25 ಸಾವಿರಕ್ಕೂ ಹೆಚ್ಚು ಮಾತ್ರೆಗಳನ್ನ ಸೇವಿಸಿದ್ರೂ ಅನಾರೋಗ್ಯ ಕಡಿಮೆಯಾಗ್ಲಿಲ್ಲ; ಡೆತ್​​ನೋಟ್ ಬರೆದಿಟ್ಟು ಗುಂಡು ಹಾರಿಸಿಕೊಂಡು ಬಿಇಒ ಆತ್ಮಹತ್ಯೆ

ಬೆಂಗಳೂರು: ಬೆಂಗಳೂರಿನ ಯಲಹಂಕ ಬಿಇಒ ಟಿ.ಎನ್. ಕಮಲಾಕರ ಎಂಬವರು ಪಿಸ್ತೂಲ್​​ನಿಂದ ಗುಂಡು ಹಾರಿಸಿಕೊಂಡು ಕಮಲಾಕರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನಾರೋಗ್ಯ ಪೀಡಿತರಾಗಿದ್ದ ಬಿಇಒ ಟಿ.ಎನ್​.ಕಮಲಾಕರ್ ಮನನೊಂದುಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾರೆ. ಅನಾರೋಗ್ಯದ ಸಮಸ್ಯೆ ಸಾಕಷ್ಟು ಬಳಲಿದ್ದೆ. ಇದುವರೆಗೆ 25 ಸಾವಿರಕ್ಕೂ ಹೆಚ್ಚು ಮಾತ್ರೆಗಳನ್ನ ಸೇವಿಸಿದ್ದೇನೆ. ಅನಾರೋಗ್ಯದಿಂದ ಜೀವನವೇ ಸಾಕು ಅನ್ನಿಸಿದೆ. ನನ್ನ ಕುಟುಂಬದವರು … Continued

ಹೊಸ ವರ್ಷಾಚರಣೆ ವೇಳೆ ಬಾರ್, ಪಬ್ ರೆಸ್ಟೋರೆಂಟ್ ಬಂದ್: ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ

ಉಡುಪಿ,: ಹೊಸ ವರ್ಷಾಚರಣೆ ವೇಳೆ ಬಾರ್, ಪಬ್ ರೆಸ್ಟೋರೆಂಟ್ ಅನ್ನು ನಿರ್ಬಂಧಿಸಿದ್ದು, ಮದ್ಯ ಮಾರಾಟಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ ಹೆಗ್ಡೆ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ರಾತ್ರಿ 10 ಗಂಟೆಗೆ ಬಂದ್ ಮಾಡಲು ಆದೇಶಿಸಲಾಗಿದೆ ಹಾಗೂ ಶೇ. 50ರಷ್ಟು ಗ್ರಾಹಕರಿಗೆ ಮಾತ್ರ ಅವಕಾಶ ಎಂದು ಸರ್ಕಾರ ಹೇಳಿದೆ. … Continued

ಭದ್ರಾವತಿ: ನಾಲ್ಕು ದಶಕದ ಬಳಿಕ ಹಿಂದೂ ಧರ್ಮಕ್ಕೆ ವಾಪಸ್ಸಾದ ಕುಟುಂಬ

ಶಿವಮೊಗ್ಗ: ಭದ್ರಾವತಿ ತಾಲೂಕು ಅಂತರಗಂಗೆ ಗ್ರಾಮದ ನಿವಾಸಿಗಳಾದ ಜಯಶೀಲನ್ ಮತ್ತು ಜಯಮ್ಮ ಎಂಬವರು ತಮ್ಮ ಕುಟುಂಬದ ಸಮೇತ ಕ್ರೈಸ್ತ ಧರ್ಮದಿಂದ ಹಿಂದೂ‌ ಧರ್ಮಕ್ಕೆ ಮರಳಿ ಬಂದಿದ್ದಾರೆ. ಜಯಶೀಲನ್ ಅವರ ಕುಟುಂಬ ಮೂಲತಃ ಹಿಂದೂ ಧರ್ಮದವರೇ ಆಗಿದ್ದರಂತೆ. ಇವರ ತಂದೆ ಏಳುಮಲೈ 1980ರಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದರಂತೆ. ನಂತರ ಕುಟುಂಬದವರು ಯಾರೂ ಸಹ ಚರ್ಚ್​ಗೆ ಹೋಗದೆ, ಹಿಂದೂ … Continued

ಕರ್ನಾಟಕದಲ್ಲಿ ಜನವರಿ 3 ರಿಂದ 15ರಿಂದ18 ವರ್ಷದ ಮಕ್ಕಳಿಗೆ ಲಸಿಕೆ ನೀಡಿಕೆ ಪ್ರಕ್ರಿಯೆ ಆರಂಭ

ಬೆಂಗಳೂರು: ಮೊದಲನೇ ಹಂತದಲ್ಲಿ 15ರಿಂದ18 ವರ್ಷದ ಮಕ್ಕಳಿಗೆ ಲಸಿಕೆ ನೀಡಿಕೆ ಪ್ರಕ್ರಿಯೆ ಆರಂಭಿಸಲಿದ್ದು, ಜನವರಿ 3 ರಿಂದ ಮೊದಲ ಹಂತದಲ್ಲಿ ಮಕ್ಕಳಿಗೆ ಲಸಿಕೆ ನೀಡಲು ಚಾಲನೆ ನೀಡಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್​ ತಿಳಿಸಿದ್ದಾರೆ. ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ 15-18 ವರ್ಷದ 45 ಲಕ್ಷ ಜನ ಮಕ್ಕಳಿದ್ದಾರೆ. ಅವರಿಗೆಲ್ಲ … Continued

14 ತಿಂಗಳ ಬಳಿಕ ಮಾಲೀಕನ ಕರೆಗೆ ಓಡೋಡಿ ಬಂದ ಆನೆಗಳ ಹಿಂಡು…! ಹೃದಯ ಸ್ಪರ್ಶಿ ವಿಡಿಯೊ ವೈರಲ್‌

ಪ್ರಾಣಿಗಳ ಪ್ರೀತಿ ನಿಷ್ಕಲ್ಮಷ. ಅದರಲ್ಲಿಯೂ ನಾಯಿ, ಆನೆ ಮೊದಲಾದ ಪ್ರಾಣಿಗಳು ತಮ್ಮನ್ನು ಸಾಕಿದ ಮಾಲೀಕರಿಗೆ ವಿಧೇಯರಾಗಿ, ಅವರ ಪ್ರೀತಿಗೆ, ಕಾಳಜಿಗೆ ತಮ್ಮದೇ ರೀತಿಯಲ್ಲಿ ಪ್ರೀತಿ ವ್ಯಕ್ತಪಡಿಸುತ್ತವೆ. ಈಗ ಸಾಮಾಜಿಕ ಜಾಲತಾಣದಲ್ಲಿ ಇಂಥದ್ದೇ ಒಂದು ವಿಡಿಯೋ ವೈರಲ್‌ ಆಗಿದೆ. 14 ತಿಂಗಳ ಬಳಿಕ ತಮ್ಮ ಮಾಲೀಕನ ಕಂಡ ಆನೆಗಳು ಆತನ ಪ್ರೀತಿಯ ಕರೆಗೆ ಸ್ಪಂದಿಸಿ ಓಡೋಡಿ ಬರುವ … Continued

ಹತ್ತಿರದ ಪುರುಷ ಸಂಬಂಧಿಗಳ ಬೆಂಗಾವಲು ಇರದೆ ಮಹಿಳೆಯರು ದೂರ ಪ್ರಯಾಣ ಮಾಡುವಂತಿಲ್ಲ: ತಾಲಿಬಾನ್‌

ಕಾಬೂಲ್ (ಅಫ್ಘಾನಿಸ್ತಾನ): ಕಡಿಮೆ ದೂರದ ಹೊರತಾಗಿ ಬೇರೆ ಎಲ್ಲಿಗಾದರೂ ಪ್ರಯಾಣಿಸಲು ಬಯಸುವ ಮಹಿಳೆಯರಿಗೆ ಹತ್ತಿರದ ಪುರುಷ ಸಂಬಂಧಿ ಜೊತೆಗಿರದ ಹೊರತು ಅವರು ಪ್ರಯಾಣಿಸಬಾರದು ಎಂದು ಅಫ್ಘಾನಿಸ್ತಾನದ ತಾಲಿಬಾನ್ ಅಧಿಕಾರಿಗಳು ಭಾನುವಾರ ಹೇಳಿದ್ದಾರೆ. ಸದ್ಗುಣ ಪ್ರಚಾರ ಸಚಿವಾಲಯವು ಹೊರಡಿಸಿದ ಮಾರ್ಗದರ್ಶನದಲ್ಲಿ, ಇಸ್ಲಾಮಿಕ್ ಹಿಜಾಬ್‌ಗಳನ್ನು ಧರಿಸಿರುವ ಮಹಿಳೆಯರಿಗೆ ಮಾತ್ರ ಪ್ರಯಾಣಕ್ಕೆ ಅನುಮತಿಸಲು ಎಲ್ಲಾ ವಾಹನ ಮಾಲೀಕರಿಗೆ ಸೂಚನೆ ನೀಡಲಾಗಿದೆ. … Continued

ನೂಡಲ್ಸ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ: 6 ಕಾರ್ಮಿಕರು ಸಾವು

ಪಾಟ್ನಾ: ನೂಡಲ್ಸ್ ತಯಾರಿಕಾ ಕಾರ್ಖಾನೆಯ ಬಾಯ್ಲರ್ ಸ್ಫೋಟಗೊಂಡು 6 ಕಾರ್ಮಿಕರು ಮೃತಪಟ್ಟ ಬಿಹಾರದಲ್ಲಿ ಘಟನೆ ಸಂಭವಿಸಿದೆ. ಬಿಹಾರದ ಮುಜಾಫರ್‍ಪುರ ಜಿಲ್ಲೆಯ ನೂಡಲ್ಸ್ ತಯಾರಿಕಾ ಕಾರ್ಖಾನೆಯಲ್ಲಿಶನಿವಾರ ರಾತ್ರಿ 10 ಗಂಟೆಗೆ ಸುಮಾರಿಗೆ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಆರು ಕಾರ್ಮಿಕರು ಮೃತಪಟ್ಟಿದ್ದಾರೆ. ಸ್ಫೋಟದ ಸದ್ದು ಸುಮಾರು 5 ಕಿ.ಮೀ ದೂರದ ವರೆಗೆ ಕೇಳಿಸಿದೆ. ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ … Continued

ಕೃಷಿ ಕಾಯ್ದೆಗಳನ್ನು ಮರಳಿ ತರುವುದಿಲ್ಲ: ವಿವಾದದ ಬಳಿಕ ಕೇಂದ್ರ ಕೃಷಿ ಸಚಿವರ ಸ್ಪಷ್ಟನೆ

ಗ್ವಾಲಿಯರ್: ಮೂರು ಕೃಷಿ ಕಾಯ್ದೆಗಳನ್ನು ಮತ್ತೆ ಜಾರಿಗೆ ತರುವ ಸಾಧ್ಯತೆ ಇದೆ ಎಂಬ ಸುಳಿವು ನೀಡಿದ್ದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ನೀಡಿದ್ದಾರೆ. ತಿದ್ದುಪಡಿ ಮಾಡಲಾದ ರೀತಿಯಲ್ಲಿ ಮತ್ತೆ ಜಾರಿಗೆ ತರುವುದಿಲ್ಲ ಎಂದು ಅವರು ಶನಿವಾರ ಸ್ಪಷ್ಟಪಡಿಸಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆ … Continued

ಮಹತ್ವದ್ದು…ಹೊಸ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ.. ಯಾವುದಕ್ಕೆ ಅನುಮತಿ.? ಯಾವುದಕ್ಕೆ ಇಲ್ಲ.? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯ ಸರ್ಕಾರದಿಂದ ಓಮಿಕ್ರಾನ್ ವೈರಸ್‌ ನಿಯಂತ್ರಣ ಮಾಡುವ ಉದ್ದೇಶದಿಂದ ಡಿಸೆಂಬರ್ 28, 2021ರಿಂದ ಜಾರಿಗೆ ಬರುವಂತೆ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಅಲ್ಲದೇ ಡಿಸೆಂಬರ್ 30 ರಿಂದ ಜನವರಿ 2ರ ವರೆಗೆ ರೆಸ್ಟೋರೆಂಟ್, ಹೋಟೆಲ್, ಕ್ಲಬ್, ಪಬ್ ಗಳಿಗೆ ಶೇ.50ರಷ್ಟು ಜನರಿಗೆ ಮಿತಿ ಹೇರಿ ಹೊಸ ಮಾರ್ಗಸೂಚಿಯನ್ನು ಜಾರಿಗೊಳಿಸಲಾಗಿದೆ. ಈ ಸಮಯದಲ್ಲಿ ಯಾವುದಕ್ಕೆ ಅನುಮತಿ ಇದೆ … Continued

ಪನ್ವೇಲ್‌ ಫಾರ್ಮ್‌ಹೌಸ್‌ನಲ್ಲಿ ಹಾವಿನಿಂದ ಕಚ್ಚಿಸಿಕೊಂಡ ನಟ ಸಲ್ಮಾನ್ ಖಾನ್

ಮುಂಬೈ: ನಟ ಸಲ್ಮಾನ್ ಖಾನ್ ಅವರಿಗೆ ಪನ್ವೇಲ್‌ ಫಾರ್ಮ್‌ಹೌಸ್‌ನಲ್ಲಿ ಹಾವು ಕಚ್ಚಿದೆಯಂತೆ. ಇಂದು ಬೆಳಗ್ಗೆ (ಭಾನುವಾರ) ಈ ಘಟನೆ ನಡೆದಿದೆ. ಎಂಜಿಎಂ ಆಸ್ಪತ್ರೆಯಲ್ಲಿ ಸಲ್ಮಾನ್ ಖಾನ್ ಚಿಕಿತ್ಸೆ ಪಡೆದಿದ್ದಾರೆ. ಇಂದು ಬೆಳಗ್ಗೆ 9 ಗಂಟೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಲ್ಮಾನ್ ಖಾನ್ ಕೈಗೆ ಹಾವು ಕಚ್ಚಿದ್ದು, ಈಗ ಸಲ್ಮಾನ್ ಆರೋಗ್ಯ ಚೆನ್ನಾಗಿದೆ ಎಂದು ಹೇಳಲಾಗಿದೆ. ಮನೆಯಲ್ಲಿ … Continued