ರಿಲಯನ್ಸ್ 4ನೇ ತ್ರೈಮಾಸಿಕದಲ್ಲಿ 13,227 ಕೋಟಿ ರೂ. ಲಾಭ

ರಿಲಯನ್ಸ್ ಇಂಡಸ್ಟ್ರೀಸ್ ಮಾರ್ಚ್ 2021ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 13,227 ಕೋಟಿ ರೂ.ಗಳ ಲಾಭ ಗಳಿಸಿದೆ ಎಂದು ಶುಕ್ರವಾರ ತಿಳಿಸಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷಕ್ಕೆ ಶೇ. 108.4 ದಷ್ಟು ಹೆಚ್ಚಾಗಿದೆ. ಕಳೆದ ವರ್ಷ 2020ರ ಮಾರ್ಚ್​ನಲ್ಲಿ ಕೋವಿಡ್​ ಕಾರಣದಿಂದ ಲಾಕ್​ಡೌನ್ ಘೋಷಣೆ ಮಾಡಿದಾಗಲೂ ತ್ರೈಮಾಸಿಕದಲ್ಲಿ 6348 ಕೋಟಿ ಆದಾಯ ಗಳಿಸಿತ್ತು. ತ್ರೈಮಾಸಿಕದಲ್ಲಿ ನಗದುರಹಿತ … Continued

ಕೊರೊನಾದಿಂದ ಮಂತ್ರಾಲಯ ಶ್ರೀಗಳ ಆಪ್ತ ಕಾರ್ಯದರ್ಶಿ ಸುಯಮೀಂದ್ರ ಆಚಾರ್ ನಿಧನ

ರಾಯಚೂರು: ಕೊರೊನಾ ಸೋಂಕಿಗೆ ತುತ್ತಾಗಿದ್ದ ಮಂತ್ರಾಲಯದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರ ಆಪ್ತ ಕಾರ್ಯದರ್ಶಿ ಸುಯಮೀಂದ್ರ ಆಚಾರ್ ಅವರು ಅವರು ಶುಕ್ರವಾರ ನಿಧನರಾಗಿದ್ದಾರೆ. ಸುಯಮೀಂದ್ರ ಆಚಾರ್ ಅವರು ಕಳೆದ ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಸಂಜೆ ದೆಹಲಿಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಈ ನಡುವೆ … Continued

ಆಮ್ಲಜನಕ ಪೂರೈಕೆಗೆ ಭಾರತ ನೌಕಾ ಪಡೆಯಿಂದ ಆಪರೇಷನ್ ಸಮುದ್ರ ಸೇತು-2

ನವ ದೆಹಲಿ: ಕೋವಿಡ್-19 ಪ್ರಕರಣಗಳಲ್ಲಿನ ಉಲ್ಬಣ ಗಮನದಲ್ಲಿಟ್ಟುಕೊಂಡು ಆಮ್ಲಜನಕದ ಅವಶ್ಯಕತೆಗಳನ್ನು ಪೂರೈಸುವ ರಾಷ್ಟ್ರೀಯ ಕಾರ್ಯಾಚರಣೆ ಹೆಚ್ಚಿಸಲು ಭಾರತೀಯ ನೌಕಾಪಡೆ ಆಪರೇಷನ್ ಸಮುದ್ರ ಸೇತು -2 ಪ್ರಾರಂಭಿಸಿದೆ. ಮಿಷನ್ ನಿಯೋಜಿತ ಭಾರತೀಯ ನೌಕಾ ಯುದ್ಧನೌಕೆಗಳು ದ್ರವ ಆಮ್ಲಜನಕ ತುಂಬಿದ ಕ್ರಯೋಜೆನಿಕ್ ಪಾತ್ರೆಗಳು ಮತ್ತು ಸಂಬಂಧಿತ ವೈದ್ಯಕೀಯ ಉಪಕರಣಗಳ ಸಾಗಣೆ ಕಾರ್ಯಾಚರಣೆ ಕೈಗೊಳ್ಳಲಿವೆ ಎಂದು ಭಾರತೀಯ ನೌಕಾಪಡೆಯ ವಕ್ತಾರರು … Continued

