ಗುಜರಾತ್‌ ಚುನಾವಣೆ ದಿನಾಂಕ ಪ್ರಕಟಿಸಿದ ಚುನಾವಣಾ ಆಯೋಗ : ಎರಡು ಹಂತಗಳಲ್ಲಿ ಮತದಾನ

ನವದೆಹಲಿ: 182 ಸ್ಥಾನಗಳ ಗುಜರಾತ್ ವಿಧಾನಸಭೆಗೆ ಬಹು ನಿರೀಕ್ಷಿತ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ (ಇಸಿ) ಗುರುವಾರ ಪ್ರಕಟಿಸಿದೆ. ಡಿಸೆಂಬರ್ 1ರಂದು ಮತ್ತು ಡಿಸೆಂಬರ್ 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವಕುಮಾರ ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 182 ಸದಸ್ಯರ ಗುಜರಾತ್ … Continued

ʼಕಾಂತಾರ’ ಸಿನಿಮಾದ “ವರಾಹ ರೂಪಂ” ಹಾಡು ಪ್ರದರ್ಶಿಸದಂತೆ ಕೇರಳದ ಮತ್ತೊಂದು ಕೋರ್ಟ್‌ನಿಂದ ತಡೆಯಾಜ್ಞೆ

ʼವರಾಹ ರೂಪಂ” ಹಾಡಿನ ಹಕ್ಕುಸ್ವಾಮ್ಯ ವಿವಾದದಲ್ಲಿ ಕನ್ನಡದ ಸೂಪರ್‌ಹಿಟ್ ಚಲನಚಿತ್ರ “ಕಾಂತಾರ” ವಿರುದ್ಧ ಕೇರಳದ ಮತ್ತೊಂದು ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ನವರಸಂ ಹಾಡಿನ ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪದ ಮೇಲೆ ಮಾತೃಭೂಮಿ ಮ್ಯೂಸಿಕ್ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ದಾವೆಗೆ ಸಂಬಂಧಿಸಿದಂತೆ ಪಾಲಕ್ಕಾಡ್ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮುಂದಿನ ಆದೇಶದವರಿಗೂ ಹಾಡು ಪ್ಲೇ ಮಾಡುವಂತಿಲ್ಲ ತಡೆಯಾಜ್ಞೆ … Continued

ಆಂಧ್ರಪ್ರದೇಶ ಹೈಕೋರ್ಟ್‌ನಲ್ಲಿ ನಕಲಿ ದಾಖಲೆ ಸಲ್ಲಿಸಿದ ಆರೋಪ: ಟಿಡಿಪಿ ಮಾಜಿ ಸಚಿವ, ಪುತ್ರನ ಬಂಧನ

ಏಲೂರು: ಆಂಧ್ರಪ್ರದೇಶ ಹೈಕೋರ್ಟ್‌ಗೆ ನಕಲಿ ದಾಖಲೆ ಸಲ್ಲಿಸಿದ ಆರೋಪದ ಮೇಲೆ ರಾಜ್ಯದ ಮಾಜಿ ಸಚಿವ ಮತ್ತು ತೆಲುಗು ದೇಶಂ ಪಕ್ಷದ ನಾಯಕ ಅಯ್ಯಣ್ಣ ಪತ್ರುಡು ಮತ್ತು ಅವರ ಪುತ್ರ ರಾಜೇಶ್ ಅವರನ್ನು ಅಪರಾಧ ತನಿಖಾ ವಿಭಾಗ(ಸಿಐಡಿ)ದ ಪೊಲೀಸರು ಬಂಧಿಸಿದ್ದಾರೆ. ನೀರಾವರಿ ಕಾಲುವೆ ಒತ್ತುವರಿ ಮಾಡಿಕೊಂಡು ಮನೆಯಲ್ಲಿ ಗೋಡೆ ನಿರ್ಮಿಸಲಾಗಿದೆ ಎಂದು ಹೈಕೋರ್ಟ್‌ಗೆ ನಕಲಿ ಪ್ರಮಾಣಪತ್ರ ಸಲ್ಲಿಸಿದ್ದಾರೆ … Continued

ದಾಂಡೇಲಿ: ಕಾಳಿ ನದಿಗೆ ಇಳಿದವನ ಎಳೆದೊಯ್ದ ಮೊಸಳೆಗಳು

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕುಳಗಿ ರಸ್ತೆಯ ಈಶ್ವರ ದೇವಸ್ಥಾನದ ಬಳಿ ವ್ಯಕ್ತಿಯೊಬ್ಬನನ್ನು ಮೊಸಳೆಗಳು ಎಳೆದೊಯ್ದಿವೆ ಎಂದು ವರದಿಯಾಗಿದೆ.ಈತ ಈಜಲು ನದಿಗೆ ಇಳಿದಿದ್ದಾಗ ಮೊಸಳೆಗಳು ಎಳೆದೊಯ್ದಿವೆ ಎಂದು ಹೇಳಲಾಗಿದೆ. ಮೊಸಳೆ ಎಳೆದೊಯ್ಯುವುದನ್ನು ನೋಡಿದ ಸ್ಥಳೀಯರು ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈಗ ವ್ಯಕ್ತಿಗಾಗಿ ಕಾಳಿ ನದಿಯಲ್ಲಿ ಹುಡುಕಾಟ ನಡೆದಿದೆ. ಸ್ಥಳೀಯರ ಪ್ರಕಾರ, … Continued

