ಹೊಸ ಪ್ರಕರಣದಲ್ಲಿ ಕಾರ್ತಿ ಚಿದಂಬರಂ ಮನೆ, ಕಚೇರಿಗಳ ಮೇಲೆ ಸಿಬಿಐ ದಾಳಿ

ನವದೆಹಲಿ: ವಿದೇಶಿ ಹಣ ರವಾನೆಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಅವರ ನಿವಾಸ ಸೇರಿದಂತೆ ಏಳು ಕಡೆ ಶೋಧ ನಡೆಸಲಾಗುತ್ತಿದೆ. ದೆಹಲಿ, ಮುಂಬೈ ಹಾಗೂ ತಮಿಳುನಾಡಿನ ಚೆನ್ನೈ ಮತ್ತು ಶಿವಗಂಗೈನಲ್ಲಿ ಸಿಬಿಐ ದಾಳಿ ಮಾಡಿದೆ. ಕಾರ್ತಿ … Continued

ಜ್ಞಾನವಾಪಿ ಮಸೀದಿ ವಿವಾದ: ಇಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ

ನವದೆಹಲಿ: ವಾರಾಣಸಿಯ ಗ್ಯಾನವಾಪಿ ಮಸೀದಿಯ ಸರ್ವೆ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು, ಮಂಗಳವಾರ ವಿಚಾರಣೆ ನಡೆಸಲಿದೆ. ಜ್ಞಾನವಾಪಿ ಮಸೀದಿಯ ಸಮೀಕ್ಷೆಗೆ ವಾರಾಣಸಿ ನ್ಯಾಯಾಲಯದ ಆದೇಶದ ವಿರುದ್ಧ ಅಂಜುಮನ್ ಮಸೀದಿ ಸಮಿತಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ. ಸೋಮವಾರ ಮುಂಜಾನೆ, ವಾರಾಣಸಿಯ ನ್ಯಾಯಾಲಯವು ‘ಶಿವಲಿಂಗ’ ಪತ್ತೆಯಾದ ಜಾಗವನ್ನು … Continued

ಆಪ್ಟಿಕಲ್ ಇಲ್ಯೂಷನ್: ಈ ಕಪ್ಪು ಮತ್ತು ಬಿಳಿ ಚಿತ್ರದಲ್ಲಿ 8 ಪ್ರಾಣಿಗಳು ಅಡಗಿವೆ, ಎಲ್ಲವನ್ನೂ ಕಂಡುಹಿಡಿಯಬಹುದೇ..?

ವೈರಲ್ ಆಪ್ಟಿಕಲ್ ಇಲ್ಯೂಷನ್: ಆಪ್ಟಿಕಲ್ ಭ್ರಮೆಗಳು (ಇಲ್ಯೂಷನ್ಸ್‌) ಮತ್ತು ಪಿಕ್ಚರ್ ಪಜಲ್‌ಗಳು ನಮ್ಮ ಮನಸ್ಸಿಗೆ ಸವಾಲು ಹಾಕುವ ಕಾರಣ ಅಂತರ್ಜಾಲದಲ್ಲಿ ಜನಪ್ರಿಯ. ನಮ್ಮ ವ್ಯಕ್ತಿತ್ವದ ವಿವಿಧ ಅಂಶಗಳನ್ನು ಬಹಿರಂಗಪಡಿಸುವ ಇಂತಹ ಮನಸ್ಸಿಗೆ ಮುದ ನೀಡುವ ಮತ್ತು ಆಸಕ್ತಿದಾಯಕ ಆಪ್ಟಿಕಲ್ ಇಲ್ಯೂಷನ್ ಪರೀಕ್ಷೆಗಳಿಂದ ಇಂಟರ್ನೆಟ್ ತುಂಬಿದೆ. ಕೆಲವರು ಕಣ್ಣಿನ ದೃಷ್ಟಿ, ಏಕಾಗ್ರತೆಯ ಮಟ್ಟ, ವೀಕ್ಷಣಾ ಕೌಶಲ್ಯ ಮತ್ತು … Continued

ಭಟ್ಕಳ: ಪೊಲೀಸ್ ಜೀಪ್ ಡಿಕ್ಕಿ, ಮಹಿಳೆ ಸಾವು

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿಯಲ್ಲಿ ಪೊಲೀಸ್ ಜೀಪ್ ಡಿಕ್ಕಿಯಾಗಿ ಮಹಿಳೆ ಮೃತಪಟ್ಟಿರುವ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರಿಗೆ ಪೈಲಟ್ ಮಾಡುವ ಸಲುವಾಗಿ ಬೆಳಕೆ ಕಡೆಯಿಂದ ಸಾರದಹೊಳೆ ಕಡೆಗೆ ಹೋಗುತ್ತಿರುವಾಗ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಮೃತ ಮಹಿಳೆಯನ್ನು ವೆಂಕಟಾಪುರ   ನಿವಾಸಿ ವಿಜಯಾ ಹೊನ್ನಾವರಕರ … Continued

