ನನ್ನ 3ನೇ ಅವಧಿಯಲ್ಲಿ, ವಿಶ್ವದ ಅಗ್ರ ಮೂರು ʼಆರ್ಥಿಕ ಶಕ್ತಿʼಗಳಲ್ಲಿ ಒಂದಾಗಲಿದೆ ಭಾರತ : ಯೇ ಮೋದಿ ಕಿ ಗ್ಯಾರಂಟಿ ಹೈ…

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಗೆದ್ದು ಮೂರನೇ ಅವಧಿಗೆ ಪ್ರಧಾನಿಯಾಗಿ ಮರಳಿದರೆ, ಭಾರತವು ವಿಶ್ವದ ಅಗ್ರ ಮೂರು ʼಆರ್ಥಿಕ ಶಕ್ತಿʼಗಳಲ್ಲಿ ಒಂದಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಬುಧವಾರ ದೆಹಲಿಯ ಪ್ರಗತಿ ಮೈದಾನದಲ್ಲಿ ನವೀಕರಿಸಿದ ಐಟಿಪಿಒ ಸಂಕೀರ್ಣವನ್ನು ಉದ್ಘಾಟಿಸಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ನನ್ನ ಮೂರನೇ ಅವಧಿಯಲ್ಲಿ … Continued

ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರಗೆ ಅಶ್ಲೀಲ ವೀಡಿಯೋ ಕಾಲ್ ಮಾಡಿ ಬ್ಲ್ಯಾಕ್​ಮೇಲ್; ದೂರು ದಾಖಲು

ಬೆಂಗಳೂರು: ದಾವಣಗೆರೆ ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ ಅವರಿ​ಗೆ ಅಪರಿಚಿತ ಮಹಿಳೆಯೊಬ್ಬರು ಮೊದಲು ಮೆಸೇಜ್ ಮಾಡಿ ನಂತರ ಬೆತ್ತಲೆಯಾಗಿ ವೀಡಿಯೋ ಕಾಲ್ ಮಾಡಿ ಫೋಟೋ ತೆಗೆದು ಬ್ಲ್ಯಾಕ್​ಮೇಲ್ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಸಂಸದರು ಪೊಲೀಸರಿಗೆ ದೂರು ನೀಡಿದ್ದಾರೆ. ಜಿ.ಎಂ. ಸಿದ್ದೇಶ್ವರ ಅವರು ಬೆಂಗಳೂರು ನಗರದ ಕಮರ್ಷಿಯಲ್​ ಸ್ಟ್ರೀಟ್ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. … Continued

ಬಿಹಾರದಲ್ಲಿ ವಿದ್ಯುತ್ ನಿಲುಗಡೆ ವಿರೋಧಿಸಿ ಪ್ರತಿಭಟನೆ : ಪೊಲೀಸರ ಗೋಲಿಬಾರ್‌ನಲ್ಲಿ ಓರ್ವ ಸಾವು, ಇಬ್ಬರಿಗೆ ಗಾಯ

ಪಾಟ್ನಾ : ವಿದ್ಯುತ್ ಇಲಾಖೆಯ ವಿರುದ್ಧ ಬಿಹಾರದ ಕತಿಹಾರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಗುಂಪನ್ನು ಚದುರಿಸಲು ಪೊಲೀಸರು ನಡೆಸಿದ ಗೋಲಿಬಾರಿನಲ್ಲಿ ಕನಿಷ್ಠ ಒಬ್ಬರು ಮೃತಪಟ್ಟಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ. ಕತಿಹಾರ್‌ನ ಬರ್ಸೋಯಿ ಪಟ್ಟಣದ ಸಮೀಪವಿರುವ ಗ್ರಾಮದ ನಿವಾಸಿಗಳು ಅನಿಯಮಿತ ವಿದ್ಯುತ್ ಪೂರೈಕೆ ಮತ್ತು ಹೆಚ್ಚಿನ ವಿದ್ಯುತ್ ದರಗಳ ವಿರುದ್ಧ ವಿದ್ಯುತ್ ಇಲಾಖೆಯ ಹೊರಗೆ ಜಮಾಯಿಸಿದರು. ಜನಸಮೂಹವು ವಿದ್ಯುತ್ … Continued

