ಜೈನ ವಿದ್ಯಾರ್ಥಿಗಳಿಂದ ಧಾರವಾಡದ ಜೈನ ಮಿಲನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಧಾರವಾಡ: ಧಾರವಾಡ ಜಿಲ್ಲೆಯಲ್ಲಿ 2022-23ನೇ ಸಾಲಿನ ಪ್ರಥಮ ವರ್ಷ ಪಿಯುಸಿ/ ಐಟಿಐ/ ಡಿಪ್ಲೋಮಾ/ಬಿ.ಎ/ ಬಿ.ಕಾಂ/ ಬಿಎಸ್ಸಿ /ಬಿಬಿಎ/ಬಿಸಿಎ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಜೈನ ಸಮುದಾಯದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಂದ ಧಾರವಾಡ ಜೈನ ಮಿಲನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿದೆ. ಸಂಪರ್ಕ ಸಂಖ್ಯೆ, ಪಾಲಕರ ಉದ್ಯೋಗ ಇತ್ಯಾದಿ ವಿವರಗಳನ್ನೊಳಗೊಂಡ ವಿನಂತಿ ಅರ್ಜಿಯೊಂದಿಗೆ, ಶುಲ್ಕ ಪಾವತಿಸಿದ ರಶೀದಿ, … Continued

ರೇಣುಕಾಚಾರ್ಯ ಸಹೋದರನ ಮಗನ ನಿಗೂಢ ಸಾವಿನ ಸಮಗ್ರ ತನಿಖೆ: ಆರಗ ಜ್ಞಾನೇಂದ್ರ

ಬೆಂಗಳೂರು: ಶಾಸಕ ಎಂ. ಪಿ.ರೇಣುಕಾಚಾರ್ಯ ಅವರ ಸಹೋದರನ ಮಗನ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ಬಳಿಕ ಸಂಪೂರ್ಣ ಮಾಹಿತಿ ಸಿಗಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ವಿಧಾನಸೌಧದಲ್ಲಿ ಗುರುವಾರ ಮಾತನಾಡಿದ ಅವರು, ನಾಲೆಯಲ್ಲಿ ಕಾರಲ್ಲಿ ರೇಣುಕಾಚಾರ್ಯ ಅವರ ಅಣ್ಣನ ಮಗನ ಶವ ಸಿಕ್ಕಿದೆ. ಅಲ್ಲಿಂದ ವರದಿ ಬರಬೇಕಿದೆ. ಈ ಸಾವಿನ ಬಗ್ಗೆ … Continued

ನಾಪತ್ತೆಯಾಗಿದ್ದ ಶಾಸಕ ರೇಣುಕಾಚಾರ್ಯ ಸೋದರನ ಪುತ್ರ ಚಂದ್ರಶೇಖರ ಶವವಾಗಿ ಪತ್ತೆ

ದಾವಣಗೆರೆ: ಕಕಳೆದ ಐದು ದಿನಗಳಿಂದ ಮನೆಯಿಂದ ನಾಪತ್ತೆಯಾಗಿದ್ದ ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ ಅವರು ಶವವಾಗಿ ಪತ್ತೆಯಾಗಿದ್ದಾರೆ. ಕಡದಕಟ್ಟೆ ಬಳಿ ತುಂಗಾ ಕಾಲುವೆಯಲ್ಲಿ ಕಾರಿನಲ್ಲಿ ರೇಣುಕಾಚಾರ್ಯ ಸೋದರನ ಪುತ್ರ ಚಂದ್ರಶೇಖರ ಅವರ ಮೃತದೇಹ ಕಾರಿನೊಳಗೆ ಪತ್ತೆಯಾಗಿದೆ. ಕಡದಕಟ್ಟೆಯ ತುಂಗಾ ಕಾಲುವೆ ಬಳಿ ಕಾರು ಸಂಚರಿಸಿರುವ ಕುರುಹುಗಳು ಪತ್ತೆಯಾಗಿದ್ದವು,. ಇದನ್ನು ಪೊಲೀಸರು ಪರಿಶೀಲನೆ ಮಾಡಿದ ಬಳಿಕ … Continued

