ಅಮೆರಿಕಕ್ಕೆ ಕೋಳಿ ಭಯ..!?..: ಅಮೆರಿಕದ ರಕ್ಷಣಾ ಇಲಾಖೆ ಪ್ರಧಾನ ಕಚೇರಿ ಬಳಿ ಓಡಾಡುತ್ತಿದ್ದ ಕೋಳಿ ವಶಕ್ಕೆ ಪಡೆದ ಪೊಲೀಸರು..!

ಅಸಾಧಾರಣ ಘಟನೆಯೊಂದರಲ್ಲಿ, ಕೋಳಿಯೊಂದು ಅಮೆರಿಕದ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿಯ ಕಟ್ಟಡದಲ್ಲಿ (Pentagon)  ಭದ್ರತಾ ಪ್ರದೇಶದ ಸುತ್ತಲೂ ಅಲೆದಾಡುತ್ತಿದ್ದಾಗ ಭದ್ರತಾ ಕಾರಣಗಳಿಗಾಗಿ ಭದ್ರತಾ ಸಿಬ್ಬಂದಿ ಅದನ್ನು ವಶಕ್ಕೆ ಪಡೆದಿದ್ದಾರೆ..!. ಆರ್ಲಿಂಗ್ಟನ್‌ನ ಅನಿಮಲ್ ವೆಲ್‌ಫೇರ್ ಲೀಗ್‌ನ ಸಾಮಾಜಿಕ ಮಾಧ್ಯಮ ಪೋಸ್ಟ್ ಪ್ರಕಾರ, ಸಡಿಲವಾದ ಕೋಳಿ ಸೋಮವಾರ ಮುಂಜಾನೆ ಪೆಂಟಗನ್ ಬಳಿ ಕಂಡುಬಂದಿದೆ, ನಂತರ ಅದನ್ನು ಲೀಗ್‌ನ ಉದ್ಯೋಗಿಯೊಬ್ಬರು … Continued

ಡಾ. ಅಂಬೇಡ್ಕರ್ ಫೋಟೋ ವಿವಾದಕ್ಕೆ ಅಂತ್ಯ ಹಾಡಿದ ಹೈಕೋರ್ಟ್ : ನ್ಯಾಯಾಲಯಗಳ ಅಧಿಕೃತ ಕಾರ್ಯಕ್ರಮಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಇರಿಸಲು ಸೂಚನೆ

ಬೆಂಗಳೂರು: ಅಧಿಕೃತ ಕಾರ್ಯಕ್ರಮಗಳಲ್ಲಿ ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಡಲು, ಕರ್ನಾಟಕ ಹೈಕೋರ್ಟ್ ಮುಖ್ಯ ನಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದಲ್ಲಿ ಆಡಳಿತಾತ್ಮಕ ಪೂರ್ಣ ನ್ಯಾಯಾಲಯ ಸಭೆ ನಿರ್ಣಯ ಕೈಗೊಂಡಿದೆ. ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ನ್ಯಾಯಾಲಯದ ಎಲ್ಲಾ ಅಧಿಕೃತ ಕಾರ್ಯಕ್ರಮಗಳಲ್ಲಿ ಇರಿಸಲು ಕರ್ನಾಟಕ ಹೈಕೋರ್ಟ್‍ನ … Continued

ಭಾರತದ ಕರಾವಳಿಗೆ ಎಚ್ಚರಿಕೆ ಗಂಟೆ..?: ಹವಾಮಾನ ಬದಲಾವಣೆ ಭಾರತದ ಕರಾವಳಿಯಲ್ಲಿ ತೀವ್ರ ಗಾಳಿ, ಎತ್ತರದ ಅಲೆಗಳಿಗೆ ಕಾರಣವಾಗುತ್ತದೆ: ಅಧ್ಯಯನ

ನವದೆಹಲಿ: ಹವಾಮಾನ ಬದಲಾವಣೆ ಮತ್ತು ಅದರಿಂದ ವಿಪರೀತ ಘಟನೆಗಳು ಪದೇಪದೇ ಸಂಭವಿಸುತ್ತಿರುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೊಸ ಅಧ್ಯಯನವು ವಿಶೇಷವಾಗಿ ಭಾರತದ ಕರಾವಳಿ ಪ್ರದೇಶಗಳಿಗೆ ಎಚ್ಚರಿಕೆಯನ್ನು ನೀಡಿದೆ. ಬಂಗಾಳಕೊಲ್ಲಿ, ದಕ್ಷಿಣ ಚೀನಾ ಸಮುದ್ರ ಮತ್ತು ದಕ್ಷಿಣ ಹಿಂದೂ ಮಹಾಸಾಗರದ ಪ್ರದೇಶಗಳ ಕರಾವಳಿ ಪ್ರದೇಶಗಳ ಸಮುದಾಯಗಳು ಭವಿಷ್ಯದಲ್ಲಿ ದೊಡ್ಡ ಅಲೆಗಳಿಂದಾಗಿ ತೊಂದರೆ ಅನುಭವಿಸಬಹುದು ಎಂದು ವಿಜ್ಞಾನಿಗಳು … Continued

