ಬಾಲಕಿಯರನ್ನು ನಾಯಿ ಪಂಜರದಲ್ಲಿ ಕೂಡಿಹಾಕಿದ್ರು, 700 ಜನರಿಂದ ಅತ್ಯಾಚಾರ: ಬ್ರಿಟನ್ ಸಂಸತ್ತಿನಲ್ಲಿ ಪಾಕ್ ‘ಗ್ರೂಮಿಂಗ್ ಗ್ಯಾಂಗ್’ ಭೀಕರತೆ ಬಿಚ್ಚಿಟ್ಟ ಸಂಸದ

ಲಂಡನ್ : ಯುನೈಟೆಡ್ ಕಿಂಗ್‌ಡಮ್‌ನಲ್ಲಿ (ಯುಕೆ) ವ್ಯವಸ್ಥಿತವಾಗಿ ನಡೆಯುತ್ತಿರುವ “ಗುಂಪು ಆಧಾರಿತ ಮಕ್ಕಳ ಲೈಂಗಿಕ ಶೋಷಣೆ” ಹಾಗೂ “ಗ್ರೂಮಿಂಗ್ ಗ್ಯಾಂಗ್ಸ್” (ಬಾಲಕಿಯರನ್ನು ಸೆಳೆದು ಲೈಂಗಿಕ ದೌರ್ಜನ್ಯವೆಸಗುವ ಜಾಲ) ಕುರಿತಾದ ಚರ್ಚೆ ಈಗ ಬ್ರಿಟಿಷ್ ಸಂಸತ್ತಿನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಸ್ವತಂತ್ರ ಬ್ರಿಟಿಷ್ ಸಂಸದ ರೂಪರ್ಟ್ ಲೋವೆ ಅವರು ಸಂಸತ್ತಿನಲ್ಲಿ ಸಂತ್ರಸ್ತೆಯರ ಅತ್ಯಂತ ಭೀಕರ ಹಾಗೂ ಗ್ರಾಫಿಕ್ ಸಾಕ್ಷ್ಯಗಳನ್ನು ಓದುವ ಮೂಲಕ ಬ್ರಿಟನ್ ಆಡಳಿತ ವ್ಯವಸ್ಥೆಯನ್ನು ಬೆಚ್ಚಿಬೀಳಿಸಿದ್ದಾರೆ.
ಈ ಸಂಘಟಿತ ಮಕ್ಕಳ ಲೈಂಗಿಕ ದೌರ್ಜನ್ಯದ ಜಾಲಗಳಲ್ಲಿ ತೊಡಗಿಸಿಕೊಂಡಿರುವ ಅಪರಾಧಿಗಳು ಪ್ರಮುಖವಾಗಿ “ಪಾಕಿಸ್ತಾನಿ ಮೂಲದ ಟ್ಯಾಕ್ಸಿ ಚಾಲಕರು ಮತ್ತು ಮಾರುಕಟ್ಟೆ ವ್ಯಾಪಾರಿಗಳು” ಎಂಬುದನ್ನು ಬ್ರಿಟನ್ ಸರ್ಕಾರದ ತನಿಖೆಗಳು ಈಗಾಗಲೇ ಪತ್ತೆಹಚ್ಚಿವೆ. ಸಂಸದ ಲೋವೆ ಅವರು ನಡೆಸಿದ ಸ್ವತಂತ್ರ ವಿಚಾರಣೆಯ ಸಂದರ್ಭದಲ್ಲಿ ಈ ಆಘಾತಕಾರಿ ಮಾಹಿತಿ ಮತ್ತು ಸಾಕ್ಷ್ಯಗಳು ಲಭ್ಯವಾಗಿವೆ.
“ಈ ಧೈರ್ಯಶಾಲಿ ಸಂತ್ರಸ್ತೆಯರ ಸಾಕ್ಷ್ಯಗಳನ್ನು ಸಂಸತ್ತು ಆಲಿಸಬೇಕು ಮತ್ತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಾನು ಪ್ರಾಮಾಣಿಕವಾಗಿ ಒತ್ತಾಯಿಸುತ್ತೇನೆ,” ಎಂದು ಲೋವೆ ಸದನದಲ್ಲಿ ಮನವಿ ಮಾಡಿದರು.

