ಅಂಕೋಲಾ ಉದ್ಯಮಿ ಆರ್‌.ಎನ್. ನಾಯಕ್ ಹತ್ಯೆ ಪ್ರಕರಣ: ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ 9 ಮಂದಿ ದೋಷಿಗಳು ಎಂದ ಬೆಳಗಾವಿ ಕೋಕಾ ನ್ಯಾಯಾಲಯ

ಬೆಳಗಾವಿ: ಒಂಬತ್ತು ವರ್ಷಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮೂಲದ ಉದ್ಯಮಿ ಆರ್‌ಎನ್ ನಾಯಕ್ ಹತ್ಯೆ ಪ್ರಕರಣದಲ್ಲಿ 2015 ರಲ್ಲಿ ಮೊರಾಕೊದಿಂದ ಹಸ್ತಾಂತರಿಸಲ್ಪಟ್ಟ ಕುಖ್ಯಾತ ದರೋಡೆಕೋರ ಬನ್ನಂಜೆ ರಾಜ ಮತ್ತು ಇತರ ಎಂಟು ಮಂದಿ ದೋಷಿಗಗಳು ಎಂದು ಬೆಳಗಾವಿಯ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಸಿಒಸಿಎ- ಕೋಕಾ) ವಿಶೇಷ ನ್ಯಾಯಾಲಯ ಬುಧವಾರ ತೀರ್ಪು … Continued

ಬ್ರಿಟಿಷರ ವಿರುದ್ಧ ಟಿಪ್ಪು ಸುಲ್ತಾನನ ಐತಿಹಾಸಿಕ ವಿಜಯದ ಚಿತ್ರಕಲೆ 6 ಕೋಟಿ ರೂ.ಗಳಿಗೆ ಮಾರಾಟ

ಲಂಡನ್: 1780 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಮೇಲೆ ಮೈಸೂರು ದೊರೆ ಹೈದರ್ ಅಲಿ ಮತ್ತು ಅವರ ಮಗ ಟಿಪ್ಪು ಸುಲ್ತಾನ್ ಅವರ ಐತಿಹಾಸಿಕ ವಿಜಯವನ್ನು ಚಿತ್ರಿಸುವ ಪೇಂಟಿಂಗ್ ಬುಧವಾರ ಲಂಡನ್‌ನಲ್ಲಿ 6‌,30,000 ಪೌಂಡ್‌ಗಳಿಗೆ ( 6.28 ಕೋಟಿ ರೂ.ಗಳಿಗೆ) ಹರಾಜಿಗೆ ಒಳಗಾಯಿತು. ಎರಡನೇ ಆಂಗ್ಲೋ-ಮೈಸೂರು ಯುದ್ಧದ ಭಾಗವಾಗಿ ಸೆಪ್ಟೆಂಬರ್ 10, 1780 ರಂದು ನಡೆದ … Continued

ಪ್ರಧಾನಿ ಇಮ್ರಾನ್ ಖಾನ್ ಕುರ್ಚಿ ಉಳಿಸಿಕೊಳ್ಳುವುದು ಈಗ ಕಷ್ಟಸಾಧ್ಯ, ಈಗ ಪಾಕ್ ಸಂಸತ್ತಿನ ಪಕ್ಷಗಳ ಬಲಾಬಲ ಹೀಗಿದೆ

ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಸರ್ಕಾರದ ಸ್ಥಿರತೆಗೆ ಸಂಬಂಧಿಸಿದ ಬಿಕ್ಕಟ್ಟು ಉಲ್ಬಣಗೊಂಡಿದೆ. ವಿಶ್ವಾಸ ಮತದ ಪರೀಕ್ಷೆಗೂ ಮುನ್ನವೇ ಇಮ್ರಾನ್ ಖಾನ್‌ಗೆ ಭಾರಿ ಹಿನ್ನಡೆಯಾಗಿದೆ. ಇಮ್ರಾನ್ ಖಾನ್ ಸರ್ಕಾರದಲ್ಲಿ ಮಿತ್ರ ಪಕ್ಷವಾಗಿರುವ ಎಂಕ್ಯೂಎಂನ ಇಬ್ಬರು ಸಚಿವರು ಸಂಪುಟಕ್ಕೆ ರಾಜೀನಾಮೆ ನೀಡಿದ್ದು, ಪ್ರತಿಪಕ್ಷಗಳೊಂದಿಗೆ ಕೈಜೋಡಿದ್ದಾರೆ. ಮಾರ್ಚ್ 8 ರಂದು ರಾಷ್ಟ್ರೀಯ ಅಸೆಂಬ್ಲಿ ಸಚಿವಾಲಯದ ಮುಂದೆ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ … Continued

