ನಂದಿನ ಹಾಲಿನ ದರ ಏರಿಕೆ, 67 ಕೈದಿಗಳ ಬಿಡುಗಡೆ ಸೇರಿದಂತೆ 13 ಪ್ರಮುಖ ಪ್ರಸ್ತಾವಗಳಿಗೆ ಸಚಿವ ಸಂಪುಟ ಒಪ್ಪಿಗೆ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಹಾಲಿನ ದರ ಏರಿಕೆ ಸಹಿತ 13 ಪ್ರಸ್ತಾವಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ. ಪಾಟೀಲ ಮಾಹಿತಿ ನೀಡಿದ್ದಾರೆ. ಸಚಿವ ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, “ಒಟ್ಟು ಹದಿನೈದು ವಿಚಾರಗಳ … Continued

1,20,000 ವರ್ಷಗಳಲ್ಲಿ ಭೂಮಿಯು ಇಷ್ಟು ಬಿಸಿಯಾಗಿರಲಿಲ್ಲ’: ಈ ಜುಲೈ ತಿಂಗಳು ವಿಶ್ವದ ಈವರೆಗಿನ ಅತ್ಯಂತ ʼಬಿಸಿʼಯಾದ ತಿಂಗಳಾಗಲಿದೆ…!

ಈ ಜುಲೈ ತಿಂಗಳು ಇತಿಹಾಸದಲ್ಲಿ ಈವರೆಗೆ ದಾಖಲಾದ ಅತ್ಯಂತ ʼಬಿಸಿʼಯಾದ ತಿಂಗಳು ಎಂದು ಕರೆಸಿಕೊಳ್ಳುವ ʼಅತ್ಯಂತ ಹೆಚ್ಚು ಸಾಧ್ಯತೆ” ಇದೆ ಎಂದು ವಿಶ್ವಸಂಸ್ಥೆಯು (UN) ಹೇಳಿದೆ. ಏಕೆಂದರೆ ಸುಡುವ ಶಾಖದ ಅಲೆಗಳು ಪ್ರಪಂಚದ ವಿವಿಧ ಪ್ರದೇಶಗಳಲ್ಲಿ ಕಂಡುಬಂದಿವೆ. ಯುರೋಪಿಯನ್ ಒಕ್ಕೂಟದ ಕೋಪರ್ನಿಕಸ್ ಹವಾಮಾನ ಬದಲಾವಣೆ ಸರ್ವೀಸ್‌ ಮತ್ತು ವಿಶ್ವ ಹವಾಮಾನ ಸಂಸ್ಥೆ (WMO)ಯ ಮಾಹಿತಿಯು ಜುಲೈ … Continued

ಅಯ್ಯೋ ದೇವ್ರೆ…: ಐಫೋನ್ ಖರೀದಿಸಲು ತಮ್ಮ ಎಂಟು ತಿಂಗಳ ಮಗುವನ್ನು ಮಾರಾಟ ಮಾಡಿದ ದಂಪತಿ….!

ಕೋಲ್ಕತ್ತಾ: ಪಶ್ಚಿಮ ಬಂಗಾಳದಿಂದ ವರದಿಯಾದ ಆಘಾತಕಾರಿ ಘಟನೆಯಲ್ಲಿ, ದಂಪತಿ ತಮ್ಮ ಎಂಟು ತಿಂಗಳ ಮಗುವನ್ನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ದಂಪತಿ ರೀಲ್‌ಗಳನ್ನು ಮಾಡಲು ದುಬಾರಿ ಐಫೋನ್ ಖರೀದಿಸಿದ್ದಾರೆ ಎನ್ನಲಾಗಿದೆ. ಈ ವಿಲಕ್ಷಣ ಬೆಳವಣಿಗೆಯು ರಾಜ್ಯದ ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಪೊಲೀಸ್ ತನಿಖೆ ನಡೆಯುತ್ತಿದ್ದು, ಮಗುವಿನ ತಾಯಿ ಸತಿ ಎಂಬವಳನ್ನು … Continued

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಆಗಸ್ಟ್ 31 ರಿಂದ ವಿಮಾನ ಹಾರಾಟ ಆರಂಭ

ಬೆಂಗಳೂರು: ಶಿವಮೊಗ್ಗ ವಿಮಾನ ನಿಲ್ದಾಣ ಆಗಸ್ಟ್ 31ರಿಂದ ತನ್ನ‌ ಕಾರ್ಯಾಚರಣೆ ಆರಂಭಿಸಲಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ. ಈ ಹಿಂದೆ ನಿಗದಿಯಾಗಿದ್ದ ಪ್ರಕಾರ, ಆಗಸ್ಟ್‌ 11ರಿಂದಲೇ ಶಿವಮೊಗ್ಗ ವಿಮಾನ ನಿಲ್ದಾಣ ಕಾರ್ಯಾಚರಣೆ ಆರಂಭವಾಗಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಅದು ಆಗಸ್ಟ್‌ 31ಕ್ಕೆ ಮುಂದೂಡಲ್ಪಟ್ಟಿದೆ ಎಂದು ತಿಳಿಸಿದ್ದಾರೆ. ಶಿವಮೊಗ್ಗದಿಂದ ತಿರುಪತಿ, ಗೋವಾ ಮತ್ತು ಹೈದರಾಬಾದ್ … Continued

ಉಡುಪಿ ಕಾಲೇಜಿನ ಶೌಚಾಲಯದಲ್ಲಿ ಹಿಡನ್‌ ಕ್ಯಾಮರಾ ಇರಲಿಲ್ಲ, ಆರೋಪಗಳ ಆಧಾರದ ಮೇಲೆ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ-ಖುಷ್ಬೂ

ಉಡುಪಿ : ಕಾಲೇಜಿನ ಶೌಚಾಲಯದಲ್ಲಿ ವೀಡಿಯೊ ಮಾಡಿರುವ ಬಗ್ಗೆ ಈಗಷ್ಟೇ ತನಿಖೆ ಆರಂಭ ಮಾಡಿದ್ದು, ಟಾಯ್ಲೆಟ್‌ನಲ್ಲಿ ಯಾವುದೇ ಹಿಡನ್‌ ಕ್ಯಾಮರಾ ಇರಲಿಲ್ಲ. ಸಂಬಂಧಪಟ್ಟ ಫೋನ್ ಗಳನ್ನು ವಿಧಿ ವಿಜ್ಞಾನ ಪ್ರಯೋಗಕ್ಕೆ ಕಳುಹಿಸಲಾಗಿದೆ. ಈ ವಿಚಾರದಲ್ಲಿ ವದಂತಿಗಳಿಗೆ, ವಾಟ್ಸಪ್ ಮೆಸೇಜ್ ಗಳಿಗೆ ಗಮನ ಕೊಡಬೇಡಿ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ ಹೇಳಿದ್ದಾರೆ. ಕಾಲೇಜಿಗೆ … Continued

ಮದುವೆಗಳಲ್ಲಿ ಸಿನಿಮಾ ​ಹಾಡು ಬಳಕೆ ಮಾಡುವುದು ಕಾಪಿರೈಟ್ ಉಲ್ಲಂಘನೆಯಲ್ಲ; ಕೇಂದ್ರ ಸರ್ಕಾರ

ನವದೆಹಲಿ : ಮದುವೆ ಸೇರಿದಂತೆ ಶುಭ ಸಮಾರಂಭಗಳಲ್ಲಿ ಬಾಲಿವುಡ್ ಸೇರಿದಂತೆ ಯಾವುದೇ ಸಿನಿಮಾ ಹಾಡುಗಳನ್ನ ಬಳಕೆ ಮಾಡಿದರೆ ಅದು ಕೃತಿಸ್ವಾಮ್ಯದ ಉಲ್ಲಂಘನೆ (Copyright Infringement) ಆಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಯಾವುದೇ ಸಮಾರಂಭಗಳಲ್ಲಿ ಸಿನಿಮಾ ಹಾಡುಗಳನ್ನ ಬಳಕೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಸಮಾರಂಭಗಳಲ್ಲಿ … Continued

ಬೆಂಕಿ ಅನಾಹುತ : ಏಳು ಗೋವುಗಳು ಸಜೀವ ದಹನ

ಮುಂಡಗೋಡ: ದನದ ಕೊಟ್ಟಿಗೆಗೆ ಹೊತ್ತಿಕೊಂಡ ಬೆಂಕಿಯಿಂದ ಏಳು ಆಕಳುಗಳು ಸಜೀವ ದಹನವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದ ಹಳೂರ ಓಣಿಯಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ವಿದ್ಯುತ್‌ ಶಾರ್ಟ್‌ ಸರ್ಕ್ಯೂಟಿನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಹಳೂರ ಓಣಿಯ ಮಂಜುನಾಥ ನಾಗೇಶ ಶೇಟ್ ಎಂಬವರ ಸೇರಿದ ದನಗಳು ಸಜೀವ ದಹನವಾಗಿವೆ. ಮನೆಯ ಪಕ್ಕದಲ್ಲೇ ದನದಕೊಟ್ಟಿಯಲ್ಲಿ … Continued