ಜುಲೈ 27 ರಂದು ಉಡುಪಿ ಜಿಲ್ಲೆಯ ಶಾಲೆ-ಪಿಯು ಪೂರ್ವ ಕಾಲೇಜುಗಳಿಗೆ ರಜೆ, ದಕ್ಷಿಣ ಕನ್ನಡದಲ್ಲಿ ಶಾಲೆಗಳಿಗೆ ಮಾತ್ರ ರಜೆ

ಉಡುಪಿ/ಮಂಗಳೂರು: ಜಿಲ್ಲೆಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಜುಲೈ 27ರಂದು ಗುರುವಾರ ಜಿಲ್ಲೆಯ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಹವಾಮಾನ ಇಲಾಖೆಯ ಆರೆಂಜ್ ಅಲರ್ಟ್ ಮುನ್ಸೂಚನೆಯಂತೆ ಹೆಚ್ಚು ಮಳೆಯಾಗುತ್ತಿರುವುದರಿಂದ ಜುಲೈ 27 ರಂದು ಉಡುಪಿ ಜಿಲ್ಲೆಯ ಎಲ್ಲಾ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ, ಹಾಗೂ ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳ … Continued

ಬೆಳಗಾವಿ ಜಿಲ್ಲೆಯ ಜಲಪಾತಗಳಿಗೆ ಹೋಗಲು ಪ್ರವಾಸಿಗರಿಗೆ ನಿರ್ಬಂಧ

ಬೆಳಗಾವಿ : ಜಿಲ್ಲೆಯಾದ್ಯಂತ ಹಲವಾರು ದಿನಗಳಿಂದ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಎಲ್ಲ ಜಾಲಪಾತಗಳ ಸಮೀಪ ಸಾರ್ವಜನಿಕರು ತೆರಳುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ. ಜಪಾತದ ಸಮೀಪಕ್ಕೆ ತೆರಳಿದಾಗ ಕಾಲುಜಾರಿ ಬಿದ್ದು ಅನೇಕ ಜನರು ಪ್ರಾಣ ಕಳೆದುಕೊಂಡ ಘಟನೆಗಳು ರಾಜ್ಯದಾದ್ಯಂತ ಸಂಭವಿಸುತ್ತಿರುವುದು ವರದಿಯಾಗಿದೆ. ಇಂತಹ ದುರ್ಘಟನೆಗಳನ್ನು ತಪ್ಪಿಸುವ ಉದ್ದೇಶದಿಂದ ಜಿಲ್ಲೆಯಲ್ಲಿರುವ … Continued

ಶೌಚಾಲಯದಲ್ಲಿ ವೀಡಿಯೊ ಚಿತ್ರಿಸಿದ ಪ್ರಕರಣ: ಉಡುಪಿ ಕಾಲೇಜಿಗೆ ಭೇಟಿ ನೀಡಲಿರುವ ಖುಷ್ಬೂ

ಬೆಂಗಳೂರು: ಖ್ಯಾತ ನಟಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯು) ಸದಸ್ಯೆ ಖುಷ್ಬು ಸುಂದರ ಅವರು ಉಡುಪಿಗೆ ಭೇಟಿ ನೀಡಲಿದ್ದು, ಪ್ಯಾರಾಮೆಡಿಕಲ್ ಕಾಲೇಜಿನ ವಾಶ್‌ರೂಮ್‌ನಲ್ಲಿ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಸಹ ವಿದ್ಯಾರ್ಥಿಗಳು ವಿಡಿಯೋ ರೆಕಾರ್ಡ್ ಮಾಡಿದ ಆರೋಪದ ಬಗ್ಗೆ ಪರಿಶೀಲನೆ ನಡೆಸುವುದಾಗಿ ಬುಧವಾರ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಾಲೇಜಿನ ಮೂವರು ವಿದ್ಯಾರ್ಥಿನಿಯರಾದ ಶಬ್ನಾಜ್, ಅಲ್ಫಿಯಾ ಮತ್ತು ಅಲೀಮಾ … Continued

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ : ಈ ರಾಜ್ಯಗಳಲ್ಲಿ ಮತ್ತೆ ಮಳೆ ಅಬ್ಬರದ ಮುನ್ಸೂಚನೆ

ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಒಟ್ಟು 12 ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಈ ಕುರಿತು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕೆಲವು ದಿನಗಳಿಂದ ದುರ್ಬಲವಾಗಿರುವ ಮಾನ್ಸೂನ್ ಮುಂದಿನ ನಾಲ್ಕು ದಿನಗಳವರೆಗೆ ತುಂಬಾ ತೀವ್ರವಾಗಿರಲಿದೆ ಎಂದು ಅದು ಹೇಳಿದೆ. ಕರ್ನಾಟಕದ ಕರಾವಳಿಯ ವಿವಿಧ ಭಾಗಗಳು, ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ, ಕೊಂಕಣ ಗೋವಾ, … Continued

ಅಮೆರಿಕದ ರಸ್ತೆಯಲ್ಲಿ ಹಸಿವಿನಿಂದ ಬಳಲುತ್ತಿರುವ ಹೈದರಾಬಾದ್ ಯುವತಿ : ವಿದೇಶಾಂಗ ಸಚಿವ ಜೈಶಂಕರಗೆ ತಾಯಿ ಮೊರೆ

ಸ್ನಾತಕೋತ್ತರ ಪದವಿ ಪಡೆಯಲು ಅಮೆರಿಕಕ್ಕೆ ತೆರಳಿದ್ದ ಹೈದರಾಬಾದ್ ಯುವತಿಯೊಬ್ಬಳು ಚಿಕಾಗೋದ ರಸ್ತೆಯಲ್ಲಿ ಹಸಿವಿನಿಂದ ಬಳಲುತ್ತಿರುವುದು ಕಂಡುಬಂದಿದೆ. ಆಕೆಯ ಸಾಮಾನು-ಸರಂಜಾಮುಗಳು ಕಳ್ಳತನವಾಗಿದೆ ಎಂದು ವರದಿಯಾಗಿದೆ. ಸೈಯದಾ ಲುಲು ಮಿನ್ಹಾಜ್ ಜೈದಿ ಅವರ ತಾಯಿ ಸೈಯದಾ ವಹಾಜ್ ಫಾತಿಮಾ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದು ಮಧ್ಯಪ್ರವೇಶಿಸಿ ತನ್ನ ಮಗಳನ್ನು ಭಾರತಕ್ಕೆ ಕರೆತರಬೇಕು … Continued

ಸೂತಕವೆಂದು ಬಾಣಂತಿ-ಶಿಶುವನ್ನು ಊರ ಹೊರಗಿಟ್ಟ ಕುಟುಂಬಸ್ಥರು: ಅನಾರೋಗ್ಯದಿಂದ ಮಗು ಸಾವು

ತುಮಕೂರು : ಮೈಲಿಗೆ ಎಂದು ಬಾಣಂತಿ ಹಾಗೂ ಮಗುವನ್ನ ಕುಟುಂಬಸ್ಥರು ಊರ ಹೊರಗೆ ಇರಿಸಿದ್ದರಿಂದ ಮಗು ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟ ಆಘಾತಕಾರಿ ಘಟನೆ ಗೊಲ್ಲರಹಟ್ಟಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮಗುವು ವಿಪರೀತ ಶೀತದಿಂದ ಬಳಲಿದ ನಂತರ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಗ್ರಾಮದ ಸಿದ್ದೇಶ ಮತ್ತು ವಸಂತಾ … Continued

ಉಡುಪಿ ; ಕಾಲೇಜಿನ ಶೌಚಾಲಯದಲ್ಲಿ ವೀಡಿಯೊ ಚಿತ್ರೀಕರಣ : ಮೂವರು ವಿದ್ಯಾರ್ಥಿನಿಯರ ವಿರುದ್ಧ ಪ್ರಕರಣ ದಾಖಲು

ಉಡುಪಿ: ನಗರದ ಪ್ಯಾರಾಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ಯುವತಿಯವರ ವೀಡಿಯೊ ಚಿತ್ರೀಕರಣದ ಘಟನೆಗೆ ಸಂಬಂಧಿಸಿ ಮೂವರು ವಿದ್ಯಾರ್ಥಿನಿಯರ ವಿರುದ್ಧ ಎಫ್‌ ಐಆರ್‌ ದಾಖಲಾಗಿದೆ. ವೀಡಿಯೊ ಚಿತ್ರೀಕರಿಸಿದ್ದಾರೆ ಎನ್ನಲಾದ ಶಬನಾಝ್, ಅಲ್ಫೀಯಾ ಮತ್ತು ಅಲೀಮಾ ಎಂಬವರ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯ ಪಿಎಸ್‌ಐ ಸುಷ್ಮಾ ಜಿ.ಬಿ ಅವರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಸ್ವಯಂ … Continued