ಬಿಡಿಸಲಾರದ ಬಂಧ…ತಮಿಳುನಾಡಿನಲ್ಲಿ ತನ್ನ ಸಾಕು ನಾಯಿಯ ನೆನಪಿಗೆ ದೇವಾಲಯ ನಿರ್ಮಿಸಿದ ವೃದ್ಧ

ಚೆನ್ನೈ: ಅನೇಕ ಜನರಿಗೆ, ಸಾಕುಪ್ರಾಣಿಗಳು ಬಹಳಷ್ಟು ಭಾವನಾತ್ಮಕ ಪ್ರಾಮುಖ್ಯತೆಯನ್ನು ಹೊಂದಿವೆ ಮತ್ತು ಅವರ ಪ್ರೀತಿಯ ಸಾಕುಪ್ರಾಣಿಗಳು ಸತ್ತರೆ ಅದರಿಂದ ಹೊರಬರುವುದು ಅವರಿಗೆ ಕಷ್ಟವಾಗುತ್ತದೆ. ಅಂತಹ ಒಂದು ರೋಮಾಂಚನಕಾರಿ ಸಂಗತಿಯಲ್ಲಿ, ತಮಿಳುನಾಡಿನ ಶಿವಗಂಗೆಯ 82 ವರ್ಷದ ನಿವೃತ್ತ ಸರ್ಕಾರಿ ನೌಕರರೊಬ್ಬರು ತನ್ನ ಅತ್ಯಂತ ಪ್ರೀತಿಯ ಮತ್ತು ನಿಷ್ಠಾವಂತ ಒಡನಾಡಿಗೆ ದೊಡ್ಡ ಗೌರವವನ್ನು ನೀಡಿದ್ದಾರೆ. ಮುತ್ತು ಎಂಬ ವ್ಯಕ್ತಿಯೊಬ್ಬರು … Continued

ಗರ್ಭಿಣಿ ಸಾವಿಗೆ ಮಹಿಳಾ ವೈದ್ಯರ ವಿರುದ್ಧ ಪ್ರಕರಣ ದಾಖಲು: ಮನನೊಂದು ಸ್ತ್ರೀರೋಗ ವೈದ್ಯೆ ಆತ್ಮಹತ್ಯೆ

ನವದೆಹಲಿ: 42 ವರ್ಷದ ಸ್ತ್ರೀರೋಗ ತಜ್ಞೆ ಅರ್ಚನಾ ಶರ್ಮಾ ಅವರು ಮಂಗಳವಾರ ರಾಜಸ್ಥಾನದ ದೌಸಾದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ಆಸ್ಪತ್ರೆಯೊಂದರಲ್ಲಿ ಗರ್ಭಿಣಿ ಮಹಿಳೆಯ ಸಾವಿಗೆ ಕಾರಣರಾದ ಆರೋಪದ ಮೇಲೆ ತಮ್ಮ ಮೇಲೆ ಪ್ರಕರಣ ದಾಖಲಾಗಿದ್ದಕ್ಕೆ ಮನನೊಂದು ಮಹಿಳಾ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೋಲ್ಡ್​ ಮೆಡಲಿಸ್ಟ್​ ಆಗಿದ್ದ ಅರ್ಚನಾ ಶರ್ಮಾ ಆತ್ಮಹತ್ಯೆಗೂ ಮುನ್ನ ಆತ್ಮಹತ್ಯೆ … Continued

26/11 ಮುಂಬೈ ದಾಳಿಯ ಭಯೋತ್ಪಾದಕ ಅಜ್ಮಲ್ ಕಸಬ್ ಪಾಕಿಸ್ತಾನದ ಪ್ರಜೆ ಎಂದು 14 ವರ್ಷಗಳ ನಂತರ ಒಪ್ಪಿಕೊಂಡ ಪಾಕ್‌ ಸಚಿವ..ವೀಡಿಯೊ ವೀಕ್ಷಿಸಿ

2008 ನವೆಂಬರ್ 26/11ರ ಮುಂಬೈನ ಭಯೋತ್ಪಾದಕ ದಾಳಿಯನ್ನು ಯಾರೂ ಮರೆತಿಲ್ಲ. ಪಾಕಿಸ್ತಾನದ ಕರಾಚಿಯಿಂದ ಸಮುದ್ರ ಮಾರ್ಗವಾಗಿ ಬಂದಿದ್ದ ಭಯೋತ್ಪಾದಕರು, ಸುಮಾರು 174 ಅಮಾಯಕರನ್ನ ಹತ್ಯೆ ಮಾಡಿದ್ದರು. ಪಾಕಿಸ್ತಾನದ ಲಷ್ಕರ್ ಏ ತಯ್ಬಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್​ ಸಯೀದ್​ನಿಂದ ಕಳಿಸಲ್ಪಟ್ಟಿದ್ದವರಲ್ಲಿ ಈ ಭಯೋತ್ಪಾದಕರಲ್ಲಿ ಉಗ್ರ ಅಜ್ಮಲ್ ಕಸಬ್ ಜೀವಂತವಾಗಿ ಸೆರೆ ಸಿಕ್ಕಿದ್ದ. ಇತ್ತೀಚೆಗಷ್ಟೇ, ಪಾಕಿಸ್ತಾನದ ಆಂತರಿಕ … Continued

ಪ್ಲುಟೊದಲ್ಲಿ ಹೊಸ ವಿಸ್ಮಯ: ಇದರ ಮೇಲ್ಮೈಯಲ್ಲಿ ಸೌರ ಮಂಡಲದಲ್ಲಿ ಎಲ್ಲೂ ಕಾಣಿಸದ ಮಂಜಿನ ಜ್ವಾಲಾಮುಖಿ ಬಗ್ಗೆ ಸುಳಿವು

ಪ್ಲುಟೊ ಅನರ್ಹ ಗ್ರಹವೆಂದು ಘೋಷಿಸಲ್ಪಟ್ಟ ಸುಮಾರು 16 ವರ್ಷಗಳ ಕಳೆದಿವೆ. ಆದರೆ ಪ್ಲುಟೊ ಇನ್ನೂ ಮೇಲ್ಮೈಯಲ್ಲಿ ಅಡಗಿರುವ ರಹಸ್ಯಗಳು ವಿಜ್ಞಾನಿಗಳು ಅದರಲ್ಲಿರುವ ಒಂದೊಂದೇ ಕೌತುಕ ಹೊರತರುತ್ತಿದ್ದಾರೆ. ಹೊಸ ಅಧ್ಯಯನವೊಂದು ಈಗ ಮೇಲ್ಮೈಯಲ್ಲಿ ಮಂಜುಗಡ್ಡೆಯ ನಿಗೂಢ ಜ್ವಾಲಾಮುಖಿಗಳ ಬಗ್ಗೆ ಸುಳಿವು ನೀಡಿದೆ. ಇದೀಗ ವಿಜ್ಞಾನಿಗಳು ಪ್ಲುಟೋ ಮೇಲ್ಮೈಯಲ್ಲಿ ಮಂಜುಗಡ್ಡೆಯ ಜ್ವಾಲಾಮುಖಿ ಇರುವಿಕೆಯ ಸುಳಿವನ್ನು ಪತ್ತೆಹಚ್ಚಿದ್ದಾರೆ. ಇಂತಹ ನಿಗೂಢ … Continued

ಹಲಾಲ್ ಮಾಂಸದ ಬಗ್ಗೆ ಗಂಭೀರ ಆಕ್ಷೇಪಣಗಳ ಬಗ್ಗೆ ಪರಿಶೀಲಿಸಿ ನಂತರ ಸರ್ಕಾರದಿಂದ ಕ್ರಮ-ಸಿಎಂ ಬೊಮ್ಮಾಯಿ

ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಹಲಾಲ್ ಮಾಂಸದ ಬಗ್ಗೆ ಗಂಭೀರ ಆಕ್ಷೇಪಣೆಗಳನ್ನು ರಾಜ್ಯ ಸರ್ಕಾರ ಪರಿಶೀಲಿಸಿ ನಂತರ ಕ್ರಮದ ಬಗ್ಗೆ ವಿಚಾರ ಮಾಡುತ್ತೇವೆ ಎಂದು ಹೇಳಿದ್ದಾರೆ. ಕೆಲವು ಬಲಪಂಥೀಯ ಗುಂಪುಗಳು ಅದನ್ನು ಬಹಿಷ್ಕರಿಸಲು ಕರೆ ನೀಡಿವೆ. ಮುಖ್ಯಮಂತ್ರಿಗಳು ತಮ್ಮ ಸರ್ಕಾರಕ್ಕೆ ಸಂಬಂಧಿಸಿದಂತೆ “ಬೆಳವಣಿಗೆಯ ರೆಕ್ಕೆಗಳು” ಮಾತ್ರ ಇವೆಯೇ ಹೊರತು ಬಲಪಂಥೀಯ ಅಥವಾ … Continued

ಕರ್ನಾಟಕದಲ್ಲಿ ಕಬ್ಬಿಣದ ಅದಿರು ರಫ್ತಿನ ಬಗ್ಗೆ ನಿಲುವು ಸ್ಪಷ್ಟಪಡಿಸಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್‌ ಸೂಚನೆ

ನವದೆಹಲಿ: ಕರ್ನಾಟಕದಲ್ಲಿ ಹೊರತೆಗೆಯಲಾದ ಕಬ್ಬಿಣದ ಅದಿರನ್ನು ರಫ್ತು ಮಾಡುವ ಬಗ್ಗೆ ನಿಲುವು ಸ್ಪಷ್ಟಪಡಿಸುವಂತೆ ಕೇಂದ್ರ ಮತ್ತು ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠವು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಈ ವಿಷಯದ ಬಗ್ಗೆ ಏಪ್ರಿಲ್ 8 ರೊಳಗೆ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಸೂಚಿಸಿದೆ. ಸುಪ್ರೀಂಕೋರ್ಟ್‌ … Continued

ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳಕ್ಕೆ ಸರ್ವಪಕ್ಷಗಳ ಸಭೆ : ಸಿಎಂ ಬೊಮ್ಮಾಯಿ

ಬೆಂಗಳೂರು: ಪರಿಶಿಷ್ಟ ಪಂಗಡದ ಮೀಸಲಾತಿ ಸೇರಿದಂತೆ ವಿವಿಧ ಸಮುದಾಯಗಳಿಗೆ ಮೀಸಲಾತಿ ನೀಡುವ ಸಂಬಂಧ ಸರ್ವಪಕ್ಷಗಳ ಸಭೆ ಕರೆದು ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಗೆ ತಿಳಿಸಿದರು. ಇಂದು, ಬುಧವಾರ ಕಾಂಗ್ರೆಸ್ ಶಾಸಕರಾದ ಪ್ರಿಯಾಂಕ್ ಖರ್ಗೆ, ಭೀಮಾ ನಾಯಕ್, ಅಜಯ್ ಧರ್ಮಸಿಂಗ್ ಮತ್ತಿತರರು ಧರಣಿ ನಡೆಸಿ ಪರಿಶಿಷ್ಟ ಪಂಗಡಕ್ಕೆ ಶೇ.7.5ರ ಮೀಸಲಾತಿ ನೀಡಬೇಕೆಂದು ಎಂದು … Continued