ಪಾಕಿಸ್ತಾನ: ಇಸ್ಲಾಮಾಬಾದ್‌ನ ಮಸೀದಿಯಲ್ಲಿ ಭೀಕರ ಆತ್ಮಹತ್ಯಾ ದಾಳಿ: 30 ಮಂದಿ ಸಾವು, 160ಕ್ಕೂ ಹೆಚ್ಚು ಜನರಿಗೆ ಗಾಯ

ಇಸ್ಲಾಮಾಬಾದ್‌ : ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ಶಹಜಾದ್ ಟೌನ್ ಪ್ರದೇಶದಲ್ಲಿರುವ ತರ್ಲೈ ಇಮಾಂಬರ್ಗಾ (Tarlai Imambargah) ಎಂಬ ಶಿಯಾ ಮಸೀದಿಯೊಳಗೆ ಆತ್ಮಹತ್ಯಾ ಬಾಂಬರ್ ಒಬ್ಬ ಸ್ಫೋಟಿಸಿಕೊಂಡ ಪರಿಣಾಮ ಕನಿಷ್ಠ 30 ಜನರು ಸಾವಿಗೀಡಾಗಿದ್ದಾರೆ ಮತ್ತು 160ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇಸ್ಲಾಮಾಬಾದ್‌ನ ಶಹಜಾದ್ ಟೌನ್‌ನಲ್ಲಿರುವ ಶಿಯಾ ಪ್ರಾರ್ಥನಾ ಮಂದಿರದ ಮುಖ್ಯ ದ್ವಾರದ ಬಳಿ ಸ್ಫೋಟ ಸಂಭವಿಸಿದೆ.
ಮಧ್ಯಾಹ್ನದ ಸಮಯದಲ್ಲಿ ಈ ಸ್ಫೋಟ ಸಂಭವಿಸಿದ್ದು, ಪಾಕಿಸ್ತಾನಿ ಮಾಧ್ಯಮಗಳ ಪ್ರಕಾರ, ಆತ್ಮಹತ್ಯಾ ಬಾಂಬರ್ ಮಸೀದಿಯ ಮುಖ್ಯ ದ್ವಾರದ ಬಳಿ ಸ್ಫೋಟಕಗಳನ್ನು ಸ್ಫೋಟಿಸಿಕೊಂಡಿದ್ದಾನೆ.

ಭದ್ರತಾ ಅಧಿಕಾರಿಗಳ ಮಾಹಿತಿ ಪ್ರಕಾರ, ಜಾಗರೂಕರಾಗಿದ್ದ ಭದ್ರತಾ ಸಿಬ್ಬಂದಿಗಳು ದಾಳಿಕೋರನನ್ನು ಪ್ರವೇಶ ದ್ವಾರದಲ್ಲೇ ತಡೆದಿದ್ದಾರೆ. ಇದರಿಂದಾಗಿ ಆತ ಪ್ರಾರ್ಥನೆಗಾಗಿ ಭಕ್ತರು ನೆರೆದಿದ್ದ ಮುಖ್ಯ ಸಭಾಂಗಣದ ಒಳಗೆ ಹೋಗುವುದು ತಪ್ಪಿದೆ. ಒಂದು ವೇಳೆ ಆತ ಒಳಗೆ ಪ್ರವೇಶಿಸಿದ್ದರೆ ಸಾವು-ನೋವಿನ ಸಂಖ್ಯೆ ಇನ್ನೂ ಹೆಚ್ಚಾಗುತ್ತಿತ್ತು ಎಂದು ವರದಿಗಳು ತಿಳಿಸಿವೆ.
ಸ್ಫೋಟದ ತೀವ್ರತೆಗೆ ಪ್ರವೇಶ ದ್ವಾರದ ರಚನೆಯು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ಹತ್ತಿರದ ಕಟ್ಟಡಗಳ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ಸ್ಫೋಟದ ನಂತರ ರಸ್ತೆಯುದ್ದಕ್ಕೂ ಅವಶೇಷಗಳು ಹರಡಿಕೊಂಡಿದ್ದವು. ವೀಡಿಯೊ ದೃಶ್ಯಾವಳಿಗಳಲ್ಲಿ ಮೃತದೇಹಗಳು ಛಿದ್ರಗೊಂಡ ಸ್ಥಿತಿಯಲ್ಲಿ ಕಂಡುಬಂದಿವೆ ಎಂದು ವರದಿಯಾಗಿದೆ.

ಪ್ರಮುಖ ಸುದ್ದಿ :-   ವಿಡಿಯೋ | ನೇಪಾಳ ಪ್ರವಾಹ ; ತ್ರಿಶೂಲಿ ನದಿ 6 ಪಟ್ಟು ಅಗಲವಾಗಿ ಮನೆಗಳನ್ನೇ ನುಂಗಿದ ಭೀಕರ ಚಿತ್ರಣ ಬಿಚ್ಚಿಟ್ಟ ಉಪಗ್ರಹ ಚಿತ್ರಗಳು !

ತುರ್ತು ಪರಿಸ್ಥಿತಿ ಘೋಷಣೆ:
ಇಸ್ಲಾಮಾಬಾದ್ ಐಜಿಪಿ (Inspector General of Police) ನಗರದಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ರಕ್ಷಣಾ ಪಡೆಗಳು ಮತ್ತು ಕಾನೂನು ಜಾರಿ ತಂಡಗಳು ಸ್ಥಳಕ್ಕೆ ಧಾವಿಸಿವೆ. ಗಾಯಾಳುಗಳನ್ನು ಇಸ್ಲಾಮಾಬಾದ್‌ನ ಪಿಮ್ಸ್ (PIMS) ಮತ್ತು ಪಾಲಿಕಿನಿಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದು ಇಸ್ಲಾಮಾಬಾದ್‌ನಲ್ಲಿ ಇತ್ತೀಚಿನ ತಿಂಗಳಲ್ಲಿ ನಡೆದ ಎರಡನೇ ದೊಡ್ಡ ದಾಳಿಯಾಗಿದೆ. ಕೇವಲ ಮೂರು ತಿಂಗಳ ಹಿಂದೆ (ನವೆಂಬರ್ 11, 2025 ರಂದು) ಜಿಲ್ಲಾ ನ್ಯಾಯಾಲಯದ ಕಟ್ಟಡದ ಹೊರಗೆ ನಡೆದಿದ್ದ ಆತ್ಮಹತ್ಯಾ ಸ್ಫೋಟದಲ್ಲಿ 12 ಜನರು ಸಾವಿಗೀಡಾಗಿದ್ದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement