ಕುಮಟಾ: ನಾಗೇಶ ಭಟ್ಟರ ಮುಕ್ತಾಯ ಕಥಾಸಂಕಲನ ಲೋಕಾರ್ಪಣೆ

ಕುಮಟಾ: ಭಾರತೀಯ ದೂರ ಸಂಚಾರ ನಿಗಮ(ಬಿಎಸ್ಎನ್ಎಲ್)ದ ನಿವೃತ್ತ ಉದ್ಯೋಗಿಗಳಾದ ನಾಗೇಶ ಭಟ್ಟ ಅವರು ಬರೆದ ‘ಮುಕ್ತಾಯ’ ಕಥಾಸಂಕಲನ ಲೋಕಾರ್ಪಣೆಗೊಂಡಿತು. ಇದು ಹತ್ತು ಚಿಕ್ಕ ಕಥೆಗಳ ಸಂಕಲನವಾಗಿದೆ. ಖ್ಯಾತ ಸಾಹಿತಿ ಶ್ರೀಧರ ಬಳಿಗಾರ ಅವರು ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು. ಹೊನ್ನಾವರದ ನಾಗರಿಕ ಪತ್ರಿಕೆಯ ಸಂಪಾದಕ ಹಾಗೂ ಸರಸ್ವತಿ ಪ್ರಕಾಶನದ ಪ್ರಕಾಶಕ ಕೃಷ್ಣಮೂರ್ತಿ ಹೆಬ್ಬಾರರು ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಗಜಾನನ … Continued

ಕೂಜಳ್ಳಿಯಲ್ಲಿ ನಡೆದ ಪಂ.ಷಡಕ್ಷರಿ ಗವಾಯಿಗಳ ಪುಣ್ಯಸ್ಮರಣೆ ಕಾರ್ಯಕ್ರಮ

ಕುಮಟಾ: ಸಂಗೀತ ಕೇವಲ ಮನಸ್ಸಿಗೆ ನೆಮ್ಮದಿಯನ್ನಷ್ಟೇ ನೀಡುವುದಿಲ್ಲ, ಜೊತೆಗೆ ಮಹಾದಾನಂದವನ್ನೂ ನೀಡುತ್ತದೆ ಎಂದು ಎಂಟಿಎನ್ಎಲ್ ನಿವೃತ್ತ ಜಿಡಿಎಂ ರಮೇಶ ಎಸ್. ಹೆಗಡೆ ಹೇಳಿದರು. ಪಂ.ಷಡಕ್ಷರಿ ಗವಾಯಿ ಅಕಾಡೆಮಿ ವತಿಯಿಂದ ಕುಮಟಾ ತಾಲೂಕಿನ ಕೂಜಳ್ಳಿ ಕುಳಿಹಕ್ಕಲ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನಡೆದ ಪಂ. ಷಡಕ್ಷರಿ ಗವಾಯಿಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಗೀತ ಆಸ್ವಾದನೆಯೂ ಒಂದು … Continued

ಕೆನರಾ ಕ್ರೆಡಿಟ್ ಸೌಹಾರ್ದ ಸಂಘಕ್ಕೆ ೧.೨೯ ಲಕ್ಷ ರೂ. ಲಾಭ

ಕುಮಟಾ: ಕೆನರಾ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದ ವಾರ್ಷಿಕ ಸಭೆಯು ಬಗ್ಗೋಣದ ಲಯನ್ಸ್ ಭವನದಲ್ಲಿ ನಡೆಯಿತು. ಸಹಕಾರಿ ಸಂಘದ ಅಧ್ಯಕ್ಷರಾದ ಡಾ.ಜಿ.ಜಿ.ಹೆಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಘವು ೨೦೨೦-೨೧ ರಲ್ಲಿ ೧೨೯೭೦೧ ರೂ.ಗಳಷ್ಟು ಲಾಭ ಮಾಡಿದೆ. ಲಾಕ್ ಡೌನ್ ಇತ್ಯಾದಿ ಸಮಸ್ಯೆಯ ಮಧ್ಯೆಯೂ ಸಂಘವು ಲಾಭಗಳಿಸಿದ್ದು ಸಂತಸದ ವಿಷಯವಾಗಿದೆ. ಜನರು ಆರ್ಥಿಕ ಅಭಿವೃದ್ಧಿ ಹೊಂದಬೇಕಾದರೆ ಹಣಕಾಸು … Continued

ಕುಮಟಾ ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯಕ್ಕೆ ಬಿ ಪ್ಲಸ್ ನ್ಯಾಕ್ ಮಾನ್ಯತೆ

ಕುಮಟಾ; ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯಕ್ಕೆ ನವೆಂಬರ್ ೧೮ ಮತ್ತು ೧೯ ರಂದು ನ್ಯಾಕ್ ಸಮೀತಿ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದ್ದು, ಕಾಲೇಜು ಬಿ ಪ್ಲಸ್‌ ನ್ಯಾಕ್ ಶ್ರೇಣಿ ಉನ್ನತಿ ಪಡೆದುಕೊಂಡಿದೆ. ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗಿನ ಚರ್ಚೆ, ಆಡಳಿತ ಮಂಡಳಿಯೊಂದಿಗಿನ ಸಭೆ, ಪೂರ್ವ ವಿದ್ಯಾರ್ಥಿಗಳೊಂದಿಗಿನ ಸಂಭಾಷಣೆ ನಡೆಸಿ ನ್ಯಾಕ್ ಸಮಿತಿ ಮೆಚ್ಚುಗೆ … Continued

ಕುಮಟಾ: ನವೆಂಬರ್‌ 18-19ರಂದು ಡಾ.ಎ.ವಿ ಬಾಳಿಗಾ ವಾಣಿಜ್ಯ ಕಾಲೇಜಿಗೆ ನ್ಯಾಕ್ ಸಮಿತಿ

ಕುಮಟಾ; ರಾಜ್ಯದ ಪ್ರತಿಷ್ಠಿತ ಮಹಾವಿದ್ಯಾಲಯದಲ್ಲಿ ಒಂದಾಗಿರುವ ಕುಮಟಾದ ಕೆನರಾ ಕಾಲೇಜು ಸೊಸೈಟಿಯ ಡಾ.ಎ.ವಿ ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ಪರಿವೀಕ್ಷಣೆಗಾಗಿ ನ್ಯಾಕ್ ಸಮಿತಿಯು ಆಗಮಿಸಲಿದೆ. ಡಾ. ಎ. ವಿ. ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯವು ನ್ಯಾಕ್ ಮೌಲ್ಯಮಾಪನ ಮತ್ತು ಮರು-ಮಾನ್ಯತೆ ಪ್ರಕ್ರಿಯೆಗೆ ಒಳಪಡುತ್ತಿದ್ದು ನವೆಂಬರ್‌ ೧೮ ಮತ್ತು ೧೯ ೨೦೨೧ರಂದು ನ್ಯಾಕ್ ಸಮಿತಿಯ ಸದಸ್ಯರು ಮಹಾವಿದ್ಯಾಲಯಕ್ಕೆ ತಮ್ಮ ನಿಯೋಜಿತ … Continued

ಉಪನ್ಯಾಸಕರ ಪಾಠವು ಪ್ರೇರಣೆಯಾದಾಗ ಮಾತ್ರ ವಿದ್ಯಾಥಿಗಳಲ್ಲಿ ಜ್ಞಾನದ ಮಟ್ಟ ಹೆಚ್ಚಿಸಲು ಸಾಧ್ಯ; ಪ್ರೊ..ನಿಟ್ಟೂರ್

ಕುಮಟಾ; ವಿಷಯಗಳ ಆಳ ಜ್ಞಾನದೊಂದಿಗೆ ಕಲಾತ್ಮಕ ಬೋಧನೆಯಿಂದ ಉಪನ್ಯಾಸಕರು ಪಾಠಮಾಡಬೇಕು .ಕಲಿಸುವಿಕೆಯು ಆಕರ್ಷಕವಾಗಿ ವಿದ್ಯಾರ್ಥಿಗಳ ಮನ ಮುಟ್ಟುವಂತೆ ಇದ್ದಾಗ ಫಲಿತಾಂಶ ಗುಣಮಟ್ಟವು ಹೆಚ್ಚುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರಾದ ಪ್ರೊ..ಹನುಮಂತಪ್ಪ ನಿಟ್ಟೂರ್ ಹೇಳಿದರು. ಅವರು ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಾಣಿಜ್ಯ ಮತ್ತು ಲೆಕ್ಕ ಶಾಸ್ತ್ರದ ವಿಷಯದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, … Continued

ಕೊಡ್ಲಗದ್ದೆ: ಪೌಷ್ಟಿಕ ಆಹಾರ ಮೇಳ

ಅಂಕೋಲಾ: ಅಂಕೋಲಾ ತಾಲೂಕಿನ ಕೊಡ್ಲಗದ್ದೆ ಗ್ರಾಮದ ಗ್ರಾಮ ಅರಣ್ಯ ಸಮಿತಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಕೊಡ್ಲಗದ್ದೆ ಜ್ಞಾನೋದಯ ಜ್ಞಾನ ವಿಕಾಸ ಸಂಘದವರಿಂದ ಪೌಷ್ಟಿಕ ಆಹಾರ ಮೇಳ ಸೋಮವಾರ (ಅಕ್ಟೋಬರ್‌ 18) ನಡೆಯಿತು. ಸುಂಕಸಾಳದ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪೌಷ್ಟಿಕ ಆಹಾರಗಳ ಕುರಿತು ಮಾಹಿತಿ … Continued

ಹಿರಿಯ ರಾಜಕಾರಣಿ ಡಾ.ಎಂ.ಪಿ.ಕರ್ಕಿ ನಿಧನ: ಜನತೆ ಕಂಬನಿ

ಕುಮಟಾ;ಉತ್ತರ ಕನ್ನಡ ಜಿಲ್ಲೆಯ ಅತ್ಯಂತ ಸಜ್ಜನ ರಾಜಕಾರಣಿ, ಶಿಕ್ಷಣ ಪ್ರೇಮಿ, ಖ್ಯಾತ ವೈದ್ಯರಾಗಿದ್ದ ಹೊನ್ನಾವರದ ಕರ್ಕಿಯ ಡಾ.ಎಂ.ಪಿ.ಕರ್ಕಿ(೮೭) ಸೋಮವಾರ ಸಂಜೆ ನಿಧನರಾದ ಸುದ್ದಿ ತಿಳಿಯುತ್ತಿರುವಂತೆ ಜನರು ಕಣ್ಣೀರು ಮಿಡಿದರು. ಜನಸಂಘದ ಮೂಲಕ ರಾಜಕೀಯಕ್ಕೆ ಬಂದ ಡಾ.ಎಂ.ಪಿ.ಕರ್ಕಿ ನಂತರ ಬಿಜೆಪಿಯಲ್ಲಿ ಕುಮಟಾ-ಹೊನ್ನಾವರ ಕ್ಷೇತ್ರದಿಂದ ೧೯೮೩ ಮತ್ತು ೧೯೯೪ ರಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ ಜನೋಪಯೋಗಿ ಕಾರ್ಯದ … Continued

ಬಾಡ :ಶ್ರೀ ಕಾಂಚಿಕಾ ಪರಮೇಶ್ವರಿ ದೇವಾಲಯದಲ್ಲಿ ನವರಾತ್ರಿ ಉತ್ಸವ ಸಂಪನ್ನ

ಕುಮಟಾ : ತಾಲೂಕಿನ ಪ್ರಸಿದ್ಧ ಶಕ್ತಿ ಸ್ಥಳ ಬಾಡದ ಶ್ರೀ ಕಾಂಚಿಕಾ ಪರಮೇಶ್ವರಿ ದೇವಾಲಯದಲ್ಲಿ ನವರಾತ್ರಿ ಉತ್ಸವ ಸಂಪನ್ನವಾಯಿತು. ವಿಜಯ ದಶಮಿ ದಿನವಾದ ಶುಕ್ರವಾರ ಮುಂಜಾನೆಯಿಂದ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳ ಮೂಲಕ ನವರಾತ್ರಿ ಉತ್ಸವ ವೈಭವಯುತವಾಗಿ ನಡೆಯಿತು. ಮುಂಜಾನೆ ಪಲ್ಲಕಿ ಉತ್ಸವ ನಡೆಯಿತು. ಶ್ರೀ ಕಾಂಚಿಕಾ ಪರಮೇಶ್ವರಿ ಪಲ್ಲಕಿ ಮೂಲಕ ಭತ್ತದ ಗದ್ದೆಗೆ ಸಾಗಿ … Continued

ಶಿಕ್ಷಕರ ಕಾರ್ಯ ಶ್ಲಾಘನೆ ಮಾಡಿದ ಸಚಿವ ನಾಗೇಶ, ಅಧಿಕಾರಿಗಳ ಕೆಲಸದ ಬಗ್ಗೆ ಅತೃಪ್ತಿ

ಕುಮಟಾ;ರಾಜ್ಯ ಪ್ರಾಥಮಿಕ ಮತ್ತು ಪ್ರಢಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಗುರುವಾರ sಸಂಜೆ ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾ ನ ಮಹಾವಿದ್ಯಾಲಯದಲ್ಲಿ ಜಿಲ್ಲಾ ಶೈಕ್ಷಣಿಕ ಸಭೆ ನಡೆಸಿದರು.ತಡ ರಾತ್ರಿ ೯ ಘಂಟೆಯ ತನಕ ಜಿಲ್ಲಾ ಶೈಕ್ಷಣಿಕ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಉಪನಿರ್ದೇಶಕರನ್ನು ಮತ್ತು ಬಿ.ಇ.ಒ ಮತ್ತಿತರ ಅಧಿಕಾರಿಗಳ ಮೇಲೆ ಜಿಲ್ಲೆಯ ಪ್ರಗತಿ ಬಗ್ಗೆ ತೆಗೆದುಕೊಂಡ ಕ್ರಮಗಳ … Continued