ಮೀಸಲಾತಿ ಬೇಡಿಕೆ: ಕಾನೂನು ಚೌಕಟ್ಟಿನೊಳಗೆ ನ್ಯಾಯ ಒದಗಿಸುವ ಭರವಸೆ

ಮೈಸೂರು:ರಾಜ್ಯದಲ್ಲಿ ವಿವಿಧ ಸಮುದಾಯಗಳು ಮೀಸಲಾತಿ ಹೋರಾಟ ಆರಂಭಿಸಿವೆ. ಎಲ್ಲಾ ಸಮುದಾಯಗಳಿಗೂ ನ್ಯಾಯ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ‌ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಮೀಸಲಾತಿ ಹೋರಾಟ ಸಂಬಂಧ ತಜ್ಞರ ಜೊತೆ ಚರ್ಚೆಗಳು ನಡೆದಿವೆ. ಎಲ್ಲ ಸಮುದಾಯಗಳಿಗೆ ಕಾನೂನು ಚೌಕಟ್ಟಿನಲ್ಲಿ ಏನೆಲ್ಲ ಸಾಧ್ಯವೂ ಅದನ್ನು ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.. ಮೀಸಲಾತಿಗಾಗಿ ನಾಯಕ, ಕುರುಬ, ವೀರಶೈವ ಪಂಚಮ‌ಸಾಲಿ ಸೇರಿದಂತೆ … Continued

ಫೆ.೨೧ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಪಂಚಸಾಲಿಗಳ ಬೃಹತ್‌ ಸಮಾವೇಶ

ತುಮಕೂರು: ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ ೨ಎ ಮೀಸಲಾತಿಗಾಗಿ ಆಗ್ರಹಿಸಿ ಪಾದಯಾತ್ರೆ ಕೈಗೊಂಡಿದ್ದು, ಫೆ. ೨೧ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸುವ ತೀರ್ಮಾನವನ್ನು ಕೈಗೊಂಡಿದೆ. ನಗರದ ಸಿದ್ದಗಂಗಾ ಮಠದಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದ ಪಾದಯಾತ್ರಿಗಳುಶುಕ್ರವಾರ ಬೆಳಿಗ್ಗೆ ಶ್ರೀ ಬಸವ ಮೃತ್ಯುಂಜಯ ಸ್ವಾಮೀಜಿ, ವಚನಾನಂದ ಸ್ವಾಮೀಜಿ ಹಾಗೂ ವಿಜಯಾನಂದ ಕಾಶಪ್ಪನವರ್ ನೇತೃತ್ವದಲ್ಲಿ ಸಭೆ ನಡೆಸಿ … Continued

ಅಹಿಂದ ಕೂಗು ರಾಜಕೀಯವಾಗಿ ಅಸ್ತಿತ್ವಕ್ಕಾಗಿ

ಮೈಸೂರು: ರಾಜಕೀಯವಾಗಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮತ್ತೆ ಅಹಿಂದ ಕೂಗು ಎಬ್ಬಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು. ಜಿಲ್ಲಾ ಪ್ರತಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಹಿಂದ ಹೋರಾಟ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಸದ್ಯಕ್ಕೆ ಇದು ಅಪ್ರಸ್ತುತ ಎಂದರು. ಅಹಿಂದ ಕೂಗು ಎತ್ತುತ್ತಿರುವವರು ರಾಜಕೀಯವಾಗಿ ಮೂಲೆ ಗುಂಪಾಗಿದ್ದಾರೆ. … Continued

೪೨ ಐಎಎಸ್‌ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು:ರಾಜ್ಯ ಸರ್ಕಾರ ಮಹತ್ವದ ಬೆಳವಣಿಗೆಯಲ್ಲಿ 42 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಆಡಳಿತಕ್ಕೆ ಭರ್ಜರಿ ಸರ್ಜರಿ ಮಾಡಿದೆ. ವರ್ಗಾವಣೆಗೊಂಡ ಅಧಿಕಾರಿಗಳು ಹಾಗೂ ನಿಯುಕ್ತಿಗೊಂಡ ಸ್ಥಳಗಳು ಈ ಕೆಳಕಂಡಂತಿವೆ. ತುಷಾರ್ ಕೆ.ಗಿರಿನಾಥ್- ಪ್ರಧಾನ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ. ರಾಮ್‍ಪ್ರಸಾದ್ ಮನೋಹರ್-ವ್ಯವಸ್ಥಾಪಕ ನಿರ್ದೇಶಕರು ಕೈಗಾರಿಕಾ ಮೂಲ ಸೌಕರ್ಯ ಅಭಿವೃದ್ಧಿ ನಿಗಮ. ಆರ್.ವೆಂಕಟೇಶ್ ಕುಮಾರ್- ಜಂಟಿ ಕಾರ್ಯದರ್ಶಿ, ಕಲ್ಯಾಣ … Continued

ದೆಹಲಿ ಹಿಂಸಾಚಾರ: ಘಟನಾ ಸ್ಥಳಕ್ಕೆ ಆರೋಪಿಗಳು

ದೆಹಲಿ: ಗಣರಾಜ್ಯೋತ್ಸವದಂದು ಟ್ರಾಕ್ಟರ್‌ ರ್ಯಾಲಿ ಸಂದರ್ಭದಲ್ಲಿ ನಡೆದ ಹಿಂಸಾಚಾರದ ಪ್ರಮುಖ ಆರೋಪಿ ದೀಪ್‌ ಸಿಧು ಹಾಗೂ ಇಕ್ಬಾಲ್‌ ಸಿಂಗ್‌ ಅವರನ್ನು ದೆಹಲಿ ಪೊಲೀಸರು ಶನಿವಾರ ಘಟನಾ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಘಟನೆ ಕುರಿತು ತನಿಖೆ ನಡೆಸಲು ಕೆಂಪು ಕೋಟೆಗೆ ಇಬ್ಬರು ಆರೋಪಿಗಳನ್ನು ಕರೆದೊಯ್ದಿದ್ದಾರೆ. ಇಲ್ಲಿನ ಚಾಣಕ್ಯಪುರಿಯ ಅಪರಾಧ ದಳ ಕೇಂದ್ರ ಕಚೇರಿಯಿಂದ ತನಿಖೆ ನಡೆಸಲಾಗುತ್ತಿದೆ. ಗಣರಾಜ್ಯೋತ್ಸವದಂದು ಕೆಂಪು … Continued

ಸಿಎಎ ವಿರುದ್ಧ ಪ್ರತಿಭಟನೆ ಪ್ರಕರಣ: ದರ್ಗಾ ಮುಖ್ಯಸ್ಥನ ಬಂಧನ, ರಾಂಪುರ ಜಿಲ್ಲೆ ಉದ್ವಿಗ್ನ

ಲಕ್ನೋ: 2019ರ ಡಿಸೆಂಬರ್ 21ರಂದು ಜಿಲ್ಲೆಯಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಶನಿವಾರ ಪ್ರಸಿದ್ಧ ಹಫೀಜ್ ಷಾ ದರ್ಗಾ ಮುಖ್ಯಸ್ಥ ಶಾ ಫರ್ಹತ್ ಅಹ್ಮದ್ ಜಮಾಲಿ ಮತ್ತು ಇತರ ಮೂವರನ್ನು ಬಂಧಿಸಿದ ನಂತರ ರಾಂಪುರ್ ಜಿಲ್ಲೆಯಲ್ಲಿ ಉದ್ವಿಗ್ನತೆ ಉಂಟಾಗಿದೆ. 2019 ರ ಡಿಸೆಂಬರ್ 21 ರಂದು ಪೌರತ್ವ … Continued

ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: ಮೃತರ ಸಂಖ್ಯೆ ೧೫ಕ್ಕೆ ಏರಿಕೆ

ತಮಿಳುನಾಡಿನ ವಿರುಧ್‌ನಗರ ಜಿಲ್ಲೆಯಲ್ಲಿ ನಡೆದ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ೧೫ಕ್ಕೇರಿದೆ. 20ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು, ಅವರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ವಿರುಧ್‌ ನಗರ್ ಜಿಲ್ಲೆಯ ಸತ್ತೂರು ಬಳಿಯ ಅಚಂಕುಲಂನಲ್ಲಿರುವ ಪಟಾಕಿ ಕಾರ್ಖಾನೆಯೊಂದರಲ್ಲಿ ಶುಕ್ರವಾರ ಮಧ್ಯಾಹ್ನ 1:45ಕ್ಕೆ ಸ್ಫೋಟ ಸಂಭವಿಸಿತ್ತು. ಅಗ್ನಿಶಾಮಕ ದಳದ ಸುಮಾರು ೩೦ ಸಿಬ್ಬಂದಿ ಬೆಂಕಿ … Continued

ಸೂಕ್ತ ಸಮಯಕ್ಕೆ ಜಮ್ಮು-ಕಾಶ್ಮೀರಕ್ಕೆ ರಾಜ್ಯ ಪಟ್ಟ: ಅಮಿತ್‌ ಶಾ

ನದೆಹಲಿ: ಸೂಕ್ತ ಸಂದರ್ಭದಲ್ಲಿ ಜಮ್ಮು ಹಾಗೂ ಕಾಶ್ಮೀರಕ್ಕೆ ರಾಜ್ಯದ ಸ್ಥಾನ ನೀಡಲಾಗುವುದು ಎಂದು ಹೇಳಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಜಮ್ಮು-ಕಾಶ್ಮೀರ ಪುನರ್‌ ಸಂಘಟನೆ ತಿದ್ದುಪಡಿ ಮಸೂದೆಗೂ ರಾಜ್ಯದ ಸ್ಥಾನ ನೀಡುವುದಕ್ಕೂ ಸಂಬಂಧವಿಲ್ಲ ಎಂದು ತಿಳಿಸಿದರು. ಅವರು ಲೋಕಸಭೆಯಲ್ಲಿ ಮಾತನಾಡಿ, ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನ ನೀಡುವುದರ ಬಗ್ಗೆ ಸಂಸದರಲ್ಲಿ ಯಾವುದೇ ಸಂದೇಹಬೇಡ. ಸೂಕ್ತ ಸಮಯದಲ್ಲಿ … Continued

ವಿವಾದಾತ್ಮಕ ತೀರ್ಪು ನೀಡಿದ ನ್ಯಾಯಮೂರ್ತಿ ಬಾಂಬೆ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶೆ

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯಡಿ ಲೈಂಗಿಕ ದೌರ್ಜನ್ಯ ಪ್ರಕರಣಗಳ ಕುರಿತು ವಿವಾದಾತ್ಮಕ ತೀರ್ಪು ನೀಡಿದ ನ್ಯಾಯಮೂರ್ತಿ ಪುಷ್ಪಾ ಗಣದೇವಾಲಾ ಬಾಂಬೆ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ನಾಗ್ಪುರ ನ್ಯಾಯಪೀಠದ ಹಿರಿಯ ನ್ಯಾಯಮೂರ್ತಿ ನಿತಿನ್ ಜಮರ್ ಪ್ರಮಾಣ ವಚನ ಬೋಧಿಸಿದರು. ಈ ಹಿಂದೆ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಗಣದೇವಾಲಾ ಅವರನ್ನು … Continued

ರೈತ ಹೋರಾಟದಲ್ಲಿ ಭಿನ್ನಾಭಿಪ್ರಾಯ

ಲಖನೌ: ರೈತರ ಆಂದೋಲನವನ್ನು ಇನ್ನಷ್ಟು ತೀವ್ರಗೊಳಿಸುವ ದಿಸೆಯಲ್ಲಿ ರೈತ ಸಂಘಟನೆಗಳ ಮಧ್ಯೆ ಭಿನ್ನಾಭಿಪ್ರಾಯ ಸ್ಫೋಟಗೊಂಡಿದ್ದು, ಭಾರತೀಯ ಕಿಸಾನ್‌ ಯೂನಿಯನ್‌ ರೈಲ್‌ ರೋಕೊ ಕರೆ ನೀಡಿದ್ದರೆ, ಇದಕ್ಕೆ ಸಂಯುಕ್ತ ಕಿಸಾನ್‌ ಮೋರ್ಚಾ ವಿರೋಧ ವ್ಯಕ್ತಪಡಿಸಿದೆ. ನಾವು ರೈಲು ಅಥವಾ ಬಸ್ಸುಗಳ ಸಂಚಾರ ಸ್ಥಗಿತಗೊಳಿಸಲು ಇಚ್ಛಿಸುವುದಿಲ್ಲ. ಸಾರ್ವಜನಿಕರಿಗೆ ತೊಂದರೆ ನೀಡುವುದು ನಮ್ಮ ಉದ್ದೇಶವಲ್ಲ. ನಮ್ಮದು ಶಾಂತಿಯುತ ಹೋರಾಟ ಎಂದು … Continued