ಮಗನ ಶಸ್ತ್ರಚಿಕಿತ್ಸೆಗೆ ಧನ ಸಹಾಯ ಮಾಡಲು ಪೋಷಕರ ಮನವಿ

ಬೆಳಗಾವಿ : ಸವದತ್ತಿ ತಾಲೂಕು ಮಬನೂರ ಗ್ರಾಮದ ಫಕೀರಪ್ಪ ಈರಪ್ಪ ನರಿ ಅವರ ಪುತ್ರ ವೇದಾಂತ ಆರೋಗ್ಯ ಹದಗೆಟ್ಟಿದೆ. ಈತನ ವೈದ್ಯಕೀಯ ಚಿಕಿತ್ಸಾ ವೆಚ್ಚಕ್ಕೆ ಧನಸಹಾಯ ಮಾಡುವಂತೆ ಪೋಷಕರು ಮನವಿ ಮಾಡಿದ್ದಾರೆ. ವೇದಾಂತ ಆರೋಗ್ಯದಲ್ಲಿ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ತೊಂದರೆಯಾಗಿದೆ. ಮಗು ಬೆಂಗಳೂರಿನ ನಾರಾಯಣ ಹೃದಯಾಲಯ ಹೆಲ್ತ್ ಸಿಟಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಗು ಸಂಪೂರ್ಣ … Continued

‘ರಾಷ್ಟ್ರೀಯ ಹಿತಾಸಕ್ತಿ’ : ಇ.ಡಿ. ಮುಖ್ಯಸ್ಥರಿಗೆ ಸೆಪ್ಟೆಂಬರ್‌ 15ರ ವರೆಗೆ ಅವಧಿ ವಿಸ್ತರಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ಸೆಪ್ಟೆಂಬರ್‌ 15ರವರೆಗೆ ಜಾರಿ ನಿರ್ದೇಶನಾಲಯದ (ಇಡಿ) ನಿರ್ದೇಶಕರಾಗಿ ಮುಂದುವರಿಯಲು ಸಂಜಯಕುಮಾರ ಮಿಶ್ರಾ ಅವರಿಗೆ ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿದೆ. ನಡೆಯುತ್ತಿರುವ ಹಣಕಾಸು ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಪರಾಮರ್ಶೆಯಲ್ಲಿ ಮಿಶ್ರಾ ಗೈರಾಗುತ್ತಾರೆ. ಹೀಗಾಗಿ ರಾಷ್ಟ್ರದ ಹಿತಾಸಕ್ತಿಗೆ ಸಂಬಂಧಿಸಿದಂತೆ ಅವರ ಅಧಿಕಾರಾವಧಿಯನ್ನು ಅಕ್ಟೋಬರ್ 15 ರವರೆಗೆ ವಿಸ್ತರಿಸುವಂತೆ ಕೇಂದ್ರ ಸರ್ಕಾರ ಕೋರಿತ್ತು. ಮಿಶ್ರಾ ಅವರ … Continued

ವಿಶ್ವದ ಅತಿ ಕಡಿಮೆ ಜನ ಭೇಟಿ ನೀಡುವ ʼತುವಾಲುʼ ಹೆಸರಿನ ದೇಶಕ್ಕೆ ಶೀಘ್ರದಲ್ಲೇ ಕಣ್ಮರೆಯಾಗುವ ಭೀತಿ : ಯಾಕೆಂದರೆ…

ವಿಶ್ವದ ಅತ್ಯಂತ ಸುಂದರವಾದ ದ್ವೀಪ ತಾಣಗಳಲ್ಲಿ ಒಂದಾದ ತುವಾಲು, ಅತಿ ಕಡಿಮೆ ಭೇಟಿ ನೀಡಿದ ಸ್ಥಳ ಮಾತ್ರವಲ್ಲದೆ, ಮುಂದಿನ ದಿನಗಳಲ್ಲಿ ನಾವು ಎಂದಿಗೂ ಭೇಟಿ ನೀಡಲಾಗದ ಸ್ಥಳಗಳಲ್ಲಿ ಒಂದಾಗಿದೆ. ಕಾರಣ ರಾಷ್ಟ್ರವು ಅಂದಾಜಿಸುವುದಕ್ಕಿಂತ ಬೇಗ ಕಣ್ಮರೆಯಾಗಬಹುದಾಗಿದೆ. 2023 ರಲ್ಲಿ ತುವಾಲು ವಿಶ್ವದ ಅತಿ ಕಡಿಮೆ ಜನ ಭೇಟಿ ನೀಡಿದ ರಾಷ್ಟ್ರವಾಗಿದೆ. ದಕ್ಷಿಣ ಪೆಸಿಫಿಕ್‌ನಲ್ಲಿರುವ ದ್ವೀಪ ರಾಷ್ಟ್ರ, … Continued