ಭೀಕರ ಕಿರುಕುಳ: ಸಂತ್ರಸ್ತೆಯರ ಆಘಾತಕಾರಿ ಸಾಕ್ಷ್ಯಗಳು
ಸಂಸದ ಲೋವೆ ಅವರು ಸಂಸತ್ತಿನಲ್ಲಿ ವಾಚಿಸಿದ ಸಂತ್ರಸ್ತೆಯರ ಹೇಳಿಕೆಗಳು ಮಾನವಕುಲವೇ ತಲೆತಗ್ಗಿಸುವಂತಿವೆ. ಕೇವಲ 12-13 ವರ್ಷದ ಬಾಲಕಿಯಾಗಿದ್ದಾಗ ಅಪರಾಧಿಯೊಬ್ಬ ತನ್ನ ದೇಹದೊಳಗೆ ಮದ್ಯದ ಬಾಟಲಿಯನ್ನು ಬಲವಂತವಾಗಿ ತೂರಿಸಿ, ಒಳಗಡೆಯೇ ಅದನ್ನು ಒಡೆದು ಹಾಕಿದ್ದಾಗಿ ಸಂತ್ರಸ್ತೆಯೊಬ್ಬಳು ವಿವರಿಸಿದ್ದಾಳೆ. ಮತ್ತೊಬ್ಬ ಮಹಿಳೆ, ಲೈಂಗಿಕ ಶೋಷಣೆಯ ಅವಧಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಹತ್ತಾರು ಪೊಲೀಸ್ ಅಧಿಕಾರಿಗಳೇ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ ಎಂದು ಲೋವೆ ಹೇಳಿದ್ದಾರೆ.
“ನನಗೆ 13 ವರ್ಷವಾಗಿದ್ದಾಗ ಈ ನರಕ ಶುರುವಾಯಿತು. ಮೂರು ವರ್ಷಗಳ ಅವಧಿಯಲ್ಲಿ ಸುಮಾರು 600 ರಿಂದ 700 ವಿಭಿನ್ನ ಪುರುಷರು ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ. 15ನೇ ವಯಸ್ಸಿನಲ್ಲಿ ತೀವ್ರ ರಕ್ತಸ್ರಾವ ಮತ್ತು ಊತದಿಂದ ಆಸ್ಪತ್ರೆಗೆ ದಾಖಲಾದಾಗ, ಸತ್ಯ ಹೇಳಲು ಹೆದರಿ ಯಾರೋ ಡ್ರಿಂಕ್ಸ್‌ಗೆ ಮಾದಕ ದ್ರವ್ಯ ಬೆರೆಸಿದ್ದರು ಎಂದು ಹೇಳಿದೆ. ಆಸ್ಪತ್ರೆಯ ಸಿಬ್ಬಂದಿ ಯಾವುದೇ ಪ್ರಶ್ನೆ ಕೇಳದೆ ಕೇವಲ ಮಾತ್ರೆ ನೀಡಿ ಡಿಸ್ಚಾರ್ಜ್ ಮಾಡಿದರು,” ಎಂದು ಇನ್ನೊಬ್ಬಳು ಅಳಲು ತೋಡಿಕೊಂಡಿದ್ದಾಳೆ ಎಂದು ಲೋವೆ ವಿವರಿಸಿದ್ದಾರೆ.

ಮೃಗೀಯ ವರ್ತನೆ (ಬೆಸ್ಟಿಯಾಲಿಟಿ):
ದೌರ್ಜನ್ಯದ ಕ್ರೌರ್ಯ ಮಿತಿಮೀರಿದ್ದು, ಬಾಲಕಿಯರನ್ನು ಪ್ರಾಣಿಗಳಂತೆ ನಡೆಸಿಕೊಳ್ಳಲಾಗಿತ್ತು. “ಒಂದು ವ್ಯಾನ್‌ನ ಹಿಂಭಾಗದಲ್ಲಿ 15 ರಿಂದ 20 ಹುಡುಗಿಯರನ್ನು ನಾಯಿಗಳನ್ನು ಕೂಡಿಹಾಕುವ ಪಂಜರಗಳಲ್ಲಿ ಕೂಡಿ ಹಾಕಲಾಗಿತ್ತು. ನನ್ನನ್ನು ನಾಯಿಯ ಜೊತೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಲಾಯಿತು. ಸುತ್ತಲೂ ಇದ್ದ ಪುರುಷರು ಅಸಹ್ಯ ಪಡದೆ, ನಗುತ್ತಾ, ವಿಡಿಯೋ ಮಾಡುತ್ತಾ ಬೆಟ್ಟಿಂಗ್ ಕಟ್ಟುತ್ತಿದ್ದರು,” ಎಂದು ಮಹಿಳೆಯೊಬ್ಬಳು ಕಣ್ಣೀರು ಹಾಕಿದ್ದಾಳೆ.
ಜನಾಂಗೀಯ ತಾರತಮ್ಯ ಮತ್ತು ಧರ್ಮದ ಬಳಕೆ: ಅಪರಾಧಿಗಳು ಬಿಳಿ ವರ್ಣದ ಮತ್ತು ಕ್ರಿಶ್ಚಿಯನ್ ಸಮುದಾಯದ ಹುಡುಗಿಯರನ್ನು ಗುರಿಯಾಗಿಸಿಕೊಂಡು ದೌರ್ಜನ್ಯ ಎಸಗುತ್ತಿದ್ದರು. “ಮುಸ್ಲಿಂ ಹುಡುಗಿಯರಿಗೆ ಹೆಚ್ಚಿನ ಘನತೆ ಮತ್ತು ನೈತಿಕತೆ ಇರುತ್ತದೆ, ಆದರೆ ಬಿಳಿ ಹುಡುಗಿಯರಿಗೆ ನೈತಿಕತೆ ಕಡಿಮೆ” ಎಂಬ ಜನಾಂಗೀಯ ಹೋಲಿಕೆಗಳನ್ನು ಬಳಸಿ ಶೋಷಣೆಯನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಈ ಜಾಲಕ್ಕೆ ಸಿಲುಕಿದ ಬಹುತೇಕ ಬಾಲಕಿಯರು ಬಿಳಿ ವರ್ಣದವರಾಗಿದ್ದರು.   ಸಂತ್ರಸ್ತೆಯೊಬ್ಬಳು  ಇಮಾಮ್ಮ ಮಗನಿಂದ ಗರ್ಭವತಿಯಾಗಿದ್ದಾಗ, ಇಮಾಮ್ ತನ್ನ ಮಗನಿಗೆ ಬೇರೆ ಮದುವೆ ಮಾಡಿಸಿ, ಆ ಮಗುವನ್ನು ನೋಡದಂತೆ ತಡೆದರು ಎಂದು ಸಂತ್ರಸ್ತೆ ಹೇಳಿದ್ದಾಳೆ.
ಅನಾಥಾಶ್ರಮ ಅಥವಾ ಮಕ್ಕಳ ಪಾಲನಾ ಕೇಂದ್ರಗಳ ಸಿಬ್ಬಂದಿಯೇ ಕಾರಿನ ಹಾರ್ನ್ ಸೌಂಡ್ ಕೇಳಿ ಮಕ್ಕಳನ್ನು ತಂದು ಮುಂಭಾಗದ ಬಾಗಿಲಿನಲ್ಲಿ ಅಪರಾಧಿಗಳಿಗೆ ಒಪ್ಪಿಸುತ್ತಿದ್ದರು. ಈ ದೌರ್ಜನ್ಯಗಳು ಈದ್ ಹಬ್ಬ ಮತ್ತು ರಜಾದಿನಗಳ ಸಂದರ್ಭದಲ್ಲಿ ಮತ್ತಷ್ಟು ದೊಡ್ಡ ಮಟ್ಟದಲ್ಲಿ ಮತ್ತು ಅತ್ಯಂತ ಹಿಂಸಾತ್ಮಕವಾಗಿ ನಡೆಯುತ್ತಿದ್ದವು ಎಂದು ಸಾಕ್ಷ್ಯಗಳು ಹೇಳಿವೆ ಎಂದು ಲೋವೆ ಸದನದಲ್ಲಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಕ್ರಿಕೆಟ್ ದಂತಕತೆ ಸರ್ ಗ್ಯಾರಿ ಸೋಬರ್ಸ್ ನಿಧನ

ವ್ಯಾಪಕ ಜಾಲ ಮತ್ತು ವ್ಯವಸ್ಥೆಯ ವೈಫಲ್ಯ
