ಕೊರೊನಾ ಸೋಂಕು: ರಣಧೀರ ಕಪೂರ್‌ ಆಸ್ಪತ್ರೆಗೆ ದಾಖಲು

ಮುಂಬೈ: ಏಪ್ರಿಲ್ 29 ರಂದು ಕೊರೊನಾ ಪಾಸಿಟಿವ್‌ ಬಂದಿರುವ ರಣಧೀರ್‌ ಕಪೂರ್‌ ತನ್ನ ಐವರು ಸಿಬ್ಬಂದಿಯೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದು, ಈಗ ಅವರನ್ನು ಕಪೂರ್ ಅವರನ್ನು ತೀವ್ರ ನಿಗಾ ಘಟಕಕ್ಕೆ(ಐಸಿಯು) ಸ್ಥಳಾಂತರಿಸಲಾಗಿದೆ. ಹೆಚ್ಚಿನ ಪರೀಕ್ಷೆಗಳಿಗಾಗಿ ಐಸಿಯುಗೆ ಸ್ಥಳಾಂತರಿಸಲಾಗಿದೆ ಎಂದು ಸ್ವತಃ ರಣಧೀರ ಕಪೂರ ಬಹಿರಂಗಪಡಿಸಿದ್ದಾರೆ. ಅವರನ್ನು ಮುಂಬೈನ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಪರೀಕ್ಷೆಗಳನ್ನು ನಡೆಸಲು … Continued

ಉತ್ತರ ಪ್ರದೇಶ ಪಂಚಾಯತ್ ಚುನಾವಣೆ ಕರ್ತವ್ಯದಲ್ಲಿದ್ದ 577 ಶಿಕ್ಷಕರು ಸಾವು:ಶಿಕ್ಷಕರ ಸಂಘಗಳಿಂದ ಚುನಾವಣಾ ಆಯೋಗಕ್ಕೆ ಪಟ್ಟಿ ಸಲ್ಲಿಕೆ

ಉತ್ತರ ಪ್ರದೇಶದ ಶಿಕ್ಷಕರ ಸಂಘಗಳು ಪಂಚಾಯತ್ ಚುನಾವಣಾ ಕರ್ತವ್ಯದಲ್ಲಿದ್ದಾಗ ಮೃತಪಟ್ಟ 577 ಶಿಕ್ಷಕರು ಮತ್ತು ಸಹಾಯಕ ಸಿಬ್ಬಂದಿ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ (ಎಸ್‌ಇಸಿ) ಸಲ್ಲಿಸಿವೆ. ಮೇ 2 ಎಣಿಕೆ ದಿನ ಮುಂದೂಡಬೇಕೆಂದು ಒಕ್ಕೂಟಗಳು ಚುನಾವಣಾ ಆಯೋಗಕ್ಕೆ ಮನವಿ ಮಾಡಿವೆ. ಕೆರಳಿದ ಕೋವಿಡ್ -19 ಸಾಂಕ್ರಾಮಿಕ ರೋಗದ ನಡುವೆ ಮೃತಪಟ್ಟ 71 ಜಿಲ್ಲೆಗಳ 577 ಮೂಲ … Continued

ಇಸ್ರೇಲ್​ನಲ್ಲಿ ಕಾಲ್ತುಳಿತದಿಂದ 44 ಜನರು ಸಾವು

ನವ ದೆಹಲಿ: ಇಸ್ರೇಲ್​ನಲ್ಲಿ ನಡೆದ ಧಾರ್ಮಿಕ ಉತ್ಸವ ನಡೆದ ವೇಳೆ ಕಾಲ್ತುಳಿತಕ್ಕೊಳಗಾಗಿ 44ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಇಸ್ರೇಲ್​ನಲ್ಲಿ ನಡೆಯುತ್ತಿದ್ದ ಬೋನ್​ಫೈರ್ ಉತ್ಸವದ ವೇಳೆ ಕಾಲ್ತುಳಿತದಿಂದ 44ಕ್ಕೂ ಅಧಿಕ ಜನರು ಸಾವನ್ನಪ್ಪಿರುವುದು ದೊಡ್ಡ ದುರಂತ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆಟನ್ಯಹು ಸಂತಾಪ ಸೂಚಿಸಿದ್ದಾರೆ. ಈ ದುರಂತದಲ್ಲಿ 44ಕ್ಕೂ … Continued

ಮಹತ್ವದ ಸುದ್ದಿ… ಕರ್ನಾಟಕದಲ್ಲಿ 18-45 ವರ್ಷದವರಿಗೆ ಲಸಿಕೆ ನಾಳೆ ಆರಂಭವಿಲ್ಲ, ಸರ್ಕಾರ ಈ ಬಗ್ಗೆ ತಿಳಿಸಲಿದೆ ಎಂದ ಆರೋಗ್ಯ ಸಚಿವರು

ಬೆಂಗಳೂರು: ಈ ಹಿಂದೆ ಘೋಷಿಸಿದಂತೆ 18-45 ವಯಸ್ಸಿನ ಕೋವಿಡ್‌-19 ವ್ಯಾಕ್ಸಿನೇಷನ್ ಮೇ 1ರಿಂದ ಬೆಂಗಳೂರು ಮತ್ತು ಕರ್ನಾಟಕದ ಉಳಿದ ಭಾಗಗಳಲ್ಲಿ ಪ್ರಾರಂಭವಾಗುವುದಿಲ್ಲ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ದೃಢಪಡಿಸಿದ್ದಾರೆ. ಹಾಗೂ 18 ರಿಂದ 45 ವರ್ಷದೊಳಗಿನವರು ಸರ್ಕಾರವು ತಿಳಿಸುವ ವರೆಗೂ ಆಸ್ಪತ್ರೆಗೆ ಹೋಗುವುದು ಬೇಡ ಎಂದು ಮನವಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ. 1 … Continued

ಅಮೆರಿಕದಿಂದ ಭಾರತಕ್ಕೆ ಬಂದಿಳಿದ ಮೊದಲ ತುರ್ತು ಕೋವಿಡ್ -19 ಪರಿಹಾರ ಸಾಮಗ್ರಿ

ವಿಸ್ತೃತ ಆರೋಗ್ಯ ಮೂಲಸೌಕರ್ಯಗಳ ಮಧ್ಯೆ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಎರಡನೇ ಮತ್ತು ಮಾರಣಾಂತಿಕ ಅಲೆಯೊಂದಿಗೆ ದೇಶವು ಹೋರಾಡುತ್ತಿರುವಾಗ ಅಮೆರಿಕದಿಂದ ಕೋವಿಡ್ -19 ನೆರವಿನ ಮೊದಲ ಕಂತಿನ ರವಾನೆ ಶುಕ್ರವಾರ ಭಾರತಕ್ಕೆ ಬಂದಿದೆ ಎಂದು ಯುಎಸ್ ರಾಯಭಾರ ಕಚೇರಿ ತಿಳಿಸಿದೆ. ಅಮೆರಿಕದಿಂದ ಹಲವಾರು ತುರ್ತು ಕೋವಿಡ್‌-19 ಪರಿಹಾರ ಸಾಗಣೆಗಳಲ್ಲಿ ಮೊದಲನೆ ಕಂತು ಭಾರತಕ್ಕೆ ಬಂದಿದೆ. 70 … Continued

ಭಾರತದಲ್ಲಿ 3.86 ಲಕ್ಷ ದಾಟಿದ ಕೊರೊನಾ ಹೊಸ ಸೋಂಕು..

ನವ ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 3.80 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದು ದಾಖಲಾಗಿದೆ. ದೇಶದಲ್ಲಿ ಶುಕ್ರವಾರ 3,86,452 ಕೊರೊನಾ ಸೋಂಕಿತರು ಪತ್ತೆಯಾಗಿಗಿದ್ದು, 3498 ಮಂದಿ ಮೃತಪಟ್ಟಿದ್ದಾರೆ, 2,87,540 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ದೇಶದಲ್ಲಿ ಒಟ್ಟು 1,87,62,976 ಜನರಿಗೆ ಕೊರೊನಾ ಸೋಂಕು ತಗುಲಿದೆ, ಇದುವರೆಗೂ 1,53,84,418 ಮಂದಿ ಗುಣಮುಖರಾಗಿದ್ದಾರೆ. 2,08,330 … Continued

ಕೊರೊನಾ ಸೋಂಕಿನಿಂದ ಭಾರತದ ಮಾಜಿ ಅಟಾರ್ನಿ ಜನರಲ್ ಸೋಲಿ ಸೊರಬ್ಜಿ ನಿಧನ

ನವ ದೆಹಲಿ: ಹಿರಿಯ ವಕೀಲ, ಕಾನೂನು ತಜ್ಞ, ಮಾಜಿ ಅಟಾರ್ನಿ ಜನರಲ್ ಮತ್ತು ಪದ್ಮವಿಭೂಷಣ, ಸೋಲಿ ಸೊರಬ್ಜಿ ಕೊರೊನಾ ವೈರಸ್ (ಕೋವಿಡ್ -19) ಸೋಂಕಿಗೆ ಒಳಗಾಗಿ ಶುಕ್ರವಾರ ಬೆಳಿಗ್ಗೆ ನಿಧನರಾದರು. ಅವರನ್ನು ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅವರಿಗೆ 91. ವರ್ಷ ವಯಸ್ಸಾಗಿತ್ತು. ಬಾಂಬೆಯಲ್ಲಿ 1930 ರಲ್ಲಿ ಜನಿಸಿದ ಸೋಲಿ ಜೆಹಾಂಗೀರ್ ಸೊರಬ್ಜಿ 1953 ರಲ್ಲಿ … Continued

ಮಸ್ಕಿ ಕೇತ್ರದ ಚುನಾವಣೋತ್ತರ ಸಮೀಕ್ಷೆ: ಯಾರೇ ಗೆದ್ದರೂ ಕಡಿಮೆ ಅಂತರ..!

ರಾಯಚೂರು: ಕಾಂಗ್ರೆಸ್ ಶಾಸಕರಾಗಿದ್ದ ಪ್ರತಾಪ್ ಗೌಡ ಪಾಟೀಲ್ ರಾಜೀನಾಮೆಯಿಂದ ಎದುರಾದ ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಕುತೂಹಲ ಕಾರಣವಾಗಿದೆ. ಏಪ್ರಿಲ್ 17ರಂದು ಚುನಾವಣೆ ನಡೆದಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ. ಮಸ್ಕಿಯಲ್ಲಿ ಬಿಜೆಪಿಯಿಂದ ಪ್ರತಾಪಗೌಡ ಪಾಟೀಲ, ಕಾಂಗ್ರೆಸ್‌ನಿಂದ ಬಸನಗೌಡ ತುರ್ವಿಹಾಳ ಅಭ್ಯರ್ಥಿಗಳು. ಈ ಇಬ್ಬರೂ ನಾಯಕರು 2018ರ ಚುನಾವಣೆಯಲ್ಲಿಯೂ ಎದುರಾಳಿಗಳಾಗಿದ್ದರು. ಆದರೆ … Continued

ಚುನಾವಣೋತ್ತರ ಸಮೀಕ್ಷೆ; ಬಸವಕಲ್ಯಾಣದ ತೀವ್ರ ಹಣಾಹಣಿಯಲ್ಲಿ ಜಯದ ಮಾಲೆ ಯಾರಿಗೆ..?

ಬೀದರ್: ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕಾಂಗ್ರೆಸ್ ಶಾಸಕರಾಗಿದ್ದ ಬಿ. ನಾರಾಯಣರಾವ್ ಅಕಾಲಿಕ ನಿಧನದಿಂದ ನಡೆದಿದೆ. ಮೇ 2ರಂದು ಮತದಾನದ ಫಲಿತಾಂಶ ಪ್ರಕಟವಾಗಲಿದೆ. ಕ್ಷೇತ್ರದಲ್ಲಿ ಬಿಜೆಪಿಯಿಂದ ಶರಣು ಸಲಗರ್, ಕಾಂಗ್ರೆಸ್‌ನಿಂದ ದಿ. ಬಿ. ನಾರಾಯಣರಾವ್ ಪತ್ನಿ ಮಾಲಾ, ಜೆಡಿಎಸ್‌ನಿಂದ ಸೈಯದ್ ಯಸ್ರಬ್ ಅಲಿ ಖಾದ್ರಿ ಹಾಗೂ ಮಲ್ಲಿಕಾರ್ಜುನ ಖೂಬಾ ಬಿಜೆಪಿ ಬಂಡಾಯ … Continued

ಚುನಾವಣೋತ್ತರ ಸಮೀಕ್ಷೆ; ಬೆಳಗಾವಿಯಲ್ಲಿ ಯಾರಿಗೆ ಜಯ..?

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಚುನಾವಣೋತ್ತರ ಫಲಿತಾಂಶ ಪ್ರಕಟವಾಗಿದೆ. ಏಪ್ರಿಲ್ 17ರಂದು ಮತದಾನ ನಡೆದಿದ್ದು, ಮೇ 2ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ಅವರು ಕೋವಿಡ್‌ಗೆ ಬಲಿಯಾದ ಕಾರಣ ಉಪ ಚುನಾವಣೆ ನಡೆದಿದೆ. ಗುರುವಾರ ಟಿವಿ 9 ವಾಹಿನಿ ನಡೆಸಿದ ಚುನಾವಣೋತ್ತರ ಸಮೀಕ್ಷೆಗಳ ವರದಿ ಹೊರಬಂದಿದ್ದು, ಬಿಜೆಪಿ ದಿ. … Continued