ಮಣಿಪುರದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಎಕ್ಸಿಟ್ ಪೋಲ್ ಭವಿಷ್ಯ

ನವದೆಹಲಿ: ಮಣಿಪುರ ಚುನಾವಣೆಯ ಫಲಿತಾಂಶಕ್ಕೂ ಮುನ್ನವೇ ಎಕ್ಸಿಟ್ ಪೋಲ್ ಅನ್ನು ವಿವಿಧ ಮಾಧ್ಯಮ ಸಂಸ್ಥೆಗಳು ಸೋಮವಾರ ಸಂಜೆ ಬಿಡುಗಡೆ ಮಾಡಿವೆ. ಎಲ್ಲ ಸಮೀಕ್ಷೆಗಳೂ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎನ್ನುತ್ತಿವೆ. ಇಂಡಿಯಾ ಟುಡೇ – ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯಲ್ಲಿ ಮಣಿಪುರದಲ್ಲಿ ಬಿಜೆಪಿಗೆ 33-43 ಸ್ಥಾನಗಳು, ಕಾಂಗ್ರೆಸ್, ಎನ್‌ಪಿಪಿ ಮತ್ತು ಎನ್‌ಪಿಎಫ್‌ಗೆ ತಲಾ 4-8 ಸ್ಥಾನಗಳು ಮತ್ತು … Continued

ಅಲಾರ್ಮ್ ಬೆಲ್ಸ್ …?: ಜಿಂಕೆಗಳಲ್ಲಿ ಇದೇ ಮೊದಲ ಬಾರಿಗೆ ಒಮಿಕ್ರಾನ್ ರೂಪಾಂತರವನ್ನು ಪತ್ತೆ ಮಾಡಿದ ಅಮೆರಿಕ ವಿಜ್ಞಾನಿಗಳು..!

ವಾಷಿಂಗ್ಟನ್: ಅಮೆರಿಕದಲ್ಲಿ ವಾಸಿಸುವ ಕೆಲವು ಬಿಳಿ ಬಾಲದ ಜಿಂಕೆಗಳು ಕೋವಿಡ್‌-19 ಗೆ ಕಾರಣವಾಗುವ ವೈರಸ್‌ನ SARS-CoV-2 ನ ಒಮಿಕ್ರಾನ್ ರೂಪಾಂತರದ ಸೋಂಕಿಗೆ ಒಳಗಾಗಿವೆ ಎಂದು ಅಧ್ಯಯನವೊಂದು ತಿಳಿಸಿದೆ. ಪ್ರಿ ಪ್ರಿಂಟ್ ರೆಪೊಸಿಟರಿ ಬಯೋಆರ್‌ಕ್ಸಿವ್‌ನಲ್ಲಿ ಇತ್ತೀಚೆಗೆ ಪೋಸ್ಟ್ ಮಾಡಲಾದ ಇನ್ನೂ ಪೀರ್-ರಿವ್ಯೂಡ್ ಅಧ್ಯಯನವು ಒಮಿಕ್ರಾನ್-ಸೋಂಕಿತ ಜಿಂಕೆಗಳಲ್ಲಿ SARS-CoV-2 ಗೆ ತಟಸ್ಥಗೊಳಿಸುವ ಪ್ರತಿಕಾಯಗಳನ್ನು ಕಂಡುಹಿಡಿದಿದೆ, ಇದು ಮನುಷ್ಯರಂತೆ ವೈರಸ್ಸುಗಳ … Continued

ಕರ್ನಾಟಕದ ದ್ವಿತೀಯ ಪಿಯುಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆಯ ಪರಿಷ್ಕೃತ ಅಂತಿಮ ವೇಳಾಪಟ್ಟಿಯನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಏಪ್ರಿಲ್‌ 22ರಿಂದ ಮೇ 18ರವರೆಗೆ ಪರೀಕ್ಷೆ ದಿನಾಂಕ ನಿಗದಿಪಡಿಸಲಾಗಿದೆ. ಈ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ವೇಳಾಪಟ್ಟಿಯ ಬಗ್ಗೆ ಅಕ್ಷೇಪಣೆ ಸಲಿಸಲು ಮಾರ್ಚ್ 5 ಸಂಜೆ 5 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿತ್ತು. … Continued