ಕಳೆದ ವರ್ಷ ಸಂಸದ ರೂಪರ್ಟ್ ಲೋವೆ ನೇತೃತ್ವದಲ್ಲಿ ನಡೆದ ಖಾಸಗಿ ತನಿಖೆಯು ಯುಕೆ ಯ ಕನಿಷ್ಠ 85 ಪ್ರದೇಶಗಳಲ್ಲಿ ಈ “ಗುಂಪು ಆಧಾರಿತ ಮಕ್ಕಳ ಲೈಂಗಿಕ ಶೋಷಣೆ” ನಡೆಯುತ್ತಿರುವುದನ್ನು ಗುರುತಿಸಿದೆ. ಈ “ರೇಪ್ ಗ್ಯಾಂಗ್ಸ್” (ಅತ್ಯಾಚಾರದ ಜಾಲಗಳು) ದಶಕಗಳಿಂದ ಸಕ್ರಿಯವಾಗಿದ್ದು, ನಾವು ಅಂದುಕೊಂಡಿದ್ದಕ್ಕಿಂತಲೂ ಭೀಕರವಾಗಿ ಹರಡಿಕೊಂಡಿವೆ. ಪ್ರಮುಖವಾಗಿ ಬ್ರಿಟಿಷ್-ಪಾಕಿಸ್ತಾನಿ ಪುರುಷರ ಈ ವ್ಯವಸ್ಥಿತ ಜಾಲ ಮತ್ತು ಸರ್ಕಾರದ ಸಾರ್ವಜನಿಕ ಸಂಸ್ಥೆಗಳ ಘೋರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಆದರೆ ಅಧಿಕಾರಿಗಳು ಜನಾಂಗೀಯ ನಿಂದನೆಯ ಹಣೆಪಟ್ಟಿ (Racist) ಅಂಟಿಕೊಳ್ಳಬಹುದು ಎಂಬ ಭೀತಿಯಿಂದ ಈ ಜಾಲಗಳ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಗ್ರೂಮಿಂಗ್ ಗ್ಯಾಂಗ್ಸ್‌ನ ಕರಾಳ ಇತಿಹಾಸ
ರೋದರ್‌ಹ್ಯಾಮ್ ಹಗರಣ (2001-2013): ಈ ಕರಾಳ ಜಾಲ ಮೊದಲ ಬಾರಿಗೆ 2001ರಲ್ಲಿ ರೋದರ್‌ಹ್ಯಾಮ್ ನಗರದಲ್ಲಿ ಬೆಳಕಿಗೆ ಬಂದಿತು. ಆದರೆ ಅಪರಾಧಿಗಳಿಗೆ ಶಿಕ್ಷೆಯಾಗಿದ್ದು ಮಾತ್ರ 2010 ರಲ್ಲಿ. ಐದು ಜನ ಪಾಕಿಸ್ತಾನಿ ಮೂಲದ ಪುರುಷರಿಗೆ ಜೈಲು ಶಿಕ್ಷೆಯಾಯಿತು. ಪ್ರೊಫೆಸರ್ ಅಲೆಕ್ಸಿಸ್ ಜೇ ಅವರ 2014 ರ ವರದಿಯ ಪ್ರಕಾರ, ರೋದರ್‌ಹ್ಯಾಮ್ ಒಂದರಲ್ಲೇ 1997 ರಿಂದ 2013 ರ ನಡುವಿನ 16 ವರ್ಷಗಳಲ್ಲಿ 1,400 ಕ್ಕೂ ಹೆಚ್ಚು ಮಕ್ಕಳನ್ನು ಅಪಹರಿಸಿ, ಲೈಂಗಿಕವಾಗಿ ಶೋಷಿಸಿ, ಸಾಗಾಟ ಮಾಡಲಾಗಿತ್ತು.
ಇದೇ ಮಾದರಿಯ ಅಪರಾಧಗಳು ಯುಕೆ ಯ ರೋಚ್‌ಡೇಲ್, ಆಕ್ಸ್‌ಫರ್ಡ್, ಟೆಲ್‌ಫೋರ್ಡ್ ಮತ್ತು ಬ್ರಿಸ್ಟಲ್ ಸೇರಿದಂತೆ ಸುಮಾರು 50 ನಗರಗಳಲ್ಲಿ ಪುನರಾವರ್ತನೆಯಾಗಿವೆ ಎಂದು ವರದಿ ಹೇಳಿದೆ.
