ಕೊರೋನಾ: ೪೩೦ ಜನರಿಗೆ ಸೋಂಕು, ೭ ಸಾವು

ಬೆಂಗಳೂರು: ರಾಜ್ಯದಲ್ಲಿ ಕಳೆದ ೨೪ ತಾಸಿನಲ್ಲಿ 430 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಸೋಂಕಿನಿಂದ ಏಳು ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 12,251ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. 340 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ 228 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 4,01,323ಕ್ಕೆ … Continued

ಹಂಪಿಯಲ್ಲಿ ಇನ್ನಷ್ಟು ಉತ್ಖನನ ನಡೆಯಲಿ: ಆನಂದ ಸಿಂಗ್‌

ಹೊಸಪೇಟೆ: ವಿಜಯನಗರದ ರಾಜಧಾನಿಯಾಗಿದ್ದ ಐತಿಹಾಸಿಕ ಹಂಪಿಯ ಅಭಿವೃದ್ಧಿಗೆ ಕೇಂದ್ರ ಸರಕಾರ 480 ಕೋಟಿ ರೂ.ನೀಡಿದೆ. ಹಂಪಿಯ ಇತಿಹಾಸವನ್ನು ಸಂಶೋಧಿಸುವ ಕೆಲಸವಾಗಬೇಕು ಎಂದು ಸಚಿವ ಆನಂದಸಿಂಗ್ ಹೇಳಿದರು. ಅವರು ಗುರುವಾರ ಐತಿಹಾಸಿಕ ಹಂಪಿಯ ವಿರೂಪಾಕ್ಷ ದೇವಸ್ಥಾನದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪುರಂದರದಾಸರ ಆರಾಧನೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ವಿಜಯನಗರ ಸಾಮ್ರಾಜ್ಯದ … Continued

ಮಿತಿ ಹೆಚ್ಚಳ: ವಿಮಾನ ಪ್ರಯಾಣ ಈಗ ದುಬಾರಿ

ನವ ದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಗುರುವಾರ ದೇಶೀಯ ವಿಮಾನಗಳ ಮೇಲಿನ ಮಿತಿಗಳನ್ನು ಶೇಕಡಾ 10 ರಿಂದ 30 ರಷ್ಟು ಹೆಚ್ಚಿಸಿರುವುದರಿಂದ ಪ್ರಯಾಣಿಕರು ಈಗಿನಿಂದ ವಿಮಾನ ಪ್ರಯಾಣಕ್ಕಾಗಿ ಹೆಚ್ಚಿನ ಹಣ ತೆರಬೇಕಾಗುತ್ತದೆ. ಈ ಹೊಸ ಮಿತಿಗಳು “ಮಾರ್ಚ್ 31, 2021 ರ ವರೆಗೆ ಅಥವಾ ಮುಂದಿನ ಆದೇಶದ ವರೆಗೆ” ಜಾರಿಯಲ್ಲಿರುತ್ತವೆ ಎಂದು ಸಚಿವಾಲಯ ಗುರುವಾರ ತನ್ನ … Continued

ಕೃಷಿ ಕಾನೂನಿಂದ ಮಂಡಿ ವ್ಯವಸ್ಥೆ, ರೈತರ ಹಿತಕ್ಕೆ ಧಕ್ಕೆ: ರಾಹುಲ್‌ ವಾಗ್ದಾಳಿ

ನವ ದೆಹಲಿ: ವಿವಾದಾತ್ಮಕ ಕೃಷಿ ಕಾನೂನುಗಳ ಬಗ್ಗೆ ಲೋಕಸಭೆಯಲ್ಲಿ ಕೇಂದ್ರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ಕಾನೂನುಗಳು “ರೈತರು, ಸಣ್ಣ, ಮಧ್ಯಮ ಉದ್ಯಮಿಗಳು ಮತ್ತು ಮಂಡಿಗಳನ್ನು ನಾಶ ಪಡಿಸಲು” ಉದ್ದೇಶಿಸಿದಂತಿದೆ ಎಂದು ಆರೋಪಿಸಿದರು. ಈ ಸರ್ಕಾರ ಕೇವಲ ನಾಲ್ಕು ಜನರಿಂದ ನಡೆಯುವಂತಿದೆ. ಅದು ಹಮ್‌ ದೋ, ಹಮಾರೆ … Continued