ಬೇಲೆಕೇರಿ ಅದಿರು ಪ್ರಕರಣ: ಸಚಿವ ಆನಂದ ಸಿಂಗ್‌, ಜನಾರ್ದನ ರೆಡ್ಡಿ, ನಾಗೇಂದ್ರಗೆ ಜಾಮೀನು

ಅಂಕೋಲಾ : 2009ರಲ್ಲಿ ತಾಲೂಕಿನ ಬೇಲೆಕೇರಿಯಲ್ಲಿ ಅದಿರು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಪ್ರವಾಸೋದ್ಯಮ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಆನಂದ್ ಸಿಂಗ್, ಶಾಸಕ ನಾಗೇಂದ್ರ ಅವರಿಗೆ ಸೋಮವಾರ ಅಂಕೋಲಾ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಜಾಮೀನು ನೀಡಿದೆ. ಬೇಲೆಕೇರಿಯಲ್ಲಿ 2009-10ರ ಅದಿರು ಪ್ರಕರಣಕ್ಕೆ ಆನಂದ ಸಿಂಗ್ ಅವರ ಮಾಲಿಕತ್ವದ ವೈಷ್ಣವಿ ಮಿನರಲ್ಸ್ ಸೇರಿದಂತೆ … Continued

ಎಕ್ಸಿಟ್‌ ಪೋಲ್‌: ಉತ್ತರಾಖಂಡದಲ್ಲಿ ತೀವ್ರ ಠಕ್ಕರ್‌ ಮಧ್ಯೆ ಕಾಂಗ್ರೆಸ್‌ಗಿಂತ ಬಿಜೆಪಿ ಮುಂದೆ

70 ಸದಸ್ಯ ಬಲದ ಉತ್ತರಾಖಂಡ ವಿಧಾನಸಭೆಗೆ ಫೆಬ್ರವರಿ 14 ರಂದು ಒಂದೇ ಹಂತದಲ್ಲಿ ಚುನಾವಣೆಗಳು ನಡೆಯಿತು. ಈ ನಿರ್ಣಾಯಕ ಚುನಾವಣೆಯಲ್ಲಿ, ಪ್ರಮುಖ ರಾಜಕೀಯ ಪಕ್ಷಗಳು ಕಣದಲ್ಲಿರುವ ಬಿಜೆಪಿ, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ( AAP) ಪಕ್ಷಗಳು ಸೆಣಸಾಟ ನಡೆಸಿವೆ. ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ 36-46 ಸ್ಥಾನಗಳೊಂದಿಗೆ ಉತ್ತರಾಖಂಡ್‌ನಲ್ಲಿ ಬಿಜೆಪಿಗೆ … Continued

ಗೋವಾದಲ್ಲಿ ಅತಂತ್ರ ವಿಧಾನಸಭೆ ಎಂದು ಭವಿಷ್ಯ ಹೇಳಿದ ಎಕ್ಸಿಟ್‌ ಪೋಲ್‌ಗಳು

ಗೋವಾ ರಾಜ್ಯದ ಬಹುತೇಕ ಎಕ್ಸಿಟ್ ಪೋಲ್ ಪ್ರಕ್ಷೇಪಗಳು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೆಕ್ ಟು ನೆಕ್ ಫೈಟ್ ನಡೆಯಲಿದೆ ಎಂದು ಹೇಳಿವೆ. ಝೀ ನ್ಯೂಸ್‌ ಎಕ್ಸಿಟ್ ಪೋಲ್ ಸಮೀಕ್ಷೆಯ ಪ್ರಕಾರ, ರಾಜ್ಯದಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಬಹುದು, ಅದು 14-19 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) … Continued

ಉತ್ತರ ಪ್ರದೇಶ ಚುನಾವಣೆ: ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದ ಎಲ್ಲ ಎಕ್ಸಿಟ್ ಪೋಲ್‌ಗಳ ಭವಿಷ್ಯ

ನವದೆಹಲಿ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಇಂಡಿಯಾ ಟುಡೇ – ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಫಲಿತಾಂಶ ಹೊರಬಿದ್ದಿದೆ. ಎಕ್ಸಿಟ್ ಪೋಲ್ ಪ್ರಕಾರ, 403 ಸ್ಥಾನಗಳ ವಿಧಾನಸಭೆಯಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಪಕ್ಷ 288-326 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ಎಕ್ಸಿಟ್ ಪೋಲ್ ಫಲಿತಾಂಶಗಳ ಪ್ರಕಾರ, ಸಮಾಜವಾದಿ ಪಕ್ಷ ಮತ್ತು ಅದರ … Continued

ಪಂಜಾಬ್ ಚುನಾವಣೆಯಲ್ಲಿ ಎಎಪಿಗೆ ಭರ್ಜರಿ ಜಯ ಎಂದು ಭವಿಷ್ಯ ನುಡಿದ ಎಲ್ಲ ಎಕ್ಸಿಟ್ ಪೋಲ್‌ಗಳು..!

