ಆಗಸ್ಟ್ 31ರೊಳಗೆ ಅಫ್ಘಾನಿಸ್ತಾನದಿಂದ ಎಲ್ಲ ಪಡೆಗಳನ್ನು ಹಿಂಪಡೆಯಿರಿ: ಅಮೆರಿಕಕ್ಕೆ ಸ್ಥಳಾಂತರದ ಗಡುವು ವಿಸ್ತರಿಸಲು ತಾಲಿಬಾನ್ ನಿರಾಕರಣೆ

ಕಾಬೂಲ್‌: ಅಮೆರಿಕವು ತನ್ನ ಸ್ಥಳಾಂತರಿಸುವಿಕೆಯನ್ನು ಪೂರ್ಣಗೊಳಿಸಬೇಕು ಮತ್ತು ಆಗಸ್ಟ್ 31 ರೊಳಗೆ ಅಫ್ಘಾನಿಸ್ತಾನದಿಂದ ಹಿಂತೆಗೆದುಕೊಳ್ಳಬೇಕು ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ. ಅಮೆರಿಕದ ಬಿಡೆನ್‌ ಆಡಳಿತವು ಈ ದಿನಾಂಕವನ್ನು ಎಲ್ಲ ಅಮೆರಿಕನ್ ಪಡೆಗಳನ್ನು ಹಿಂತೆಗೆದುಕೊಳ್ಳಲು ನಿಗದಿಪಡಿಸಿದೆ. ಎಪಿ ವರದಿಯ ಪ್ರಕಾರ, ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಅವರು ತಮ್ಮ ಗುಂಪು “ಯಾವುದೇ ವಿಸ್ತರಣೆಗಳನ್ನು” ಒಪ್ಪಿಕೊಳ್ಳುವುದಿಲ್ಲ … Continued

ಕಾಂಚನಾ ಸಿನೆಮಾ ಖ್ಯಾತಿಯ ರಷ್ಯಾ ನಟಿ ಗೋವಾದಲ್ಲಿ ನಿಗೂಢ ಸಾವು

ಪಣಜಿ: ಕೆಲವು ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ್ದ ರಷ್ಯಾ ನಟಿ ಮತ್ತು ರೂಪದರ್ಶಿ ಅಲೆಗ್ಸಾಂಡ್ರಾ ಜವಿ ಗೋವಾದಲ್ಲಿ ನಿಗೂಢ ಸಾವಿಗೀಡಾಗಿದ್ದಾರೆ. ಉತ್ತರ ಗೋವಾದ ಸೋಯಿಲಿಮ್ ಗ್ರಾಮದ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ 24 ವರ್ಷದ ನಟಿಯ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರೂಮಿನಲ್ಲಿದ್ದ ಆಕೆಯ ಬಾಯ್ ಫ್ರೆಂಡ್ ಮತ್ತು ಚೆನ್ನೈನ … Continued

ಪುಣೆಯಲ್ಲಿ ತಮ್ಮ ಗುರು ಬೆಂಗಳೆ ಕಾಶೀನಾಥ ನಾಯ್ಕ ಮನೆಗೆ ಭೇಟಿ ನೀಡಿದ ಒಲಿಂಪಿಕ್ಸ್‌ ಚಿನ್ನದ ಹುಡುಗ ನೀರಜ್​ ಚೋಪ್ರಾ

ಕಾರವಾರ: ಒಲಿಂಪಿಕ್ಸ್ ನಲ್ಲಿ ಜಾವೆಲಿನ್‌ ಎಸೆತದಲ್ಲಿ ಚಿನ್ನ ಗೆದ್ದ ನೀರಜ್ ಛೋಪ್ರಾ ಇಂದು (ಮಂಗಳವಾರ) ಉತ್ತರ ಕನ್ನಡ ಜಿಲ್ಲೆಯ ಮೂಲದ ತಮ್ಮ ಗುರುವಿಗೆ ಧನ್ಯವಾದ  ಸಲ್ಲಿಸಿದ್ದಾರೆ. ನೀರಜ್​ ಚೋಪ್ರಾ (neeraj chopra). ತಮ್ಮ ಮಾಜಿ ಕೋಚ್​ ಕಾಶಿನಾಥ್ (kashinath)​ ಅವರನ್ನು ಭೇಟಿಯಾಗಿ ಗಮನ ಸೆಳೆದಿದ್ದಾರೆ. 2015ರಿಂದ ಸುಮಾರು ಮೂರು ವರ್ಷಗಳ ಕಾಲ ಜಾವಲಿನ್ ಎಸೆತದ ತರಬೇತಿ … Continued

ಕರ್ನಾಟಕದ 11 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಂಜೆ ಕಾಲೇಜು ಪ್ರಾರಂಭಕ್ಕೆ ಅನುಮೋದನೆ

ಬೆಂಗಳೂರು: ರಾಜ್ಯದ 11 ಮಹಾನಗರ ಪಾಲಿಕೆ ವ್ಯಾಪ್ತಿಯ 11 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಂಜೆ ಕಾಲೇಜುಗಳನ್ನು ಪ್ರಾರಂಭಿಸಲು ಸರ್ಕಾರ ಅನುಮೋದನೆ ನೀಡಿದೆ. 11 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಮೂಲಸೌಕರ್ಯ ಬಳಸಿಕೊಂಡು ವಿದ್ಯಾರ್ಥಿಗಳು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುವ ಹಾಗೂ ಉತ್ತಮ ಉದ್ಯೋಗ ಅವಕಾಶಗಳಿಗೆ ಎಡೆ ಮಾಡಿಕೊಡುವ ಬಿಕಾಂ ಮತ್ತು ಬಿಸಿಎ ಕೋರ್ಸ್‍ಗಳನ್ನು ಪ್ರಾರಂಭಿಸಲು ಉನ್ನತ … Continued

ಅಫಘಾನ್ ಅವಶೇಷಗಳ ನಡುವೆ ತಾಲಿಬಾನ್ ವಿರುದ್ಧ ಎತ್ತರವಾಗಿ ನಿಂತ ಪಂಜಶೀರ್‌ ಕಣಿವೆ..ಇಲ್ಲಿದೆ ಮಾಹಿತಿ

ಅಫ್ಘಾನಿಸ್ತಾನದ ಭೂಪಟವನ್ನು ನೋಡಿದರೆ, ಕಾಬೂಲ್‌ನ ಉತ್ತರಕ್ಕೆ ರಾಕೆಟ್ ಹೋಲುವ ಸರೋವರದಂತಹ ರಚನೆ ಕಾಣುತ್ತದೆ. ಇದು ಪಂಜಶೀರ್ ಕಣಿವೆ. ಈ ಸಣ್ಣ ಪ್ರಾಂತ್ಯವು ತಾಲಿಬಾನ್‌ಗಳಿಗೆ ಇನ್ನೂ ಕಂಟಕವಾಗಿದೆ. ಏಕೆಂದರೆ ಅವರು ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದರು ಪಂಜಶೀರ್‌ ಕಣಿವೆ ಸ್ವಾಧೀನ ಪಡಿಸಿಕೊಳ್ಳುವುದು ಇನ್ನೂ ಸಾಧ್ಯವಾಗಿಲ್ಲ. ಪಂಜಶೀರ್‌ ಎಂದರೆ ಐದು ಸಿಂಹಗಳು ಎಂದು ಅರ್ಥ, ಪಂಜಶೀರ್ ತಾಲಿಬಾನ್ ವಿರುದ್ಧ “ಪ್ರತಿರೋಧ” … Continued

ಆಹಾರ ತಯಾರಿಕಾ ಫ್ಯಾಕ್ಟರಿ ಬಾಯ್ಲರ್ ಸ್ಫೋಟ ಘಟನೆ: ಮೃತರ ಸಂಖ್ಯೆ 4ಕ್ಕೆ ಏರಿಕೆ

ಬೆಂಗಳೂರು: ನಗರದ ಆಹಾರ ತಯಾರಿಕಾ ಕಾರ್ಖಾನೆಯೊಂದರಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಬಾಯ್ಲರ್ ಸ್ಫೋಟದಿಂದ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿದೆ. ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಎಂಎಂ ಫುಡ್ ಕಾರ್ಖಾನೆಯಲ್ಲಿ ಸೋಮವಾರ ಮಧ್ಯಾಹ್ನ ಬಾಯ್ಲರ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರು. ಗಂಭೀರ ಗಾಯಗೊಂಡಿದ್ದ ಮತ್ತಿಬ್ಬರು ಇಂದು (ಮಂಗಳವಾರ) ಮುಂಜಾನೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. … Continued

ಮಧ್ಯಪ್ರದೇಶ: ವಾಲ್ಮೀಕಿಗೆ ತಾಲಿಬಾನ್ ಹೋಲಿಸಿದ ಕಾರಣಕ್ಕೆ ಉರ್ದು ಕವಿ ಮುನವ್ವರ್ ರಾಣಾ ವಿರುದ್ಧ ಪ್ರಕರಣ ದಾಖಲು

ಮಧ್ಯಪ್ರದೇಶ ಪೊಲೀಸರು ಉರ್ದು ಕವಿ ಮುನವ್ವರ್ ರಾಣಾ ವಿರುದ್ಧ ರಾಮಾಯಣ ಬರೆದ ಮಹರ್ಷಿ ವಾಲ್ಮೀಕಿಯನ್ನು ತಾಲಿಬಾನ್‌ಗೆ ಹೋಲಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿಜೆಪಿಯ ಪರಿಶಿಷ್ಟ ಜಾತಿ ಕೋಶದ ರಾಜ್ಯ ಕಾರ್ಯದರ್ಶಿ ಸುನಿಲ್ ಮಾಳವೀಯ ಮತ್ತು ವಾಲ್ಮೀಕಿ ಸಮುದಾಯದ ಇತರ ಸದಸ್ಯರು ನೀಡಿದ ದೂರಿನ … Continued

ಮಹಾ ಸಿಎಂ ಉದ್ಧವ್‌ ವಿರುದ್ಧ ‘ಕಪಾಳ ಮೋಕ್ಷದ ಕಾಮೆಂಟ್‌: ಕೇಂದ್ರ ಸಚಿವ ನಾರಾಯಣ ರಾಣೆ ಬಂಧನ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಕಾರಣಕ್ಕೆ ಕೇಂದ್ರ ಸಚಿವ ನಾರಾಯಣ್ ರಾಣೆ ಅವರನ್ನು ಬಂಧಿಸಲಾಗಿದೆ. ಸಚಿವ ನಾರಾಯಣ್ ರಾಣೆ ಅವರು ತಮ್ಮ ವಿರುದ್ಧದ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ನಾರಾಯಣ್ ರಾಣೆಯನ್ನು … Continued

ಕಾಬೂಲ್ ನಲ್ಲಿ ಅಪಹರಿಸಿದ ಉಕ್ರೇನ್ ವಿಮಾನ ಇರಾನಿಗೆ ಒಯ್ದ ಅಪರಿಚಿತ ಶಸ್ತ್ರಧಾರಿಗಳು :ಸಚಿವ

ಉಕ್ರೇನಿಯನ್ನರನ್ನು ಸ್ಥಳಾಂತರಿಸಲು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ಗೆ ಆಗಮಿಸಿದ ಉಕ್ರೇನ್‌ ವಿಮಾನವನ್ನು ಕಳೆದ ಭಾನುವಾರ ಇರಾನ್‌ಗೆ ಅಪರಿಚಿತ ಜನರು ಅಪಹರಿಸಿದ್ದಾರೆ ಎಂದುಉಕ್ರೇನ್‌ನ ಉಪ ವಿದೇಶಾಂಗ ಸಚಿವ ಯೆವ್ಗೆನಿ ಯೆನಿನ್ ಅವರನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ಹೇಳಿವೆ. ಕಳೆದ ಭಾನುವಾರ, ನಮ್ಮ ವಿಮಾನವನ್ನು ಅಪಹರಿಸಿದ್ದಾರೆ. ಇದು ಉಕ್ರೇನಿಗೆ ವಾಯುಯಾನ ಮಾಡುವ ಬದಲು ಗುರುತಿಸಲಾಗದ ಪ್ರಯಾಣಿಕರ ಗುಂಪಿನೊಂದಿಗೆ ಇರಾನ್‌ಗೆ ಹಾರಿತು. … Continued

ನಾಳೆ ದೆಹಲಿಗೆ ತೆರಳಲಿರುವ ಸಿಎಂ ಬೊಮ್ಮಾಯಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ (ಬುಧವಾರ) ದೆಹಲಿಗೆ ತೆರಳಲಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ನಾಳೆ ಸಂಜೆ ದೆಹಲಿಗೆ ತೆರಳಿ ಹಲವು ನಾಯಕರ ಭೇಟಿಯಾಗಿ, ಉಳಿದಿರುವ ನಾಲ್ಕು ಸಚಿವ ಸ್ಥಾನಗಳ ವಿಚಾರವಾಗಿ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರದ ಆರೋಗ್ಯ ಸಚಿವರು, ವಿತ್ತ ಸಚಿವರು, ಜಲಶಕ್ತಿ ಸಚಿವರು ಮತ್ತು ಕೃಷಿ ಸಚಿವರನ್ನು … Continued