ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಗಳ ಕೊಠಡಿಯಲ್ಲಿ ಹಾವು ಪ್ರತ್ಯಕ್ಷ..ವೀಕ್ಷಿಸಿ

ಮುಂಬೈ: ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿ ಎನ್‌.ಆರ್. ಬೋರ್ಕರ್ ಅವರ ಕೊಠಡಿಯಲ್ಲಿ ಶುಕ್ರವಾರ ಹಾವೊಂದು ಪತ್ತೆಯಾಗಿದೆ. ನಂತರ ಹಾವನ್ನು ಸುರಕ್ಷಿತವಾಗಿ ಹಿಡಿಯಲಾಗಿದೆ. ಕೋರ್ಟಿನಿಂದ ಗೋಣಿ ಚೀಲದಲ್ಲಿ ಹಾವನ್ನು ತುಂಬಿದ ವಿಡಿಯೋ ಹೊರಬಿದ್ದಿದೆ. ಹಾವು ಸುಮಾರು 5 ಅಡಿ ಉದ್ದವಿದ್ದು, ವಿಷಕಾರಿಯಲ್ಲ ಎಂದು ಹೇಳಲಾಗಿದೆ. ನ್ಯಾಯಮೂರ್ತಿ ಬೋರ್ಕರ್ ಅವರು ತಮ್ಮ ಕೊಠಡಿಯಲ್ಲಿ ಇಲ್ಲದಿದ್ದಾಗ ಹಾವು ಪತ್ತೆಯಾದ ಘಟನೆ ಬೆಳಕಿಗೆ … Continued

ರಾಜ್ಯಾದ್ಯಂತ ಶಾಲಾ-ಕಾಲೇಜು ಮುಂದುವರಿಕೆ ; ಬೆಂಗಳೂರಿನ ಬಗ್ಗೆ ಮುಂದಿನ ವಾರ ನಿರ್ಧಾರ: ಸಚಿವ ನಾಗೇಶ

ಬೆಂಗಳೂರು : ರಾಜ್ಯಾದ್ಯಂತ ಶಾಲಾ-ಕಾಲೇಜುಗಳು ನಡೆಯಲಿವೆ. ಬೆಂಗಳೂರಿನಲ್ಲಿ ಶಾಲೆಗಳ ಆರಂಭ ಕುರಿತು ಮುಂದಿನ ವಾರ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ ಹೇಳಿದ್ದಾರೆ. ಶುಕ್ರವಾರ ಕೋವಿಡ್‌ ತಜ್ಞರ ಜೊತೆ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಮಾಹಿತಿ ನೀಡಿದ ಅವರು, ಬೆಂಗಳೂರು ಹೊರತುಪಡಿಸಿ ಉಳಿದ ಎಲ್ಲಾ ಕಡೆ … Continued

ಮಹತ್ವದ ನಿರ್ಧಾರ…ಕರ್ನಾಟಕದಲ್ಲಿ ವೀಕೆಂಡ್‌ ಕರ್ಫ್ಯೂ ಎರಡೇ ವಾರಕ್ಕೆ ಅಂತ್ಯ.. ನಾಳೆಯಿಂದ ಇರಲ್ಲ

ಬೆಂಗಳೂರು: ಕೋವಿಡ್‌ ನಿಯಂತ್ರಿಸಲು ಹೇರಿದ್ದ ವಾರಾಂತ್ಯದ ಕರ್ಫ್ಯೂವನ್ನು ಕರ್ನಾಟಕ ಸರ್ಕಾರ ತೆರವುಗೊಳಿಸಿದೆ. ಈ ಮೂಲಕ ಎರಡೇ ವಾರಕ್ಕೆ ವೀಕೆಂಡ್‌ ಕರ್ಫ್ಯೂ ಅಂತ್ಯಗೊಂಡಿದೆ. ಇಂದು, ಶುಕ್ರವಾರ ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದಲ್ಲಿ ಸಚಿವರು, ತಜ್ಞರ ಜೊತೆಗಿನ ಸಭೆಯ ಬಳಿಕ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಮೂಲಕ ಎರಡು ವಾರದಿಂದ ಜಾರಿಯಾಗಿದ್ದ ವೀಕೆಂಡ್‌ ಕರ್ಫ್ಯೂ ನಾಳೆಯಿಂದ ಇರುವುದಿಲ್ಲ. ಆದರೆ … Continued

ಮಹತ್ವದ ತೀರ್ಪು…ವಿಲ್‌ ಮಾಡದೆ ಮೃತಪಟ್ಟ ಹಿಂದೂ ವ್ಯಕ್ತಿಯ ಸ್ವಯಾರ್ಜಿತ ಆಸ್ತಿ ಪಡೆಯಲು ಹೆಣ್ಣು ಮಕ್ಕಳು ಅರ್ಹರು: ಸುಪ್ರೀಂಕೋರ್ಟ್‌ ತೀರ್ಪು

