ಪಾಕಿಸ್ತಾನದ ಪಂಜಾಬ್‌ನಲ್ಲಿ ಹಿಂದೂ ದೇವಾಲಯದ ಮೇಲೆ ದಾಳಿ:ದೇವಸ್ಥಾನ, ವಿಗ್ರಹಗಳಿಗೆ ಹಾನಿ

ಮುಲ್ತಾನ್‌: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಸ್ಲಿಂ ಗುಂಪೊಂದು ಹಿಂದೂ ದೇವಾಲಯದ ಮೇಲೆ ದಾಳಿ ಮಾಡಿ, ಅದರ ಕೆಲವು ಭಾಗಗಳನ್ನು ಸುಟ್ಟುಹಾಕಿದೆ ಮತ್ತು ವಿಗ್ರಹಗಳನ್ನು ಹಾನಿಗೊಳಿಸಿದೆ ಎಂದು ವರದಿಯಾಗಿದೆ. ಪೊಲೀಸರ ವೈಫಲ್ಯದ ನಂತರ, ಪರಿಸ್ಥಿತಿಯನ್ನು ನಿಯಂತ್ರಿಸಲು ಪಾಕಿಸ್ತಾನದ ಸೇನೆಗೆ ಕರೆ ಮಾಡಲಾಗಿದೆ. ಲಾಹೋರ್‌ನಿಂದ 590 ಕಿಮೀ ದೂರದಲ್ಲಿರುವ ರಹೀಮ್ ಯಾರ್ ಖಾನ್ ಜಿಲ್ಲೆಯ ಭೋಂಗ್ ನಗರದ ಮುಸ್ಲಿಂ … Continued

ಪಾಕಿಸ್ತಾನದಲ್ಲಿ ಹಣಕಾಸು ಬಿಕ್ಕಟ್ಟು:ತಮ್ಮ ಪ್ರಧಾನಿ ನಿವಾಸವನ್ನೇ ಬಾಡಿಗೆಗೆ ಇಟ್ಟ ಪಾಕಿಸ್ತಾನ ಸರ್ಕಾರ..!

ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್ ಸರ್ಕಾರಿ ನಿವಾಸ ಈಗ ಬಾಡಿಗೆಗೆ ಇದೆ..! ಈ ನಿವಾಸ ಇಸ್ಲಮಾಬಾದ್​​ನ ರೆಡ್ ಝೋನ್​ ಏರಿಯಾದಲ್ಲಿದೆ. ಹಾಗೇ ಇದನ್ನು ಬಾಡಿಗೆಗೆ ಕೊಡುವ ಬಗ್ಗೆ ​ ಪಾಕಿಸ್ತಾನದ ಫೆಡರಲ್ ಕ್ಯಾಬಿನೆಟ್ಟಿನಲ್ಲಿ ಮಂಗಳವಾರ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ. ಪಾಕಿಸ್ತಾನ ಸರ್ಕಾರ ಹಣದ ಕೊರತೆಯಿಂದ ಬಳಲುತ್ತಿದೆ. ಅದನ್ನು ನೀಗಿಸಲು, ಆದಾಯದ ಮೂಲವಾಗಿ ಈ ಸರ್ಕಾರಿ ನಿವಾಸವನ್ನು … Continued

ಕಾಬೂಲಿನಲ್ಲಿ ಅಫಘಾನ್ ರಕ್ಷಣಾ ಮಂತ್ರಿ ಬಿಸ್ಮಿಲ್ಲಾ ಮೊಹಮ್ಮದಿ ಮನೆ ಸಮೀಪ ಪ್ರಬಲ ಕಾರ್ ಬಾಂಬ್ ಸ್ಫೋಟ

ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಕೇಂದ್ರದಲ್ಲಿ ರಕ್ಷಣಾ ಸಚಿವ ಬಿಸ್ಮಿಲ್ಲಾ ಖಾನ್ ಮೊಹಮ್ಮದಿ ಅವರ ನಿವಾಸದಿಂದ ಕೇವಲ ಮೀಟರ್ ದೂರದಲ್ಲಿ ಮಂಗಳವಾರ ಪ್ರಬಲ ಕಾರ್ ಬಾಂಬ್ ಸ್ಫೋಟ ಸಂಭವಿಸಿದೆ. ಕಾಬೂಲ್ ನಲ್ಲಿ ರಕ್ಷಣಾ ಸಚಿವರ ಮನೆ ಬಳಿ ಕಾರ್ ಬಾಂಬ್ ದಾಳಿ ನಡೆದ ಸ್ಥಳಕ್ಕೆ ಭದ್ರತಾ ಪಡೆಗಳು ತಕ್ಷಣ ಆಗಮಿಸಿದವು. ಈ ಪ್ರದೇಶದಲ್ಲಿ ಪ್ರತ್ಯಕ್ಷದರ್ಶಿಗಳು ಕೂಡ … Continued

ಚೀನಾದ ವುಹಾನ್ ನಲ್ಲಿ ಮತ್ತೆ ಮರಳಿದ ಕೋವಿಡ್ : ಎಲ್ಲ ನಿವಾಸಿಗಳ ಪರೀಕ್ಷೆಗೆ ಆದೇಶ

ವುಹಾನ್: ಕೊರೋನಾ ವೈರಸ್ ಮೊದಲು ಕಾಣಿಸಿಕೊಂಡ ವುಹಾನ್ ನಲ್ಲಿ ವರ್ಷದ ಬಳಿಕ ಮತ್ತೆ ಕೋವಿಡ್ ಸೋಂಕು ಸ್ಫೋಟವಾಗಿದ್ದು, ಚೀನಾ ಸರ್ಕಾರ ವುಹಾನ್ ನಲ್ಲಿ ಸಾಮೂಹಿಕ ಕೋವಿಡ್ ಪರೀಕ್ಷೆಗೆ ಆದೇಶಿಸಿದೆ. ಅಧಿಕಾರಿಗಳು ನೀಡಿರುವ ಮಾಹಿತಿಯಂತೆ ವುಹಾನ್ ನ ಏಳು ವಲಸೆ ಕಾರ್ಮಿಕರಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಕಂಡುಬಂದಿದ್ದು, ಇನ್ನೂ ಹಲವರಲ್ಲಿ ಸೋಂಕು ಇರುವ ಕುರಿತು ಶಂಕೆ ವ್ಯಕ್ತವಾಗಿದೆ. … Continued

ಇಂದು ಅಧಿಕೃತವಾಗಿ ಬೇರ್ಪಟ್ಟ ಬಿಲ್​ ಗೇಟ್ಸ್​-ಮೆಲಿಂಡಾ : 27 ವರ್ಷದ ದಾಂಪತ್ಯ ಜೀವನ ಅಂತ್ಯ

ವಾಷಿಂಗ್ಟನ್‌: ಜಗತ್ತಿನ ಶ್ರೀಮಂತ ಉದ್ಯಮಿ ಬಿಲ್ ಗೇಟ್ಸ್ ಮತ್ತು ಪತ್ನಿ ಮೆಲಿಂಡಾ ಫ್ರೆಂಚ್​ ಗೇಟ್ಸ್ ಈಗ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ. ತಾವಿಬ್ಬರೂ ಬೇರೆಯಾಗುತ್ತಿರುವುದಾಗಿ ಮೂರು ತಿಂಗಳ ಹಿಂದೆ ಘೋಷಿಸಿದ್ದರು. ಇದೀಗ ಅಧಿಕೃತವಾಗಿ ವಿಚ್ಛೇದನ​ ಪಡೆಯವ ಮೂಲಕ, 27ವರ್ಷದ ದಾಂಪತ್ಯ ಮುರಿದುಕೊಂಡಿದ್ದಾರೆ. ವಾಷಿಂಗ್ಟನ್​​ನ ಕಿಂಗ್​ಕೌಂಟಿ ಕೋರ್ಟ್​ನಲ್ಲಿ ಇಂದು (ಮಂಗಳವಾರ) ಈ ದಂಪತಿಯ ವಿಚ್ಛೇದನಕ್ಕೆ ಸಂಬಂಧಪಟ್ಟ ಅಂತಿಮ ವಿಚಾರಣೆ … Continued

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಬರೋಬ್ಬರಿ 7 ಪದಕ ಗೆದ್ದು ದಾಖಲೆ ಬರೆದ ಈಜುಗಾರ್ತಿ..!

ಟೋಕಿಯೋ ಒಲಂಪಿಕ್ಸ್‌ನಲ್ಲಿ ಬರೋಬ್ಬರಿ ಏಳು ಪದಕ ಗೆದ್ದು ಆಸ್ಟ್ರೇಲಿಯಾದ ಈಜುಗಾರ್ತಿ ಎಮ್ಮಾ ಮೆಕಿಯನ್ ಮಹಿಳಾ ಕ್ರೀಡಾಪಟುವಾಗಿ ಇತಿಹಾಸ ನಿರ್ಮಿಸಿದ್ದಾರೆ. ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಅತೀ ಹೆಚ್ಚು ಪದಕಗಳಿಸಿದ ಮಹಿಳೆ ಎಂಬ ವಿಶ್ವ ದಾಖಲೆ ಬರೆದಿದ್ದಾರೆ. ಭಾನುವಾರ ನಡೆದ 4X100 ಮಹಿಳೆಯರ ಫ್ರೀ ಸ್ಟೈಲ್ ರಿಲೆಯಲ್ಲಿ ಚಿನ್ನ ಗಳಿಸುವ ಮೂಲಕ ಎಮ್ಮಾ ಮೆಕಿಯನ್ ದಾಖಲೆ ನಿರ್ಮಿಸಿದರು. ಇದಕ್ಕೂ ಮೊದಲು … Continued

ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ ಅಧ್ಯಕ್ಷತೆ ವಹಿಸಿದ ಭಾರತದ ಮೊದಲ ಪ್ರಧಾನಿ ಮೋದಿ

ನವದೆಹಲಿ: ಭಾರತವು ಭಾನುವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ಅಧ್ಯಕ್ಷತೆ(rotating)ಯನ್ನು ವಹಿಸಿಕೊಂಡಿದೆ ಮತ್ತು ಈ ತಿಂಗಳಲ್ಲಿ ಕಡಲ ಭದ್ರತೆ, ಶಾಂತಿಪಾಲನೆ ಮತ್ತು ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದ ಸಹಿ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಭಾರತವು ಫ್ರಾನ್ಸ್ ನಿಂದ ಅಧ್ಯಕ್ಷತೆಯನ್ನು ವಹಿಸಿಕೊಂಡಿತು. ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿ, ಟಿ.ಎಸ್. ತಿರುಮೂರ್ತಿ ಅವರು ವಿಶ್ವಸಂಸ್ಥೆಯ ಫ್ರಾನ್ಸ್ ನ ಖಾಯಂ ಪ್ರತಿನಿಧಿ ನಿಕೋಲಸ್ ಡಿ … Continued

ಅಮೆರಿಕದಲ್ಲಿ ಹೊಸ ಕೋವಿಡ್ ನಿರ್ಬಂಧಗಳ ಸಾಧ್ಯತೆ: ಬಿಡೆನ್

ವಾಶಿಂಗ್ಟನ್: ಕೋವಿಡ್-19 ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅಮೆರಿಕದಲ್ಲಿ ಹೊಸ ಮಾರ್ಗದರ್ಶಿ ಸೂತ್ರಗಳು ಅಥವಾ ನಿರ್ಬಂಧಗಳು ಜಾರಿಗ ಬರುವ ಎಲ್ಲ ಸಾಧ್ಯತೆಗಳಿವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಶುಕ್ರವಾರ ಹೇಳಿದ್ದಾರೆ. ವಾರಾಂತ್ಯದ ವಿಶ್ರಾಂತಿಗಾಗಿ ಶ್ವೇತಭವನದಿಂದ ಹೆಲಿಕಾಪ್ಟರಿನಲ್ಲಿ ಹೊರಡುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೆರಿಕದ ಜನತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಹೊಸ ಮಾರ್ಗದರ್ಶಿ ಸೂತ್ರಗಳನ್ನು … Continued

ಕೋವಿಡ್‌-19 ಆರಂಭಿಕ ಲಕ್ಷಣಗಳು ವಯಸ್ಸು, ಪುರುಷರು-ಮಹಿಳೆಯರ ನಡುವೆ ಬದಲಾಗುತ್ತವೆ: ಬ್ರಿಟನ್‌ ಅಧ್ಯಯನ…!

ಲಂಡನ್: ಕೋವಿಡ್ -19 ಸೋಂಕನ್ನು ಸೂಚಿಸುವ ಆರಂಭಿಕ ರೋಗಲಕ್ಷಣಗಳು ವಯೋಮಾನದವರಲ್ಲಿ ಮತ್ತು ಪುರುಷರು ಹಾಗೂ ಮಹಿಳೆಯರ ನಡುವೆ ಬದಲಾಗುತ್ತವೆ ಎಂದು ಬ್ರಿಟನ್ನಿನ ಹೊಸ ಸಂಶೋಧನೆ ಕಂಡುಹಿಡಿದಿದೆ. ಗುರುವಾರ ‘ದಿ ಲ್ಯಾನ್ಸೆಟ್ ಡಿಜಿಟಲ್ ಹೆಲ್ತ್’ ಜರ್ನಲ್ಲಿನಲ್ಲಿ ಪ್ರಕಟವಾದ ಈ ಅಧ್ಯಯನವನ್ನು ಲಂಡನ್ನಿನ ಕಿಂಗ್ಸ್ ಕಾಲೇಜಿನ ಸಂಶೋಧಕರು ಸ್ವಯಂ-ವರದಿ ಮಾಡಿದ ಜಡ್‌ಒಇ ಕೋವಿಡ್ (ZOE COVID) ಸಿಂಪ್ಟಮ್ ಸ್ಟಡಿ … Continued

ಆಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಮೊದಲ ಮತ್ತು ಏಕೈಕ ಉದ್ಯೋಗ ಅರ್ಜಿ 2.5 ಕೋಟಿ ರೂ.ಗಳಿಗೆ ಮಾರಾಟ

ವರ್ಷಗಳಲ್ಲಿ ನಾವು ಆಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಸ್ಮರಣಿಕೆಗಳನ್ನು ಕೋಟ್ಯಂತರ ರೂಪಾಯಿಗಳಿಗೆ ಹರಾಜು ಮಾಡಲು ಪ್ರಾರಂಭಿಸಿದ್ದೇವೆ. ಅದಕ್ಕೆ ಈಗ ಹೊಸ ಸೇರ್ಪಡೆ ಯಾಗಿದೆ.ಅವರ ಮೊದಲ ಹಾಗೂ ಏಕೈಕ ಉದ್ಯೋಗದ ಅರ್ಜಿಯನ್ನು ಈಗ 2.5 ಕೋಟಿ ರೂ.ಗಳಿಗೆ ಹರಾಜು ಮಾಡಲಾಗಿದೆ. ಸ್ಟೀವ್ ಜಾಬ್ಸ್ ಯಾವಾಗಲೂ ಅನೇಕರಿಗೆ ಗೊತ್ತಿರುವಂತೆ ನೆಚ್ಚಿನ ತಂತ್ರಜ್ಞಾನ ಕಂಪನಿ ಸ್ಥಾಪಿಸಲು ಹೆಸರುವಾಸಿಯಾಗಿದ್ದಾರೆ. ಆದಾಗ್ಯೂ, … Continued