ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳ: ಕೇಂದ್ರ ಸರ್ಕಾರಕ್ಕೆ ಸೋನಿಯಾ ಪತ್ರ

ನವ ದೆಹಲಿ: ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಕೇಂದ್ರ ಸರ್ಕಾರವು “ಜನರ ದುಃಖ ಮತ್ತು ಸಂಕಟಗಳಿಂದ ಲಾಭ ಗಳಿಸುತ್ತಿದೆ” ಎಂದು ಆರೋಪಿಸಿದೆ. ಮೂರು ಪುಟಗಳ ಪತ್ರದಲ್ಲಿ ಸೋನಿಯಾ ಗಾಂಧಿ ಕೇಂದ್ರ ಸರ್ಕಾರವನ್ನು “ಪೆಟ್ರೋಲ್ ಮತ್ತು ಡೀಸೆಲ್ ಮೇಲೆ … Continued

ಐಎಂಎ ಹಗರಣದಲ್ಲಿ ನನ್ನ ಪಾತ್ರವಿಲ್ಲ: ಎಚ್‌ಡಿಕೆ ಸ್ಪಷ್ಟನೆ

ಐಎಂಎ ಹಗರಣದಲ್ಲಿ ನನ್ನ ಪಾತ್ರ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಗರಣ ಬೆಳಕಿಗೆ ಬಂದಿತ್ತು. ನಾನು ಸಿಸಿಬಿ ತನಿಖೆಗೆ ಆದೇಶಿಸಿದ್ದೆ. ಆ ವೇಳೆಗೆ ಹಗರಣದ ರೂವಾರಿ ದುಬೈಗೆ ಪರಾರಿಯಾಗಿದ್ದ. ಅಧಿಕಾರಿಗಳು ಅವನನ್ನು ಬಂಧಿಸಿ ತಂದರು. ನಾನೇ ತನಿಖೆಗೆ ಆದೇಶ ನೀಡಿದ ಮೇಲೆ ಹಗರಣದಲ್ಲಿ ನನ್ನ ಪಾತ್ರ ಎಲ್ಲಿರುತ್ತದೆ ಎಂದರು. … Continued

ಆರ್ ಟಿ ಪಿಸಿಆರ್ ಪರೀಕ್ಷೆ ಹೆಚ್ಚಿಸಿ: ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚನೆ

ದೇಶದಲ್ಲಿ ಕೊರೊನಾ ಸೋಂಕು ಪ್ರಮಾಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಆರ್ ಟಿ ಪಿಸಿಆರ್ ಪರೀಕ್ಷೆಗಳನ್ನು ನಡೆಸಲು ರಾಜ್ಯಗಳು ಗಮನಹರಿಸಬೇಕೆಂದು ಕೇಂದ್ರ ಸರ್ಕಾರ ಸೂಚಿಸಿದೆ. ಆರ್ ಟಿ ಪಿಸಿಆರ್ ಪರೀಕ್ಷೆಗಳನ್ನು ಹೆಚ್ಚು ಹೆಚ್ಚು ನಡೆಸಬೇಕು ಹಾಗೂ ಕಡ್ಡಾಯವಾಗಿ ನೆಗೆಟಿವ್ ಫಲಿತಾಂಶ ಪ್ರಮಾಣವನ್ನು ದೃಢಪಡಿಸಿಕೊಳ್ಳಬೇಕೆಂದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಕಳೆದ ಕೆಲ ದಿನಗಳಿಂದ ಕೇರಳ ಮತ್ತು ಮಹಾರಾಷ್ಟ್ರದಲ್ಲಿ … Continued

ಕೇರಳದಲ್ಲಿ ಬಿಜೆಪಿ ಪ್ರಬಲ ಸ್ಪರ್ಧೆ ನೀಡುವ ಪಕ್ಷವಲ್ಲ: ತರೂರ

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕೆಲ ಕ್ಷೇತ್ರಗಳನ್ನು ಹೊರತುಪಡಿಸಿದರೆ ಬಿಜೆಪಿ ಪ್ರಬಲ ಸ್ಪರ್ಧಿಯಲ್ಲ ಎಂದು ಹೇಳಿದ ಕಾಂಗ್ರೆಸ್‌ ಮುಖಂಡ ಶಶಿ ತರೂರ್‌, ಮೆಟ್ರೋಮ್ಯಾನ್‌ ಇ. ಶ್ರೀಧರನ್‌ ಬಿಜೆಪಿ ಸೇರಿದರೆ ಚುನಾವಣೆಯಲ್ಲಿ ಹೆಚ್ಚಿನ ಪರಿಣಾಮವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. 2016ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನ ಗೆಲ್ಲಲು ಹರಸಾಹಸ ಮಾಡಿದ ಬಿಜೆಪಿ ರಾಜ್ಯದಲ್ಲಿ ಪ್ರಬಲ ಸ್ಪರ್ಧೆ ನೀಡುವ ಪಕ್ಷವಲ್ಲ. … Continued

ಕೊವಿಡ್‌ ಲಸಿಕೆಗಾಗಿ ತಾಳ್ಮೆಯಿಂದಿರಿ: ಇತರ ದೇಶಗಳಿಗೆ ಪೂನವಾಲ್ಲಾ ಮನವಿ

ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಕ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಕೋವಿಶೀಲ್ಡ್ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ-ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ ಕೋವಿಡ್ -19 ಶಾಟ್ ಅನ್ನು ಉಳಿದ ದೇಶಗಳಿಗೆ ಪೂರೈಸುವ ನಿಟ್ಟಿನಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಮುಖ್ಯಸ್ಥ ಆದರ್ ಪೂನವಾಲ್ಲಾ ಇತರ ದೇಶಗಳಿಗೆ ತಾಳ್ಮೆಯಿಂದಿರಿ ಎಂದು ವಿನಂತಿಸಿದ್ದಾರೆ. ವಿಶ್ವದ ಅನೇಕ ದೇಶಗಳು ಮತ್ತು ಸರ್ಕಾರಗಳು, … Continued

ಹುಬ್ಬಳ್ಳಿಯಲ್ಲಿ ಸನ್ಯಾಸ ದೀಕ್ಷಾ ಸಮಾರಂಭದ ಪ್ರಯುಕ್ತ ಗಿರಿನಾರ ಭಾವಯಾತ್ರೆ

ಹುಬ್ಬಳ್ಳಿ: ಜೈನ ಮರುಧರ ಸಂಘ ಹಾಗೂ ಕೇಶ್ವಾಪುರ ಜೈನ ಸಂಘದ ಆಶ್ರಯದಲ್ಲಿ ೧೦ ಜನರ ಸನ್ಯಾಸ ದೀಕ್ಷಾ ಸಮಾರಂಭದ ನಿಮಿತ್ತ ಗಿರಿನಾರ ಭಾವಯಾತ್ರೆ ನಡೆಯಿತು. ಕೇಶ್ವಾಪುರದ ಅರಿಹಂತ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಚಾರ್ಯ ಅಭಯಶೇಖರ ಸುರೀಶ್ವರಜಿ, ಆಚಾರ್ಯ ಅಜಿತಶೇಖರ ಸುರೀಶ್ವರಜಿ, ಆಚಾರ್ಯ ವಿಮಲಬೋಧಿ ಸುರೀಶ್ವರಜಿ, ಸಾಧ್ವಿ ಚರಿತ್ರವರ್ಧನನಾಶ್ರೀಜಿ, ಸಾಧ್ವಿ ಜ್ಯೋತಿವರ್ಧನಾಶ್ರೀಜಿ ಭಾವಯಾತ್ರೆಯನ್ನು ಬೀಳ್ಕೊಟ್ಟರು. ನಂತರ ಸನ್ಯಾಸ … Continued

ಅಕ್ರಮ ಕಲ್ಲಿದ್ದಲು ಗಣಿಗಾರಿಕೆ: ಮಮತಾ ಸೋದರಳಿಯ ಅಭಿಷೇಕ್‌ ಪತ್ನಿಗೆ ಸಿಬಿಐ ನೋಟೀಸ್‌

ಕಲ್ಲಿದ್ದಲು ಗಣಿಗಾರಿಕೆ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಟಿಎಂಸಿ ಸಂಸದ ಹಾಗೂ ಸಿಎಂ ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್‌ ಬ್ಯಾನರ್ಜಿ ನಿವಾಸಕ್ಕೆ ತೆರಳಿ ನೊಟೀಸ್‌ ನೀಡಿದೆ. ಈಸ್ಟರ್ನ್ ಕೋಲ್‌ಫೀಲ್ಡ್ ಲಿಮಿಟೆಡ್‌ನ ಕುನುಸ್ಟೋರಿಯಾ ಮತ್ತು ಕಜೋರಿಯಾ ಕಲ್ಲಿದ್ದಲು ಗಣಿಗಳಲ್ಲಿ ಅಕ್ರಮ ಗಣಿಗಾರಿಕೆ ತನಿಖೆ ನಡೆಸಲು ಕೇಂದ್ರ ತನಿಖಾ ಸಂಸ್ಥೆ 2020 ರ ನವೆಂಬರ್‌ನಲ್ಲಿ ಪ್ರಕರಣ ದಾಖಲಿಸಿದ್ದು, ಕಲ್ಲಿದ್ದಲು … Continued

೨ಎ ಮೀಸಲಾತಿಗೆ ಸೇರ್ಪಡೆ ಮಾಡಿ: ಬೆಂಗಳೂರು ಸಮಾವೇಶದಲ್ಲಿ ಪಂಚಮಸಾಲಿಗಳ ಹಕ್ಕೊತ್ತಾಯ

ಬೆಂಗಳೂರು: ೨ಎ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಲಿಂಗಾಯತ ಪಂಚಮಸಾಲಿ ಬೃಹತ್ ಸಮಾವೇಶಕ್ಕೆ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಯಿತು. ಸಮಾವೇಶಕ್ಕೆ ವಿಶೇಷವಾಗಿ ಲಿಂಗಾಯತ ಪಂಚಮಸಾಲಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಕಲಬುರಗಿ, ಬಾಗಲಕೋಟೆ, ವಿಜಯಪುರ,ಯಾದಗಿರಿ, ಬೀದರ್, ರಾಯಚೂರು,ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಬೆಳಗಾವಿ ಮೊದಲಾದ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. … Continued

ಪಂಚಮಸಾಲಿ ಮೀಸಲಾತಿಗೆ ನನ್ನ ಸಂಪೂರ್ಣ ಬೆಂಬಲ

ಬೆಂಗಳೂರು: ಮೀಸಲಾತಿ ನೀಡಬೇಕೆನ್ನುವುದರಲ್ಲಿ ನನ್ನ ಸಂಪೂರ್ಣ ಬೆಂಬಲ ಇದೆ. ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದಿರುವ, ಕಡುಬಡವರಾಗಿರುವ ವೀರಶೈವ-ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗಲೇಬೇಕು ಎಂದು ಸಚಿವ ಮುರುಗೇಶ್‍ ನಿರಾಣಿ ಹೇಳಿದರು. ಇದಕ್ಕೆ ನಮ್ಮ ಅಭ್ಯಂತರ ಇಲ್ಲವೇ ಇಲ್ಲ. ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗಲೇ , ಮೀಸಲಾತಿ ಕುರಿತಂತೆ ಸಮಿತಿ ರಚಿಸಿದ್ದರು. ಆಗ ವರದಿ ಬರುವ ಮುಂಚೆಯೇ … Continued

ಗ್ರಾಮದಿಂದ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ವಿದ್ಯಾರ್ಥಿಗಳ ಶ್ರಮದಾನ

ಒಡಿಶಾ ಮಲ್ಕಂಗಿರಿ ಜಿಲ್ಲೆಯ ಗ್ರಾಮವೊಂದರ ಶಾಲೆಯ ವಿದ್ಯಾರ್ಥಿಗಳು ತಮ್ಮ ಗ್ರಾಮದಿಂದ ಶಾಲೆಗೆ ಹೋಗುವ ರಸ್ತೆಯನ್ನು ತಾವೇ ದುರಸ್ತಿ ಮಾಡಿಕೊಂಡಿದ್ದಾರೆ. ತಲಕಟಾ ಮಾಧ್ಯಮಿಕ ಶಾಲೆಯ ಪಡಲ್‌ಪುಟ್‌ ಗ್ರಾಮದ ವಿದ್ಯಾರ್ಥಿಗಳು ಇಡೀ ದಿನ ಶ್ರಮದಾನ ಮಾಡಿದರು. ಸಲಿಕೆ, ಬುಟ್ಟಿ ತಂದು ಬುಟ್ಟಿಗಳಲ್ಲಿ ಮಣ್ಣು ತುಂಬಿ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿ ೨ ಕಿ.ಮೀ. ರಸ್ತೆಯನ್ನು ಸಂಚಾರಕ್ಕೆ ಯೋಗ್ಯವಾಗಿಸಿಕೊಂಡರು. ಹಲವು ಬಾರಿ … Continued