ನವದೆಹಲಿ: ಪಂಜಾಬ್ ವಿಧಾನಸಭಾ ಚುನಾವಣೆಯ ಇಂಡಿಯಾ ಟುಡೇ – ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಫಲಿತಾಂಶ ಹೊರಬಿದ್ದಿದೆ. ಎಕ್ಸಿಟ್ ಪೋಲ್ ಆಮ್ ಅದಾಮಿ ಪಕ್ಷ ಭರ್ಜರಿ ಜಯ ಸಾಧಿಸಲಿದೆ ಎಂದು ಭವಿಷ್ಯ ನುಡಿದಿದೆ. 117 ಸ್ಥಾನಗಳ ಪಂಜಾಬ್‌ ವಿಧಾನಸಭೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು ಶೇಕಡಾ 41 ರಷ್ಟು ಮತಗಳನ್ನು ಅಥವಾ 76-90 ಸ್ಥಾನಗಳನ್ನು … Continued

ಎನ್‌ಎಸ್‌ಇ ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ ಏಳು ದಿನಗಳು ಸಿಬಿಐ ಕಸ್ಟಡಿಗೆ

ಮುಂಬೈ: ಎನ್‌ಎಸ್‌ಇ ಕೋ-ಲೊಕೇಷನ್‌ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿರುವ ಎನ್‌ಎಸ್‌ಇ ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ ಅವರನ್ನು ವಿಶೇಷ ನ್ಯಾಯಾಲಯ ಸೋಮವಾರ 7 ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಿದೆ. ತನಿಖೆಯ ವೇಳೆ ರಾಮಕೃಷ್ಣ ಅವರು ಸಹಕರಿಸದೆ ತಪ್ಪಿಸಿಕೊಳ್ಳುತ್ತಿದ್ದರು ಎಂದು ಹೇಳಿ ಸಿಬಿಐ 14 ದಿನಗಳ ಕಸ್ಟಡಿಗೆ ಕೋರಿತ್ತು. ಪ್ರಕರಣದ ಸಂಬಂಧ ಚಿತ್ರಾ ರಾಮಕೃಷ್ಣ ಅವರನ್ನು ಭಾನುವಾರ … Continued

ಎತ್ತಿನಹೊಳೆ ಯೋಜನೆ ಜಾರಿಯಾದ್ರೆ ನೇಣು ಹಾಕಿಕೊಳ್ತೇನೆ; ವಿಧಾನಪರಿಷತ್ತಿನಲ್ಲಿ ಸಚವಾಲು ಹಾಕಿದ ಭೋಜೇಗೌಡ …!

ಬೆಂಗಳೂರು: ಇಂದು ಸೋಮವಾರ ವಿಧಾನಪರಿಷತ್ತಿನ ಕಲಾಪದಲ್ಲಿ ಜೆಡಿಎಸ್‌ ಸದಸ್ಯ ಭೋಜೇಗೌಡ ಅವರು, ಎತ್ತಿನಹೊಳೆ ಯೋಜನೆ ಆದರೆ ನಾನು ನೇಣು ಹಾಕಿಕೊಳ್ಳುತ್ತೇನೆ ಎಂದು ಸವಾಲು ಹಾಕಿ ಸದನವನ್ನೇ ತಬ್ಬಿಬ್ಬುಗೊಳಿಸಿದ್ದಾರೆ. ಎತ್ತಿನಹೊಳೆ ಯೋಜನೆ ವಿಳಂಬದ ವಿಚಾರವಾಗಿ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು ಈ ರೀತಿ ಸವಾಲು ಹಾಕಿದರು. 22 ಸಾವಿರ ಕೋಟಿ ರೂ.ಗಳು ಖರ್ಚಾದರೂ ಯೋಜನೆ ಮುಗಿಸಿಲ್ಲ. … Continued