ವೀಡಿಯೊ | ಇರಾನ್ ಮೇಲೆ ಇಸ್ರೇಲ್-ಅಮೆರಿಕ ಜಂಟಿ ದಾಳಿ: ತೆಹ್ರಾನ್‌ನಲ್ಲಿ ಸರಣಿ ಸ್ಫೋಟ, ಇರಾನ್‌ನಲ್ಲಿ ಯುದ್ಧದ ಭೀತಿ

ತೆಹ್ರಾನ್/ಟೆಲ್ ಅವಿವ್: ಶನಿವಾರ ಮುಂಜಾನೆ ಇರಾನ್ ರಾಜಧಾನಿ ತೆಹ್ರಾನ್‌ನಲ್ಲಿ ಭೀಕರ ಸ್ಫೋಟದ ಸದ್ದು ಕೇಳಿಬಂದಿದೆ. ಅಮೆರಿಕದ ಬೆಂಬಲದೊಂದಿಗೆ ಇಸ್ರೇಲ್ ‘ಮುನ್ನೆಚ್ಚರಿಕೆ ದಾಳಿ’ (Preemptive attack) ನಡೆಸಿದ್ದು, ಇದು ಮಧ್ಯಪ್ರಾಚ್ಯವನ್ನು ಮತ್ತೊಮ್ಮೆ ಮಿಲಿಟರಿ ಸಂಘರ್ಷಕ್ಕೆ ತಳ್ಳಿದೆ. ಇದರಿಂದಾಗಿ ಈ ಬಿಕ್ಕಟ್ಟಿಗೆ ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳುವ ಆಶಯಗಳು ಮತ್ತಷ್ಟು ಕ್ಷೀಣಿಸಿವೆ.
ಖಮೇನಿ ಕಚೇರಿ ಬಳಿ ದಾಳಿ:
ವರದಿಗಳ ಪ್ರಕಾರ, ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಕಚೇರಿಗಳ ಸಮೀಪವೇ ಈ ದಾಳಿಗಳು ನಡೆದಿವೆ. ಆದರೆ, 86 ವರ್ಷದ ನಾಯಕ ಖಮೇನಿ ಅವರು ಆ ಸಮಯದಲ್ಲಿ ತೆಹ್ರಾನ್‌ನಲ್ಲಿ ಇರಲಿಲ್ಲ ಮತ್ತು ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು ಎಂದು ರಾಯಿಟರ್ಸ್ ವರದಿ ಮಾಡಿದೆ. ತೆಹ್ರಾನ್‌ನಲ್ಲಿ ಕನಿಷ್ಠ 3 ರಿಂದ 4 ದಾಳಿಗಳು ನಡೆದಿವೆ ಎಂದು ಹೇಳಲಾಗಿದೆ. ಸದ್ಯಕ್ಕೆ ಸಾವು-ನೋವುಗಳ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಬೆದರಿಕೆಗಳನ್ನು ಹೋಗಲಾಡಿಸಲು ಈ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಬಣ್ಣಿಸಿದ್ದಾರೆ.

ಇಸ್ರೇಲ್‌ನಲ್ಲಿ ಮೊಳಗಿದ ಸೈರನ್:
ಇತ್ತ ಇರಾನ್ ಮೇಲೆ ದಾಳಿ ನಡೆಯುತ್ತಿದ್ದಂತೆ, ಇಸ್ರೇಲ್‌ನ ಟೆಲ್ ಅವಿವ್‌ನಲ್ಲಿ “ಕ್ಷಿಪಣಿ ದಾಳಿಯ ಸಾಧ್ಯತೆ” ಇದೆ ಎಂದು ಎಚ್ಚರಿಕೆ ನೀಡುವ ಸೈರನ್‌ಗಳು ಮೊಳಗಿವೆ. “ಇಸ್ರೇಲ್‌ನಾದ್ಯಂತ ಸೈರನ್ ಮೊಳಗಿಸಲಾಗಿದೆ. ಸಾರ್ವಜನಿಕರು ಸುರಕ್ಷಿತ ಸ್ಥಳಗಳ ಸಮೀಪವೇ ಇರಬೇಕು. ಇದು ಮುನ್ನೆಚ್ಚರಿಕೆ ಕ್ರಮವಾಗಿದೆ,” ಎಂದು ಇಸ್ರೇಲಿ ರಕ್ಷಣಾ ಪಡೆ (IDF) ಹೇಳಿಕೆ ನೀಡಿದೆ. ದಾಳಿಯ ಬೆನ್ನಲ್ಲೇ ಇರಾನ್ ಮತ್ತು ಇಸ್ರೇಲ್ ತಮ್ಮ ವೈಮಾನಿಕ ಮಾರ್ಗಗಳನ್ನು ಮುಚ್ಚಿವೆ.
ಇಸ್ರೇಲ್ ದಾಳಿಯ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ನಲ್ಲಿ “ಬೃಹತ್ ಯುದ್ಧ ಕಾರ್ಯಾಚರಣೆ” (Major combat operations) ಘೋಷಿಸಿದ್ದಾರೆ. “ಅಮೆರಿಕದ ಜನರ ರಕ್ಷಣೆ ಮತ್ತು ಇರಾನ್‌ನಿಂದ ಎದುರಾಗಲಿರುವ ಭೀತಿಯನ್ನು ಮಟ್ಟಹಾಕುವುದು ನಮ್ಮ ಗುರಿ” ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಜೂನ್ 22ರ ವರೆಗೆ ದೇಶಾದ್ಯಂತ ಟೆಲಿಗ್ರಾಂ ಬಂದ್‌ ; ನೀಟ್ ಮರುಪರೀಕ್ಷೆ ಅಕ್ರಮ ತಡೆಗೆ ಕ್ರಮ : ತೊಂದರೆಗೆ ಕ್ಷಮೆ ಕೋರಿದ ಎನ್‌ಟಿಎ

