ಕುಮಟಾ : ಬಾಳಿಗಾ ಕಾಲೇಜಿನಲ್ಲಿ ಪಿಯು ವಿದ್ಯಾರ್ಥಿಗಳಿಗೆ ಸಂಭವನೀಯ ಅಪಾಯದಿಂದ ಪಾರಾಗುವ ಬಗ್ಗೆ ಪ್ರಾತ್ಯಕ್ಷಿಕೆ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಡಾ.ಎ. ವಿ. ಬಾಳಿಗಾ ಮಹಾವಿದ್ಯಾಲಯದಲ್ಲಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಪದವಿಪೂರ್ವ ವಿದ್ಯಾರ್ಥಿಗಳಿಗೆ ಸಂಭವನೀಯ ಅಪಾಯದಿಂದ ಪಾರಾಗುವ ಕುರಿತು ಸೋಮವಾರ ಮಾಹಿತಿ ನೀಡಲಾಯಿತು. ಅಗ್ನಿಶಾಮಕ ದಳದ ಎಸ್. ಪಿ. ರಾಘವೇಂದ್ರ ಪಟಗಾರ ಮಾಹಿತಿ ನೀಡಿ, ಎಲ್ ಪಿ ಜಿ ಗ್ಯಾಸ್, ನೀರಿನಲ್ಲಿ ಮುಳುಗುತ್ತಿರುವವರ ರಕ್ಷಣೆ, ವಿದ್ಯುತ್ … Continued

ಉತ್ತರ ಕನ್ನಡ ಜಿಲ್ಲೆಯ 9 ತಾಲೂಕುಗಳು ಬರ ಪೀಡಿತ : ಸರ್ಕಾರ ಘೋಷಣೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ 9 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದೆ. ರಾಜ್ಯದ 195 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. ಅದರಲ್ಲಿ 161 ತೀವ್ರ ಬರ ಪೀಡಿತ ತಾಲೂಕುಗಳು ಹಾಗೂ 34 ತಾಲೂಕುಗಳನ್ನು ಸಾಧಾರಣ ಬರ ಪೀಡಿತ ಎಂದು ಕಂದಾಯ ಇಲಾಖೆ ವಿಪತ್ತು ನಿರ್ವಹಣಾ ವಿಭಾಗದ ಸರ್ಕಾರದ‌ ಜಂಟಿ ಕಾರ್ಯದರ್ಶಿ ಟಿ.ಸಿ.ಕಾಂತರಾಜ್ … Continued

ಶ್ರೀ ಲಕ್ಷ್ಮೀ ನರಸಿಂಹ ದೇವರಿಗೆ ಲಕ್ಷಾಧಿಕ ತುಳಸಿ ದಳದಿಂದ ಅರ್ಚನೆ

ಕುಮಟಾ : ತಾಲೂಕಿನ ಹೊಲನಗದ್ದೆ ತೆಪ್ಪದಮಠದ ಶ್ರೀ ಲಕ್ಷ್ಮೀನರಸಿಂಹ ದೇವಾಲಯದಲ್ಲಿ ಭಾನುವಾರ ಲಕ್ಷಾಧಿಕ ತುಳಸಿ ದಳದಿಂದ ಪೂಜೆ ನಡೆಯಿತು. ಸತತವಾಗಿ 10 ವರ್ಷದಿಂದ ಪ್ರತಿವರ್ಷ ವಾರ್ಷಿಕವಾಗಿ ಲಕ್ಷಾಧಿಕ ತುಳಸಿದಳದಿಂದ ಪೂಜೆ ನಡೆಸಿಕೊಂಡು ಬರಲಾಗುತ್ತಿದೆ. ಈವರ್ಷ ಅಧಿಕ ಮಾಸ ಇರುವುದರಿಂದ ಈ ಸಂದರ್ಭದಲ್ಲಿ ನಾಡಿನ ಕ್ಷೇಮಕ್ಕಾಗಿ ನಡೆಸುವ ಈ ಪೂಜೆಯಿಂದ ಜನರಿಗೆ ಅಧಿಕ ಫಲ ಪ್ರಾಪ್ತಿಯಾಗುವದು ಎಂದು … Continued

ಹೊಲನಗದ್ದೆಯ ಗ್ರಾಪಂ ಅಧ್ಯಕ್ಷರಾಗಿ ಎಂ. ಎಂ. ಹೆಗಡೆ ಆಯ್ಕೆ

ಕುಮಟಾ: ತಾಲೂಕಿನ ಹೊಲನಗದ್ದೆಯ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಭಾರತೀಯ ಜನತಾ ಪಕ್ಷದ ಎಂ. ಎಂ. ಹೆಗಡೆ ಹಾಗೂ ಉಪಾಧ್ಯಕ್ಷರಾಗಿ ಮಹಾಂತೇಶ ಹರಿಕಂತ್ರ ಅವರು ಆಯ್ಕೆಯಾಗಿದ್ದಾರೆ. ಸತತವಾಗಿ 5 ಬಾರಿ ಆಯ್ಕೆಯಾಗಿದ್ದ ವೇಳೆ ಗ್ರಾಮ ಪಂಚಾಯತ ಅಧ್ಯಕ್ಷ ಸ್ಥಾನದಿಂದ ವಂಚಿತವಾಗಿದ್ದ ಎಂ.ಎಂ. ಹೆಗಡೆ ಅವರು ಕೊನೆಗೂ 6ನೇ ಬಾರಿ ಗಾಪಂಗೆ ಆಯ್ಕೆಯಾಗಿರುವ ವೇಳೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಎಂ.ಎಂ. … Continued

ಕುಮಟಾ: ಜುಲೈ 23ರಂದು ಗಂಧರ್ವ ಕಲಾಕೇಂದ್ರದ ವಾರ್ಷಿಕೋತ್ಸವ

ಕುಮಟಾ: ಇಲ್ಲಿನ ಗಂಧರ್ವ ಕಲಾಕೇಂದ್ರದ ವಾರ್ಷಿಕೋತ್ಸವ ಜುಲೈ 23, ಭಾನುವಾರ ಮೂರೂರು ರಸ್ತೆಯಲ್ಲಿರುವ ಹವ್ಯಕ ಸಭಾಭವನದಲ್ಲಿ ನಡೆಯಲಿದೆ. ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ವಿವಿಧ ಕಲಾವಿದರು ಹಾಗೂ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ನಡೆಯಲಿದೆ. ಸಂಜೆ 4 ಗಂಟೆಗೆ ಸಭಾ ಕಾರ್ಯಕ್ರಮವಿದ್ದು, ವೈದ್ಯ ಡಾ.ಅನಿಲ ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಅರೇಅಂಗಡಿಯ ಎಸ್‌.ಕೆ.ಪಿ.ಸಂಯುಕ್ತ ಪದವಿಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕರಾದ … Continued

ಸಿ.ಎ. ಅಂತಿಮ ಪರೀಕ್ಷೆಯಲ್ಲಿ ರಶ್ಮಿ ಭಟ್ ಉತ್ತೀರ್ಣ

ಬೆಂಗಳೂರು : ಬೆಂಗಳೂರಿನ ರಶ್ಮಿ ಎಲ್. ಭಟ್ ಅವರು ಇತ್ತೀಚಿಗೆ ನಡೆದ ಸಿ. ಎ. ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ರಶ್ಮಿ ಅವರು ಹಾಲಿ ಬೆಂಗಳೂರು ನಿವಾಸಿಗಳಾದ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ತಲಗೋಡು ಮೂಲದ ಲಂಬೋದರ ಭಟ್ ಹಾಗು ವೀಣಾ ಭಟ್ ದಂಪತಿ ಪುತ್ರಿಯಾಗಿದ್ದಾರೆ. ಕಠಿಣ ಅಭ್ಯಾಸ ಮತ್ತು ದೇವರ ಆಶೀರ್ವಾದ ತಮ್ಮ … Continued

ಕುಮಟಾ: ಬಾಳಿಗಾ ಕಾಲೇಜಿಗೆ ಆಗಮಿಸಿದ ಚಂದಾವರ ಹನುಮಂತ ದೇವರು

 ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಡಾ.ಎ.ವಿ. ಬಾಳಿಗ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯಕ್ಕೆ ಭಾನುವಾರ ಸಂಜೆ ಜಿಲ್ಲೆಯ ಹೆಸರಾಂತ ಚಂದಾವರದ ಹನುಮಂತ ದೇವರು ಆಗಮಿಸಿತ್ತು. ಕಾಲೇಜಿನ ಆವರಣದಲ್ಲಿ ಕೆನರಾ ಕಾಲೇಜು ಸೊಸೈಟಿಯ ಆಡಳಿತ ಮಂಡಳಿಯವರು ಕಾಲೇಜು ಸಿಬ್ಬಂದಿಯಿಂದ ಪೂಜೆ ನೇರವೇರಿತು, ಕಳೆದ 75 ವರ್ಷಗಳ ಇತಿಹಾಸದಲ್ಲಿ ಬಾಳಿಗಾ ಕಾಲೇಜಿಗೆ ಚಂದಾವರದ ಹನುಮಂತ ದೇವರ ಪಲ್ಲಕ್ಕಿ … Continued

ಕುಮಟಾ: ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಮಟ್ಟದ 8 ರ‍್ಯಾಂಕ್‌ಗಳೊಂದಿಗೆ ನೂರಕ್ಕೆ ನೂರು ಸಾಧನೆ ಮಾಡಿದ ಕೊಂಕಣ ಎಜ್ಯುಕೇಶನ್‌ ಪ್ರೌಢಶಾಲೆ

ಕುಮಟಾ: ಸೋಮವಾರ ಪ್ರಕಟವಾದ 2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಕುಮಟಾದ ಕೊಂಕಣ ಎಜ್ಯುಕೇಶನ್‌ ಟ್ರಸ್ಟ್‌ನ ಸಿವಿಎಸ್‌ಕೆ ಪ್ರೌಢಶಾಲೆಯು ನೂರಕ್ಕೆ ನೂರು ಫಲಿತಾಂಶ ಪಡೆದಿದೆ. ರಾಜ್ಯಕ್ಕೆ ಚತುರ್ಥ ಸ್ಥಾನ ಪಡೆದು, ರಾಜ್ಯ ಮಟ್ಟದಲ್ಲಿ ರ‍್ಯಾಂಕ್‌ ಗಳಿಸುವ ಪರಂಪರೆಯನ್ನು ಮುಂದುವರೆಸಿದೆ. ಪರೀಕ್ಷೆಗೆ ಕುಳಿತ 139 ವಿದ್ಯಾರ್ಥಿಗಳೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, 8 ವಿದ್ಯಾರ್ಥಿಗಳು ರಾಜ್ಯಮಟ್ಟದ ಟಾಪ್‌-10 ರ‍್ಯಾಂಕ್‌ … Continued

ದ್ವಿತೀಯ ಪಿಯುಸಿ ಪರೀಕ್ಷೆ : ಸತತ ಮೂರನೇ ಬಾರಿಗೆ ನೂರಕ್ಕೆ ೧೦೦ ಫಲಿತಾಂಶ ಪಡೆದ ಕುಮಟಾ ಸರಸ್ವತಿ ಪಿಯು ಕಾಲೇಜು

ಕುಮಟಾ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕುಮಟಾದ ಕೊಂಕಣ ಎಜುಕೇಷನ್ ಟ್ರಸ್ಟ್ ನ ಬಿ.ಕೆ. ಭಂಡಾರ್ಕರ್ಸ್ ಸರಸ್ವತಿ ಪದವಿ ಪೂರ್ವ ಕಾಲೇಜ್‌ ಪ್ರತಿಶತ ನೂರಕ್ಕೆ ನೂರು ಫಲಿತಾಂಶ ಪಡೆದಿದೆ. ವಿಜ್ಞಾನ ವಿಭಾಗದಲ್ಲಿ ರಂಜನಾ ಮಡಿವಾಳ ೫೮೮ (೯೮%) ಅಂಕ ಪಡೆದು ರಾಜ್ಯ ಮಟ್ಟದಲ್ಲಿ ೯ ನೇ ಸ್ಥಾನ ಪಡೆದಿದ್ದಾಳೆ ಹಾಗೂ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿರುತ್ತಾಳೆ. ಶ್ರೀನಂದಾ … Continued

ಕುಮಟಾ: ದ್ವಿತೀಯ ಪಿಯು ಫಲಿತಾಂಶ; ಮೊದಲ ಬ್ಯಾಚಿನಲ್ಲೇ ಗೋರೆ ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜು ೧೦೦ಕ್ಕೆ ನೂರು ಫಲಿತಾಂಶ

 ಕುಮಟಾ : ಈ ವರ್ಷದ ದ್ವಿತೀಯ ಪಿಯಿಸಿ ಪರೀಕ್ಷೆಯಲ್ಲಿ ಶ್ರೀ ಜಿ. ಎನ್. ಹೆಗಡೆ ಟ್ರಸ್ಟ್ (ರಿ) ಪ್ರಾಯೋಜಕತ್ವದಲ್ಲಿ ನಡೆಯುವ ಕುಮಟಾ ತಾಲೂಕು ಗೋರೆಯ ಕೆನರಾ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜಿಗೆ ನೂರಕ್ಕೆ ನೂರು ಫಲಿತಾಂಶ ಬಂದಿದೆ. ಕಾಲೇಜಿಗೆ ಇದು ಮೊದಲನೇ ಬ್ಯಾಚ್‌ ಆಗಿದ್ದು, ಆದರೂ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ – … Continued