ಉಳ್ಳಾಲದಲ್ಲಿ ೪೯ ನರ್ಸಿಂಗ್‌ ವಿದ್ಯಾರ್ಥಿಗಳಿಗೆ ಕೊರೋನಾ, ಕಾಲೇಜ್‌ ಸೀಲ್‌

ಮಂಗಳೂರು: ಕೇರಳದ ಗಡಿಯಲ್ಲಿರುವ ಕರ್ನಾಟಕದ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಆಲಿಯಾ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜಿನಲ್ಲಿ ೪೯ ನರ್ಸಿಂಗ್‌ ವಿದ್ಯಾರ್ಥಿಗಳಿಗೆ ಕೊರೋನಾ ದೃಢಪಟ್ಟಿರುವುದರಿಂದ ಕಾಲೇಜನ್ನು ಸೀಲ್‌ ಮಾಡಲಾಗಿದೆ. ಈ ಕಾಲೇಜು ಕರ್ನಾಟಕ ಮತ್ತು ಕೇರಳ ನಡುವಿನ ಅಂತಾರಾಜ್ಯ ಗಡಿಯಿಂದ ಕೆಲವು ಕಿಲೋಮೀಟರ್ ದೂರದಲ್ಲಿದೆ. ವಿದ್ಯಾರ್ಥಿಗಳು COVID-19 ಪರೀಕ್ಷೆಗೆ ಒಳಪಡುವ ಮೊದಲು ಕಾಲೇಜಿನ ಆರು ವಿದ್ಯಾರ್ಥಿಗಳು … Continued

ಅಯೋಧ್ಯಾ ಮಸೀದಿ ಮಾಲೀಕತ್ವದ ವಿಚಾರ: ಇಬ್ಬರು ಸಹೋದರಿಯರು ಕೋರ್ಟಿಗೆ

ಲಕ್ನೋ: ರಾಮ ಜನಮಭೂಮಿ-ಬಾಬ್ರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನಂತೆ ಉತ್ತರ ಪ್ರದೇಶ ಸುನ್ನಿ ಕೇಂದ್ರ ವಕ್ಫ್ ಮಂಡಳಿಗೆ ಅಯೋಧ್ಯೆಯ ಬೇರೊಂದು ಜಾಗದಲ್ಲಿ ಮಸೀದಿ ನಿರ್ಮಾಣಕ್ಕಾಗಿ ಮಂಜೂರು ಮಾಡಿದ ಐದು ಎಕರೆ ಜಮೀನಿನ ಮಾಲೀಕತ್ವದ ವಿಚಾರದಲ್ಲಿ ದೆಹಲಿ ಮೂಲದ ಇಬ್ಬರು ಸಹೋದರಿಯರು ಬುಧವಾರ ಅಲಹಾಬಾದ್ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದಾರೆ. ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠದ ಮುಂದೆ ಸಲ್ಲಿಸಿದ್ದ … Continued

ಮಂಡ್ಯ ಜಿಲ್ಲೆಯಲ್ಲಿ ಲಿಥಿಯಂ ನಿಕ್ಷೇಪ

ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ 1,600 ಟನ್‌ಗಳಷ್ಟು ಲಿಥಿಯಂ ನಿಕ್ಷೇಪ ಇರುವುದು ಪ್ರಾಥಮಿಕ ಸಮೀಕ್ಷೆಯಲ್ಲಿ ಕಂಡುಬಂದಿದೆ ಎಂದು ಕೇಂದ್ರ ಸರಕಾರ  ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದೆ. ಪರಮಾಣು ಇಂಧನ ಇಲಾಖೆಯ ಘಟಕ  ಅಟಾಮಿಕ್ ಮಿನರಲ್ಸ್ ಡೈರೆಕ್ಟರೇಟ್ ಫಾರ್ ಎಕ್ಸ್‌ಪ್ಲೋರೇಶನ್ ಅಂಡ್ ರಿಸರ್ಚ್ (ಎಎಮ್‌ಡಿ) ಮಾರ್ಲಗಲ್ – ಅಲಪಟ್ಟಣ ಪ್ರದೇಶದ ಪೆಗ್‌ಮ್ಯಾಟೈಟ್‌ಗಳಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿದೆ. ಹೊಸ ತಂತ್ರಜ್ಞಾನಗಳಲ್ಲಿ … Continued

ಪ್ರಿಯಾಂಕಾ ಗಾಂಧಿ ಬೆಂಗಾವಲು ಪಡೆ ವಾಹನಗಳ ಮಧ್ಯೆ ಡಿಕ್ಕಿ

ನವದೆಹಲಿ: ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಬೆಂಗಾವಲು ಪಡೆಯ ಕಾರುಗಳ ಮಧ್ಯೆ ಡಿಕ್ಕಿ ಸಂಭವಿಸಿದ ಘಟನೆ ಉತ್ತರ ಪ್ರದೇಶದ ಹಾಪೂರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಘರ್‌ ಮುಕ್ತೇಶ್ವರ ಬಳಿ ಗುರುವಾರ ಸಂಭವಿಸಿದೆ. ರೈತರ ಹೋರಾಟದಲ್ಲಿ ಪಾಲ್ಗೊಂಡಿದ್ದ ಹಪೂರ ಜಿಲ್ಲೆಯ ದಿಬ್ದಿವಾ ಗ್ರಾಮದ ರೈತ ಅಜಯಕುಮಾರ ಲಲ್ಲು ಜನವರಿ ೨೬ರಂದು ನಡೆದ ರೈತರ ಹೋರಾಟ … Continued

ತೇಜಸ್‌ ಯುದ್ಧ ವಿಮಾನ ಖರೀದಿಗೆ ೬ ದೇಶಗಳ ಆಸಕ್ತಿ

ಬೆಂಗಳೂರು: ಆಗ್ನೇಯ ಏಷಿಯಾ ಹಾಗೂ ಮಧ್ಯ ಪ್ರಾಚ್ಯ ದೇಶಗಳು ಕಡಿಮೆ ಬೆಲೆಯಲ್ಲಿ ದೊರೆಯುವ ಯುದ್ಧ ವಿಮಾನ ತೇಜಸ್‌ ಖರೀದಿಗೆ ಆಸಕ್ತಿ ತೋರಿವೆ ಎಂದು ಹಿಂದೂಸ್ತಾನ ಏರೋನಾಟಿಕ್ಸ್‌ ಲಿಮಿಟೆಡ್‌ ಚೇರಮನ್‌ ಆರ್.‌ ಮಾಧವನ್‌ ತಿಳಿಸಿದ್ದಾರೆ. ಏರೋ ಇಂಡಿಯಾದಲ್ಲಿ ಮಾತನಾಡಿದ ಅವರು, ೩೦೯ ಕೋಟಿ ರೂ. ಮೊತ್ತದ ಯುದ್ಧ ವಿಮಾನ ತೇಜಸ್‌ ರಫ್ತಿಗೆ ನಾವು ಉತ್ಸುಕರಾಗಿದ್ದೇವೆ. ಇದು ಸ್ಪರ್ಧಾತ್ಮಕ … Continued

ರೈತ ಹೋರಾಟ ಹಾಲಿವುಡ್‌ ಸೆಲೆಬ್ರಿಟಿಗಳ ಬೆಂಬಲಕ್ಕೆ ಕ್ರೀಡಾಪಟುಗಳ ಚಾಟಿ

ನವದೆಹಲಿ: ನೂತನ ಕೃಷಿ ಮಸೂದೆಗಳನ್ನು ಕೈಬಿಡಬೇಕೆಂದು ಆಗ್ರಹಿಸಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಕೆಲ ವಿದೇಶಿಗರು ಬೆಂಬಲಿಸಿದ್ದನ್ನು ದೇಶದ ಪ್ರಮುಖ ಕ್ರೀಡಾಪಟುಗಳು ಖಂಡಿಸಿದ್ದಾರೆ. ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ, ಹಿರಿಯ ಅಥ್ಲೀಟ್‌ ಪಿ.ಟಿ.ಉಷಾ ಸೇರಿದಂತೆ ಹಲವು ಆಟಗಾರರು ರೈತರ ಹೋರಾಟಕ್ಕೆ ಹಾಲಿವುಡ್‌ ಸೆಲೆಬ್ರಿಟಿಗಳು ಬೆಂಬಲಿಸುವುದನ್ನು ವಿರೋಧಿಸಿದ್ದಾರೆ. ಭಾರತದ ಏಕತೆಗೆ ಧಕ್ಕೆ ತರುವುದನ್ನು ಸಹಿಸುವುದಿಲ್ಲ. ಬಾಹ್ಯ ಶಕ್ತಿಗಳು ನಮ್ಮ … Continued

ರೈತರ ಹೋರಾಟದ ಮೇಲೆ ರಾಜಕೀಯದ ಕಪ್ಪು ಛಾಯೆ

ನವದೆಹಲಿ: ಪ್ರತ್ಯೇಕ ಖಲಿಸ್ತಾನ ಹೋರಾಟಗಾರರ ದುರ್ವರ್ತನೆಯಿಂದ ರೈತ ಹೋರಾಟದ ದಿಕ್ಕು ತಪ್ಪಿರುವುದು ರೈತ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದ್ದು, ಇದು ಹೋರಾಟದ ಮೇಲೆ ರಾಜಕೀಯದ ಕರಿನೆರಳು ಬೀಳುವಂತೆ ಮಾಡಿದೆ. ದೆಹಲಿಯ ಕೆಂಪುಕೋಟೆಯಲ್ಲಿ ಜನವರಿ ೨೬ರಂದು ನಡೆದ ಗಲಭೆ ರೈತ ಹೋರಾಟಗಾರರಲ್ಲಿ ಭಿನ್ನಾಭಿಪ್ರಾಯ ಮೂಡಿಸಿದೆ. ಮೂರು ನೂತನ ಕೃಷಿ ಮಸೂದೆಗಳನ್ನು ಖಂಡಿಸಿ ರೈತರು ನಡೆಸುತ್ತಿರುವ ಹೋರಾಟವನ್ನು ಹಾಳುಗೆಡವಲು ಉದ್ದೇಶಪೂರ್ವಕವಾಗಿ … Continued

ರೈತರ ಭೇಟಿಗೆ ತೆರಳಿದ ವಿಪಕ್ಷಗಳ ಸಂಸದರ ತಡೆದ ಪೊಲೀಸರು

  ರೈತರ ಭೇಟಿಗೆ ತೆರಳಿದ ವಿಪಕ್ಷಗಳ ಸಂಸದರ ತಡೆದ ಪೊಲೀಸರು ನವ ದೆಹಲಿ: ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರನ್ನು ಭೇಟಿಯಾಗಲು ಅಕಾಲಿ ದಳ, ಡಿಎಂಕೆ, ಎನ್‌ಸಿಪಿ ಮತ್ತು ತೃಣಮೂಲ ಕಾಂಗ್ರೆಸ್ ಸೇರಿದಂತೆ 10 ವಿರೋಧ ಪಕ್ಷಗಳ ೧೭ ಸಂಸದರನ್ನು ಘಾಜಿಪುರ ಗಡಿಯನ್ನು ತಲುಪದಂತೆ ಗುರುವಾರ ಪೊಲೀಸರು ತಡೆದರು. ಪ್ರತಿಭಟನಾ ನಿರತ ರೈತರ ಭೇಟಿಯನ್ನು … Continued

ಮ್ಯಾಯನ್ಮಾರ್‌ನಲ್ಲಿ ಸೈನ್ಯಾಡಳಿತದ ವಿರುದ್ಧ ಪ್ರತಿಭಟನೆ

ಮ್ಯಾಯನ್ಮಾರ್‌ನಲ್ಲಿ ಆಡಳಿತವನ್ನು ವಶಕ್ಕೆ ಪಡೆದಿರುವ ಸೇನೆಯ ವಿರುದ್ಧ ಪ್ರತಿಭಟನೆ ಆರಂಭವಾಗಿದೆ. ಸೇನಾ ಕ್ರಾಂತಿಯ ವಿರುದ್ಧ ಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ಜನರು ಮ್ಯಾನ್ಮಾರ್‌ನ ಎರಡನೇ ನಗರವಾದ ಮಾಂಡಲೆ ಎಂಬಲ್ಲಿ ಬ್ಯಾನರ್‌ಗಳನ್ನುಪ್ರದರ್ಶಿಸಿ, ಸೈನಿಕ ದಂಗೆ ವಿರೋಧಿ ಘೋಷಣೆಗಳನ್ನು ಕೂಗಿದರು. ಮಾಂಡಲೆ ವೈದ್ಯಕೀಯ ವಿಶ್ವವಿದ್ಯಾಲಯದ ಹೊರಗೆ ನಮ್ಮ ಬಂಧಿತ ನಾಯಕರನ್ನು ತಕ್ಷಣವೇ ಬಿಡುಗಡೆ ಮಾಡಿ, ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಮ್ಯಾನ್ಮಾರ್‌ನ … Continued

ದಂಪತಿಯಿಂದ ಆತ್ಮಹತ್ಯೆಗೆ ಯತ್ನ, ಪತಿ ಸಾವು

ಬೆಳಗಾವಿ: ಕೌಟುಂಬಿಕ ಕಲಹಕ್ಕೆ ಬೇಸತ್ತ ಬೆಳಗಾವಿಯ ದಂಪತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಘಟನೆಯಲ್ಲಿ ಪತಿ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿರುವ ಪತ್ನಿಯನ್ನುಆಸ್ಪತ್ರೆಗೆ ಸೇರಿಸಲಾಗಿದೆ. ಮಾಧ್ಯಮ ಕ್ಷೇತ್ರದ ಮುದ್ರಣ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಬೆಳಗಾವಿಯ ಹಿಂಡಲಗಾ ತಾಲೂಕಿನ ರಾಕೇಶ್ ಪಾಟೀಲ್ ಮೃತಪಟ್ಟವ. ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದ್ದು, ಗುರುವಾರ ಮುಂಜಾನೆ ನಗರದ ಎರಡನೇ ರೈಲ್ವೆ ಗೇಟ್ … Continued