ನೀರಿನಲ್ಲೂ ಕೊರೊನಾ ವೈರಸ್‌..! ಸಬರಮತಿ ನದಿ ನೀರಿನ ಮಾದರಿಗಳಲ್ಲಿ ಕಂಡುಬಂದ ಕೊರೊನಾ ವೈರಸ್..ಆತಂಕಕಾರಿ ಎಂದ ತಜ್ಞರು..!!

ಐಐಟಿ ಗಾಂಧಿನಗರ ಮತ್ತು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಎನ್ವಿರಾನ್ಮೆಂಟ್ ಸೈನ್ಸ್ ಸಂಶೋಧಕರು ಅಹಮದಾಬಾದಿನ ಸಬರಮತಿ ನದಿಯಿಂದ ತೆಗೆದ ನೀರಿನ ಮಾದರಿಗಳಲ್ಲಿ ಕೊರೊನಾ ವೈರಸ್ಸಿನ ಕುರುಹುಗಳನ್ನು ಕಂಡುಹಿಡಿದಿದ್ದಾರೆ. ನಗರದ ಕಂಕ್ರಿಯಾ ಮತ್ತು ಚಂಡೋಲಾ ಸರೋವರಗಳಿಂದ ತೆಗೆದ ಮಾದರಿಗಳಲ್ಲಿ ಈ ವೈರಸ್ ಪತ್ತೆಯಾಗಿದೆ. ಸರೋವರಗಳು ಮತ್ತು ನದಿಗಳಲ್ಲಿ SARS-CoV-2 ಇರುವುದು ಅಪಾಯಕಾರಿ ಸ್ಥಿತಿಗೆ ಕಾರಣವಾಗಬಹುದು ಎಂದು … Continued

ಮೋದಿ ಕ್ಯಾಬಿನೆಟ್ ಪುನರ್ರಚನೆ ; ಜ್ಯೋತಿರಾದಿತ್ಯ ಸಿಂಧ್ಯಾ, ವರುಣ್ ಗಾಂಧಿ, ದಿನೇಶ ತ್ರಿವೇದಿ ಸೇರ್ಪಡೆ ಸಾಧ್ಯತೆ

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಜನತಾ ಪಕ್ಷದ ಉನ್ನತ ನಾಯಕರೊಂದಿಗೆ ಮತ್ತು ಎರಡು ಪ್ರತ್ಯೇಕ ಮಂತ್ರಿಗಳ ಗುಂಪುಗಳೊಂದಿಗೆ ನಾಲ್ಕು ದಿನಗಳಲ್ಲಿ ಎರಡು ಸಭೆಗಳನ್ನು ನಡೆಸಿದ್ದು, ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟ ಪುನರ್ರಚನೆಗೆ ಕ್ಷಣಗಣನೆ ಆರಂಭವಾಗಿದೆ ಎಂದು ಸೂಚನೆ ನೀಡಿದ್ದಾರೆ. 2019 ರ ಮೇ 30 ರಂದು ಪ್ರಾರಂಭವಾದ ಮೋದಿ ಸರ್ಕಾರದ ಎರಡನೇ ಇನ್ನಿಂಗ್ಸ್‌ನಲ್ಲಿ ಇದು … Continued

ಕೊನೆಗೂ ಈಡೇರಿದ ಬೇಡಿಕೆ:ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆಗೆ ಬಡ್ತಿಗೆ ಆದೇಶ

ಬೆಂಗಳೂರು: ಸರ್ಕಾರಿ ಪ್ರೌಢ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರ ಬೇಡಿಕೆಯಾಗಿದ್ದ ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆಗೆ ಬಡ್ತಿಗೆ ಸಂಬಂಧಿಸಿದಂತೆ ಆದೇಶ ಹೊರಡಿಸಲಾಗಿದೆ. ಈ ಕುರಿತು ಪ್ರಕರಣೆ ನೀಡಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶಕುಮಾರ್ ಅವರು, ಸರ್ಕಾರಿ ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಗ್ರೇಡ್-1 ಹುದ್ದೆಯಿಂದ ಗ್ರೂಪ್-ಬಿ ವೃಂದದ ದೈಹಿಕ ಶಿಕ್ಷಣ ಪರಿವೀಕ್ಷಕರ … Continued

ತುರ್ತು ಕ್ರಮ ಅಗತ್ಯವಿದೆ’: ಭಾರತದಲ್ಲಿ ಕೋವಿಡ್ ಪುನರುತ್ಥಾನ ನಿಭಾಯಿಸಲು 8 ಹಂತ ಪಟ್ಟಿ ಮಾಡಿದ ಲ್ಯಾನ್ಸೆಟ್‌ ತಜ್ಞರ ಸಮಿತಿ

ನವದೆಹಲಿ: ಕೊವಿಡ್‌-19 ಪ್ರಕರಣಗಳು ಪುನರುತ್ಥಾನಗೊಳ್ಳುವ ಸಾಧ್ಯತೆಯಿದೆ ಎಂದು ಲ್ಯಾನ್ಸೆಟ್ ವೈದ್ಯಕೀಯ ಜರ್ನಲ್ ಭಾರತಕ್ಕೆ ಎಚ್ಚರಿಕೆ ನೀಡಿದೆ. ಹಾಗೂ ಅದನ್ನು ನಿಭಾಯಿಸಲು ತೆಗೆದುಕೊಳ್ಳಬೇಕಾದ ಎಂಟು ‘ತುರ್ತು ಕ್ರಮಗಳನ್ನು’ ಪಟ್ಟಿ ಮಾಡಿದೆ. ಲ್ಯಾನ್ಸೆಟ್‌ ಜೂನ್ 12 ರ ಸಂಚಿಕೆಯಲ್ಲಿ ಬಯೋಕಾನ್ ಮುಖ್ಯಸ್ಥ ಕಿರಣ್ ಮಜುಂದಾರ್-ಶಾ ಸೇರಿದಂತೆ 21 ಜನರು ಬರೆದಿದ್ದಾರೆ. ಜರ್ನಲ್ಲಿನಲ್ಲಿ ತುರ್ತಾಗಿ ಮಾಡಬೇಕಾದದ್ದರ ವೇಗ ಹೆಚ್ಚಿಸಲು ಮತ್ತು … Continued

ಎರಡನೇ ಹಂತದ ಅನ್ಲಾಕ್‌ ಬಗ್ಗೆ ನಾಳೆ ತೀರ್ಮಾನ ಎಂದ ಸಿಎಂ ಬಿಎಸ್‌ವೈ ಏನೆಲ್ಲ ಹೇಳಿದ್ರು..?

ಬೆಂಗಳೂರು: ನಾಳೆ ಎರಡನೇ ಹಂತದ ಅನ್ಲಾಕ್‌ ಬಗ್ಗೆ ತೀರ್ಮಾನ ಮಾಡುತ್ತೇವೆ, ಸಂಭವನೀಯ ಮೂರನೇ ಅಲೆಯ ಭೀತಿಯನ್ನು ಗಮನದಲ್ಲಿಟ್ಟುಕೊಂಡು ಯಾವುದಕ್ಕೆಲ್ಲ ವಿನಾಯಿತಿ ಕೊಡಬೇಕು ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸೋಂಕು ಕಡಿಮೆಯಾಗುತ್ತಿದೆ. ಆದರೆ ಮುರನೇ ಅಲೆಯ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ತಜ್ಞರ … Continued

ಹರಾಜಿನಲ್ಲಿ ದಾಖಲೆ ನಿರ್ಮಿಸಿದ ಪ್ರಪಂಚದ ಐದು ದುಬಾರಿ ಖಡ್ಗಗಳು

ನೀವು ಉತ್ತಮ ಸಂಗ್ರಹಣೆಯನ್ನು ಪ್ರಶಂಸಿಸಬಲ್ಲ ವ್ಯಕ್ತಿಯಾಗಿದ್ದರೆ, ನೀವು ಖಂಡಿತವಾಗಿಯೂ ಈ ಲೇಖನವನ್ನು ಆಸಕ್ತಿದಾಯಕವಾಗಿ ಕಾಣುತ್ತೀರಿ. ಪ್ರತಿ ವರ್ಷ, ಕಾರುಗಳಿಂದ ಶಸ್ತ್ರಾಸ್ತ್ರಗಳವರೆಗೆ ಎಲ್ಲವನ್ನೂ ಖರೀದಿಸಲು ಹರಾಜಿನಲ್ಲಿ ಮಿಲಿಯನ್ ಡಾಲರ್ಗಳನ್ನು ಖರ್ಚು ಮಾಡಲಾಗುತ್ತದೆ. ಐತಿಹಾಸಿಕ ಕಾಲದ ಕತ್ತಿಗಳು ಅವುಗಳ ಮಹತ್ವವನ್ನು ಕಳೆದುಕೊಂಡಿಲ್ಲ ಎಂಬುದು ಹರಾಜಿನಲ್ಲಿ ಗೊತ್ತಾಗುತ್ತದೆ. ಪುರಾತನ ಕತ್ತಿಗಳಿಗಾಗಿ ಹರಾಜು ಮನೆಗಳು ಪಡೆಯುತ್ತಿರುವ ಕೆಲವು ಬೆಲೆಗಳನ್ನು ನೋಡಿದರೆ ಆಶ್ಚರ್ಯವಾಗುತ್ತದೆ. … Continued

ಕ್ರೆಡಿಟ್ ಕಾರ್ಡ್ ಹೆಸರಿನಲ್ಲಿ ಜಸ್ಟೀಸ್ ಸಂತೋಷ್ ಹೆಗ್ಡೆ ವಂಚನೆಗೆ ಯತ್ನ

ಬೆಂಗಳೂರು: ನಿವೃತ್ತ ಲೋಕಾಯುಕ್ತ ನ್ಯಾ. ಎನ್‌. ಸಂತೋಷ್ ಹೆಗ್ಡೆ ಅವರಿಗೆ ಕ್ರೆಡಿಟ್ ಕಾರ್ಡ್ ಹೆಸರಿನಲ್ಲಿ ವಂಚಿಸಲು ಯತ್ನಿಸಲಾಗಿದೆ. ವಂಚನೆ ಮಾಡಲು ಯತ್ನಿಸಿದ ಸೈಬರ್ ವಂಚಕರ ವಿರುದ್ಧ ಅವರು ಕೇಂದ್ರ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕನ್ಹಿಂಗ್ ಹ್ಯಾಮ್ ರಸ್ತೆಯಲ್ಲಿರುವ ಎಂಬಸಿ ಅಪಾರ್ಟಟ್‌ಮೆಂಟ್‌ನಲ್ಲಿ ವಾಸವಾಗಿರುವ ಎನ್. ಸಂತೋಷ್ ಹೆಗ್ಡೆ ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ … Continued

ಬೆಂಗಳೂರಿನಲ್ಲಿ 100 ರೂ.ಗಳ ಗಡಿ ದಾಟಿದ ಪೆಟ್ರೋಲ್ ದರ..!

ಬೆಂಗಳೂರು: ಕರ್ನಾಟಕದ ರಾಜಧಾನಿಯಲ್ಲಿ ತೈಲ ದರ ಗಗನಕ್ಕೇರಿದ್ದು, ಲೀಟರ್ ಪೆಟ್ರೋಲ್ ಸಾರ್ವಕಾಲಿಕ ದಾಖಲೆ ಕಂಡಿದೆ. ಬೆಂಗಳೂರಿನಲ್ಲಿ ಶುಕ್ರವಾರ ಪೆಟ್ರೋಲ್ ದರ 100 ರೂ.ಗಳ ಗಡಿ ದಾಟಿದೆ. ಗುರುವಾರ ರಾತ್ರಿ ಪೆಟ್ರೋಲ್‌ ದರ ಪರಿಷ್ಕ್ರತಗೊಂಡಿದ್ದು, ಶುಕ್ರವಾರಕ್ಕೆ ಅನ್ವಯಿಸುವಂತೆ 100.23 ರೂ.ಗಳನ್ನು ತಲುಪಿದೆ ಗುರುವಾರ ಸರ್ಕಾರಿ ಬಂಕ್ ಗಳಲ್ಲಿ ಲೀಟರ್ ಪೆಟ್ರೋಲ್ 99.95 ರೂ.ಗಳು ಹಾಗೂ ಡೀಸೆಲ್ 92.72 … Continued

ಕರ್ನಾಟಕದ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದಕ್ಕೆ

ಬೆಂಗಳೂರು: ಕೋವಿಡ್‌ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ, ಅದಕ್ಕೆ ಉಪಚುನಾವಣೆ ಹಾಗೂ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಮುಂದೂಡಬೇಕು ಎಂದು ರಾಜ್ಯ ನಗರಾಭಿವೃದ್ಧಿ ಇಲಾಖೆ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟವರಿಗೆ ಸೂಚನೆ ನೀಡಿದೆ. Election ULBs postponed ಈ ಕುರಿತು ಗುರುವಾರ (ಜೂನ್‌ ೧೭) ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ … Continued

ಕರ್ನಾಟಕದಲ್ಲಿ ಮಳೆ: ಚಿಕ್ಕೋಡಿಯಲ್ಲಿ ಸೇತುವೆಗಳು ಜಲಾವೃತ, ಕರಾವಳಿ, ಮಲೆನಾಡಿನಲ್ಲಿ 3 ದಿನ ಭಾರೀ ಮಳೆ ಮುನ್ಸೂಚನೆ

ಬೆಂಗಳೂರು: ರಾಜ್ಯದ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಕೆಲವೆಡೆ ಗುಡುಗು ಸಹಿತ ಧಾರಾಕಾರ ಮಳೆಗೆ ಮರಗಳು ಧರೆಗುರುಳಿದ್ದರೆ, ಇನ್ನೂ ಹಲವೆಡೆ ರಸ್ತೆಗಳು, ಸೇತುವೆಗಳು ಬಿರುಕು ಬಿಟ್ಟಿವೆ. ಬೆಳಗಾವಿ ಜಿಲ್ಲೆಯಲ್ಲಿ ನದಿಗಳ ನೀರಿನ ಮಟ್ಟ ಹೆಚ್ಚಾಗಿದೆ. ಚಿಕ್ಕೋಡಿಯಲ್ಲಿ ನಾಲ್ಕು ಸೇತುವೆಗಳು ಜಲಾವೃತವಾಗಿವೆ. ವಿಶೇಷವಾಗಿ ಕರ್ನಾಟಕದ ಮಲೆನಾಡು ಭಾಗಗಳಲ್ಲಿ ವ್ಯಾಪಕವಾಗಿ … Continued