ಶರದ್ ಪವಾರ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್: ನಟಿಯನ್ನು ಮನೆಗೆ ಕರೆದೊಯ್ದು ಎಲೆಕ್ಟ್ರಾನಿಕ್ಸ್ ಸಾಕ್ಷ್ಯ ಸಂಗ್ರಹ

ಮುಂಬೈ: ಎನ್‌ಸಿಪಿ ಅಧ್ಯಕ್ಷ ಶರದ ಪವಾರ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಶೇರ್ ಮಾಡಿದ ಆರೋಪದ ಮೇಲೆ ಎರಡು ದಿನಗಳ ಹಿಂದೆ ಬಂಧನಕ್ಕೊಳಗಾಗಿದ್ದ ಮರಾಠಿ ನಟಿ ಕೇತಕಿ ಚಿತಳೆ ಅವರನ್ನು ಇಂದು, ಸೋಮವಾರ ನವಿ ಮುಂಬೈನ ಕಲಾಂಬೋಲಿಯಲ್ಲಿರುವ ಅವರ ಮನೆಗೆ ಕರೆತರಲಾಯಿತು. ಪೊಲೀಸರು ಎಲೆಕ್ಟ್ರಾನಿಕ್ ಪುರಾವೆಗಳನ್ನು ಸಂಗ್ರಹಿಸಿದರು. ಒಂದು ಗಂಟೆ ಕಾಲ ಕೇತಕಿ ನಿವಾಸದಲ್ಲಿದ್ದ … Continued

ಸತ್ತ ತಾಯಿ ತನ್ನೊಂದಿಗೆ ಶಾಶ್ವತವಾಗಿರುವಂತೆ ಮಾಡಲು ಪ್ಲಾಸ್ಟಿಕ್ ಬ್ಯಾರೆಲ್‌ನಲ್ಲಿ ಸಿಮೆಂಟ್‌ ಹಾಕಿ ಶವ ಹೂತಿಟ್ಟ ಮಗ…!

ಚೆನ್ನೈ: ವಿಲಕ್ಷಣ ಘಟನೆಯೊಂದರಲ್ಲಿ, 53 ವರ್ಷದ ವ್ಯಕ್ತಿಯೊಬ್ಬರು ತನ್ನ ಮೃತ ತಾಯಿಯ ಶವವನ್ನು ಪ್ಲಾಸ್ಟಿಕ್ ಬ್ಯಾರೆಲ್‌ನಲ್ಲಿ ಎಸೆದು ಕಾಂಕ್ರೀಟ್ ಮಿಶ್ರಣವನ್ನು ಸುರಿದು, ‘ತನ್ನ ತಾಯಿಯನ್ನು ಶಾಶ್ವತವಾಗಿ ತನ್ನೊಂದಿಗೆ ಇಟ್ಟುಕೊಳ್ಳುವುದಾಗಿ ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 86 ವರ್ಷದ ವೃದ್ಧೆ ಕೆ. ಶೆಂಬಗಂ ಅವರು ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಹೆಚ್ಚಿನ ಸಮಯ ಮನೆಯಲ್ಲಿಯೇ … Continued

ಶಿರಸಿ: ಖ್ಯಾತ ಆಯುರ್ವೇದ ವೈದ್ಯ ಡಾ.ಸಾಂಬಮೂರ್ತಿ ನಿಧನ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಹೆಸರಾಂತ ಆಯುರ್ವೇದ ವೈದ್ಯರಾಗಿದ್ದ ಹಾಗೂ ಶಿರಸಿಯ ಸಮೀಕ್ಷಾ ಆಯುರ್ವೇದ ಚಿಕಿತ್ಸಾಲಯದ ಸಂಸ್ಥಾಪಕರಾಗಿದ್ದ ಡಾ.ಸಾಂಬಮೂರ್ತಿ ಗಾಯತ್ರಿ (57) ಇಂದು, ಸೋಮವಾರ  ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರು, ಪ್ರಖ್ಯಾತ ಆಯುರ್ವೇದ ತಜ್ಞೆ ಪತ್ನಿ ಡಾ.ಸಾವಿತ್ರಿ, ಪುತ್ರ ಸಂಯಮ ಹಾಗೂ ಪುತ್ರಿ ಸಂಜ್ಞಾ ಅವರನ್ನು ಅಗಲಿದ್ದಾರೆ. ಮೂಲತಃ ಗೋಕರ್ಣದವರಾದ ಡಾ.ಸಾಂಬಮೂರ್ತಿಯವರು ಗುರು ಶಿಷ್ಯ ಪರಂಪರೆಯಡಿ ತಮ್ಮ … Continued