ನವದೆಹಲಿ : ವಿಲ್ ಮಾಡದೆ ತಂದೆ ಮೃತಪಟ್ಟ ಹಿಂದೂ ತಂದೆಯ ಹೆಣ್ಣುಮಕ್ಕಳು ಅವರ ಸ್ವಯಂ-ಸಂಪಾದನೆ ಮತ್ತು ಇತರ ಆಸ್ತಿಗಳನ್ನು ಉತ್ತರಾಧಿಕಾರಿಯಾಗಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪಿನಲ್ಲಿ ಹೇಳಿದೆ. ಮದ್ರಾಸ್ ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್. ಅಬ್ದುಲ್ ನಜೀರ್ ಮತ್ತು ಕೃಷ್ಣ ಮುರಾರಿ … Continued

ಕತ್ತರಿಸಿದ ಗಂಡನ ರುಂಡದ ಸಮೇತ ಪೊಲೀಸ್​ ಠಾಣೆಗೆ ಬಂದು ಶರಣಾದ ಪತ್ನಿ !

ಚಿತ್ತೂರು (ಆಂಧ್ರಪ್ರದೇಶ): ಆಘಾತಕಾರಿ ಘಟನೆಯಲ್ಲಿ ಆಂಧ್ರಪ್ರದೇಶದ ಮಹಿಳೆಯೊಬ್ಬಳು ತನ್ನ ಪತಿಯನ್ನು ಶಿರಚ್ಛೇದ ಮಾಡಿ ನಂತರ ಗುರುವಾರ ಪೊಲೀಸರ ಮುಂದೆ ರುಂಡದ ಸಮೇತ ಶರಣಾಗಿದ್ದಾಳೆ…! ಪೊಲೀಸರ ಮಾಹಿತಿಯಂತೆ ರಾಜ್ಯದ ಚಿತ್ತೂರು ಜಿಲ್ಲೆಯ ರೇಣಿಗುಂಟದ ಮಹಿಳೆ ಶರಣಾಗುವ ಮುನ್ನ ಪತಿಯ ತಲೆಯನ್ನು ಕೈಯಲ್ಲಿ ಹಿಡಿದು ಪೊಲೀಸ್ ಠಾಣೆಗೆ ತೆರಳಿದ್ದಳು. ಆರೋಪಿಯನ್ನು 53 ವರ್ಷದ ಭಾಷ್ಯಂ ರವಿಚಂದ್ರನ್ ಅವರ ಪತ್ನಿ … Continued

ಪುಷ್ಪ ಸಿನಿಮಾದಿಂದ ಪ್ರೇರಣೆಗೊಂಡ ಅಪ್ರಾಪ್ತರಿಂದ ವ್ಯಕ್ತಿಯ ಕೊಲೆ; ದಿಢೀರ್‌ ಫೇಮಸ್​ ಆಗಲೆಂದು ಹತ್ಯೆ ವಿಡಿಯೋ ಅಪ್​ಲೋಡ್ ಮಾಡಲು ಪ್ಲಾನ್…!

ನವದೆಹಲಿ : ‘ಪುಷ್ಪ’ ಸಿನಿಮಾದಿಂದ ಪ್ರೇರಿತರಾದ ಬಾಲಕರು ವ್ಯಕ್ತಿಯೊಬ್ಬರನ್ನು ಕೊಲೆಗೈದು , ‘ಪ್ರಸಿದ್ಧರಾಗಲು’ ಕೊಲೆಯ ವಿಡಿಯೊವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲು ಬಯಸಿದ್ದ ಕಳವಳಕಾರಿ ಘಟನೆ ದೆಹಲಿಯಲ್ಲಿ ಬೆಳಕಿಗೆ ಬಂದಿದೆ. ವಾಯವ್ಯ ದೆಹಲಿಯ ಜಹಾಂಗೀರ್ ಪುರಿ ಪ್ರದೇಶದಲ್ಲಿ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಮೂವರು ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆಗೀಡಾದ ವ್ಯಕ್ತಿ ಜಹಾಂಗೀರಪುರಿ ನಿವಾಸಿ 24 … Continued

ಉತ್ತರ ಪ್ರದೇಶ ಚುನಾವಣೆ: ಬಿಜೆಪಿ ಸೇರ್ಪಡೆ ನಂತರ ಮುಲಾಯಂ ಸಿಂಗ್ ಆಶೀರ್ವಾದ ಪಡೆದ ಅಪರ್ಣಾ ಯಾದವ್‌

ನವದೆಹಲಿ: ಉತ್ತರ ಪ್ರದೇಶ ಚುನಾವಣೆಗೆ ಮುನ್ನ ಬಿಜೆಪಿ ಸೇರಿದ ತಮ್ಮ ಕಿರಿಯ ಸೊಸೆ ಅಪರ್ಣಾ ಯಾದವ್‌ ಅವರಿಗೆ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಆಶೀರ್ವಾದ ಮಾಡಿದ್ದಾರೆ. ಅಪರ್ಣಾ ಯಾದವ್‌ ಬಿಜೆಪಿ ಸೇರ್ಪಡೆಯಾದ ನಂತರ ಇದು ಮುಲಾಯಂ ಸಿಂಗ್‌ ಯಾದವ್‌ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿ ಆಶಿರ್ವಾದ ಪಡೆದಿದ್ದಾರೆ. 2017ರ ಉತ್ತರ ಪ್ರದೇಶ … Continued

ಸತ್ತಿದ್ದಾನೆಂದು ಭಾವಿಸಿ ಅಂಬುಲನ್ಸ್​ನಲ್ಲಿ ಅಂತ್ಯಸಂಸ್ಕಾರಕ್ಕೆ ಸಾಗಿಸುವಾಗ ಕಣ್ಣು ತೆರೆದ..!

ಮಂಗಳೂರು: ಆಸ್ಪತ್ರೆಯಲ್ಲಿ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ತಿಳಿದು ಅಂಬುಲೆನ್ಸ್​​ನಲ್ಲಿ ಕೊಂಡೊಯ್ಯುತ್ತಿದ್ದಾಗ ಆತ ಕಣ್ಣು ಬಿಟ್ಟು ಉಸಿರಾಡಿದ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಕೇರಳದ ಕಾಸರಗೋಡು ಜಿಲ್ಲೆಯ ಬದಿಯಡ್ಕದ ವಾಂತಿಚ್ಚಾಲ್ ನಿವಾಸಿ ಗುರುವ (60) ಎಂಬವರನ್ನು ವಯೋಸಹಜ ಅನಾರೋಗ್ಯದ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೋಗಿಗೆ ಆಮ್ಲಜನಕ ವ್ಯವಸ್ಥೆ ಕಲ್ಪಿಸಲಾಗಿತ್ತು. ರೋಗಿಯು ಆಕ್ಸಿಜನ್ ಸಹಾಯದಿಂದ ಉಸಿರಾಟ … Continued

ಸ್ಫೋಟಕ ತುಂಬಿದ್ದ ಟ್ರಕ್ ಬೈಕಿಗೆ ಡಿಕ್ಕಿ: ಸ್ಫೋಟದಿಂದ 17 ಮಂದಿ ಸಾವು

ಆಕ್ರಾ: ಸ್ಫೋಟಕಗಳನ್ನು ಹೊತ್ತ ಟ್ರಕ್ ಬೈಕ್‍ಗೆ ಡಿಕ್ಕಿಯಾದ್ದು, ಭೀಕರ ಸ್ಫೋಟವಾಗಿದ್ದು, ಈ ಅವಘಡದಲ್ಲಿ ಕನಿಷ್ಠ 17 ಮಂದಿ ಮೃತಪಟ್ಟಿದ್ದು, 59 ಮಂದಿ ಗಾಯಗೊಂಡ ಘಟನೆ  ಘಾನಾದ ರಾಜಧಾನಿ ಅಕ್ರಾದಿಂದ 300 ಕಿಲೋ ಮೀಟರ್ ದೂರದಲ್ಲಿ ಬೊಗೊಸೊ ಎಂಬ ನಗರದ ಹತ್ತಿರ ಈ ದುರಂತ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಸುತ್ತಮುತ್ತಲ ಹಲವು ಕಟ್ಟಡಗಳಿಗೆ ಹಾನಿಯುಂಟಾಗಿದ್ದು, ಕೆಲವು ನೆಲಕ್ಕುರುಳಿದೆ. … Continued

ಐಸಿಸಿ ಟಿ20 ವಿಶ್ವಕಪ್ 2022 ವೇಳಾಪಟ್ಟಿ ಪ್ರಕಟ; ಅಕ್ಟೋಬರ್ 23ರಂದು ಭಾರತ -ಪಾಕಿಸ್ತಾನದ ನಡುವೆ ಹಣಾಹಣಿ

ನವದೆಹಲಿ: ಐಸಿಸಿ ಟಿ 20 (ICC T20) ವಿಶ್ವಕಪ್ 2022ರ ವೇಳಾಪಟ್ಟಿ ಪ್ರಕಟವಾಗಿದ್ದು,, ಭಾರತ ಮತ್ತು ಪಾಕಿಸ್ತಾನವು ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶದೊಂದಿಗೆ ಪಂದ್ಯಾವಳಿಯ ಗುಂಪು 2 ರಲ್ಲಿದೆ. ಅಕ್ಟೋಬರ್ 23 ರಂದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುವ ಸ್ಪರ್ಧೆಯ ಗುಂಪು ಹಂತದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ಪರಸ್ಪರ ಎದುರಿಸಲಿದೆ. ಒಟ್ಟು 12 ತಂಡಗಳು ಭಾಗವಹಿಸಲಿದ್ದು, … Continued