೨ಎ ಮೀಸಲಾತಿಗೆ ಸೇರ್ಪಡೆ ಮಾಡಿ: ಬೆಂಗಳೂರು ಸಮಾವೇಶದಲ್ಲಿ ಪಂಚಮಸಾಲಿಗಳ ಹಕ್ಕೊತ್ತಾಯ

ಬೆಂಗಳೂರು: ೨ಎ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಲಿಂಗಾಯತ ಪಂಚಮಸಾಲಿ ಬೃಹತ್ ಸಮಾವೇಶಕ್ಕೆ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಯಿತು. ಸಮಾವೇಶಕ್ಕೆ ವಿಶೇಷವಾಗಿ ಲಿಂಗಾಯತ ಪಂಚಮಸಾಲಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಕಲಬುರಗಿ, ಬಾಗಲಕೋಟೆ, ವಿಜಯಪುರ,ಯಾದಗಿರಿ, ಬೀದರ್, ರಾಯಚೂರು,ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಬೆಳಗಾವಿ ಮೊದಲಾದ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. … Continued

ಪಂಚಮಸಾಲಿ ಮೀಸಲಾತಿಗೆ ನನ್ನ ಸಂಪೂರ್ಣ ಬೆಂಬಲ

ಬೆಂಗಳೂರು: ಮೀಸಲಾತಿ ನೀಡಬೇಕೆನ್ನುವುದರಲ್ಲಿ ನನ್ನ ಸಂಪೂರ್ಣ ಬೆಂಬಲ ಇದೆ. ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದಿರುವ, ಕಡುಬಡವರಾಗಿರುವ ವೀರಶೈವ-ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗಲೇಬೇಕು ಎಂದು ಸಚಿವ ಮುರುಗೇಶ್‍ ನಿರಾಣಿ ಹೇಳಿದರು. ಇದಕ್ಕೆ ನಮ್ಮ ಅಭ್ಯಂತರ ಇಲ್ಲವೇ ಇಲ್ಲ. ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗಲೇ , ಮೀಸಲಾತಿ ಕುರಿತಂತೆ ಸಮಿತಿ ರಚಿಸಿದ್ದರು. ಆಗ ವರದಿ ಬರುವ ಮುಂಚೆಯೇ … Continued

ಗ್ರಾಮದಿಂದ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ವಿದ್ಯಾರ್ಥಿಗಳ ಶ್ರಮದಾನ

ಒಡಿಶಾ ಮಲ್ಕಂಗಿರಿ ಜಿಲ್ಲೆಯ ಗ್ರಾಮವೊಂದರ ಶಾಲೆಯ ವಿದ್ಯಾರ್ಥಿಗಳು ತಮ್ಮ ಗ್ರಾಮದಿಂದ ಶಾಲೆಗೆ ಹೋಗುವ ರಸ್ತೆಯನ್ನು ತಾವೇ ದುರಸ್ತಿ ಮಾಡಿಕೊಂಡಿದ್ದಾರೆ. ತಲಕಟಾ ಮಾಧ್ಯಮಿಕ ಶಾಲೆಯ ಪಡಲ್‌ಪುಟ್‌ ಗ್ರಾಮದ ವಿದ್ಯಾರ್ಥಿಗಳು ಇಡೀ ದಿನ ಶ್ರಮದಾನ ಮಾಡಿದರು. ಸಲಿಕೆ, ಬುಟ್ಟಿ ತಂದು ಬುಟ್ಟಿಗಳಲ್ಲಿ ಮಣ್ಣು ತುಂಬಿ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿ ೨ ಕಿ.ಮೀ. ರಸ್ತೆಯನ್ನು ಸಂಚಾರಕ್ಕೆ ಯೋಗ್ಯವಾಗಿಸಿಕೊಂಡರು. ಹಲವು ಬಾರಿ … Continued

ಪ್ರತಿಭಟನಾನಿರತ ರೈತರಿಗೆ ಕಾಲೇಜು ವಿದ್ಯಾರ್ಥಿಗಳಿಂದ ಸಾಮಾಜಿಕ ಜಾಲತಾಣ ಬಳಕೆ ಪಾಠ

ಗಾಜಿಪುರ: ರೈತರ ಪ್ರತಿಭಟನೆಗೆ ಬೆಂಬಲವಾಗಿ ವಿದ್ಯಾರ್ಥಿಗಳ ಸಂಘಟನೆಯೊಂದು ರೈತರಿಗೆ ಸಾಮಾಜಿಕ ಜಾಲತಾಣ ಬಳಕೆ ಕುರಿತು ಕಾರ್ಯಾಗಾರ ಆಯೋಜಿಸಲು ಮುಂದಾಗಿದೆ. ವಿದ್ಯಾರ್ಥಿ ಸಂಘಟನೆ ಆಲ್‌ ಇಂಡಿಯಾ ಸ್ಟುಡೆಂಟ್ಸ್‌ ಫೆಡರೇಶನ್‌ (ಎಐಎಸ್‌ಎಫ್‌) ರೈತರಿಗೆ ಟ್ವಿಟರ್‌ ಖಾತೆ ತೆರೆಯುವುದು, ಸಂದೇಶಗಳನ್ನು ರವಾನಿಸುವುದು ಹಾಗೂ ಆನ್‌ಲೈನ್‌ ಮೂಲಕ ಪ್ರಚಲಿತ ವಿದ್ಯಮಾನಗಳನ್ನು ತಿಳಿಯುವ ಕುರಿತು ಗಾಜಿಪುರದಲ್ಲಿ ಕಾರ್ಯಾಗಾರಗಳನ್ನು ನಡೆಸಲು ನಿರ್ಧರಿಸಿದೆ. ಲಕ್ನೋ ವಿಶ್ವವಿದ್ಯಾಲಯದ … Continued

ಕೃಷಿ ಕಾನೂನು ಅನುಷ್ಠಾನ ಅವಧಿ ೨ ವರ್ಷಕ್ಕೆ ಹೆಚ್ಚಿಸಿದರೆ ರೈತರು ಹೋರಾಟ ಕೈಬಿಡಬಹುದು: ಪಂಜಾಬ್‌ ಸಿಎಂ ಅಮರಿಂದರ್‌ ಸಿಂಗ್

ಕೇಂದ್ರ ಸರಕಾರ ನೂತನ ಕೃಷಿ ಕಾನೂನುಗಳ ಅನುಷ್ಠಾನದ ಅವಧಿಯನ್ನು ೧೮ ತಿಂಗಳುಗಳಿಂದ ೨೪ ತಿಂಗಳುಗಳಿಗೆ ಹೆಚ್ಚಿಸಿದರೆ ರೈತರು ಹೋರಾಟವನ್ನು ಕೈಬಿಡುವ ಸಾಧ್ಯತೆಯಿದೆ ಎಂದು ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಹೇಳಿದ್ದಾರೆ. ಕೇಂದ್ರ ಸರಕಾರ ೧೮ ತಿಂಗಳವರೆಗೆ ನೂತನ ಕೃಷಿ ಕಾನೂನುಗಳ ಅನುಷ್ಠಾನವನ್ನು ಮುಂದೂಡುವುದಾಗಿ ತಿಳಿಸಿದೆ. ೨ ವರ್ಷಗಳವರೆಗೆ ಅನುಷ್ಠಾನ ಮಾಡುವುದಿಲ್ಲ ಎಂದು ಹೇಳಿದರೆ ರೈತರು … Continued

ಮಥುರಾ ಕೃಷ್ಣ ಜನ್ಮಭೂಮಿ: ಕೋರ್ಟ್‌ನಲ್ಲಿ‌ ಅರ್ಜಿ ವಿಚಾರಣೆಗೆ ದಿನಾಂಕ ನಿಗದಿ

ಮಥುರಾ: ಶ್ರೀಕೃಷ್ಣನ ಜನ್ಮಸ್ಥಳ ಮಥುರಾದ ದೇವಾಲಯದ ಪಕ್ಕದ ೧೭ನೇ ಶತಮಾನದ ಮಸೀದಿಯನ್ನು ಸ್ಥಳಾಂತರಿಸುವಂತೆ ಕೋರಿ ಸ್ಥಳಿಯ ನ್ಯಾಯಾಲಯದಲ್ಲಿ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಅರ್ಜಿಗಳ ವಿಚಾರಣೆಗೆ ನ್ಯಾಯಾಲಯ ದಿನಾಂಕವನ್ನೂ ನಿಗದಿಪಡಿಸಿದೆ. ಸಿವಿಲ್‌ ನ್ಯಾಯಾಧೀಶ ನೇಹಾ ಬನೌಡಿಯಾ ಮಾರ್ಚ್‌ ೧೦ಕ್ಕೆ ವಿಚಾರಣೆ ನಡೆಸಲಿದ್ದಾರೆ. ವಕೀಲ ಶೈಲೇಂದ್ರ ಸಿಂಗ್‌ ಮತ್ತು ಹಿಂದೂ ಸೇನಾ ಮುಖ್ಯಸ್ಥ ಮನೀಶ್‌ ಯಾದವ್‌ ಅರ್ಜಿ … Continued

ಉತ್ತರಾಖಂಡ ದುರಂತ: ಮೃತರ ಸಂಖ್ಯೆ ೬೭ಕ್ಕೆ ಏರಿಕೆ

ಉತ್ತರಾಖಂಡದಲ್ಲಿ ಹಿಮಬಂಡೆ ಕುಸಿದು ಉಂಟಾದ ಪ್ರವಾಹದಲ್ಲಿ ಮೃತರ ಸಂಖ್ಯೆ ೬೭ಕ್ಕೇರಿದೆ. ಭಾನುವಾರ ೨ ಶವಗಳನ್ನು ಹೊರತೆಗೆಯಲಾಗಿದ್ದು, ೧೫ನೇ ದಿನವೂ ಶೋಧ ಕಾರ್ಯ ಮುಂದುವರೆದಿದೆ. ಇನ್ನೂ ೧೩೭ ಜನರು ಕಾಣೆಯಾಗಿದ್ದಾರೆ. ತಪೋವನ ಬ್ಯಾರೇಜ್‌ ಬಳಿಯ ಡೆಸಿಲ್ಟಿಂಗ್‌ ಟ್ಯಾಂಕ್‌ನಿಂದ ಮೂರು ಶವಗಳನ್ನು ಹೊರತೆಗೆಯಲಾಗಿದೆ. ಫೆಬ್ರವರಿ ೭ರಂದು ಹಿಮಬಂಡೆ ಕುಸಿದು ಪ್ರವಾಹ ಉಂಟಾಗಿತ್ತು. ಇದರಿಂದ ೧೩.೨ ಮೆಗಾವ್ಯಾಟ್‌ ರಿಷಿಗಂಗಾ ಹೈಡಲ್‌ … Continued

ಗೋಮಾತೆ ಮಹತ್ವ ಕುರಿತ ಆನ್‌ಲೈನ್‌ ಪರೀಕ್ಷೆ: ೫ ಲಕ್ಷ ಜನರ ನೋಂದಣಿ

ನವದೆಹಲಿ: ಸರಕಾರಿ ಸಂಸ್ಥೆ ರಾಷ್ಟ್ರೀಯ ಕಾಮಧೇನು ಆಯೋಗ ಫೆ.೨೫ರಂದು ನಡೆಸುವ ಭಾರತೀಯ ಗೋ ತಳಿಗಳ ಮಹತ್ವ ಕುರಿತು ನಡೆಸುವ ಆನ್‌ಲೈನ್‌ ಪರೀಕ್ಷೆಯನ್ನು ೫ ಲಕ್ಷ ಜನರು ಬರೆಯಲಿದ್ದಾರೆ. ಗೋವುಗಳ ಮಹತ್ವ, ಗೋ ತಳಿಗಳು, ಗೋವುಗಳ ಗುಣವಿಶೇಷಗಳ ಕುರಿತು ಪರೀಕ್ಷೆ ನಡೆಸಲಾಗುತ್ತದೆ. ಹಿಂದಿ, ಇಂಗ್ಲಿಷ್ ಮತ್ತು 12 ಪ್ರಾದೇಶಿಕ ಭಾಷೆಗಳಲ್ಲಿ ನಡೆಯುವ ಪರೀಕ್ಷೆಗೆ ಭಾರತದ ಪ್ರತಿಯೊಂದು ಜಿಲ್ಲೆಯ … Continued

ಕೊರೊನಾ ವಿರುದ್ಧದ ಜಾಗತಿಕ ಹೋರಾಟಕ್ಕೆ ಭಾರತದ ನಾಯಕತ್ವ: ವಿಶ್ವಸಂಸ್ಥೆ

ಕೊರೊನಾ ವಿರುದ್ಧದ ಜಾಗತಿಕ ಹೋರಾಟದಲ್ಲಿ ಭಾರತದ ನಾಯಕತ್ವವನ್ನು ಶ್ಲಾಘಿಸಿದ ವಿಶ್ವಸಂಸ್ಥೆ, ವಿಶ್ವ ಮಟ್ಟದಲ್ಲಿ ಕೊವಿಡ್‌-೧೯ ಲಸಿಕೆ ಪೂರೈಕೆಗೆ ಭಾರತ ಮಾಡುತ್ತಿರುವ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ವಿಶ್ವ ಸಂಸ್ಥೆಗೆ ಕೊವಿಡ್‌-೧೯ ಲಸಿಕೆಯ ಡೋಸ್‌ಗಳನ್ನು ನೀಡಿದ್ದಕ್ಕೆ ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೊನಿಯೋ ಗುಟೆರಸ್‌ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್‌ಗೆ ಪತ್ರ ಬರೆದು ಕೃತಜ್ಞತೆ ಸಲ್ಲಿಸಿದ್ದಾರೆ. ಭಾರತವು ೧೫೦ ದೇಶಗಳಿಗೆ ಔಷಧಿಗಳು, … Continued

ಜಪಾನ್‌ನಲ್ಲಿ ಹೊಸ ರೂಪಾಂತರಿ ಕೊರೊನಾ ಸೋಂಕು!

ಬ್ರಿಟನ್‌, ಬ್ರೆಜಿಲ್‌, ದಕ್ಷಿಣ ಆಫ್ರಿಕಾ ನಂತರ ಈಗ ಜಪಾನ್‌ನಲ್ಲಿ ಹೊಸ ಮಾದರಿ ರೂಪಾಂತರಿ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಕೋವಿಡ್‌-೧೯ ಅಲೆಯನ್ನು ನಿಗ್ರಹಿಸಲು ಪ್ರಯತ್ನಿಸುವ ಸಂದರ್ಭದಲ್ಲಿ ರೂಪಾಂತರಿ ಸೋಂಕು ಕಾಣಿಸಿಕೊಂಡಿರುವುದು ದೇಶವಾಸಿಗಳನ್ನು ಆತಂಕಿತರನ್ನಾಗಿಸಿದೆ. ಪೂರ್ವ ಜಪಾನ್‌ನ ಕಾಂಟೊ ಎಂಬಲ್ಲಿ ಪತ್ತೆಯಾದ ೯೧ ಪ್ರಕರಣಗಳಲ್ಲಿ ಹೊಸ ರೂಪಾಂತರಿ ಸೋಂಕು ಕಾಣಿಸಿಕೊಂಡಿದೆ. ಇದು ಈಗಿರುವ ಕೊರೊನಾ ಸೋಂಕಿಗಿಂತ ಹೆಚ್ಚು … Continued