ಭಾರತದಲ್ಲಿ 1.27 ಲಕ್ಷ ಹೊಸ ಕೋವಿಡ್ ಪ್ರಕರಣಗಳು ದಾಖಲು, ಸಕಾರಾತ್ಮಕತೆ ದರ 7.9%ಕ್ಕೆ ಇಳಿಕೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 1,27,952 ಹೊಸ ಕೊರೊನಾ ವೈರಸ್ ಪ್ರಕರಣಗಳನ್ನು ದಾಖಲಿಸಿದೆ, ಇದು ನಿನ್ನೆಗಿಂತ 14.4 ಶೇಕಡಾ ಕಡಿಮೆಯಾಗಿದೆ. ದೇಶದಲ್ಲಿ ಒಟ್ಟು ಪ್ರಕರಣ 4,20,80,664 ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1,059 ಸಾವುಗಳು ವರದಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆಯನ್ನು 5,01,114 ಕ್ಕೆ ಏರಿದೆ. ಹಾಗೂ ಇದೇ ಸಮಯದಲ್ಲಿ ಒಟ್ಟು 2,30,814 … Continued

ಕನ್ನಡದ ಕಬೀರ, ಭಾವೈಕ್ಯತೆ ಹರಿಕಾರ ಪದ್ಮಶ್ರೀ ಇಬ್ರಾಹಿಂ ಸುತಾರ ನಿಧನ

ಬಾಗಲಕೋಟೆ: ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ (76) ಇಂದು, ಶುಕ್ರವಾರ ಮುಂಜಾನೆ  ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಹಾಲಿಂಗಪುರದ ನಿವಾಸಿ ಇಬ್ರಾಹಿಂ ಸುತಾರರಿಗೆ ಬೆಳಗ್ಗೆ 6:30ಕ್ಕೆ ನಿಧನರಾಗಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಇಬ್ರಾಹಿಂ ಸುತಾರ ಎದೆ ನೋವಿನ ಸಮಸ್ಯೆಗೆ ಚಿಕಿತ್ಸೆ ಪಡೆದಿದ್ದರು. ಇಂದು,ಶುಕ್ರವಾರ ಬೆಳಿಗ್ಗೆ ಮತ್ತೆ ಲಘು ಹೃದಯಾಘಾತವಾಗಿದೆ. ತಕ್ಷಣ ಇಬ್ರಾಹಿಂ ಸುತಾರ ಅವರನ್ನು ಕುಟುಂಬಸ್ಥರು … Continued

ಹಿಜಾಬ್ ವಿವಾದ: ಸಿಎಂ ಬೊಮ್ಮಾಯಿ ಸಭೆ, ಹೈಕೋರ್ಟ್ ತೀರ್ಪಿನವರೆಗೂ ಈಗಿನ ಸಮವಸ್ತ್ರ ನಿಯಮ ಮುಂದುವರಿಕೆಗೆ ಸೂಚನೆ

ಬೆಂಗಳೂರು: ಹಿಜಾಬ್’ (ಶೀರ್ಷವಸ್ತ್ರ) ಗದ್ದಲದ ಹಿನ್ನೆಲೆಯಲ್ಲಿ,ಮುಂದಿನ ವಾರ ಈ ಸಂಬಂಧ ಹೈಕೋರ್ಟ್ ಆದೇಶ ಹೊರಬೀಳುವವರೆಗೆ ರಾಜ್ಯ ಸರ್ಕಾರವು ಶಿಕ್ಷಣ ಸಂಸ್ಥೆಗಳಿಗೆ ಅಸ್ತಿತ್ವದಲ್ಲಿರುವ ಸಮವಸ್ತ್ರ ಸಂಬಂಧಿತ ನಿಯಮಗಳನ್ನು ಅನುಸರಿಸುವಂತೆ ಸೂಚಿಸಿದೆ. ಈ ವಿಚಾರ ದೊಡ್ಡ ವಿವಾದವಾಗಿ ಇತರ ಶಿಕ್ಷಣ ಸಂಸ್ಥೆಗಳಿಗೂ ವ್ಯಾಪಿಸಿದ್ದು, ಹೈಕೋರ್ಟ್ ಮೆಟ್ಟಿಲೇರಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಪ್ರಾಥಮಿಕ ಮತ್ತು ಪ್ರೌಢ … Continued

ಎಲೆ-ಕಾಂಡಗಳಿಂದ ಗೂಡು ಕಟ್ಟುವ ಈ ಹಕ್ಕಿಯ ನೈಪುಣ್ಯಕ್ಕೆ ತಲೆಬಾಗಿದ ನೆಟ್ಟಿಗರು..! ವೀಕ್ಷಿಸಿ

.ಹಕ್ಕಿಯೊಂದು ಎಲೆಯ ಕಾಂಡದಿಂದ ಗೂಡು ಕಟ್ಟುವ ನೈಪುಣ್ಯತೆಯ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಕ್ಲಿಪ್ ಅನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಶುಕ್ರವಾರ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕೊಲಂಬಿಡೆ ಕುಟುಂಬಕ್ಕೆ ಸೇರಿದ ಸುಂದರವಾದ ನೀಲಿ-ಹಸಿರು ಹಕ್ಕಿ ತನ್ನ ಗೂಡು ಕಟ್ಟುತ್ತಿರುವುದನ್ನು ಕಾಣಬಹುದು. ಇಲ್ಲಿ ಹಕ್ಕಿಯ ಗೂಡು ಕಟ್ಟುವ ಕೌಶಲ್ಯಕ್ಕೆ ಬೆರಗಾಗಲೇಬೇಕು. ಹಾಗಿದೆ … Continued

ಪಂಜಾಬ್ ಚುನಾವಣೆ 2022: ಉನ್ನತ ನಾಯಕರು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ದುರ್ಬಲ ಸಿಎಂ ಬಯಸುತ್ತಾರೆ-ಕಾಂಗ್ರೆಸ್‌ ಹೈಕಮಾಂಡನ್ನೇ ಟೀಕಿಸಿದ ನವಜೋತ್ ಸಿಧು

ಅಮೃತಸರ: ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥ ನವಜೋತ್ ಸಿಂಗ್ ಸಿಧು, ‘ಮೇಲಿನ ಜನರುʼ (ಹೈಕಮಾಂಡ್‌) ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ದುರ್ಬಲ ಮುಖ್ಯಮಂತ್ರಿಯನ್ನು ಬಯಸುತ್ತಾರೆ ಎಂದು ಶುಕ್ರವಾರ ಹೇಳಿದ್ದಾರೆ. 2022ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಸಿಎಂ ಅಭ್ಯರ್ಥಿಯನ್ನು ಕಾಂಗ್ರೆಸ್ ಪಕ್ಷ ಘೋಷಿಸುವ ಎರಡು ದಿನಗಳ ಮೊದಲು ಸಿಧು ಅವರು ಕಾಂಗ್ರೆಸ್‌ ಹೈಕಮಾಂಡ್‌ ಮೇಲೆ ಈ … Continued

ದೆಹಲಿ ಗಣರಾಜ್ಯೋತ್ಸವ ಪರೇಡ್‌: ಕರ್ನಾಟಕದ ಸ್ತಬ್ದ ಚಿತ್ರಕ್ಕೆ ದ್ವಿತೀಯ ಸ್ಥಾನ

ಬೆಂಗಳೂರು: ಈ ಬಾರಿಯ ಗಣರಾಜ್ಯೋತ್ಸವದಲ್ಲಿ ರಾಜಧಾನಿ ದೆಹಲಿಯ ಪರೇಡ್‍ನಲ್ಲಿ ಗಮನಸೆಳೆದ ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳಗಳ ತೊಟ್ಟಿಲು ವಿಷಯಧಾರಿತ ಸ್ತಬ್ಧಚಿತ್ರಕ್ಕೆ ದ್ವಿತೀಯ ಸ್ಥಾನ ದೊರಕಿದೆ. ಗಣರಾಜ್ಯೋತ್ಸವದ ಪರೇಡ್‍ನಲ್ಲಿ ಉತ್ತಮವಾಗಿ ಪ್ರದರ್ಶನಗೊಂಡ ರಾಜ್ಯಗಳ ಸ್ತಬ್ಧಚಿತ್ರಗಳ ಪೈಕಿ ಉತ್ತರ ಪ್ರದೇಶಕ್ಕೆ ಮೊದಲ ಸ್ಥಾನ ಸಿಕ್ಕರೆ, ದ್ವಿತೀಯ ಸ್ಥಾನ ಕರ್ನಾಟಕ್ಕೆ ದೊರೆತಿದೆ. ಮೇಘಾಲಯಕ್ಕೆ ತೃತೀಯ ಸ್ಥಾನ ದೊರಕಿದೆ. ಈ ಬಾರಿ … Continued

ಮುಂದಿನ ಯುಜಿಸಿ ಅಧ್ಯಕ್ಷರಾಗಿ ಜೆಎನ್‌ಯು ಉಪಕುಲಪತಿ ಎಂ ಜಗದೇಶ್ ಕುಮಾರ್ ನೇಮಕ

ನವದೆಹಲಿ: ಜೆಎನ್‌ಯು ಉಪಕುಲಪತಿ ಪ್ರೊಫೆಸರ್ ಎಂ. ಜಗದೇಶಕುಮಾರ್ ಅವರನ್ನು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಶಿಕ್ಷಣ ಸಚಿವಾಲಯದ ಪ್ರಕಾರ, ಜಗದೇಶಕುಮಾರ್ ಅವರನ್ನು ಐದು ವರ್ಷಗಳ ಅವಧಿಗೆದೇಶದ ಉನ್ನತ ಶಿಕ್ಷಣ ನಿಯಂತ್ರಕ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಕೇಂದ್ರ ಸರ್ಕಾರವು ಎಂ ಜಗದೇಶ್ ಕುಮಾರ್ ಅವರನ್ನು ಯುಜಿಸಿ ಅಧ್ಯಕ್ಷರನ್ನಾಗಿ ಐದು ವರ್ಷಗಳ ಅವಧಿಗೆ ಅಥವಾ ಅವರು 65 … Continued