ದತ್ತಪೀಠದ ಹೋಮ ನಡೆಯುವ ಪವಿತ್ರ ಜಾಗದಲ್ಲಿ ಮಾಂಸಾಹಾರ ಮಾಡಿದ ಆರೋಪ: ವ್ಯಾಪಕ ಆಕ್ರೋಶ, ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹ

ಚಿಕ್ಕಮಗಳೂರು: ಬಾಬಾ ಬುಡನ್‌ಗಿರಿಯಲ್ಲಿರುವ ವಿವಾದಿತ ದತ್ತಪೀಠ ಪ್ರದೇಶ ಮತ್ತೆ ಸುದ್ದಿಯಾಗಿದೆ. ದತ್ತಪೀಠದ ಹೋಮ-ಹವನ ನಡೆಯುವ ಪವಿತ್ರ ಜಾಗದಲ್ಲಿ ಮಾಂಸದೂಟ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ವಿವಾದಿತ ಜಾಗದಲ್ಲಿ ಕೋರ್ಟ್ ಆದೇಶ ಉಲ್ಲಂಘಿಸಿದ್ದು, ಹೋಮ-ಹವನ ನಡೆಯುವ ತಾತ್ಕಾಲಿಕ ಶೆಡ್‌ನಲ್ಲಿ ಮಾಂಸದೂಟ ಮಾಡಲಾಗಿದೆ ಎಂಬ ಮಾತು ಕೇಳಿ ಬಂದಿದೆ. ವಿವಾದಿತ ಗೋರಿ ಬಳಿ ಕಿಡಿಗೇಡಿಗಳು ಮಾಂಸದೂಟ ಮಾಡಿದ್ದಾರೆ … Continued

3 ಪರಿತ್ಯಕ್ತ ಹುಲಿ ಮರಿಗಳನ್ನು ಸಾಕುತ್ತಿರುವ ನಾಯಿ…ಬೆರಗಾದ ಇಂಟರ್ನೆಟ್‌ | ವೀಕ್ಷಿಸಿ

ಮಮತೆ ಎಲ್ಲ ಗಡಿಗಳನ್ನೂ ಮೀರುತ್ತದೆ ಎಂದು ನಾವೆಲ್ಲರೂ ಕೇಳಿದ್ದೇವೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ನಾಯಿಯ ವೀಡಿಯೊ ಅದನ್ನು ನೂರಕ್ಕೆ ನೂರರಷ್ಟು ಪುಷ್ಟೀಕರಿಸುವಂತಿದೆ. ವೀಡಿಯೊದಲ್ಲಿ, ಲ್ಯಾಬ್ರಡಾರ್ ನಾಯಿಯೊಂದು ತಾಯಿ ಹುಲಿ ಬಿಟ್ಟುಹೋದ ಮೂರು ಹುಲಿ ಮರಿಗಳನ್ನು ತಾಯಿಯಂತೆಯೇ ಪ್ರಾಣಿಸಂಗ್ರಹಾಲಯದಲ್ಲಿ ನೋಡಿಕೊಂಡಿದೆ. ಹುಲಿ ಮರಿಗಳು ಮತ್ತು ಅವುಗಳ ಸಾಕುತಾಯಿ ನಾಯಿಯ ನಡುವಿನ ಬಾಂಧವ್ಯಕ್ಕೆ ಅಂತರ್ಜಾಲವು ಬೆರಗಾಗಿದೆ. ಈ … Continued

ಭಾರತದಿಂದ ರಫ್ತು ನಿಷೇಧದ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗೋಧಿ ಬೆಲೆ ದಾಖಲೆ ಏರಿಕೆ

ನವದೆಹಲಿ: ತೀವ್ರ ತಾಪಮಾನದಿಂದಾಗಿ ಗೋಧಿ ಉತ್ಪನ್ನದ ಮೇಲೆ ಪರಿಣಾಮದಿಂದ ಗೋಧಿ ರಫ್ತು ನಿಷೇಧಿಸಲು ಭಾರತ ನಿರ್ಧರಿಸಿದ ನಂತರ ಜಾಗತಿಕ ಮಾರುಕಟ್ಟೆಯಲ್ಲಿ ಸೋಮವಾರ ಗೋಧಿ ಬೆಲೆ ದಾಖಲೆಯ ಮಟ್ಟಕ್ಕೆ ಏರಿದೆ. ಯುರೋಪ್ ಮಾರುಕಟ್ಟೆ ಸೋಮವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆ ಗೋಧಿ ಬೆಲೆ ಪ್ರತಿ ಟನ್‌ಗೆ 435 ಯುರೋಗಳಿಗೆ ($453) ಜಿಗಿದಿದೆ. ಈ ಹಿಂದೆ ಜಾಗತಿಕ ರಫ್ತಿನ ಶೇಕಡ … Continued