ಗುಂಡಿನ ದಾಳಿಯಲ್ಲಿ ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಗಾಯ: ಬೆಂಗಾವಲು ಪಡೆ ಮೇಲೆ ದಾಳಿಕೋರರು ಗುಂಡು ಹಾರಿಸಿದ ಕ್ಷಣದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಇಸ್ಲಾಮಾಬಾದ್‌: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಗುರುವಾರ ನಡೆದ ಗುಂಡಿನ ದಾಳಿಯಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗಾಯಗೊಂಡ ನಂತರ, ಶಂಕಿತ ದುಷ್ಕರ್ಮಿಯನ್ನು ಬಂಧಿಸಲಾಗಿದೆ. ಆತ ಗುಜ್ರಾನ್‌ವಾಲಾದಲ್ಲಿ ಅಲ್ಲಾವಾಲಾ ಚೌಕ್ ಬಳಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸ್ವಾಗತ ಶಿಬಿರದ ಬಳಿ ಗುಂಡಿನ ದಾಳಿ ನಡೆಸುತ್ತಿರುವ ಚಿತ್ರಗಳು ಹೊರಬಂದಿವೆ. ಮಾಧ್ಯಮ ವರದಿಗಳ ಪ್ರಕಾರ, … Continued

ಸಮಾವೇಶದ ವೇಳೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಮೇಲೆ ಗುಂಡಿನ ದಾಳಿ: ಆಸ್ಪತ್ರೆಗೆ ದಾಖಲು

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ರ್ಯಾಲಿ ಮಾಡುತ್ತಿದ್ದಾಗ ಅವರ ಮೇಲೆ ಗುಂಡಿನ ದಾಳಿ ನಡೆದಿದ್ದು, ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ಗುರುವಾರ ಸಂಜೆ ಅವರ ರ್ಯಾಲಿಯಲ್ಲಿ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದರಿಂದ ಗಾಯಗೊಂಡಿದ್ದಾರೆ. ದಾಳಿಕೋರನನ್ನು ಬಂಧಿಸಲಾಗಿದೆ. ಗುಜ್ರಾನ್‌ವಾಲಾ ವಿಭಾಗದ ವಜೀರಾಬಾದ್ ನಗರದ ಜಾಫರ್ ಅಲಿ ಖಾನ್ … Continued

ಟಿ20 ವಿಶ್ವಕಪ್‌ನಲ್ಲಿ ಜಿಂಬಾಬ್ವೆ ತಂಡ ಭಾರತವನ್ನು ಸೋಲಿಸಿದ್ರೆ ಜಿಂಬಾಬ್ವೆ ಹುಡುಗನನ್ನು ಮದುವೆಯಾಗ್ತಾಳಂತೆ ಪಾಕಿಸ್ತಾನದ ಈ ನಟಿ…!

ಮುಂಬರುವ ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಕುರಿತು ಪಾಕಿಸ್ತಾನಿ ನಟಿ ಸೆಹರ್ ಶಿನ್ವಾರಿ ಟ್ವೀಟ್ ಮಾಡಿದ್ದು ಈಗ ಭಾರೀ ಚರ್ಚೆಯಾಗುತ್ತಿದೆ. ಒಂದು ವೇಳೆ ಜಿಂಬಾಬ್ವೆ ಭಾರತವನ್ನು “ಅದ್ಭುತವಾಗಿ” ಸೋಲಿಸಿದರೆ, ತಾನು ಆಫ್ರಿಕನ್ ದೇಶದ ವ್ಯಕ್ತಿಯನ್ನು ಮದುವೆಯಾಗುತ್ತೇನೆ ಎಂದು ಪಾಕಿಸ್ತಾನಿ ನಟಿ ಸೆಹರ್‌ ಶಿನ್ವಾರಿ ತಮ್ಮ ಟ್ವೀಟ್‌ನಲ್ಲಿ ಘೋಷಿಸಿದ್ದಾರೆ. ನವೆಂಬರ್ 6ರಂದು ಭಾನುವಾರ ವಿಶ್ವ ಟಿ20 ಚಾಂಪಿಯನ್‌ಶಿಪ್‌ನಲ್ಲಿ ಭಾರತ … Continued

ಮದ್ಯದ ಕಳ್ಳಸಾಗಣೆಯ ಈ ವಿಧಾನ ನೋಡಿದ್ರೆ ಬೆರಗಾಗ್ತೀರಾ : ಬಾಗಿಲುಗಳಲ್ಲಿ ಬಚ್ಚಿಟ್ಟು ಒಯ್ಯುತ್ತಿದ್ದ 2000 ಮದ್ಯದ ಬಾಟಲಿ ವಶಪಡಿಸಿಕೊಂಡ ಪೊಲೀಸರು | ವೀಕ್ಷಿಸಿ

ನವದೆಹಲಿ: ದೆಹಲಿ ಪೊಲೀಸರ ವಿಶೇಷ ತಂಡವು ಇಬ್ಬರು ಮದ್ಯ ಕಳ್ಳಸಾಗಣೆದಾರರನ್ನು ಬಂಧಿಸಿದೆ. ದೆಹಲಿಯಿಂದ ಮದ್ಯ ನಿಷೇಧಿತ ಬಿಹಾರಕ್ಕೆ ಈ ಇಬ್ಬರೂ ಆರೋಪಿಗಳು ಮದ್ಯವನ್ನು ಕಳ್ಳಸಾಗಣೆ ಮಾಡುತ್ತಿದ್ದರು. ರಹಸ್ಯ ಮಾಹಿತಿಯ ಮೇರೆಗೆ, ಇಬ್ಬರೂ ಆರೋಪಿಗಳನ್ನು ಬಂಧಿಸಿ, ನಂತರ ಮರದ ಬಾಗಿಲುಗಳಲ್ಲಿ ಬಚ್ಚಿಟ್ಟ ಸಾಗಿಸುತ್ತಿದ್ದ ತಲಾ 90 ಎಂಎಲ್‌ನ 2112 ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ರೋಷನ್ ರೈ ಮತ್ತು ಸರ್ವಜಿತ್ … Continued

ಚೆನ್ನೈ-ಬೆಂಗಳೂರು-ಮೈಸೂರು ನಡುವೆ ವಂದೇ ಭಾರತ ರೈಲಿಗೆ ನವೆಂಬರ್ 11ರಂದು ಪ್ರಧಾನಿ ಮೋದಿ ಚಾಲನೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 11 ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಅವರು ಬೆಂಗಳೂರು ಮೂಲಕ ಹಾದು ಹೋಗುವ ಚೆನ್ನೈ ಮತ್ತು ಮೈಸೂರು ನಡುವೆ ಚಲಿಸುವ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಫ್ಲ್ಯಾಗ್ ಆಫ್ ಮಾಡಲಿದ್ದಾರೆ. ಇದು ದೇಶದಲ್ಲಿ ಓಡುತ್ತಿರುವ ಐದನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಾಗಲಿದೆ. … Continued

ಬಿಜೆಪಿಗೆ ಸೇರ್ಪಡೆಯಾದ ಮಾಜಿ ಸಂಸದ ಮುದ್ದಹನುಮೇಗೌಡ, ಖ್ಯಾತ ನಟ ಶಶಿಕುಮಾರ

ಬೆಂಗಳೂರು: ತುಮಕೂರು ಲೋಕಸಭಾ ಕ್ಷೇತ್ರದ ಮಾಜಿ‌ ಸಂಸದ ಎಸ್​.ಪಿ. ಮುದ್ದಹನುಮೇಗೌಡ ಮತ್ತು ಚಿತ್ರದುರ್ಗ ಕ್ಷೇತ್ರದ ಮಾಜಿ ಸಂಸದ ಹಾಗೂ ಖ್ಯಾತ ನಟ ಶಶಿಕುಮಾರ್ ಇಂದು, ಗುರುವಾರ ಬಿಜೆಪಿಗೆ ಸೇರ್ಪಡೆಯಾದರು. ನಗರದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಬ್ಬರಿಗೂ ಬಿಜೆಪಿ ಶಾಲು ಹೊದಿಸಿ, ಬಿಜೆಪಿ ಬಾವುಟ ಕೈಗೆ ಕೊಟ್ಟು … Continued

ರಾಜ್ಯದ ಎಲ್ಲ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ 10 ನಿಮಿಷ ಧ್ಯಾನ: ಶಿಕ್ಷಣ ಸಚಿವ ನಾಗೇಶ ಪತ್ರ

ಬೆಂಗಳೂರು: ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಿಸಲು, ಒತ್ತಡ ಮುಕ್ತವಾಗಿಸಲು ಶಿಕ್ಷಣ ಇಲಾಖೆ ಧ್ಯಾನದ (Meditation) ಮೊರೆ ಹೋಗಲು ನಿರ್ಧರಿಸಿದೆ. ಇನ್ನು ಮುಂದೆ ಶಾಲಾ-ಕಾಲೇಜುಗಳಲ್ಲಿ 10 ನಿಮಿಷ ವಿದ್ಯಾರ್ಥಿಗಳಿಗೆ ಧ್ಯಾನ ಮಾಡಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಅವರು, ಧ್ಯಾನ … Continued