ಕಾಲುವೆಯ ಕಂಬದ ದುರಸ್ತಿ ಕಾರ್ಯ ಚುರುಕಿಗೆ ಪಟ್ಟು: ಸ್ಥಳದಲ್ಲೇ ಸಚಿವ ಶೀರಾಮುಲು ವಾಸ್ತವ್ಯ

ಬಳ್ಳಾರಿ: ತಾಲೂಕಿನ ಬರದಾನಹಳ್ಳಿ ಸಮೀಪದ ವೇದಾವತಿ ನದಿಯ ಸೇತುವೆಗೆ ಅಂಟಿಕೊಂಡಂತೆ ತುಂಗಭದ್ರಾ ನದಿಯ ಎಲ್ಎಲ್‌ಸಿ ಕಾಲುವೆಯಿದ್ದರೂ ವೇದಾವತಿ ನದಿಯ ಸೇತುವೆಯ ಪಿಲ್ಲರ್‌ಗಳು ಕುಸಿದ ಪರಿಣಾಮ ಎಲ್ಎಲ್‌ಸಿ ಕಾಲುವೆಗಳಿಗೆ ನೀರು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಅಕ್ಟೋಬರ್ 13ರಿಂದ ರೈತರ ಜಮೀನುಗಳಿಗೆ ನೀರಿಲ್ಲದ ಕಾರಣ ಬೆಳೆಗಳು ಒಣಗುತ್ತಿವೆ. ತುಂಗಭದ್ರಾ ಜಲಾಶಯದ ನೀರು ನಂಬಿಕೊಂಡು ಭತ್ತ, ಮೆಣಿಸಿನಕಾಯಿ ಮೊದಲಾದ ಬೆಳೆ ಬೆಳೆದವರಿಗೆ … Continued

ಏಕರೂಪದ ಐಟಿಆರ್‌ ಫಾರ್ಮ್‌ ಜಾರಿಗೆ ತರಲು ಪ್ರಸ್ತಾಪ: ಪ್ರತಿಕ್ರಿಯೆ ಆಹ್ವಾನಿಸಿದ ಆದಾಯ ತೆರಿಗೆ ಇಲಾಖೆ

ನವದೆಹಲಿ: ಹಣಕಾಸು ಸಚಿವಾಲಯವು ಮಂಗಳವಾರ ಎಲ್ಲಾ ತೆರಿಗೆದಾರರಿಗೆ ಬಳಕೆದಾರ ಸ್ನೇಹಿ ಏಕರೂಪದ  ಆದಾಯ ತೆರಿಗೆ ರಿಟರ್ನ್ (ITR) ಫಾರ್ಮ್ ಅನ್ನು ಹೊರತರುವುದನ್ನು  ಪ್ರಸ್ತಾಪಿಸಿದೆ. ಟ್ರಸ್ಟ್‌ಗಳು ಮತ್ತು ಲಾಭೋದ್ದೇಶವಿಲ್ಲದ ಸಂಸ್ಥೆ (NGO)ಗಳನ್ನು ಹೊರತುಪಡಿಸಿ ಎಲ್ಲಾ ತೆರಿಗೆದಾರರು ಪ್ರಸ್ತಾವಿತ ಹೊಸ ಏಕರೂಪದ ಐಟಿಆರ್‌ (ITR) ನಮೂನೆಯೊಂದಿಗೆ ರಿಟರ್ನ್‌ಗಳನ್ನು ಸಲ್ಲಿಸಬಹುದು, ಇದಕ್ಕಾಗಿ ಈಗ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ … Continued

ದೀರ್ಘ-ಶ್ರೇಣಿಯ ವಿರೋಧಿ ಕ್ಷಿಪಣಿ ಹೊಡೆದುರುಳಿಸಬಲ್ಲ ಬ್ಯಾಲಿಸ್ಟಿಕ್ ಮಿಸೈಲ್ ಯಶಸ್ವಿಯಾಗಿ ಪರೀಕ್ಷಿಸಿದ ಭಾರತ: ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು

ನವದೆಹಲಿ: ದೂರಗಾಮಿ ಕ್ಷಿಪಣಿಗಳು ಮತ್ತು ವಿಮಾನಗಳನ್ನು ಹೊಡೆದುರುಳಿಸುವ ಸಾಮರ್ಥ್ಯವಿರುವ ಬ್ಯಾಲಿಸ್ಟಿಕ್ ಮಿಸೈಲ್ ಡಿಫೆನ್ಸ್ (BMD) ಪ್ರತಿಬಂಧಕ ಕ್ಷಿಪಣಿಯ ಮೊದಲ ಯಶಸ್ವಿ ಹಾರಾಟ ಪರೀಕ್ಷೆಯನ್ನು ಭಾರತವು ಬುಧವಾರ ಒಡಿಶಾ ಕರಾವಳಿಯ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ನಡೆಸಿದೆ. ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್ (ಡಿಆರ್‌ಡಿಒ) ನವೆಂಬರ್ 2ರಂದು ಒಡಿಶಾದ ಕರಾವಳಿಯ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ … Continued