ಟಾಸ್ಕ್ ಫೋರ್ಸ್ ವರದಿ: 2023 ರಲ್ಲಿ ಅಂದಿನ ಪ್ರಧಾನಿ ರಿಷಿ ಸುನಕ್ ಅವರು ಈ ‘ಗ್ರೂಮಿಂಗ್ ಗ್ಯಾಂಗ್ಸ್’ ಮಟ್ಟಹಾಕಲು ವಿಶೇಷ ಟಾಸ್ಕ್ ಫೋರ್ಸ್ ರಚಿಸಿದ್ದರು. 2023 ರಲ್ಲಿ ಯುಕೆ ನಲ್ಲಿ ಒಟ್ಟು 1.15 ಲಕ್ಷ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳು ದಾಖಲಾಗಿದ್ದು, ಅದರಲ್ಲಿ ಶೇ 3.7 ರಷ್ಟು (4,228 ಪ್ರಕರಣಗಳು) ಗುಂಪು ಆಧಾರಿತ ಅಪರಾಧಗಳಾಗಿದ್ದವು. ಟಾಸ್ಕ್ ಫೋರ್ಸ್ ತನ್ನ ಮೊದಲ ವರ್ಷದಲ್ಲೇ 550 ಕ್ಕೂ ಹೆಚ್ಚು ಶಂಕಿತರನ್ನು ಬಂಧಿಸಿದೆ. ಈ ಅಪರಾಧಗಳಲ್ಲಿ ಶೇ 26 ರಷ್ಟು ಕುಟುಂಬಗಳ ಒಳಗೆ ನಡೆದರೆ, ಶೇ 17 ರಷ್ಟು ಗ್ರೂಮಿಂಗ್ ಗ್ಯಾಂಗ್ಸ್ ಸೇರಿದಂತೆ ಹೊರಗಿನ ಗುಂಪುಗಳಿಂದ ನಡೆದಿವೆ.

ಪ್ರಮುಖ ಸುದ್ದಿ :-   ಕ್ರಿಕೆಟ್ ದಂತಕತೆ ಸರ್ ಗ್ಯಾರಿ ಸೋಬರ್ಸ್ ನಿಧನ

ಗ್ರೇಟರ್ ಮ್ಯಾಂಚೆಸ್ಟರ್ ಮೇಯರ್ ಆಂಡಿ ಬರ್ನ್‌ಹ್ಯಾಮ್ ಅವರ ಆದೇಶದ ಮೇರೆಗೆ 2024 ರಲ್ಲಿ ನಡೆದ ಸ್ವತಂತ್ರ ಪರಿಶೀಲನೆಯು, 2004 ರಿಂದ 2012 ರವರೆಗೆ ರೋಚ್‌ಡೇಲ್ ಕೌನ್ಸಿಲ್ ಮಕ್ಕಳನ್ನು ರಕ್ಷಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂಬುದನ್ನು ಖಚಿತಪಡಿಸಿದೆ. ‘ಆಪರೇಷನ್ ಸ್ಪ್ಯಾನ್’ ಮೂಲಕ 2012 ರಲ್ಲಿ 9 ಜನರನ್ನು ದೋಷಿಗಳೆಂದು ಘೋಷಿಸಲಾಯಿತು, ಇದರಲ್ಲಿ ಎಂಟು ಜನ ಬ್ರಿಟಿಷ್-ಪಾಕಿಸ್ತಾನಿ ಪುರುಷರಾಗಿದ್ದರು. ಅಂದಿನಿಂದ ಇಂದಿನವರೆಗೆ ನೂರಾರು ಬಂಧನಗಳು ಮತ್ತು ಶಿಕ್ಷೆಗಳು ನಡೆದಿವೆ.
ಬ್ರಿಟನ್‌ನ ಸಮಾಜ ಮತ್ತು ಆಡಳಿತ ವ್ಯವಸ್ಥೆಯನ್ನು ತಲ್ಲಣಗೊಳಿಸಿರುವ ಈ ರೇಪ್ ಗ್ಯಾಂಗ್‌ಗಳ ವಿರುದ್ಧ ಈಗಲಾದರೂ ಕಟ್ಟುನಿಟ್ಟಿನ ಹಾಗೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಇಡೀ ದೇಶದಲ್ಲಿ ಕೇಳಿಬರುತ್ತಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement