ವೀಡಿಯೊ…| ಸತತ 8 ಎಸೆತಗಳಲ್ಲಿ 8 ಸಿಕ್ಸರ್‌ ಸಿಡಿಸಿದ ಆಕಾಶ ಚೌಧರಿ..! ನೂತನ ವಿಶ್ವ ದಾಖಲೆ ಸ್ಥಾಪನೆ

ಸೂರತ್: ಮೇಘಾಲಯದ ಆಟಗಾರ ಆಕಾಶಕುಮಾರ ಚೌಧರಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ (First-Class Cricket) ಐತಿಹಾಸಿಕ ಸಾಧನೆ ಮಾಡಿದ್ದಾರೆ. ಸೂರತ್‌ನಲ್ಲಿ ನಡೆದ ರಣಜಿ ಟ್ರೋಫಿ ಪ್ಲೇಟ್ ಗುಂಪಿನ ಪಂದ್ಯದಲ್ಲಿ ಅರುಣಾಚಲ ಪ್ರದೇಶದ ವಿರುದ್ಧ ಆಡುತ್ತಿದ್ದ 25 ವರ್ಷದ ಚೌಧರಿ, ಸತತ 8 ಸಿಕ್ಸರ್‌ಗಳನ್ನು ಸಿಡಿಸುವುದರ ಜೊತೆಗೆ, ಕೇವಲ 11 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ವೇಗದ ಅರ್ಧಶತಕ ದಾಖಲಿಸಿದ್ದಾರೆ.
ಸತತ 8 ಸಿಕ್ಸರ್‌ಗಳನ್ನು ಬಾರಿಸಿದ ವಿಶ್ವದ ಮೊದಲ ಪ್ರಥಮ ದರ್ಜೆ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಚೌಧರಿ ಪಾತ್ರರಾದರು. ಈ ಹಿಂದೆ, ಲೆಸ್ಟರ್‌ಶೈರ್‌ನ ವೇನ್ ವೈಟ್ 2012 ರಲ್ಲಿ 12 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದು, ಇದು ಪ್ರಥಮ ದರ್ಜೆ ಕ್ರಿಕೆಟ್‌ನ ವೇಗದ ಅರ್ಧಶತಕವಾಗಿತ್ತು. ಈಗ ಆಕಾಶ ಚೌಧರಿ ಆ ದಾಖೆಲಯನ್ನು ಮುರಿದಿದ್ದಾರೆ.

ಎಂಟನೇ ಕ್ರಮಾಂಕದಲ್ಲಿ ಸಿಡಿಲಬ್ಬರ
ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಚೌಧರಿ, ತಮ್ಮ ಇನ್ನಿಂಗ್ಸ್‌ನ ಮೊದಲ ಎಂಟು ಎಸೆತಗಳಲ್ಲಿ ಸತತವಾಗಿ ಸಿಕ್ಸರ್‌ಗಳನ್ನು ಬಾರಿಸಿ ಅಚ್ಚರಿ ಮೂಡಿಸಿದರು.
ಕೇವಲ 14 ಎಸೆತಗಳಲ್ಲಿ 50 ರನ್ ಗಳಿಸಿ ಅಜೇಯರಾಗಿ ಉಳಿದ ಚೌಧರಿ, ಮೇಘಾಲಯ ತಂಡವು 6 ವಿಕೆಟ್‌ಗೆ 628 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಲು ಸಹಾಯ ಮಾಡಿದರು.
ಲಿಮರ್ ದಾಬಿಯ ಓವರ್‌ನಲ್ಲಿ 6 ಸಿಕ್ಸರ್‌
ತಂಡವು 576 ರನ್‌ಗಳ ಬೃಹತ್ ಮೊತ್ತದತ್ತ ಸಾಗುತ್ತಿರುವಾಗ ಚೌಧರಿ ಈ ಸಾಧನೆ ಮಾಡಿದರು. ಬಲಗೈ ಬ್ಯಾಟರ್ ಆಗಿರುವ ಅವರು, ಇನ್ನಿಂಗ್ಸ್‌ಗೆ ಎರಡು ಸಿಂಗಲ್ಸ್ ಮತ್ತು ಒಂದು ಡಾಟ್ ಬಾಲ್‌ನೊಂದಿಗೆ ಆರಂಭ ಮಾಡಿದ್ದರು. ನಂತರ, 126ನೇ ಓವರ್‌ನಲ್ಲಿ ಬೌಲಿಂಗ್ ಮಾಡಿದ ಲಿಮರ್ ದಾಬಿ ಅವರ ಪ್ರತಿ ಎಸೆತವನ್ನೂ (ಒಟ್ಟು ಆರು ಎಸೆತ) ಸಿಕ್ಸರ್‌ಗೆ ಅಟ್ಟಿದರು. ನಂತರದ ಓವರ್‌ನ ಮೊದಲ ಎರಡು ಎಸೆತಗಳನ್ನೂ ಬೌಂಡರಿ ದಾಟಿಸಿ ಸತತ 8 ಸಿಕ್ಸರ್‌ಗಳನ್ನು ಸಿಡಿಸಿದ ಮೈಲಿಗಲ್ಲನ್ನು ತಲುಪಿದರು.