ಇರಾನ್ ಅನ್ನು ವಿಶ್ವದ “ನಂಬರ್ ಒನ್ ಭಯೋತ್ಪಾದಕ ಪೋಷಕ ದೇಶ” ಎಂದು ಕರೆದ ಟ್ರಂಪ್, “47 ವರ್ಷಗಳಿಂದ ಇರಾನ್ ಆಡಳಿತವು ರಕ್ತಪಾತ ನಡೆಸುತ್ತಿದೆ. ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಭೀಕರ ದಾಳಿಯ ಹಿಂದೆ ಇರಾನ್ ಕೈವಾಡವಿದೆ. ಇದರಲ್ಲಿ 1,000 ಕ್ಕೂ ಹೆಚ್ಚು ನಿರಪರಾಧಿಗಳು ಮತ್ತು 46 ಅಮೆರಿಕನ್ನರು ಕೊಲ್ಲಲ್ಪಟ್ಟಿದ್ದಾರೆ,” ಎಂದು ಕಿಡಿಕಾರಿದ್ದಾರೆ.
ಇರಾನ್ ಜನತೆಗೆ ಟ್ರಂಪ್‌ ಸಂದೇಶ:
ಇರಾನ್‌ನ ಜನರಿಗೆ ಸಂದೇಶ ನೀಡಿರುವ ಟ್ರಂಪ್, “ಯಾರೂ ಮನೆಯಿಂದ ಹೊರಬರಬೇಡಿ, ಹೊರಗಡೆ ತುಂಬಾ ಅಪಾಯವಿದೆ. ಎಲ್ಲೆಡೆ ಬಾಂಬ್ ದಾಳಿ ನಡೆಯಲಿದೆ. ನಾವು ಈ ಕಾರ್ಯಾಚರಣೆ ಮುಗಿಸಿದ ನಂತರ, ನಿಮ್ಮ ಸರ್ಕಾರವನ್ನು ನೀವೇ ವಶಕ್ಕೆ ಪಡೆಯಿರಿ. ಇದು ನಿಮಗೆ ಸಿಗುತ್ತಿರುವ ಏಕೈಕ ಅವಕಾಶ. ಇಷ್ಟು ವರ್ಷ ನೀವು ಅಮೆರಿಕದ ಸಹಾಯ ಕೇಳಿದ್ದೀರಿ, ಈಗ ನಾನು ಅದನ್ನು ನೀಡುತ್ತಿದ್ದೇನೆ. ಅಮೆರಿಕ ನಿಮ್ಮ ಬೆನ್ನಿಗಿದೆ,” ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವಾಯುಪಡೆ ಸಿಬ್ಬಂದಿ ಪತ್ನಿಗೆ ಮತ್ತು ಬರಿಸುವ ಪಾನೀಯ ನೀಡಿ ಅತ್ಯಾಚಾರ, ಬ್ಲ್ಯಾಕ್‌ಮೇಲ್, ಬಲವಂತದ ಮತಾಂತರಕ್ಕೆ ಯತ್ನ; ಇಬ್ಬರ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement