ಕುಮಟಾ: ಚಿತ್ರಗಿ ಸರ್ಕಾರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟನೆ

ಕುಮಟಾ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಮಹತ್ವ ನೀಡಿವೆ ಎಂದು ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಹೇಳಿದರು. ಚಿತ್ರಗಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಉಚಿತ ಕೋವಿಡ್‌ ಲಸಿಕೆ ನೀಡಿ … Continued

ನಿವೃತ್ತ ಪ್ರಾಚಾರ್ಯ ಜಿ. ವಿ. ಭಟ್ಟ ಕೊಂಕೇರಿ ನಿಧನ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಡತೋಕದ ಕೊಂಕೇರಿಯವರಾದ ನಿವೃತ್ತ ಪ್ರಾಚಾರ್ಯ ಜಿ. ವಿ. ಭಟ್ಟ (87) ಕೊಂಕೇರಿ ಶನಿವಾರ ನಿಧನರಾದರು. ಕಾರವಾರದ ಪ್ರತಿಷ್ಠಿತ ದಿವೇಕರ ಕಾಲೇಜಿನ ಪ್ರಥಮ ಪ್ರಾಚಾರ್ಯರಾಗಿದ್ದರು ಸತತವಾಗಿ 23 ವರ್ಷ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ತಮ್ಮ ಮೂಲ ಮನೆ ಕಡತೋಕದಲ್ಲಿ ನೆಲೆಸಿ ಅನೇಕ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. … Continued

ಕುಮಟಾ: ಹಿರಿಯ ಕಾಂಗ್ರೆಸ್‌ ನಾಯಕ ಮೋಂಟಿ ಫರ್ನಾಂಡಿಸ್‌ ನಿಧನ

ಕುಮಟಾ: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿ ಮೋಂಟಿ ಫಾರ್ನಾಂಡಿಸ್ ಗುರುವಾರ ನಿಧನರಾಗಿದ್ದಾರೆ. ಸರಳ ವ್ಯಕ್ತಿತ್ವದ ಅವರು ಕಾಂಗ್ರೆಸ್‌ ಪಕ್ಷದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಎಲ್ಲ ಸಮುದಾಯದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು ಪಕ್ಷಾತೀತವಾಗಿ ಉತ್ತಮ ಸಂಬಂಧಹೊಂದಿದ್ದರು. ಅವರು ಪತ್ನಿ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಕುಮಟಾದಲ್ಲಿ ಆನ್‌ಲೈನ್ ಷೇರು ಮಾರುಕಟ್ಟೆಯು ಆರಂಭ … Continued

ಬೆತ್ತಗೇರಿ ರಮಾನಂದ ಭಟ್ಟ ನಿಧನ

ಕುಮಟಾ : ತಾಲೂಕಿನ ಬೆತ್ತಗೇರಿಯ ರಮಾನಂದ ಭಟ್ಟ (65) ಭಾನುವಾರ ಹೃದಯಘಾತದಿಂದ ನಿಧನರಾಗಿದ್ದಾರೆ. ಧಾರೇಶ್ವರದ ಬಿಜೆಪಿಯ ಭೂತ ಮಟ್ಟದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸುದೀರ್ಘ ಕಾಲದಿಂದ ಶ್ರೀ ರಾಮಚಂದ್ರಾ ಪುರ ಮಠದ ಬಿಂದು-ಸಿಂಧು ಯೋಜನೆಯ ಪ್ರಧಾನ, ರಾಗಿ ವಲಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು, ಸಂತಾಪ: ರಮಾನಂದ ಭಟ್‌ ಅವರ ನಿಧನಕ್ಕೆ ಶಾಸಕ ದಿನಕರ ಶೆಟ್ಟಿ, ಹವ್ಯಕ … Continued

ಕುಮಟಾ: ಗೋ ಗ್ರೀನ್‌ನಲ್ಲಿ ಹವ್ಯಕ ಸೇವಾ ಪ್ರತಿಷ್ಠಾನದ ಸಮಾವೇಶ: ತಮ್ಮತನ ಉಳಿಸಿಕೊಳ್ಳಲು ಸಂಘಟನೆ ಬೇಕು- ಕಾಗೇರಿ

ಕುಮಟಾ: ನಮ್ಮ ಬದುಕಿನ ಮಧ್ಯೆ ಬರುವ ಸಮಸ್ಯೆ ನಿವಾರಣೆಗೆ  ಹಾಗೂ ತಮ್ಮತನ ಉಳಿಸಿಕೊಳ್ಳಲು ಸಂಘಟನೆ ಬೇಕು ಎಂದು ವಿಧಾಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಬಡಗಣಿಯ ಗೊ ಗ್ರೀನ್ ಮೈದಾನದಲ್ಲಿ ನಡೆದ ಹವ್ಯಕ ಸೇವಾ ಪ್ರತಿಷ್ಠಾನ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರು ವ್ಯವಹಾರಿಕ ಜಂಜಾಟದಲ್ಲಿ ಇರುತ್ತಾರೆ. ಇದರ ಮಧ್ಯೆ … Continued

ಕುಮಟಾ: ನಿವೃತ್ತ ತಹಶೀಲ್ದಾರ ಮೇಘರಾಜ ನಾಯ್ಕ ನಿಧನ

ಕುಮಟಾ: ನಗರದ ಪೋಸ್ಟಲ್ ಕಾಲೋನಿ ಸಮೀಪದ ನಿವಾಸಿ ನಿವೃತ್ತ ತಹಸೀಲ್ದಾರ ಮೇಘರಾಜ್ ನಾಯ್ಕ್ (62) ಗುರುವಾರ ಮುಂಜಾನೆ ನಿಧನರಾದರು. ಅವರು ಕುಮಟಾದಲ್ಲಿ ತಹಸೀಲ್ದಾರ ಆಗಿದ್ದಾಗ ನೆರೆ ಹಾವಳಿ ಹಾಗೂ ಕೊರೊನಾ ಸಾಂಕ್ರಾಮಿಕ ರೋಗದಿಂದ ಉದ್ಭವಿಸಿದ ಪರಿಸ್ಥಿತಿಯ ನಿರ್ವಹಣೆಯಲ್ಲಿ ಹಗಲು ರಾತ್ರಿ ಕೆಲಸ ಮಾಡಿದ್ದರು. ಮೂಲತಃ ಕುಮಟಾ ತಾಲೂಕಿನ ಕಾಗಾಲ ಗ್ರಾಮದವರಾಗಿದ್ದ ಮೇಘರಾಜ ನಾಯ್ಕ ಅವರು ವಿಧಾನ … Continued

ಕುಮಟಾ: ಬಾಳಿಗಾ ಕಾಲೇಜಿನಲ್ಲಿ ರಾಜ್ಯಮಟ್ಟದ ಫ್ಲೋರ್ ಬಾಲ್ ಪಂದ್ಯಾವಳಿ ಉದ್ಘಾಟನೆ

ಕುಮಟಾ: ಡಾ. ಎ. ವಿ. ಬಳಿಗಾ ವಾಣಿಜ್ಯ ಮಹಾವಿದ್ಯಾಯದ ಕ್ರೀಡಾಂಗಣದಲ್ಲಿ ಭಾನುವಾರ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಫ್ಲೋರ್ ಬಾಲ್ ಪಂದ್ಯಾವಳಿಯ ಉದ್ಘಾಟನೆ ನಡೆಯಿತು. ಶಾಸಕ ದಿನಕರ್ ಶೆಟ್ಟಿ ಪಂದ್ಯಾವಳಿ ಉದ್ಘಾಟಿಸಿದರು. ದೇಶದಲ್ಲಿ ಕ್ರಿಕೆಟ್ ಜನಪ್ರಿಯತೆ ಹೆಚ್ಚಿದೆ. ಆದರೂ ಇತರ ಕ್ರೀಡೆಗೆ ಮಹತ್ವ ಬರುತ್ತಿದೆ. ಫ್ಲೋರ್ ಬಾಲ್ ಒಂದು ನೂತನ ಕ್ರೀಡೆ. ರಾಜ್ಯ ಮಟ್ಟದ … Continued

ದತ್ತಾತ್ರೇಯ ವೈದ್ಯ ನಿಧನ

ಕುಮಟಾ : ಹೊನ್ನಾವರ ತಾಲೂಕಿನ ನವಿಲುಗೋಣದ ಭುವಿನಕೊಡ್ಲು ದತ್ತಾತ್ರೇಯ ವೈದ್ಯ (87) ಭಾನುವಾರ ಸಂಜೆ ನಿಧನರಾದರು. ಮೃತರು ಪುತ್ರ, ಆರು ಪುತ್ರಿಯರು  ಹಾಗೂ ಅಪಾರಬಂಧು ಬಳಗವನ್ನು ಅಗಲಿದ್ದಾರೆ. ಉತ್ತಮ ಕೃಷಿಕರು ಆಗಿದ್ದ ಅವರು ಸುಧೀರ್ಘ ಕಾಲದಿಂದ ಶ್ರೀ ಭುವನೇಶ್ವರ ಮತ್ತು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಪೂಜೆ ನೆರವೇರಿಸಿ ಕೊಂಡುಬಂದಿದ್ದರು. ನವಿಲುಗೋಣ ಹಾಗೂ ಸುತ್ತಲಿನ ಪ್ರದೇಶದಲ್ಲಿ ದತ್ತಣ್ಣ … Continued

ಕುಮಟಾದಲ್ಲಿ ಅಕ್ಟೊಬರ್ 6ರಿಂದ 12ರ ವರೆಗೆ ತಾಳಮದ್ದಳೆ ಸಪ್ತಾಹ

ಕುಮಟಾ : ನಗರದ ಶ್ರೀ ಮಹಾಸತಿ ಸಭಾಭವನದಲ್ಲಿ ಅಕ್ಟೊಬರ್ ೬ರಿಂದ ೧೨ರ ವರೆಗೆ ತಾಳಮದ್ದಳೆ ಸಪ್ತಾಹ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಖ್ಯಾತ ಯಕ್ಷ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಮೈಸೂರು ಶ್ರೀರಂಗಪಟ್ಟಣದ ಯಕ್ಷ ಕೌಮುದಿ ಟ್ರಸ್ಟ್ ಅಧ್ಯಕ್ಷರಾದ ಗ. ನಾ. ಭಟ್ಟ ತಿಳಿಸಿದರು. ಯಕ್ಷ ಕೌಮುದಿ ಟ್ರಸ್ಟ್ ಮತ್ತು ಕುಮಟಾದ ಯುಗಾದಿ ಉತ್ಸವ ಸಮಿತಿ ಕುಮಟಾ ಸಂಯುಕ್ತ … Continued

ಕುಮಟಾ: ಖ್ಯಾತ ವಕೀಲ ಶ್ರೀಪಾದ ಶಾಸ್ತ್ರೀ ನಿಧನ

ಕುಮಟಾ :ಖ್ಯಾತ ವಕೀಲರಾಗಿದ್ದ ಕುಮಟಾದ ಶ್ರೀಪಾದ ಶಾಸ್ತ್ರೀ (86) ಅವರು ಶನಿವಾರ ನಗರದ ತಮ್ಮ ಮನೆಯಲ್ಲಿ ನಿಧನರಾದರು. ಮೃತರು ವಕೀಲರ ಸಂಘದ ಅಧ್ಯಕ್ಷರಾಗಿ, ನೋಟರಿಯಾಗಿ ಸೇವೆ ಸಲ್ಲಿಸಿದ್ದರು. ಸುಮಾರು 60 ವರ್ಷಗಳ ದೀರ್ಘ ಕಾಲ ವಕೀಲರಾಗಿ ಸೇವೆ ಸಲ್ಲಿಸಿದ್ದರು. ಇವರು ಸಾವಿರಾರು ಯುವ ವಕೀಲರಿಗೆ ಮಾರ್ಗ ದರ್ಶಕರಾಗಿಯೂ ಸಹಾಯ ಮಾಡಿದ್ದರು. ಶಾಸ್ತ್ರೀಯವರ ಆತ್ಮಕ್ಕೆ ಶಾಂತಿ ಕೋರಿ … Continued