ಧಾರವಾಡ ಬೈಪಾಸ್ ಅಗಲೀಕರಣಕ್ಕೆ ಟೆಂಡರ್ ಕರೆಯಲು ಗಡ್ಕರಿ ಸೂಚನೆ

ಹುಬ್ಬಳ್ಳಿ : ಧಾರವಾಡ ಬೈಪಾಸ್ ಅಗಲೀಕರಣಕ್ಕೆ ಟೆಂಡರ್ ಕರೆಯಲು ಕೇಂದ್ರ ಸಾರಿಗೆ ಸಚಿವ ಗಡ್ಕರಿ ಸೂಚನೆ ನೀಡಿದ್ದಾರೆ. ಗುರುವಾರ ವದೆಹಲಿಯ ಹೆದ್ದಾರಿ ಮಂತ್ರ್ರಾಲಯದಲ್ಲಿ ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಹಾಗೂ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ ಜೋಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹುಬ್ಬಳ್ಳಿ-ಧಾರವಾಡ ಬೈಪಾಸ್ ೩೦ ಕಿಮೀ ರಸ್ತೆಯನ್ನು ಷಟ್ಪಥ ರಸ್ತೆಯನ್ನಾಗಿ … Continued

ಹುಬ್ಬಳ್ಳಿಗೆ ಇಂದು ಸಭಾಪತಿ ಹೊರಟ್ಟಿ

ಹುಬ್ಬಳ್ಳಿ :ಕರ್ನಾಟಕ ವಿಧಾನ ಪರಿಷತ್ತಿಗೆ ಸಭಾಪತಿಯಾಗಿ ಆಯ್ಕೆಯಾದ ನಂತರ ಪ್ರಪ್ರಥಮಬಾರಿಗೆ ಬಸವರಾಜ ಹೊರಟ್ಟಿಯವರು ಫೆ.೧೨ರಂದು ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಬೆಂಗಳೂರಿನಿಂದ ರಸ್ತೆಯ ಮೂಲಕ ಹೊರಟು ಮಧ್ಯಾಹ್ನ ೩ ಗಂಟೆಗೆ ಹುಬ್ಬಳ್ಳಿಯ ಗಬ್ಬೂರ ಕ್ರಾಸ್ ಮೂಲಕ ನಗರ ಪ್ರವೇಶಿಸಲಿದ್ದಾರೆ. ಆ ಸಮಯದಲ್ಲಿ ಹೊರಟ್ಟಿಯವರ ಅಭಿಮಾನಿಬಳಗ, ಹಿತೈಷಿಗಳು, ಹಾಗೂ ಶಿಕ್ಷಕವೃಂದ ಅಪಾರ ಸಂಖ್ಯೆಯಲ್ಲಿ ಸೇರಿ ಅದ್ಧೂರಿಯಾಗಿ ಸ್ವಾಗತಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. … Continued

ಪಿಪಿಪಿ ಸಹಭಾಗಿತ್ವದಲ್ಲಿ ೧೫೦೦ ಕೋಟಿ ರೂ.ವೆಚ್ಚದಲ್ಲಿ ಕಂಠೀರವ ಕ್ರೀಡಾಂಗಣದ ಉನ್ನತೀಕರಣ

ಬೆಂಗಳೂರು:ಸಾರ್ವಜನಿಕ -ಖಾಸಗಿ ಸಹಭಾಗಿತ್ವದಲ್ಲಿ ಕಂಠೀರವ ಕ್ರೀಡಾಂಗಣವನ್ನು 1500 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಿಸಲು ಉದ್ದೇಶಿಸಲಾಗಿದೆ ಎಂದು ಕ್ರೀಡಾ ಮತ್ತು ಯುವಜನ ಖಾತೆ ಸಚಿವ ನಾರಾಯಣಗೌಡ ಹೇಳಿದ್ದಾರೆ ಗುರುವಾರ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಮಾತನಾಡಿದ ಅವರು,ಈಗಾಗಲೆ ನೀಲ ನಕ್ಷೆ ಸಿದ್ದವಾಗಿದ್ದು, ಸದ್ಯ ಮಾತುಕತೆ ಹಂತದಲ್ಲಿದೆ. ಶೀಘ್ರದಲ್ಲಿಯೇ ಅಂತಿಮ ರೂಪ ನೀಡಲಾಗುವುದು. ಕ್ರೀಡಾಂಗಣವನ್ನು ಪಿಪಿಪಿ ಮಾದರಿಯಲ್ಲಿ … Continued

ಯುಜಿಸಿ ಹಿಂಬಾಕಿ ಪಾವತಿ ಬೇಡಿಕೆ ಶೀಘ್ರವೇ ಈಡೇರಿಕೆ

ಬೆಂಗಳೂರು:ಯುಜಿಸಿ ವೇತನ ಹಿಂಬಾಕಿ ಪಾವತಿ, ವರ್ಗಾವಣೆ, ಪ್ರಾಂಶುಪಾಲರ ನೇಮಕ ಸೇರಿದಮತೆ ಸರ್ಕಾರಿ ಕಾಲೇಜು ಪ್ರಾಧ್ಯಾಪಕರ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು. ಪ್ರಾಧ್ಯಾಪಕರ ರಾಷ್ಟ್ರೀಯ ಪಿಂಚಣಿ ಯೋಜನೆಗೆ ರಾಜ್ಯ ಸರ್ಕಾರದ ಪಾಲು ತುಂಬಿಲ್ಲ. ತಕ್ಷಣ ತುಂಬಲಾಗುವುದು. 2006ರ ಯುಜಿಸಿ ವೇತನ ಹಿಂಬಾಕಿ ಮತ್ತು 2019ರ ಏಪ್ರಿಲ್ ತಿಂಗಳಿನಿಂದ ಪಾವತಿಯಾಗಬೇಕಿರುವ ವೇತನ ಕುರಿತು ಹಣಕಾಸು … Continued

ಪಿಎಂ ಆವಾಸ್ ಯೋಜನೆ: 15 ದಿನದಲ್ಲಿ ಲೀಡ್ ಬ್ಯಾಂಕ್ ಅರ್ಜಿ ಸಲ್ಲಿಕೆಗೆ ಸೂಚನೆ

ಬೆಂಗಳೂರು: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಸಲ್ಲಿಕೆಯಾದ ಅರ್ಜಿಗಳನ್ನು 15 ದಿನದೊಳಗಾಗಿ ಆಯಾ ಜಿಲ್ಲೆಗಳ ಲೀಡ್ ಬ್ಯಾಂಕ್ ಗಳಿಗೆ ಸಲ್ಲಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಚಿಸಿದ್ದಾರೆ. ಆಯಾ ಜಿಲ್ಲಾ ಲೀಡ್ ವ್ಯವಸ್ಥಾಪಕರು ಅರ್ಜಿಗಳನ್ನು ವಿವಿಧ ಬ್ಯಾಂಕ್ ಗಳಿಗೆ ಕಳುಹಿಸಿ, ತ್ವರಿತವಾಗಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು. ಗುರುವಾರ ಪ್ರಧಾನ ಮಂತ್ರಿ ಆವಾಸ್ ಮತ್ತು ಪ್ರಧಾನಮಂತ್ರಿ ಸ್ವನಿಧಿ ಯೋಜನೆಗಳ ಪ್ರಗತಿ … Continued

ಎಫ್‍ಡಿಎ ಪ್ರಶ್ನೆಪತ್ರಿಕೆ ಸೋರಿಕೆ :ಮತ್ತೊಬ್ಬನ ಸೆರೆ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‍ಸಿ) ನಡೆಸುವ ಎಫ್‍ಡಿಎ ಹುದ್ದೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ನಿವಾಸಿ ವೆಂಕಟೇಶ್ ಬಂಧಿತ ಆರೋಪಿ. ಈತ ಈಗಾಗಲೇ ಬಂಧಿತನಾಗಿರುವ ಆರೋಪಿ ರಾಚಪ್ಪನ ಚಿಕ್ಕಪ್ಪನ ಮಗ. ಆರೋಪಿ ವೆಂಕಟೇಶ್ ಸಹ ಎಫ್‍ಡಿಎ ಪರೀಕ್ಷೆ ತೆಗೆದುಕೊಂಡಿದ್ದ. ಈತನ … Continued