ವೀಡಿಯೊ…| ಮಾಲೀಕನ ಮೇಲೆ ಹಲ್ಲೆ ಮಾಡಿದ ಮೂವರು ದರೋಡೆಕೋರರ ಮೇಲೆ ಪ್ರತಿದಾಳಿ ನಡೆಸಿ ಓಡಿಸಿದ ನಾಯಿ…!

ಮೋರ್ಬಿ (ಗುಜರಾತ್) : ನಿಷ್ಠೆ ಮತ್ತು ಅಸಾಧಾರಣ ಧೈರ್ಯ ತೋರಿದ ಘಟನೆಯೊಂದರಲ್ಲಿ , ಗುಜರಾತ್‌ನ ಮೋರ್ಬಿ ಜಿಲ್ಲೆಯಲ್ಲಿ ಜರ್ಮನ್ ಶೆಫರ್ಡ್ ನಾಯಿ ತನ್ನ ಮಾಲೀಕನನ್ನು ಮೂವರು ಆಕ್ರಮಣಕಾರರು ನಡೆಸಿದ ಹಿಂಸಾತ್ಮಕ ದರೋಡೆ ಪ್ರಯತ್ನದಿಂದ ರಕ್ಷಿಸಿದೆ. ಬೆಳಗಿನ ಜಾವ ನಡೆದ ಇಡೀ ಘಟನೆಯು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ ಮತ್ತು ನಾಯಿ ದಾಳಿಕೋರರ ಮೇಲೆ ದಾಳಿ ಮಾಡಿದ ನಂತರ ಅವರು ಹೆದರಿ ಅಲ್ಲಿಂದ ಪರಾರಿಯಾಗಿದ್ದಾರೆ.
ಟಂಕರಾ ತಹಸಿಲ್ ವ್ಯಾಪ್ತಿಯ ಮಿತಾನಾ ಗ್ರಾಮದಲ್ಲಿ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಅಮಿತ್ ಥೀಬಾ ಎಂದು ಗುರುತಿಸಲಾದ ವ್ಯಕ್ತಿ ರೈತನಾಗಿದ್ದು, ಅವರು ಮದುವೆ ಕಾರ್ಯಕ್ರಮಗಳಿಗೆ ಅಲಂಕರಿಸಿದ ಕುದುರೆಗಳನ್ನು ಸಹ ಪೂರೈಸುತ್ತಾರೆ.

ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬರುವಂತೆ, ಮೂವರು ಅಪರಿಚಿತ ದಾಳಿಕೋರರು ಅಮಿತ್ ಅವರ ತೋಟದ ಮನೆಗೆ ಪ್ರವೇಶಿಸಿ ಅವರನ್ನು ಸುತ್ತುವರೆದರು. ಅವರಲ್ಲಿ ಒಬ್ಬರು ಅವರ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದಾಗ ಇತರರು ಕಾವಲು ಕಾಯುತ್ತಿದ್ದರು. ಗದ್ದಲ ಕೇಳಿ ತನ್ನ ಮಾಲೀಕರ ಮೇಲೆ ದಾಳಿ ಮಾಡುವುದನ್ನು ನೋಡಿದ ಜಾನಿ ಎಂಬ ಜರ್ಮನ್ ಶೆಫರ್ಡ್ ಸಾಕು ನಾಯಿ ತೀವ್ರವಾಗಿ ಬೊಗಳಲು ಪ್ರಾರಂಭಿಸಿತು.
ಕಟ್ಟಿಹಾಕಿದ್ದರೂ, ನಾಯಿಯ ಬೊಗಳಿದ್ದರಿಂದ ಅಮಿತ್‌ ಅವರಿಗೆ ತನ್ನ ನಾಯಿಯ ಸಹಾಯ ಪಡೆಯುವ ಆಲೋಚನೆ ಬಂತು. ದಾಳಿಕೋರರಿಂದ ತಪ್ಪಿಸಿಕೊಳ್ಳಲು ಜಾನಿ ಬಳಿಗೆ ಧಾವಿಸಿದ ಅವರು ಅದರ ಸರಪಳಿ ಬಿಚ್ಚಿದರು. ಸರಪಳಿ ಬಿಚ್ಚಿದ್ದೇ ತಡ, ಜರ್ಮನ್ ಶೆಫರ್ಡ್ ನಾಯಿ ಧೈರ್ಯದಿಂದ ದಾಳಿಕೋರರ ಮೇಲೆ ದಾಳಿ ಮಾಡಿತು, ಆಸ್ತಿಯನ್ನು ಲೂಟಿ ಮಾಡಲು ಬಂದಿದ್ದ ಮೂವರೂ ದರೋಡೆಕೋರರು ನಾಯಿ ದಾಳಿಗೆ ಹೆದರಿ ಸ್ಥಳದಿಂದ ಓಡಿಹೋದರು.

ಪ್ರಮುಖ ಸುದ್ದಿ :-   ಸೋನಂ ವಾಂಗ್ಚುಕ್ ಉಪವಾಸ ಅಂತ್ಯಗೊಳಿಸಲು ಸಿದ್ಧ ಎಂದ ಪತ್ನಿ ; ಆದರೆ ಅದಕ್ಕೆ ಎರಡು ಷರತ್ತುಗಳು...

ನಂತರ ಥೀಬಾ ಅಪರಿಚಿತ ದಾಳಿಕೋರರ ವಿರುದ್ಧ ಟಂಕರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ, ಅಪರಾಧಿಗಳನ್ನು ಗುರುತಿಸಲು ಮತ್ತು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ. ದಾಳಿಯ ಹಿಂದಿನ ಉದ್ದೇಶವು ವೈಯಕ್ತಿಕ ವಿವಾದದಿಂದ ಉಂಟಾಗಿರಬಹುದು ಎಂದು ಟಂಕರಾ ಡಿಎಸ್ಪಿ ಸಮೀರ್ ಸರ್ದಾ ಹೇಳುತ್ತಾರೆ.
ಘಟನೆಯ ನಂತರ, ಅಮಿತ್ ತನ್ನ ಜೀವವನ್ನು ಉಳಿಸಿದ ನಾಯಿಗೆ ಕೃತಜ್ಞತೆ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಿದರು. ಈಗ ನಾಯಿ ಗ್ರಾಮದಲ್ಲಿ ಹೀರೋ ಆಗಿದೆ. ನಾಯಿಯ ಈ ಧೈರ್ಯಶಾಲಿ ಕೆಲಸವು ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿದೆ.

ಪ್ರಮುಖ ಸುದ್ದಿ :-   ʼಆಪರೇಷನ್ ಸಿಂಧೂರʼದಲ್ಲಿ ಭಾರತಕ್ಕೆ ಭಾರಿ ಯಶಸ್ಸು; ತನ್ನ ಸೋಲು ಮುಚ್ಚಿಕೊಳ್ಳಲು ಸುಳ್ಳು ಕಥೆ ಕಟ್ಟಿದ ಪಾಕ್‌ ಸೇನೆ : ನೂರೀನ್ ನಿಯಾಝಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement