ಚೀನಾದ ಮೇಲೆ ಕಣ್ಣಿಟ್ಟು, ಕ್ವಾಡ್ ನಾಯಕರಿಂದ 5ಜಿ, ಸೆಮಿಕಂಡಕ್ಟರ್‌ಗಳು, ಉದಯೋನ್ಮುಖ ತಂತ್ರಜ್ಞಾನದಲ್ಲಿ ವೇಗದ ಸಹಕಾರಕ್ಕೆ ಪ್ರತಿಜ್ಞೆ

ವಾಷಿಂಗ್ಟನ್ ಡಿಸಿ: ಕ್ವಾಡ್ ರಾಷ್ಟ್ರಗಳಾದ ( Leaders of Quad )ಅಮೆರಿಕ, ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ ನಾಯಕರು “ಸುರಕ್ಷಿತ, ಮುಕ್ತ ಮತ್ತು ಪಾರದರ್ಶಕ” 5 ಜಿ ಟೆಲಿಕಾಂ ನೆಟ್ವರ್ಕಿನ ನಿಯೋಜನೆ ಮುಂದುವರಿಸಲು ಒಪ್ಪಿಕೊಂಡರು ಮತ್ತು ಅರೆವಾಹಕಗಳಿಗೆ ಪೂರೈಕೆ ಸರಪಳಿ ಭದ್ರತೆಯನ್ನು ಹೆಚ್ಚಿಸಲು ಕೆಲಸ ಮಾಡಲು ನಿರ್ಧರಿಸಿದರು. ನಾಲ್ಕು ರಾಷ್ಟ್ರಗಳ ನಾಯಕರ ಮೊದಲ ವ್ಯಕ್ತಿಗತ ಸಭೆಯಲ್ಲಿ … Continued

ಮೋದಿ ಭೇಟಿ ಸಮಯದಲ್ಲಿ ಅಮೆರಿಕದಿಂದ 157 ಕಲಾಕೃತಿಗಳು-ಪುರಾತನ ವಸ್ತುಗಳು ಭಾರತಕ್ಕೆ ಹಸ್ತಾಂತರ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭೇಟಿಯ ಸಮಯದಲ್ಲಿ ಅಮೆರಿಕವು 157 ಕಲಾಕೃತಿಗಳು ಮತ್ತು ಪುರಾತನ ವಸ್ತುಗಳನ್ನು ಹಸ್ತಾಂತರಿಸಿತು. ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಕಳ್ಳತನ, ಅಕ್ರಮ ವ್ಯಾಪಾರ ಮತ್ತು ಸಾಂಸ್ಕೃತಿಕ ವಸ್ತುಗಳ ಕಳ್ಳಸಾಗಣೆ ವಿರುದ್ಧ ಹೋರಾಡಲು ತಮ್ಮ ಪ್ರಯತ್ನಗಳನ್ನು ಬಲಪಡಿಸಲು ಬದ್ಧರಾಗಿರುವುದರಿಂದ ಈ ಕ್ರಮವು ಬಂದಿದೆ. ಬೆಳವಣಿಗೆ ನಂತರ, ಪ್ರಧಾನಮಂತ್ರಿ … Continued

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸ್ಥಾನ, ಎನ್ಎಸ್ ಜಿ ಪ್ರವೇಶಕ್ಕೆ ಅಮೆರಿಕದ ಬೆಂಬಲ ಪುನರುಚ್ಚರಿಸಿದ ಬಿಡೆನ್‌

ವಾಷಿಂಗ್ಟನ್‌: ಶ್ವೇತಭವನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಮೊದಲ ವೈಯಕ್ತಿಕ ದ್ವಿಪಕ್ಷೀಯ ಸಭೆಯಲ್ಲಿ ಸುಧಾರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸದಸ್ಯತ್ವಕ್ಕಾಗಿ ಮತ್ತು ಪರಮಾಣು ಪೂರೈಕೆದಾರರ ಗುಂಪಿಗೆ ತನ್ನ ಪ್ರವೇಶಕ್ಕೆ ಅಮೆರಿಕದ ಬೆಂಬಲವನ್ನು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಪುನರುಚ್ಚರಿಸಿದ್ದಾರೆ. ಅಧ್ಯಕ್ಷ ಬಿಡೆನ್ ಪ್ರಧಾನಿ ಮೋದಿ ಅವರೊಂದಿಗಿನ ಮಾತುಕತೆಯಲ್ಲಿ, ಆಗಸ್ಟ್ 2021 ರಲ್ಲಿ ವಿಶ್ವಸಂಸ್ಥೆಯ ಭದ್ರತಾ … Continued

ಅಫ್ಘಾನಿಸ್ತಾನದಲ್ಲಿ ಕ್ರೂರ ಶಿಕ್ಷೆ ಶುರು; ಗುಂಡಿಕ್ಕಿ ಕೊಂದು ನಗರದ ಮಧ್ಯೆ ಹೆಣ ನೇತಾಕಿದ ತಾಲಿಬಾನಿಗಳು..!

ಕಾಬೂಲ್: ಅಫ್ಘಾನಿಸ್ತಾನ (Afghanistan)ದಲ್ಲಿ ಬದಲಾಗಿದ್ದೇವೆ ಎಂದು ಹೇಳಿಕೊಂಡು ಬರುತ್ತಿರುವ ತಾಲಿಬಾನಿಗಳ ಅಸಲಿ ಮುಖ ಅನಾವರಣಗೊಳ್ಳುತ್ತಿದೆ. ಆದರೆ ಅವರ ಒಂದೊಂದೇ ನೈಜ ಬಣ್ಣ ಬಯಲಾಗುತ್ತಿದೆ. ಇಂದು ಪಶ್ಚಿಮ ಅಫ್ಘಾನಿಸ್ತಾನದ ಹೆರತ್ ನಗರದಲ್ಲಿ (Herat city in western Afghanistan) ತಾಲಿಬಾನಿಗಳ ಕ್ರೂರ ಶಿಕ್ಷೆಗೆ ಜನ ಬೆಚ್ಚಿಬಿದ್ದಿದ್ದಾರೆ. ಶನಿವಾರ ನಾಲ್ಕು ಜನರಿಗೆ ಗುಂಡು ಹೊಡೆದಿರುವ ತಾಲಿಬಾನಿಗಳು ಅದರಲ್ಲಿ ಒಬ್ಬನ … Continued

CoWin ಪ್ರಮಾಣಪತ್ರದಲ್ಲಿ ಇನ್ನು ವಿದೇಶಕ್ಕೆ ಪ್ರಯಾಣಿಸುವ ಸಂಪೂರ್ಣ ಲಸಿಕೆ ಹಾಕಿದವರ ಜನ್ಮ ದಿನಾಂಕವೂ ನಮೂದು

ನವದೆಹಲಿ: ಸಂಪೂರ್ಣವಾಗಿ ಲಸಿಕೆ ಹಾಕಿದ ಮತ್ತು ವಿದೇಶಕ್ಕೆ ಪ್ರಯಾಣಿಸಲು ಬಯಸುವ ಜನರು ತಮ್ಮ ಪೂರ್ಣ ಜನ್ಮ ದಿನಾಂಕದೊಂದಿಗೆ ಕೋವಿನ್ ಪ್ರಮಾಣಪತ್ರವನ್ನು ಹೊಂದಿರುತ್ತಾರೆ ಎಂದು ಭಾರತ ಮತ್ತು ಬ್ರಿಟನ್‌ ನಡುವೆ ಕೋವಿಡ್ ಲಸಿಕೆ ಪ್ರಮಾಣಪತ್ರಗಳ ಕುರಿತು ನಡೆಯುತ್ತಿರುವ ಚರ್ಚೆಗಳ ನಡುವೆ ಸೆಪ್ಟೆಂಬರ್ 25 ರಂದು ಅಧಿಕೃತ ಮೂಲಗಳು ತಿಳಿಸಿವೆ. ಪ್ರಸ್ತುತ, ಕೋವಿನ್ ಪ್ರಮಾಣಪತ್ರಗಳು ಫಲಾನುಭವಿಯ ವಯಸ್ಸನ್ನು ಇತರ … Continued

ಎಐಕ್ಯೂ ವೈದ್ಯಕೀಯ ಸೀಟುಗಳಲ್ಲಿ 27% ಒಬಿಸಿ, 10% ಇಡಬ್ಲ್ಯೂಎಸ್ ಕೋಟಾ: ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ನವದೆಹಲಿ: ರಾಜ್ಯ ಸರ್ಕಾರಿ ವೈದ್ಯಕೀಯ ಸಂಸ್ಥೆಗಳಲ್ಲಿ ಅಖಿಲ ಭಾರತ ಕೋಟಾದಡಿ (ಎಐಕ್ಯೂ) ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) 27 % ಮೀಸಲಾತಿ ಮತ್ತು ಆರ್ಥಿಕವಾಗಿ ದುರ್ಬಲ ವರ್ಗಕ್ಕೆ (ಇಡಬ್ಲ್ಯೂಎಸ್) 10% ಮೀಸಲಾತಿ ನೀಡುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ನೀಡಿದೆ. (ಡಾ ಅಪೂರ್ವ ಸತೀಶ್ ಗುಪ್ತಾ ವರ್ಸಸ್ ಭಾರತ ಸರ್ಕಾರ). … Continued

ಕರ್ನಾಟಕದಲ್ಲಿ ಕೊರೊನಾ ಏರಿಳಿತ: ಶನಿವಾರ 787 ಪ್ರಕರಣ ಪತ್ತೆ..!

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದ್ದು ಕಳೆದ 24 ಗಂಟೆಯಲ್ಲಿ (ಶನಿವಾರ) 787 ಕೊರೋನಾ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 29,72, 620ಕ್ಕೆ ಏರಿಕೆಯಾಗಿದೆ. ಇಂದು 11 ಮಂದಿ ಮೃತಪಟ್ಟಿದ್ದಾರೆ. ಇದೇ ಸಮಯದಲ್ಲಿ ಸಾವಿನ ಸಂಖ್ಯೆ 37,717ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 775 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ … Continued

ಭಯೋತ್ಪಾದನೆಯನ್ನು ರಾಜಕೀಯ ದಾಳವಾಗಿ ಬಳಕೆ; ವಿಶ್ವಸಂಸ್ಥೆ ಸಭೆಯಲ್ಲಿ ಪಾಕ್​ಗೆ ತಿರುಗೇಟು ನೀಡಿದ ಮೋದಿ

ವಿಶ್ವಸಂಸ್ಥೆ (ನ್ಯೂಯಾರ್ಕ್‌): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 76 ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ((Prime Minister Narendra modi speech in UNGC) ) ಶನಿವಾರ ಮಾಡಿದ ಭಾಷಣದಲ್ಲಿ ಭಯೋತ್ಪಾದನೆಯನ್ನು “ರಾಜಕೀಯ ಸಾಧನ” ವಾಗಿ ಬಳಸುತ್ತಿರುವ ರಾಷ್ಟ್ರಗಳು ಅದು ತಮಗೂ ಇರುವ ಬೆದರಿಕೆಯನ್ನು ಅರಿತುಕೊಳ್ಳಬೇಕು ಎಂದು ಪಾಕಿಸ್ತಾನ ಹಾಗೂ ಚೀನಾ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ … Continued

ಭಾರತವು ಸುಧಾರಣೆಯಾದಾಗ, ಜಗತ್ತು ಬದಲಾಗುತ್ತದೆ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ಮೋದಿ

ವಿಶ್ವಸಂಸ್ಥೆ (ನ್ಯೂಯಾರ್ಕ್‌) : ಪ್ರಧಾನಿ ನರೇಂದ್ರ ಮೋದಿ 76 ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು (ಯುಎನ್ ಜಿಎ) ಶನಿವಾರ ಉದ್ದೇಶಿಸಿ ಮಾತನಾಡಿ ಭಾರತದ ಅಂತರ್ಗತ ಪ್ರಜಾಪ್ರಭುತ್ವ ಮತ್ತು ವಿಶ್ವಕ್ಕೆ ಅದರ ಮಹತ್ವವನ್ನು ಎತ್ತಿ ತೋರಿಸಿದರು. ಭಾರತದಲ್ಲಿ ಸುಧಾರಣೆಗಳು ಜಗತ್ತನ್ನು ಪರಿವರ್ತಿಸಲು ಸಹಾಯ ಮಾಡುತ್ತದೆ ಎಂದು ಪ್ರತಿಪಾದಿಸಿದರು. ಈ ವರ್ಷ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಭಾಷಣ … Continued

ಹುಣಸೂರು: ಸಾಕಾನೆ ಶಿಬಿರದಲ್ಲಿದ್ದ ಹೆಣ್ಣಾನೆ ಸಾವು

ಹುಣಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಹುಣಸೂರು ವನ್ಯಜೀವಿ ವಲಯದ ಸಾಕಾನೆ ಶಿಬಿರದಲ್ಲಿ ಜೆಮಿನಿ ಸರ್ಕಸ್ ಕಂಪನಿಯಿಂದ ವಶಪಡಿಸಿಕೊಂಡ ೪ ಆನೆಗಳಲ್ಲಿ ಒಂದಾದ ಹೆಣ್ಣು ಆನೆಯೊಂದು ಮೃತಪಟ್ಟಿರುವ ಘಟನೆ ವರದಿಯಾಗಿದೆ. ೬೬ ವರ್ಷ ಪ್ರಾಯದ ಹೆಣ್ಣಾನೆಯನ್ನು ಪುನರ್ವಸತಿಗೊಂಡ ದೊಡ್ಡಹರವೆ ಸಾಕಾನೆ ಶಿಬಿರದಲ್ಲಿ ಅರಣ್ಯ ರಕ್ಷಣಾ ಕಾರ್ಯಕ್ಕೆ ಬಳಸಿಕೊಂಡು ಪಾಲನೆ ಮಾಡಲಾಗುತ್ತಿತ್ತು. ಕಳೆದ ೨ ತಿಂಗಳಿಂದ … Continued