ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

ಬಾಗ್ದಾದ್/ವಾಷಿಂಗ್ಟನ್ :  ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡುವವರಿಗೆ 10 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು ₹96.6 ಕೋಟಿ) ಬಹುಮಾನ ನೀಡುವುದಾಗಿ ಇರಾನ್ ಬೆಂಬಲಿತ ಸಶಸ್ತ್ರ ಹೋರಾಟಗಾರರ ಸಂಘಟನೆಗಳ ಒಕ್ಕೂಟವಾದ ಇಸ್ಲಾಮಿಕ್ ರೆಸಿಸ್ಟೆನ್ಸ್ ಇನ್ ಇರಾಕ್ (Islamic Resistance in Iraq–IRI) ಘೋಷಿಸಿದೆ.
2020ರಲ್ಲಿ ನಡೆದ ಅಮೆರಿಕದ ಡ್ರೋನ್ ದಾಳಿಯಲ್ಲಿ ಇರಾನ್‌ನ ಹಿರಿಯ ಸೇನಾ ಅಧಿಕಾರಿ ಜನರಲ್ ಖಾಸಿಂ ಸುಲೇಮಾನಿ ಹಾಗೂ ಇರಾಕಿ ಮಿಲಿಷಿಯಾ ಕಮಾಂಡರ್ ಅಬು ಮಹ್ದಿ ಅಲ್-ಮುಹಂದಿಸ್ ಮೃತಪಟ್ಟಿದ್ದರು. ಆ ದಾಳಿಗೆ ಟ್ರಂಪ್ ಅವರೇ ನೇರ ಹೊಣೆ ಎಂದು ಆರೋಪಿಸಿರುವ ಐಆರ್‌ಐ (IRI), ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡುವವರಿಗೆ ನೀಡಲಾಗುವ ಈ ಬಹುಮಾನವನ್ನು ತನ್ನ ಸದಸ್ಯರು ಮತ್ತು ಬೆಂಬಲಿಗರಿಂದ ಸಂಗ್ರಹಿಸಲಾದ ದೇಣಿಗೆಯ ಮೂಲಕ ನೀಡಲಾಗುವುದು ಎಂದು ತಿಳಿಸಿದೆ.

2020ರ ಡ್ರೋನ್ ದಾಳಿಯ ಉಲ್ಲೇಖ
ಇರಾನ್‌ನ ಸರ್ಕಾರಿ ಮಾಧ್ಯಮ ಪ್ರೆಸ್ ಟಿವಿ ವರದಿ ಪ್ರಕಾರ, ಗುರುವಾರ ಬಿಡುಗಡೆಗೊಂಡ ಪ್ರಕಟಣೆಯಲ್ಲಿ ಐಆರ್‌ಐ, “ಅಪರಾಧಿ ಟ್ರಂಪ್‌ನನ್ನು ಹತ್ಯೆ ಮಾಡುವವರು ಅಥವಾ ವೈಯಕ್ತಿಕವಾಗಿ ಅವರನ್ನು ನಿರ್ಮೂಲನೆ ಮಾಡುವವರು, ಅದಕ್ಕಾಗಿ ಇತರರಿಗೆ ನಿರ್ದೇಶನ ನೀಡುವವರು ಅಥವಾ ಒಬ್ಬ ವ್ಯಕ್ತಿ, ಗುಂಪು, ಸಂಘಟನೆ ಅಥವಾ ಸಂಸ್ಥೆಯಾಗಿ ಅದಕ್ಕೆ ನೆರವಾಗುವವರಿಗೆ ಈ ಬಹುಮಾನ ನೀಡಲಾಗುವುದು” ಎಂದು ಘೋಷಿಸಿದೆ.
ಈ ಪ್ರಕಟಣೆಯಲ್ಲಿ, 2020ರ ಜನವರಿಯಲ್ಲಿ ಬಾಗ್ದಾದ್ ವಿಮಾನ ನಿಲ್ದಾಣದ ಸಮೀಪ ನಡೆದ ಡ್ರೋನ್ ದಾಳಿಯಲ್ಲಿ ಸುಲೇಮಾನಿ ಮತ್ತು ಅಲ್-ಮುಹಂದಿಸ್ ಹತ್ಯೆಯಾದ ಘಟನೆಯಲ್ಲಿ ತಮ್ಮ ಪಾತ್ರವನ್ನು ಟ್ರಂಪ್ ಇತ್ತೀಚೆಗೆ ಮತ್ತೊಮ್ಮೆ ಬಹಿರಂಗವಾಗಿ ಪ್ರಸ್ತಾಪಿಸಿರುವುದನ್ನೂ ಟೀಕಿಸಲಾಗಿದೆ.
ಶ್ವೇತಭವನದಲ್ಲಿ ಟ್ರಂಪ್ ಹೇಳಿಕೆ
ಕಳೆದ ವಾರ ಶ್ವೇತಭವನದಲ್ಲಿ ಇರಾಕ್ ಪ್ರಧಾನಮಂತ್ರಿ ಅಲಿ ಅಲ್-ಜೈದಿ ಅವರ ಜೊತೆಗೆ ನಡೆದ ಸಭೆಯಲ್ಲಿ ಟ್ರಂಪ್, ಸುಲೇಮಾನಿ ವಿರುದ್ಧದ ದಾಳಿಯ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು. ಸುಲೇಮಾನಿ ದೊಡ್ಡ ಬೆದರಿಕೆಯಾಗಿದ್ದರು ಎಂದು ಹೇಳಿದ ಅವರು, ಅದೇ ದಾಳಿಯಲ್ಲಿ ಮೃತಪಟ್ಟಿದ್ದ ಅಬು ಮಹ್ದಿ ಅಲ್-ಮುಹಂದಿಸ್ ಅವರ ಬಗ್ಗೆಯೂ ಉಲ್ಲೇಖಿಸಿದ್ದರು. ಈ ಹೇಳಿಕೆಯನ್ನು ಅಲ್-ಮುಹಂದಿಸ್ ಅವರ ಕುಟುಂಬ ತೀವ್ರವಾಗಿ ಖಂಡಿಸಿದ್ದು, ದಾಳಿಯಲ್ಲಿ ಮೃತಪಟ್ಟವರ ಬಗ್ಗೆ ಟ್ರಂಪ್ ಅವಹೇಳನಕಾರಿ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಿದೆ.

ಪ್ರಮುಖ ಸುದ್ದಿ :-   ಕ್ರಿಕೆಟ್ ದಂತಕತೆ ಸರ್ ಗ್ಯಾರಿ ಸೋಬರ್ಸ್ ನಿಧನ

ಅಮೆರಿಕ–ಇರಾನ್ ಉದ್ವಿಗ್ನತೆ ನಡುವೆಯೇ ಬೆದರಿಕೆ
ಅಮೆರಿಕ ಮತ್ತು ಇರಾನ್ ನಡುವಿನ ಇತ್ತೀಚಿನ ಮಿಲಿಟರಿ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಈ ಥ್ರೆಟ್‌ ಹೊರಬಿದ್ದಿದೆ. ಎರಡೂ ರಾಷ್ಟ್ರಗಳ ನಡುವಿನ ಸಂಘರ್ಷ ಮರುಕಳಿಸಿದ ನಂತರ ಇದು ಅತ್ಯಂತ ದೊಡ್ಡ ಮಟ್ಟದ ಉದ್ವಿಗ್ನತೆಯಾಗಿದೆ ಎಂದು ಹೇಳಲಾಗಿದೆ.
ಅಮೆರಿಕ ಮತ್ತು ಇರಾನ್ ಎರಡೂ ಇರಾಕ್‌ನ ಪ್ರಮುಖ ಮಿತ್ರ ರಾಷ್ಟ್ರಗಳಾಗಿದ್ದರೂ, ಆ ದೇಶದಲ್ಲಿ ಪ್ರಭಾವ ಸಾಧಿಸುವ ವಿಚಾರವಾಗಿ ಹಲವು ವರ್ಷಗಳಿಂದ ಪರೋಕ್ಷ ಪೈಪೋಟಿಯಲ್ಲಿ ತೊಡಗಿವೆ.
ಟ್ರಂಪ್ ವಿರುದ್ಧ ಈ ಹಿಂದೆಯೂ ಹತ್ಯೆ ಯತ್ನ
2024ರ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಅವಧಿಯಲ್ಲಿ ಟ್ರಂಪ್ ವಿರುದ್ಧ ಈಗಾಗಲೇ ಎರಡು ಬಾರಿ ಹತ್ಯೆ ಯತ್ನಗಳು ನಡೆದಿದ್ದವು. 2024ರ ಜುಲೈನಲ್ಲಿ ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಟ್ರಂಪ್ ಅವರ ಕಿವಿಗೆ ಗಾಯವಾಗಿತ್ತು.ನಂತರ ಫ್ಲೋರಿಡಾದಲ್ಲಿರುವ ಅವರ ಗಾಲ್ಫ್ ಮೈದಾನದ ಸಮೀಪ ಮತ್ತೊಂದು ಸಂಚನ್ನು ಅಮೆರಿಕದ ಅಧಿಕಾರಿಗಳು ವಿಫಲಗೊಳಿಸಿದ್ದರು.
ಸುಲೇಮಾನಿ ಹತ್ಯೆಗೆ ಪ್ರತೀಕಾರವಾಗಿ ಟ್ರಂಪ್ ಅವರನ್ನು ಗುರಿಯಾಗಿಸಿಕೊಂಡಿದ್ದ ಪ್ರತ್ಯೇಕ ಸಂಚುಗಳಲ್ಲಿ ಇರಾನ್‌ಗೆ ಸಂಬಂಧ ಹೊಂದಿರುವ ಕೆಲ ವ್ಯಕ್ತಿಗಳ ಪಾತ್ರವಿದೆ ಎಂದು ಅಮೆರಿಕದ ಅಧಿಕಾರಿಗಳು ಈ ಹಿಂದೆಯೇ ಆರೋಪಿಸಿದ್ದರು. ಆದರೆ, ಈ ಆರೋಪಗಳನ್ನು ಇರಾನ್ ನಿರಾಕರಿಸಿದೆ.

ಪ್ರಮುಖ ಸುದ್ದಿ :-   ಕ್ರಿಕೆಟ್ ದಂತಕತೆ ಸರ್ ಗ್ಯಾರಿ ಸೋಬರ್ಸ್ ನಿಧನ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement