ಹೈದರಾಬಾದ್ ಶಾಕರ್..: ಬ್ಯಾಂಕ್​ ಸಿಬ್ಬಂದಿ ನಿರ್ಲಕ್ಷ್ಯದಿಂದ 18 ತಾಸು ಕಾಲ ಬ್ಯಾಂಕ್‌ ಲಾಕರ್​​ ಕೋಣೆಯಲ್ಲಿ ಕಳೆದ ಮಧುಮೇಹ ಕಾಯಿಲೆಯ 89ರ ವೃದ್ಧ..!

ಹೈದರಾಬಾದ್‌: ಬ್ಯಾಂಕ್ ಸಿಬ್ಬಂದಿಯ ನಿರ್ಲಕ್ಷ್ಯದಿಂದ 89 ವರ್ಷದ ವ್ಯಕ್ತಿಯೊಬ್ಬರು ಹೈದರಾಬಾದ್‌ನಲ್ಲಿ ಬ್ಯಾಂಕ್‌ನ ಲಾಕರ್ ಕೋಣೆಯಲ್ಲಿ ರಾತ್ರಿ ಕಳೆಯಬೇಕಾಯಿತು. ಸೋಮವಾರ, ಮಾರ್ಚ್ 28 ರಂದು ಸಿಬ್ಬಂದಿ ಆವರಣಕ್ಕೆ ಬೀಗ ಹಾಕಿ ಹೊರಟುಹೋದ ನಂತರ ವ್ಯಕ್ತಿ 18 ಗಂಟೆಗಳ ಕಾಲ ಬ್ಯಾಂಕ್‌ನಲ್ಲಿ ಕಳೆಯಬೇಕಾಯಿತು. ಈ ಆಘಾತಕಾರಿ ಘಟನೆಯು ಐಷಾರಾಮಿ ಜುಬಿಲಿ ಹಿಲ್ಸ್ ಪ್ರದೇಶದಲ್ಲಿನ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ … Continued

ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಬ್ರಿಟನ್ ಸಂಸತ್ತಿಗೆ ಆಹ್ವಾನ

ಮುಂಬೈ : 1990 ರಲ್ಲಿ ಕಾಶ್ಮೀರ್ ಪಂಡಿತರು ಅಲ್ಲಿನ ಮುಸ್ಲಿಂ ಭಯೋತ್ಪಾದಕರಿಂದ ಅನುಭವಿಸಿದ ನರಕವನ್ನು ಎಳೆ ಎಳೆಯಾಗಿ ತೋರಿಸಿದ ಹಿಂದಿಯ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ನಿರ್ದೇಶಕ ವಿವೇಕ ಅಗ್ನಿಹೋತ್ರಿಗೆ ಈಗ ಬ್ರಿಟನ್ ಸಂಸತ್ತಿನಿಂದ ಅವರಿಗೆ ವಿಶೇಷ ಆಹ್ವಾನ ಬಂದಿದೆಯಂತೆ. ತನಗೆ ತನ್ನ ಪತ್ನಿ ಪಲ್ಲವಿಗೆ ಬ್ರಿಟನ್ ಸಂಸತ್​ನವರು ಆಹ್ವಾನಿಸಿದ್ದಾರೆ ಎಂದು ಈ ಬಗ್ಗೆ ಸ್ವತಃ … Continued

ಭಾರೀ ಹಿಮಪಾತ, ಮಂಜಿನಿಂದಾಗಿ ಅಮೆರಿಕದಲ್ಲಿ 50ಕ್ಕೂ ಹೆಚ್ಚು ವಾಹನಗಳು ಪರಸ್ಪರ ಡಿಕ್ಕಿ: ಮೂವರ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ..ವೀಕ್ಷಿಸಿ

ಪೆನ್ಸಿಲ್ವೇನಿಯಾ: ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯದ ಅಂತಾರಾಜ್ಯ ಹೆದ್ದಾರಿಯಲ್ಲಿ ಸೋಮವಾರ ಭಾರೀ ಹಿಮಪಾತವು ಬಹು-ವಾಹನದ ರಾಶಿಗೆ ಕಾರಣವಾದ ನಂತರ ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಮತ್ತು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ತಿಳಿಸಿದೆ. ಟ್ರಕ್‌ಗಳು, ಟ್ರಾಕ್ಟರ್-ಟ್ರೇಲರ್‌ಗಳು ಮತ್ತು ಕಾರುಗಳು ಸೇರಿದಂತೆ ಹೆದ್ದಾರಿಯಲ್ಲಿ 50 ರಿಂದ 60 ವಾಹನಗಳ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದೆ ಎಂದು … Continued

ಕೊನೆಗೂ ಬರೆಹರಿದ 50 ವರ್ಷಗಳಷ್ಟು ಹಳೆಯದಾದ ಗಡಿ ವಿವಾದ: ಒಪ್ಪಂದಕ್ಕೆ ಅಸ್ಸಾಂ-ಮೇಘಾಲಯ ಸರ್ಕಾರಗಳು ಸಹಿ

ನವದೆಹಲಿ: ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳು ತಮ್ಮ ರಾಜ್ಯಗಳ ನಡುವಿನ 50 ವರ್ಷಗಳ ಗಡಿ ವಿವಾದವನ್ನು ಪರಿಹರಿಸುವ ಒಪ್ಪಂದಕ್ಕೆ ಮಂಗಳವಾರ ಸಹಿ ಹಾಕಿವೆ. ಉಭಯ ರಾಜ್ಯಗಳ ಮುಖ್ಯಮಂತ್ರಿಗಳಾದ ಹಿಮಂತ ಬಿಸ್ವಾ ಶರ್ಮಾ ಮತ್ತು ಕಾನ್ರಾಡ್ ಸಂಗ್ಮಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ, ಎರಡು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಗೃಹ ಸಚಿವಾಲಯದ ಇತರ … Continued

1957ರಿಂದ 1971: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ 6 ಬಾರಿ ವಿಟೋ ಅಧಿಕಾರ ಬಳಸಿ ಭಾರತದ ಹಿತಾಸಕ್ತಿ ಕಾಪಾಡಿದ್ದ ರಷ್ಯಾ, ಆರು ಬಾರಿಯೂ ಭಾರತ ವಿರೋಧಿ ನಿಲುವು ತಾಳಿದ್ದ ಅಮೆರಿಕ..! ಇಲ್ಲಿದೆ ಮಾಹಿತಿ

ಉಕ್ರೇನ್ ಮೇಲೆ ದಾಳಿ ಮಾಡಿದ್ದಕ್ಕಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್‌ಎಸ್‌ಸಿ) ರಷ್ಯಾ ವಿರುದ್ಧ ತರಲಾದ ಖಂಡನಾ ನಿರ್ಣಯದ ಮೇಲಿನ ಮತದಾನದಿಂದ ಭಾರತ ದೂರ ಉಳಿದಿದೆ. ಕೆಲವು ವಲಯಗಳಲ್ಲಿ ಇದನ್ನು ಟೀಕಿಸಲಾಗಿದೆ. ಆದರೆ ಹಿಂದಿನ ಘಟನೆ ಅವಲೋಕಿಸಿದ ನಂತರ, ಭಾರತದ ಯಾಕೆ ಈ ನಿರ್ಧಾರ ತೆಗೆದುಕೊಂಡಿದೆ ಎಂಬುದು ಸ್ಪಷ್ಟವಾಗುತ್ತದೆ. ಹಿಂದಿನ ಸೋವಿಯತ್ ಯೂನಿಯನ್ (USSR) ಮತ್ತು ಇಂದಿನ … Continued

ಗಡ್ಡವಿಲ್ಲದ ಸರ್ಕಾರಿ ನೌಕರರನ್ನು ಕಚೇರಿಗಳಿಗೆ ಪ್ರವೇಶಿಸುವುದನ್ನು ತಡೆದ ತಾಲಿಬಾನ್‌ :ವರದಿ

ಅಫ್ಘಾನಿಸ್ತಾನದಲ್ಲಿರುವ ತಮ್ಮ ಕಚೇರಿಗಳಿಗೆ ಗಡ್ಡವಿಲ್ಲದ ಸರ್ಕಾರಿ ನೌಕರರು ಪ್ರವೇಶಿಸುವುದನ್ನು ತಾಲಿಬಾನ್ ಸೋಮವಾರ ತಡೆದಿದೆ. ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್‌ನ ಸದ್ಗುಣ ಪ್ರಚಾರ ಸಚಿವಾಲಯದ ಪ್ರತಿನಿಧಿಗಳು ಗಡ್ಡವಿಲ್ಲದ ಕಾರಣ ಹಣಕಾಸು ಸಚಿವಾಲಯದ ಸಿಬ್ಬಂದಿಯನ್ನು ಗೇಟ್‌ನಲ್ಲಿ ನಿಲ್ಲಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ ಎಂದು ಖಾಮಾ ಪ್ರೆಸ್ ವರದಿ ಮಾಡಿದೆ. ತಾಲಿಬಾನ್ ಪ್ರತಿನಿಧಿಗಳು ಶಿಫಾರಸು ಮಾಡಿದ ಟೋಪಿಗಳನ್ನು ಧರಿಸಿದ ನಂತರವೇ ಉದ್ಯೋಗಿಗಳಿಗೆ … Continued

ಕಮೀಷನ್ ಆರೋಪ : ಮಾನನಷ್ಟ ಮೊಕದ್ದಮೆ ಹೂಡ್ತೇನೆ ಎಂದ ಸಚಿವ ಈಶ್ವರಪ್ಪ

ಬೆಂಗಳೂರು: ತಮ್ಮ ಮೇಲೆ ಕಮಿಶನ್‌ ಆರೋಪ ಮಾಡಿರುವ ವ್ಯಕ್ತಿಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ವ್ಯಕ್ತಿ ಯಾರೆಂಬುದು ಗೊತ್ತಿಲ್ಲ. ಆದರೂ ನಮ್ಮ ಕಡೆಯವರು ಯಾರೋ ಕಮೀಷನ್ ಕೇಳಿದ್ದಾರೆ ಎಂಬ ಆರೋಪ ಮಾಡಿ ದೆಹಲಿಯಲ್ಲಿ ದೂರು ಕೊಟ್ಟಿದ್ದಾರೆ. ಇದರ ಹಿಂದೆ ಯಾವುದೋ ಷಡ್ಯಂತ್ರವಿದೆ … Continued

ಕೋಳಿ ಕಾಳಗದ ವೇಳೆ ಗುಂಡಿನ ಸದ್ದು, 20 ಮಂದಿ ಸಾವು..!

ಮೆಕ್ಸಿಕೋ ಸಿಟಿ: ಮೆಕ್ಸಿಕೊದ ಝಿನಾಪೆಕ್ವಾರೊ ಪಟ್ಟಣದಲ್ಲಿ ಗೌಪ್ಯವಾಗಿ ನಡೆಯುತಿದ್ದ ಕೋಳಿ ಕಾಳಗದ ವೇಳೆ ನಡೆದ ಘರ್ಷಣೆ ವಿಕೋಪಕ್ಕೆ ತಿರುಗಿದ ನಂತರ ಬಂದೂಕುಧಾರಿಗಳು ಗುಂಡು ಹಾರಿಸಿದ ಪರಿಣಾಮ 20 ಜನರು ಸಾವಿಗೀಡಾಗಿದ್ದಾರೆ. ಮೆಕ್ಸಿಕೋದ ಪಶ್ಚಿಮ ರಾಜ್ಯದ ಪುಟ್ಟ ಪಟ್ಟಣದಲ್ಲಿ ಭಾನುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಸತ್ತವರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ. ವ್ಯವಸ್ಥಿತವಾಗಿ ಪೂರ್ವ ಯೋಜನೆಯಂತೆ ದಾಳಿ … Continued

ರಾಜ್ಯದ ಉಪಲೋಕಾಯುಕ್ತರಾಗಿ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅಧಿಕಾರ ಸ್ವೀಕಾರ

ಬೆಂಗಳೂರು: ರಾಜ್ಯದ 2ನೇ ಉಪಲೋಕಾಯುಕ್ತರಾಗಿ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಇಂದು, ಮಂಗಳವಾರ ಅಧಿಕಾರ ಸ್ವೀಕರಿಸಿದರು. ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ 2ನೇ ಉಪ ಲೋಕಾಯುಕ್ತರಾಗಿ ರಾಜ್ಯಪಾಲರಾದ ತಾವರ್ ಚಂದ್ ಗೆಲ್ಹೋಟ್ ಅವರು ಅಧಿಕಾರ ಗೌಪ್ಯತೆ ಬೋಧಿಸಿದರು. ಈ ಹುದ್ದೆ ಸುಮಾರು ಎರಡು ವರ್ಷಗಳಿಂದ ಖಾಲಿ ಇತ್ತು. ಉಪ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಆನಂದ ಅವರ … Continued

ಆನ್‌ಲೈನ್‌ ಗೇಮ್‌ ನಿಷೇಧ ಕಾನೂನು ರದ್ದು: ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ರಾಜ್ಯ ಸರ್ಕಾರದಿಂದ ಮೇಲ್ಮನವಿ

ನವದೆಹಲಿ: ಆನ್‌ಲೈನ್ ಗೇಮ್‌ ಸೇರಿದಂತೆ ಸ್ಕಿಲ್‌ ಗೇಮ್‌ಗಳನ್ನು ನಿಷೇಧಿಸುವ ಮತ್ತು ಅಪರಾಧೀಕರಿಸುವ ಕಾನೂನನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ. ಆನ್‌ಲೈನ್ ಗೇಮಿಂಗ್ ನಿಷೇಧಿಸಿದ ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯಿದೆ- 2021ರ ಕೆಲವು ನಿಯಮಾವಳಿಗಳನ್ನು ಹೈಕೋರ್ಟ್ ಕಳೆದ ಫೆಬ್ರವರಿ … Continued