ಕಾರು ಡಿಕ್ಕಿಯಾದ ರಭಸಕ್ಕೆ ಬೈಕ್‌ನಿಂದ ಹಾರಿ ಬಿದ್ದ ಮಗು, ಪತ್ನಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಪುಣೆ: ಕಾರು-ಬೈಕ್‌ ಡಿಕ್ಕಿ ಹೊಡೆದುಕೊಂಡ ಪರಿಣಾಮ ಬೈಕ್‌ನಲ್ಲಿದ್ದ ತಾಯಿ ಮಗು ಗಾಳಿಯಲ್ಲಿ ಹಾರಿ ರಸ್ತೆಗೆ ಬಿದ್ದ ಭಯಾನಕ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಬೈಕ್ ಸವಾರ ತಿರುವು ತೆಗೆದುಕೊಳ್ಳುವ ವೇಳೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ನಲ್ಲಿದ್ದ ತಾಯಿ ಹಾಗೂ ಮಗು ಮೇಲೆ ಹಾರಿ ರಸ್ತೆಗೆ ಬಿದ್ದಿದ್ದಾರೆ. ಘಟನೆ ಸಮೀಪದ … Continued

ಕೋವಿಡ್‌ ಉಲ್ಬಣ: ವಿಶ್ವದ ಅತಿದೊಡ್ಡ ಐಫೋನ್ ಕಾರ್ಖಾನೆ ಐಫೋನ್ ಸಿಟಿ’ ಪ್ರದೇಶ ಲಾಕ್‌ಡೌನ್‌ ಮಾಡಿದ ಚೀನಾ

ಬೀಜಿಂಗ್ : ಚೀನಾದಲ್ಲಿ ಕೊರೊನಾ ಮತ್ತೊಮ್ಮೆ ಸ್ಫೋಟಗೊಳ್ಳುತ್ತಿದೆ. ಕೊರೊನಾ ಸೋಂಕು ವಿಶ್ವದ ಅತಿದೊಡ್ಡ ಐಫೋನ್ ಕಾರ್ಖಾನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಹರಡಿರುವುದರಿಂದ ಕಾರ್ಖಾನೆಯ ಕಾರ್ಮಿಕರು ಪಲಾಯನ ಮಾಡುತ್ತಿದ್ದಾರೆ. ಕೊರೊನಾ ಉಲ್ಬಣ ಇತರ ಪ್ರದೇಶಗಳಿಗೆ ಹರಡುವುದನ್ನ ತಡೆಯಲು ಚೀನಾ ವಿಶ್ವದ ಅತಿದೊಡ್ಡ ಐಫೋನ್ ಕಾರ್ಖಾನೆ ‘ಐಫೋನ್ ಸಿಟಿ’ಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಪೂರ್ಣ ಲಾಕ್ಡೌನ್ ವಿಧಿಸಿದೆ. ತುರ್ತು ಸೇವೆಗಳ ಹೊರತಾಗಿ, … Continued

ಪದ್ಮಭೂಷಣ ಪುರಸ್ಕೃತೆ, ಮಹಿಳಾ ಹಕ್ಕುಗಳ ಕಾರ್ಯಕರ್ತೆ, ಗಾಂಧಿವಾದಿ ಇಳಾ ಭಟ್ ನಿಧನ

ನವದೆಹಲಿ: ಹೆಸರಾಂತ ಗಾಂಧಿವಾದಿ ಮತ್ತು ಸಣ್ಣ ಹಣಕಾಸು ಕಾರ್ಯಕರ್ತೆ, ಪದ್ಮಭೂಷಣ ಪುರಸ್ಕೃತೆ ಇಳಾ ಭಟ್ ಬುಧವಾರ ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ವಕೀಲೆಯೂ ಆಗಿದ್ದ ಇಳಾ ಭಟ್ ಅವರು ಗುಜರಾತ್‌ನ ಅಹಮದಾಬಾದ್‌ನಲ್ಲಿ ಜನಿಸಿದ್ದರು. ಇಳಾ ಭಟ್ ಅವರು ಗಾಂಧಿ ತತ್ವ ಮತ್ತು ಚಿಂತನೆಯಿಂದ ಆಳವಾಗಿ ಪ್ರಭಾವಿತರಾಗಿದ್ದರು. ಅವರ ಅಜ್ಜ 1930 ರಲ್ಲಿ ಮಹಾತ್ಮಾ ಗಾಂಧಿಯವರೊಂದಿಗೆ … Continued