ಪ್ರಮುಖ ಸುದ್ದಿ :-   ಮೊದಲು ಹಾಲಿನಲ್ಲಿ ನಿದ್ದೆ ಮಾತ್ರೆ...ನಂತರ ಹಾಸಿಗೆ ಮೇಲೆ ವಿಷದ ಹಾವು ! ಗಂಡನ ಕೊಲೆಗೆ ಪತ್ನಿಯ ಭಯಾನಕ ಸಂಚು...!

ಈ ಮೂಲಕ, ಚೌಧರಿ ಅವರು ವೆಸ್ಟ್ ಇಂಡೀಸ್‌ನ ದಿಗ್ಗಜ ಸರ್ ಗಾರ್ಫೀಲ್ಡ್ ಸೋಬರ್ಸ್ ಮತ್ತು ಭಾರತದ ರವಿ ಶಾಸ್ತ್ರಿ ಅವರ ನಂತರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಂದು ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿದ ಕೇವಲ ಮೂರನೇ ಆಟಗಾರ ಎನಿಸಿಕೊಂಡರು.
ಗಾರ್ಫೀಲ್ಡ್ ಸೋಬರ್ಸ್ 1968 ರಲ್ಲಿ ಈ ಸಾಧನೆ ಮಾಡಿದ್ದರು. ರವಿ ಶಾಸ್ತ್ರಿ ಅವರು 1984-85 ರ ರಣಜಿ ಟ್ರೋಫಿ ಪಂದ್ಯದಲ್ಲಿ ಬಾಂಬೆ ಪರವಾಗಿ ಆಡುತ್ತಾ ತಿಲಕ ರಾಜ್ ಎಸೆತಗಳಿಗೆ ಸತತ 6 ಸಿಕ್ಸರ್ ಬಾರಿಸಿದ್ದರು.
ಮೇಘಾಲಯದ 628 ರನ್‌ಗಳಿಗೆ ಉತ್ತರವಾಗಿ ಅರುಣಾಚಲ ಪ್ರದೇಶವು ಕೇವಲ 73 ರನ್‌ಗಳಿಗೆ ಆಲೌಟ್ ಆಯಿತು. ಫಾಲೋ-ಆನ್ ಪಡೆದ ಅರುಣಾಚಲ ಪ್ರದೇಶವು ಎರಡನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 29 ರನ್ ಗಳಿಸಿ, ಇನ್ನೂ 526 ರನ್‌ಗಳ ದೊಡ್ಡ ಹಿನ್ನಡೆಯಲ್ಲಿದೆ.

ಪ್ರಮುಖ ಸುದ್ದಿ :-   ಉದ್ಧವ್‌ಗೆ ಭಾರಿ ಹಿನ್ನಡೆ ; ಶಿಂಧೆ ಬಣದ ಜೊತೆ ಶಿವಸೇನೆ(ಯುಬಿಟಿ) 6 ಸಂಸದರ ವಿಲೀನಕ್ಕೆ ಲೋಕಸಭೆ ಸ್ಪೀಕರ್ ಅನುಮೋದನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement