ಬಂಗಾಳಕ್ಕೆ ಕಿಸಾನ್‌ ಸಮ್ಮಾನ ಹಣ ನೀಡದ ಕೇಂದ್ರ: ಮಮತಾ ಆರೋಪ

ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ರಾಜ್ಯದ ರೈತರಿಗೆ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಪ್ರೋತ್ಸಾಹಧನವನ್ನು ನೀಡುತ್ತಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಬಿಜೆಪಿ ಕೇಂದ್ರದ ಯೋಜನೆಗಳನ್ನು ರಾಜ್ಯದ ಜನರಿಗೆ ತಲುಪಿಸುತ್ತಿಲ್ಲ ಎಂದು ಸುಳ್ಳು ಆರೋಪ ಮಾಡುತ್ತಿದ್ದು, ರಾಜ್ಯದ ತೃಣಮೂಲ ಕಾಂಗ್ರೆಸ್‌ ಸರಕಾರ ರೈತರಿಗೆ ತಲಾ ೫೦೦೦ರೂ. ಪ್ರೋತ್ಸಾಹಧನದೊಂದಿಗೆ ಉಚಿತ ಬೆಳೆ ವಿಮೆಯನ್ನೂ … Continued

ಆನ್‌ಲೈನ್‌ನಲ್ಲಿ ಸೋಫಾ ಮಾರಲು ಹೋಗಿ ಮೋಸ ಹೋದ ಕೇಜ್ರಿ ಪುತ್ರಿ!

ನವ ದೆಹಲಿ: ಇ-ಕಾಮರ್ಸ್‌ನಲ್ಲಿ ಸೋಫಾ ಮಾರಲು ಹೋಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪುತ್ರಿ ಹರ್ಷಿತಾ ಕೇಜ್ರಿವಾಲ್ ಅವರು ೩೪ ಸಾವಿರ ಕಳೆದುಕೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ವ್ಯಕ್ತಿಯೋರ್ವ ವೆಬ್ ಪೋರ್ಟಲ್‌ನಲ್ಲಿ ಸೋಫಾ ಕೊಂಡುಕೊಳ್ಳುವುದಾಗಿ ಹರ್ಷಿತಾಳನ್ನು ಸಂಪರ್ಕಿಸಿ ದರ ನಿಗದಿಯಾದ ಬಳಿಕ ಹರ್ಷಿತಾಳ ಖಾತೆಗೆ ಸ್ವಲ್ಪ ಹಣ ಹಾಕಿದ್ದಾನೆ. ಬಳಿಕ ಅದನ್ನು ಖಾತರಿಪಡಿಸಲು … Continued

ಕೊರೋನಾ ಪ್ರಕರಣ: ಗಣನೀಯ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆ ಆಗುತ್ತಿದ್ದು, ಕಳೆದ ೨೪ ಗಂಟೆಗಳಲ್ಲಿ ೯,೧೧೦ ಮಂದಿಗೆ ಹೊಸ ಸೋಂಕು ಪ್ರಕರಣ ಧೃಢಪಟ್ಟಿವೆ ಹಾಗೂ ೭೮ ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಹೊಸದಾಗಿ ದಾಖಲಾಗಿರುವ ಪ್ರಕರಣ ಸೇರಿದಂತೆ ಇದುವರೆಗೆ ಒಟ್ಟಾರೆ ೧,೦೮,೪೭,೩೦೪ಕ್ಕೆ ಏರಿಕೆಯಾಗಿದೆ. ಈ ಪೈಕಿ … Continued

ನಿಮಗೆ ನಮ್ಮ ಬಾಗಿಲು ತೆರೆದಿದೆ: ಗುಲಾಂ ನಬಿಗೆ ಮೋದಿ

ನವದೆಹಲಿ: ನೀವು ರಾಜ್ಯಸಭೆಯಿಂದ ನಿವೃತ್ತಿಯಾದರೂ ನಮ್ಮ  ಬಾಗಿಲು ನಿಮಗೆ ಯಾವಾಗಲೂ ತೆರೆದಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸಭೆಯಿಂದ ನಿವೃತ್ತಿಗೊಂಡ ಗುಲಾಂ ನಬಿ ಆಜಾದ್‌ ಅವರಿಗೆ ಹೇಳಿದರು. ರಾಜ್ಯಸಭೆಯಲ್ಲಿ ಆಜಾದ್‌ರನ್ನು ಬೀಳ್ಕೊಡುವ ಭಾಷಣ ಮಾಡಿದ ಪ್ರಧಾನಿ ಮೋದಿ, ನೀವು ಸದನದಲ್ಲಿ ಇಲ್ಲ ಎಂದು ಭಾವಿಸಬೇಡಿ. ನೀವು ನಿವೃತ್ತಿಯಾಗಲು ನಾನು ಬಿಡುವುದಿಲ್ಲ. ನಿಮ್ಮ ಸಲಹೆ ನಮಗೆ … Continued

ಪೆಟ್ರೋಲ್‌-ಡೀಸೆಲ್‌ ಬೆಲೆ ಗರಿಷ್ಠ

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರ ಏರಿಕೆಯಾಗುತ್ತಿದ್ದು, ಪೆಟ್ರೋಲ್-ಡೀಸೆಲ್ ದರ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಮಂಗಳವಾರ ಪ್ರತಿ ಲೀಟರ್‌ ಪೆಟ್ರೋಲ್-ಡೀಸೆಲ್‌ಗೆ ೩೫ ಪೈಸೆಯಷ್ಟು ಹೆಚ್ಚಳವಾಗಿದೆ. ದಿನದಿಂದ ದಿನಕ್ಕೆ ಇಂಧನ ದರ ಗಗನಮುಖಿಯಾಗುತ್ತಿದೆ. ಅದರಲ್ಲೂ ಡೀಸೆಲ್ ದರ ಹೆಚ್ಚಳವಾಗುತ್ತಿರುವುದರಿಂದ ಅಗತ್ಯ ವಸ್ತುಗಳ ದರ ಏರಿಕೆಯಾಗಿ ಶ್ರೀಸಾಮಾನ್ಯನ ಜೇಬಿಗೆ ಕತ್ತರಿ ಬಿದ್ದಿದೆ. ದೆಹಲಿಯಲ್ಲಿ ಪೆಟ್ರೋಲ್ ದರ ೮೭.೩೦ರೂ., ಮುಂಬೈನಲ್ಲಿ … Continued

ಬಿಡಿಎ ಹಗರಣ: ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮಕ್ಕೆ ಸೂಚನೆ

ಬೆಂಗಳೂರು: ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ(ಬಿಡಿಎ)ದಲ್ಲಿ ನಡೆದ ಹಗರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡಿಎನಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ನನಗೆ ಮಾಹಿತಿ ಬಂದಿದೆ.ಮುಂದೆ ಯಾವುದೇ ರೀತಿಯ ಅಕ್ರಮ ಅಥವಾ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ಕೊಡುವುದಿಲ್ಲ … Continued

ನಾನು ಭಾರತದ ಮುಸ್ಲಿಂ ಆಗಿರಲು ಹೆಮ್ಮೆ ಪಡುತ್ತೇನೆ: ಗುಲಾಂ ನಬಿ ಆಜಾದ್‌

ನವದೆಹಲಿ: ನಾನು ಭಾರತದ ಮುಸ್ಲಿಂ ಆಗಿರಲು ಹೆಮ್ಮೆ ಪಡುತ್ತೇನೆ ಎಂದು ಕಾಂಗ್ರೆಸ್‌ ಸಂಸದ ಹಾಗೂ ರಾಜ್ಯಸಭೆ ಪ್ರತಿ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಹೇಳಿದರು. ರಾಜ್ಯಸಭೆಯಲ್ಲಿ ತಮ್ಮ ವಿದಾಯ ಭಾಷಣದಲ್ಲಿ ಅವರು, ವಿಭಜನೆ ನಂತರ ಪಾಕಿಸ್ತಾನಕ್ಕೆ ಹೋಗದ ಅದೃಷ್ಟವಂತ ಜನರಲ್ಲಿ ನಾನೂ ಕೂಡ ಒಬ್ಬ. ಪಾಕಿಸ್ತಾನದ ಸ್ಥಿತಿ-ಗತಿಯನ್ನು ನೋಡಿದಾಗ ನಾನು ಹಿಂದೂಸ್ತಾನದ ಮುಸ್ಲಿಂ ಆಗಿರಲು … Continued

ವುಹಾನ್‌ನಲ್ಲಿ ೨೦೧೯ರ ಡಿಸೆಂಬರ್‌ಗಿಂತ ಮೊದಲು ಕೊರೋನಾ ಪುರಾವೆಯಿಲ್ಲ

ಚೀನಾ:  ಚೀನಾದ ವುಹಾನ್‌ನಲ್ಲಿ ೨೦೧೯ರ ಡಿಸೆಂಬರ್‌ಗಿಂತ ಮೊದಲು ಕೊರೊನಾ ಸೋಂಕು ಹರಡಿರುವುದಕ್ಕೆ ಪುರಾವೆಗಳಿಲ್ಲ ಎಂದು ವುಹಾನ್‌ನಲ್ಲಿ ಸಾಂಕ್ರಾಮಿಕ ರೋಗದ ಉಗಮದ ಬಗ್ಗೆ ತನಿಖೆ ನಡೆಸುತ್ತಿರುವ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಚೀನಾ ತಜ್ಞರ ಜಂಟಿ ಸಮಿತಿ ತಿಳಿಸಿದೆ. ಡಿಸೆಂಬರ್ 2019 ರ ಮೊದಲು ಜನಸಂಖ್ಯೆಯಲ್ಲಿ ಸಾರ್ಸ್-ಕೋವ್-2 ಹರಡಿರುವ ಬಗ್ಗೆ ಯಾವುದೇ ಸೂಚನೆಯಿರಲಿಲ್ಲ. ಅದಕ್ಕೂ ಮುಂಚೆ ನಗರದಲ್ಲಿ … Continued

150 ಕ್ಷೇತ್ರಗಳಲ್ಲಿ ನಮ್ಮ ಸಮುದಾಯವೇ ನಿರ್ಣಾಯಕ: ರಮೇಶ್ ಜಾರಕಿಹೊಳಿ

ಹರಿಹರ:ರಾಜ್ಯದ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಮ್ಮ ನಾಯಕ ಸಮುದಾಯ ನಿರ್ಣಾಯಕವಾಗಿದೆ. ಹಾಗಾಗಿಯೇ ಜನಜಾಗೃತಿ ಸಮಾವೇಶದ ಮೂಲಕ ನಮಗೆ ನ್ಯಾಯಸಮ್ಮತವಾಗಿ ದೊರಕಬೇಕಾದ ಸವಲತ್ತುಗಳ ಬಗ್ಗೆ ಮುಖ್ಯಮಂತ್ರಿಗಳ ಗಮನ‌ಸೆಳೆದಿದ್ದೇವೆ ಎಂದು ಸಚಿವ ರಮೇಶ್ ಜಾರಕಿಹೊಳಿ‌ ಹೇಳಿದರು. ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿರುವ ವಾಲ್ಮೀಕಿ ಗುರುಪೀಠದಲ್ಲಿ ಹಮ್ಮಿಕೊಳ್ಳಲಾಗಿದ್ದ 3ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರೆ ಮತ್ತು ಜನಜಾಗೃತಿ ಸಮಾವೇಶದ ಅಧ್ಯಕ್ಷತೆ … Continued

ಹೊರಟ್ಟಿ ನಾನು ಮಂತ್ರಿಯಾಗಿದ್ರೆ ಸಮ್ಮಿಶ್ರ ಸರ್ಕಾರ ಬೀಳ್ತಿರಲಿಲ್ಲ

ಬೆಂಗಳೂರು: ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹಾಗೂ ನಾನು ಮಂತ್ರಿಯಾಗಿದ್ದರೆ ಸಮ್ಮಿಶ್ರ ಸರ್ಕಾರ ಪತನವಾಗುತ್ತಿರಲಿಲ್ಲ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ವಿಧಾನ ಪರಿಷತ್‍ನಲ್ಲಿ ಮಂಗಳವಾರಹೇಳಿದರು. ನೂತನ ಸಭಾಪತಿ ಬಸವರಾಜ್ ಹೊರಟ್ಟಿ ಅವರನ್ನು ಅಭಿನಂದಿಸಿ ಮಾತನಾಡುತ್ತಿದ್ದ ಅವರು, ನಾವಿಬ್ಬರು ಮಂತ್ರಿಯಾಗಿದ್ದರೆ ಸಮ್ಮಿಶ್ರ ಸರ್ಕಾರ ಪತನವಾಗುತ್ತಿರಲಿಲ್ಲ ಎಂದಾಗ ಸದನದಲ್ಲಿ ನಗೆಯ ಅಲೆ ತೇಲಿ ಬಂದತು. ಕಾಂಗ್ರೆಸ್ ಸದಸ್ಯರ ಸಹಕಾರದಿಂದ … Continued