ಐದು ದಶಕಗಳ ಕಾಲ ಬಜಾಜ್ ಆಟೋ ಅಧ್ಯಕ್ಷರಾಗಿದ್ದ ರಾಹುಲ್ ಬಜಾಜ್ ರಾಜೀನಾಮೆ

ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ಉತ್ಪಾದನಾ ಕಂಪನಿಗಳಾದ ಬಜಾಜ್ ಆಟೋ ಅಧ್ಯಕ್ಷ ರಾಹುಲ್ ಬಜಾಜ್ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ. ಕಂಪನಿ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ನೀರಜ್ ಬಜಾಜ್ ಅಧ್ಯಕ್ಷರಾಗಲಿದ್ದಾರೆ ಎಂದು ಕಂಪನಿ ತಿಳಿಸಿದೆ. ಏತನ್ಮಧ್ಯೆ, ರಾಹುಲ್ ಬಜಾಜ್ ಅವರು ಬಜಾಜ್ ಆಟೋದಲ್ಲಿ ಚೇರ್ಮನ್ ಎಮಿರಿಟಸ್ ಆಗಿ ಮುಂದುವರಿಯಲಿದ್ದಾರೆ. ಅವರ ರಾಜೀನಾಮೆ ಏಪ್ರಿಲ್ 30, 2021 ರಂದು ವ್ಯವಹಾರದ … Continued

ಅರ್ಧ ಲಕ್ಷ ಸಮೀಪ ಬಂದ ದೈನಂದಿನ ಕೊರೊನಾ ಸೋಂಕು.. ಮಹಾರಾಷ್ಟ್ರವಾಗುವತ್ತ ಕರ್ನಾಟಕ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹೆಚ್ಚಳ ಕೈಮೀರಿ ಹೋಗುತ್ತಿದ್ದು, ಮಹಾರಾಷ್ಟ್ರದ ಸಂಖ್ಯೆ ತಲುಪಲು ರಾಜ್ಯವೂ ದಾಪುಗಾಲು ಹಾಕುತ್ತಿದ್ದಂತೆ ತೋರುತ್ತಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಹೊಸದಾಗಿ 48,296 ಕೊರೊನಾ ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿದ್ದು, ಇವತ್ತೊಂದೇ ದಿನ 217 ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿನ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 15,23,142 ತಲುಪಿದೆ, ಇದುವರೆಗೆ ಮೃತಪಟ್ಟವರ ಸಂಖ್ಯೆ 15,523ಕ್ಕೆ ಏರಿದೆ. … Continued

ಕೊರೊನಾ ಸೋಂಕಿನಿಂದ ಮೃತಪಟ್ಟ ಆಜ್‌ ತಕ್‌ ಖ್ಯಾತ ಸುದ್ದಿ ವಾಚಕ ರೋಹಿತ್ ಸರ್ದಾನಾ

ನವ ದೆಹಲಿ: ಕೊರೊನಾ ತನ್ನ ಮರಣ ಮೃದಂಗ ಮುಂದುವರೆಸಿದ್ದು, ಮಾಧ್ಯಮಗಳಲ್ಲೂ ಸಾವು ನೋವಿನ ಸುದ್ದಿಗಳು ಬರಲಾರಂಭಿಸಿದೆ. ಆಜ್ ತಕ್ ಹಿಂದಿ ನ್ಯೂಸ್ ಚಾನೆಲ್ ನ ಖ್ಯಾತ ಸುದ್ದಿವಾಚಕ ರೋಹಿತ್ ಸರ್ದಾನಾ ಕೊರೊನಾಕ್ಕೆ ಸೋಂಕಿನಿಂದ ಮೃತಪಟ್ಟಿದ್ದಾರೆ. ಹಿಂದಿ ಸುದ್ದಿ ಚಾನೆಲ್ ಆಜ್ ತಕ್ ನಲ್ಲಿ ಕೆಲಸ ಮಾಡುತ್ತಿದ್ದ 41 ವರ್ಷದ ರೋಹಿತ್ ಸರ್ದಾನಾ ಜನಪ್ರಿಯ ಚರ್ಚಾ ಕಾರ್ಯಕ್ರಮ … Continued

ಕೊರೊನಾ ಕರ್ಫ್ಯೂ ಉಲ್ಲಂಘನೆ: ನಮಾಜಿಗೆ ಸೇರಿದ್ದ 25ಕ್ಕೂ ಹೆಚ್ಚು ಜನರು ವಶಕ್ಕೆ

ಶಿವಮೊಗ್ಗ :ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಆಝಾದ್ ಮಸೀದಿಯಲ್ಲಿ ಕೊರೋನಾ ಕರ್ಪ್ಯೂ ನಿಯಮವಿದ್ದರೂ ಗುಂಪು ಸೇರಿ ನಿಯಮ ಉಲ್ಲಂಘಿಸಿ ಶುಕ್ರವಾರದ ನಮಾಜಿಗೆ ಸೇರಿದ್ದ ಮಾಡುತ್ತಿದ್ದ 25ಕ್ಕೂ ಹೆಚ್ಚು ಜನರನ್ನು ಸಾಗರ ಪೊಲೀಸರು ಬಂಧಿಸಿದ್ದಾರೆ. ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ, ಗುಂಪುಗೂಡುವಿಕೆ, ಪ್ರಾರ್ಥನೆ,ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ಹೆಚ್ಚು ಜನರು ಸೇರುವುದನ್ನು ನಿರ್ಬಂಧಿಸಲಾಗಿದೆ. ಮೇ12ರ ವರೆಗೂ ರಾಜ್ಯಾದ್ಯಂತ ಕೊರೊನಾ … Continued

ನಗರಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು.. ಆದರೆ ಸಂಭ್ರಮ ಪಡಲು ಅಭ್ಯರ್ಥಿಯೇ ಇಲ್ಲ

ರಾಮನಗರ: ರಾಮನಗರ ನಗರಸಭೆ​​ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಯೊಬ್ಬರು ಪ್ರಚಂಡ ಗೆಲುವು ಸಾಧಿಸಿದ್ದಾರೆ. ಆದರೆ ಗೆಲುವಿನ ಸಂಭ್ರಮಾಚರಣೆ ಮಾಡಲು ಈ ಅಭ್ಯರ್ಥಿಯೇ ಇಲ್ಲ. ಶುಕ್ರವಾರ ಮತ ಎಣಿಕೆ ನಡೆದಾಗ ಕಾಂಗ್ರೆಸ್ ಅಭ್ಯರ್ಥಿ ಲೀಲಾ ಗೋವಿಂದರಾಜು 917 ಮತಗಳನ್ನ ಪಡೆದು 810 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ. ಆದರೆ ಇವರುಒಂದು ದಿನ ಮೊದಲು ಅಂದರೆ ಗುರುವಾರ ಕೊರೊನಾ ಸೋಂಕಿನಿಂದ … Continued

ದೆಹಲಿ ಲೆಫ್ಟಿನೆಂಟ್ ಗವರ್ನರ್‌ಗೆ ಕೊರೊನಾ ಸೋಂಕು

ನವ ದೆಹಲಿ: ಲೆಫ್ಟಿನೆಂಟ್ ಗವರ್ನರ್ (ಎಲ್‌ ಜಿ) ಅನಿಲ್ ಬೈಜಾಲ್ ಕೊರನಾ ಸೋಂಕಿಗೆ ಒಳಗಾಗಿದ್ದಾರೆ. ಅನಿಲ್ ಬೈಜಾಲ್ ಅವರು ತಮ್ಮ ನಿವಾಸದಲ್ಲಿ ಪ್ರತ್ಯೇಕವಾಗಿ ಇರಲಿದ್ದೇನೆ ಹಾಗೂ ಅಲ್ಲಿಂದಲೇ ದೆಹಲಿಯ ಪರಿಸ್ಥಿತಿ ಮೇಲ್ವಿಚಾರಣೆ ಮಾಡುತ್ತೇನೆ ಎಂದು ಹೇಳಿದ್ದಾರೆ ಅನಿಲ್ ಬೈಜಾಲ್ ಟ್ವಿಟ್ಟರ್ ನಲ್ಲಿ “ನಾನು ಸೌಮ್ಯ ರೋಗಲಕ್ಷಣಗಳೊಂದಿಗೆ ಕೊರೊನಾ ಸೋಂಕಿಗೆ ಒಳಗಾಗಿದ್ದೇನೆ. ರೋಗಲಕ್ಷಣಗಳು ಪ್ರಾರಂಭವಾದಾಗಿನಿಂದ ನನ್ನನ್ನು ನಾನು … Continued

ಬಳ್ಳಾರಿ ಪಾಲಿಕೆ ಕೈ ವಶ.. ಬಿಜೆಪಿಗೆ ಮುಖಭಂಗ

ಬಳ್ಳಾರಿ : ತೀವ್ರ ಕುತೂಹಲ ಮೂಡಿಸಿದ್ದಂತ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ಅಡಳಿತಾರೂಢ ಬಿಜೆಪಿ ಮುಖಭಂಗ ಅನುಭವಿಸಿದೆ. ಕಾಂಗ್ರೆಸ್‌ ಭರ್ಜರಿ ಜಯ ಸಾಧಿಸುವುದರ ಮೂಲಕ ಬಳ್ಳಾರಿ ಪಾಲಿಕೆ ಕೈ ವಶವಾಗಿದೆ. ಬಳ್ಳಾರಿಯ 39 ವಾರ್ಡ್ ಗಳಿಗೆ ನಡೆದ ಚುನಾವಣೆ ಮತ ಎಣಿಕೆ ಕಾರ್ಯ ಶುಕ್ರವಾರ ನಡೆಯಿತು. 39 ವಾರ್ಡ್ ಗಳ ಪೈಕಿ, … Continued