭಿವ್ಯಕ್ತಿಯಲ್ಲಿ ಭಯೋತ್ಪಾದನೆಯು ಜಗತ್ತಿನ ಎಲ್ಲಿಯೂ ಸ್ವೀಕಾರಾರ್ಹವಲ್ಲ ಎಂದು ಪುನರುಚ್ಚರಿಸಿದೆ ಎಂದು ಹೇಳಿದ್ದಾರೆ.

ಗಾಜಾ ಕದನ ವಿರಾಮದ ಹೊಸ ಒಪ್ಪಂದವು ಟ್ರಂಪ್ ಅವರ 20-ಅಂಶಗಳ ಶಾಂತಿ ಯೋಜನೆಯನ್ನು ಆಧರಿಸಿದೆ ಮತ್ತು ಸುಮಾರು 2,000 ಪ್ಯಾಲೆಸ್ಟೀನಿಯನ್ ಕೈದಿಗಳಿಗೆ ಬದಲಾಗಿ. ಹಮಾಸ್ ಹಿಡಿದಿಟ್ಟುಕೊಂಡಿರುವ 47 ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದನ್ನು ಒಳಗೊಂಡಿದೆ. ಅವರಲ್ಲಿ 25 ಮಂದಿ ಸತ್ತಿದ್ದಾರೆ ಎಂದು ನಂಬಲಾಗಿದೆ. ಇದು ಗಾಜಾಗೆ ಪ್ರತಿದಿನ ಮಾನವೀಯ ನೆರವುಳ್ಳ ಟ್ರಕ್‌ಗಳ ಸಾಗಾಟ ಮತ್ತು ಉತ್ತರಕ್ಕೆ ಸ್ಥಳಾಂತರಗೊಂಡ ನಿವಾಸಿಗಳ ಮರಳುವಿಕೆಯನ್ನು ಖಚಿತಪಡಿಸುತ್ತದೆ. ಇಸ್ರೇಲಿ ಪಡೆಗಳು ಹಂತ ಹಂತಗಳಲ್ಲಿ ಹಿಂತೆಗೆದುಕೊಳ್ಳುತ್ತವೆ ಎಂದು ವರದಿಯಾಗಿದೆ.
ಇಸ್ರೇಲ್ ಕ್ಯಾಬಿನೆಟ್ ಅನುಮೋದನೆಯ 24 ಗಂಟೆಗಳ ಒಳಗೆ ಕದನ ವಿರಾಮ ಜಾರಿಗೆ ಬರುವ ನಿರೀಕ್ಷೆಯಿದೆ, ಒತ್ತೆಯಾಳುಗಳ ಬಿಡುಗಡೆಯು 72 ಗಂಟೆಗಳ ನಂತರ ಪ್ರಾರಂಭವಾಗಲಿದೆ ಎಂದು ಯೋಜಿಸಲಾಗಿದೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement