ಇಂದೂ ಪೆಟ್ರೋಲ್‌-ಡೀಸೆಲ್‌ ಬೆಲೆಯಲ್ಲಿ ಹೆಚ್ಚಳ, 9 ದಿನದಲ್ಲಿ 5.60 ರೂ.ಹೆಚ್ಚಳ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಬುಧವಾರ (ಮಾರ್ಚ್ 30)ವೂ ಏರಿಕೆಯಾಗಿದ್ದು, ಪ್ರತಿ ಲೀಟರ್‌ಗೆ 80 ಪೈಸೆಗಳಷ್ಟು ಹೆಚ್ಚಿಸಲಾಗಿದೆ. ಕಳೆದ ಒಂಬತ್ತು ದಿನಗಳಲ್ಲಿ ಒಟ್ಟು 8ನೇ ಬಾರಿಗೆ ದರ ಏರಿಕೆ ಮಾಡಲಾಗಿದ್ದು, ಕಳೆದ 9 ದಿನಗಳಲ್ಲಿ ಲೀಟರ್‌ಗೆ 5.60 ರೂ.ಗಳಷ್ಟು ಹೆಚ್ಚಾಗಿದೆ. . ಮಾರ್ಚ್ 22 ರಂದು ದರ ಪರಿಷ್ಕರಣೆಯಲ್ಲಿ ನಾಲ್ಕೂವರೆ ತಿಂಗಳ ಸುದೀರ್ಘ ವಿರಾಮಕ್ಕೆ … Continued

ಸಿದ್ಧಗಂಗಾ ಶ್ರೀಗಳ ಕುರಿತ ಸಿನಿ ಸೀರಿಸ್‌ನಲ್ಲಿ ಸಿದ್ದಗಂಗಾ ಶ್ರೀಗಳ ಪಾತ್ರದಲ್ಲಿ ಅಮಿತಾಭ್ ಬಚ್ಚನ್..?

ಸಿದ್ದಗಂಗಾ ಶ್ರೀಗಳು ಮಾಡಿದ ಸಾಮಾಜಿಕ ಕೆಲಸಗಳು ಹಾಗೂ ಅವರ ಜೀವನದ ಕುರಿತು ಮಿನಿ ಸಿನಿ ಸೀರಿಸ್ ಸಿದ್ಧವಾಗುತ್ತಿದೆ. ಸಿದ್ಧಗಂಗಾ ಶ್ರೀಗಳ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ಅವರು ನಟಿಸಬೇಕು ಎಂಬುದು ಚಿತ್ರತಂಡದ ಆಶಯವಾಗಿದ್ದು, ಈ ಕಾರಣಕ್ಕೆ ಅವರ ಕಾಲ್​ಶೀಟ್​ಅನ್ನು ಕೇಳಲಾಗಿದೆ. ಅವರು ಒಪ್ಪಿದರೆ ಅವರು ಪೂರ್ಣಪ್ರಮಾಣದಲ್ಲಿ ಕನ್ನಡದಲ್ಲಿ ನಟಿಸಿದಂತೆ ಆಗಲಿದೆ. ಅಮಿತಾಭ್ ಬಚ್ಚನ್ ಅವರು ಸಿದ್ದಗಂಗಾ ಶ್ರೀಗಳ … Continued

ಹುದ್ದೆ ಕೈತಪ್ಪಿದ ಕೋಪಕ್ಕೆ ಪ್ರಾಂಶುಪಾಲರ ಮೇಲೆ ಆಸಿಡ್ ಎರಚಿದ ಸಹ ಪ್ರಾಧ್ಯಾಪಕ

ಕಲಬುರಗಿ: ಕಾಲೇಜು ಪರಿವೀಕ್ಷಣಾ ಇನ್ಸ್ಪೆಪೆಕ್ಟರ್ ಹುದ್ದೆ ಸಿಗಲಿಲ್ಲವೆಂಬ ಕೋಪದಿಂದ ಕಾಲೇಜು ಪ್ರಾಂಶುಪಾಲರ ಮೇಲೆ ಸಹ ಪ್ರಾಧ್ಯಾಪಕರೊಬ್ಬರು ಆಸಿಡ್ ಎರಚಿ ಹಲ್ಲೆಗೆ ಯತ್ನಿಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಇಲ್ಲಿನ ಎಚ್ ಕೆಇ ಸೊಸೈಟಿಯ ಫಾರ್ಮಸಿ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕ ಶಾಂತವೀರ ಎಂಬವವರು ಕಾಲೇಜು ಪರಿವೀಕ್ಷಣಾ ಇನ್ಸ್ ಪೆಕ್ಟರ್ ಹುದ್ದೆ ಮೇಲೆ ಕಣ್ಣಿಟ್ಟಿದ್ದ. ಆದರೆ, ಕೊನೆ ಗಳಿಗೆಯಲ್ಲಿ ಆತನಿಗೆ … Continued

ಕೊಲ್ಲೂರು ದೇವಾಸ್ಥಾನದಲ್ಲಿ ಸಲಾಂ ಮಂಗಳಾರತಿ ಶೀಘ್ರವೇ ನಿಲ್ಲಿಸಬೇಕು: ಕಲ್ಡಡ್ಕ ಪ್ರಭಾಕರ ಭಟ್ ಆಗ್ರಹ

ಉಡುಪಿ: ಆರ್ ಎಸ್ ಎಸ್ ಪ್ರಮುಖ ಕಲ್ಲಡ್ಕ ಪ್ರಭಾಕರ ಭಟ್ ಅವರು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ಸಲಾಂ ಮಂಗಳಾರತಿ ಪದ್ಧತಿ ಕೂಡಲೇ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ. ಮಂಗಳವಾರ ಉಡುಪಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಮ್ಮ ದೇವರನ್ನು ಅವಹೇಳನ ಮಾಡಿರುವ, ಹಿಂದೂ ಸಮಾಜವನ್ನು ನಾಶ ಮಾಡಲು ಪ್ರಯತ್ನಿಸಿದ ಒಬ್ಬ ವ್ಯಕ್ತಿಯ ಹೆಸರಲ್ಲಿ ಸಲಾಂ ಮಂಗಳಾರತಿ ಮಾಡುವುದು … Continued

ಕೀವ್​​ನಲ್ಲಿ ಸೇನಾ ಕಾರ್ಯಾಚರಣೆ ಕಡಿಮೆ ಮಾಡಲು ಒಪ್ಪಿಕೊಂಡ ರಷ್ಯಾ, ಇದು ಕದನ ವಿರಾಮವಲ್ಲ ; ಮಾತುಕತೆಗಳು ಬಹಳ ದೂರ ಸಾಗಬೇಕಿದೆ ಎಂದ ಮಾಸ್ಕೋ

ಕೀವ್ ಮತ್ತು ಉತ್ತರ ಉಕ್ರೇನ್‌ನ ಸುತ್ತ ಮಿಲಿಟರಿ ಕಾರ್ಯಾಚರಣೆಗಳನ್ನು ಕಡಿಮೆ ಮಾಡುವ ರಷ್ಯಾದ ಭರವಸೆಯು ಕದನ ವಿರಾಮವನ್ನು ಪ್ರತಿನಿಧಿಸುವುದಿಲ್ಲ ಮತ್ತು ಕೀವ್‌ನೊಂದಿಗಿನ ಔಪಚಾರಿಕ ಒಪ್ಪಂದದ ಕುರಿತು ಮಾತುಕತೆಗಳು ಬಹಳ ದೂರ ಸಾಗಬೇಕಾಗಿದೆ ಎಂದು ಶಾಂತಿ ಮಾತುಕತೆಯ ಮಾಸ್ಕೋದ ಪ್ರಮುಖ ಸಮಾಲೋಚಕರು ಮಂಗಳವಾರ ಹೇಳಿದ್ದಾರೆ. ರಷ್ಯಾದ ಸಮಾಲೋಚಕರು ಮಂಗಳವಾರ ಉಕ್ರೇನ್‌ನ ರಾಜಧಾನಿ ಕೀವ್ ಮತ್ತು ಉತ್ತರದ ನಗರವಾದ … Continued

ಆಘಾತಕಾರಿ…ನಡು ರಸ್ತೆಯಲ್ಲೇ ಸ್ಕೂಟಿಯಲ್ಲಿದ್ದ ವಿಕಲಚೇತನನಿಗೆ ದೊಣ್ಣೆಯಿಂದ ಥಳಿಸಿದ ದಂಪತಿ…ದೃಶ್ಯ ವೀಡಿಯೊದಲ್ಲಿ ಸೆರೆ

ನವದೆಹಲಿ: ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಝೆವಾರ್ ಪ್ರದೇಶದಲ್ಲಿ ವಿಕಲಚೇತನ ವ್ಯಕ್ತಿಯನ್ನು ಪುರುಷ ಮತ್ತು ಮಹಿಳೆ ಅಮಾನುಷವಾಗಿ ಥಳಿಸಿದ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಮಾರ್ಚ್ 27 ರಂದು ಈ ಘಟನೆ ನಡೆದಿದ್ದು, ದುಷ್ಕರ್ಮಿಗಳಾದ ಜುಗೇಂದ್ರ ಮತ್ತು … Continued

ರಂಗಕರ್ಮಿ ಡಾ.ಶ್ರೀಪಾದ ಭಟ್ಟರಿಗೆ ಅಭಿನಯ ಭಾರತಿ ರಂಗ ಪ್ರಶಸ್ತಿ ಪ್ರದಾನ

ಧಾರವಾಡ: ಖ್ಯಾತ ರಂಗಭೂಮಿ ನಿರ್ದೇಶಕ ಡಾ.ಶ್ರೀಪಾದ್ ಭಟ್ ಅವರಿಗೆ ರಂಗಾಯಣ ಧಾರವಾಡದ ಸಂಸ್ಕೃತಿ ಸಮುಚ್ಚಯದಲ್ಲಿ ಅಭಿನಯ ಭಾರತಿ ಕೊಡಮಾಡುವ 2022ನೇ ಸಾಲಿನ ಅಭಿನಯ ಭಾರತಿ ರಂಗ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದು ಸಂಸ್ಥೆ ನೀಡುವ 27ನೆ ಪ್ರಶಸ್ತಿಯಾಗಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಶ್ರೀಪಾದ್ ಭಟ್ ಅವರು ಡಾ.ಬೇಂದ್ರೆ, ಡಾ.ಕೀರ್ತಿನಾಥ ಕುರ್ತಕೋಟಿ ಮತ್ತು ಅಭಿನಯ ಭಾರತಿ ಅವರೊಂದಿಗಿನ … Continued

ಕರ್ನಾಟಕ ಇತಿಹಾಸ ಪರಿಷತ್ತಿನ ಸಮ್ಮೇಳನದ ಸಮಾರೋಪ, ಚರಿತ್ರೆಯ ಅಧ್ಯಯನಕ್ಕೆ ಐತಿಹಾಸಿಕ ಸತ್ಯ ಹುಡುಕುವ ಪ್ರಾಮಾಣಿಕ ಪ್ರಯತ್ನ ಬೇಕು: ಡಾ. ರಮೇಶ ನಾಯಕ

ಧಾರವಾಡ: ಇಲ್ಲಿನ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಆತಿಥ್ಯದಲ್ಲಿ ನಡೆದ ೩೧ನೇ ಕರ್ನಾಟಕ ಇತಿಹಾಸ ಪರಿಷತ್ತಿನ ಮಹಾಸಮ್ಮೇಳನದ ಸಮಾರೋಪ ಸಮಾರಂಭ ನಡೆಯಿತು. ಸಮಾರೋಪ ಭಾಷಣ ಮಾಡಿದ ಹಂಪಿ ವಿಶ್ವ ವಿದ್ಯಾಲಯದ ವಿತ್ತಾಧಿಕಾರಿ ಡಾ. ರಮೇಶ ನಾಯಕ ಮಾತನಾಡಿ, ಇತಿಹಾಸವು ಜಗತ್ತಿನಲ್ಲಿ ಹೆಚ್ಚು ಚರ್ಚೆಗೆ ಒಳಗಾದ ವಿಷಯವಾಗಿದ್ದು, ಅದಕ್ಕೆ ಕಾರಣ … Continued

ಮನೆಯಲ್ಲಿದ್ದ ಪ್ರಧಾನಿ ಮೋದಿ ಫೋಟೋ ತೆಗೆಯದಿದ್ದರೆ ಹೊರಹಾಕುವ ಬೆದರಿಕೆ : ಜಮೀನುದಾರನ ವಿರುದ್ಧ ಪೊಲೀಸರ ಮೊರೆ ಹೋದ ವ್ಯಕ್ತಿ..!

ಮಧ್ಯಪ್ರದೇಶದ ಇಂದೋರ್‌ನ ವ್ಯಕ್ತಿಯೊಬ್ಬರು ತಮ್ಮ ಮನೆಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ತೆಗೆಯದಿದ್ದರೆ ಮನೆಯಿಂದ ಹೊರಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕ ವಿಚಾರಣೆ ಅಹವಾಲು ವೇದಿಕೆಯನ್ನು ಸಂಪರ್ಕಿಸಿದ್ದಾರೆ. ಇಂದೋರ್‌ನ ಪಿರ್ ಗಲಿ ನಿವಾಸಿ ಯೂಸುಫ್ ಅವರು ಮಂಗಳವಾರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಆಘಾತಕಾರಿ ದೂರು ನೀಡಿದ್ದಾರೆ. ಪ್ರಧಾನಿ ಮೋದಿಯವರ ಸಿದ್ಧಾಂತದಿಂದ ಪ್ರೇರಿತರಾದ ಯೂಸುಫ್ ಅವರು … Continued

ನಮ್ಮ ಪ್ರಪಂಚವು ಹೇಗೆ ರೂಪುಗೊಂಡಿತು ಎಂಬ ರಹಸ್ಯ ಪರಿಹರಿಸುವ ಸುಳಿವು ನೀಡಿದ ಭೂಮಿಯ ಮಧ್ಯಭಾಗದಲ್ಲಿರುವ ಸೋರಿಕೆ: ವಿಜ್ಞಾನಿಗಳು

ಭೂಮಿಯು ಶತಕೋಟಿ ವರ್ಷಗಳಿಂದ ವಿಕಸನಗೊಂಡಿದೆ, ಆದಾಗ್ಯೂ, ಅದರ ರಚನೆಯ ರಹಸ್ಯವು ಇನ್ನೂ ರಹಸ್ಯವಾಗಿಯೇ ಉಳಿದಿದೆ. ಈಗ ಭೂಮಿಯ ಮಧ್ಯಭಾಗದಲ್ಲಿರುವ ಸೋರಿಕೆ ಈಗ ಬಿಗ್ ಬ್ಯಾಂಗ್‌ನೊಂದಿಗೆ ಪ್ರಾರಂಭವಾಗುವ ನಮ್ಮ ಪ್ರಪಂಚದ ರಚನೆಯ ಬಗ್ಗೆ ಸುಳಿವು ನೀಡಿದೆ ಮತ್ತು ಸೌರ ನೀಹಾರಿಕೆಯೊಳಗೆ ಅದರ ರಹಸ್ಯ ಅಡಗಿದೆ ಎಂದು ವಿಜ್ಞಾನಿಗಳು ನಂಬಿದ್ದಾರೆ. ಹೀಲಿಯಂ ಅನಿಲದ ಅಪರೂಪದ ಐಸೊಟೋಪ್ ಹೀಲಿಯಂ-3 ಭೂಮಿಯ … Continued