ಜಾರಕಿಹೊಳಿ ಸಿಡಿ ಸ್ಫೋಟದ ನಂತರ ಕೋರ್ಟ್‌ ಮೊರೆ ಹೋದ ಆರು ಸಚಿವರು!

ಬೆಂಗಳೂರು: ರಮೇಶ್ ಜಾರಕಿಹೊಳಿ ಅವರ ಸಿಡಿ ಬಿಡುಗಡೆ ಆಗುತ್ತಿದ್ದಂತೆಯೆ ಆರು ಜನ ಸಚಿವರು ಕೋರ್ಟ್‌ ಮೊರೆ ಹೋಗಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಪುಟದ ಆರು ಸಚಿವರು ತಮ್ಮ ವಿರುದ್ಧ ಮಾಧ್ಯಮಗಳು ವರದಿ ಪ್ರಸಾರ ಮಾಡದಂತೆ ತಡೆ ಕೋರಿ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ ತಮ್ಮ ಕುರಿತಾಗಿ ಯಾವುದೇ ಅವಹೇಳನಕಾರಿ ವಿಚಾರಗಳನ್ನು ಪ್ರಸಾರ ಮಾಡದಂತೆಯೂ ಮಾಧ್ಯಮಗಳಿಗೆ ನಿರ್ಬಂಧ … Continued

ಕರ್ನಾಟಕದಲ್ಲಿ ೬೫೦ರ ಗಡಿ ದಾಟಿದ ಕೊರೊನಾ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಬಹಳ ದಿನಗಳ ನಂತರ 650 ಗಡಿ ದಾಟಿದೆ.ಒಟ್ಟು ೬೭೭ ಜನರಿಗೆ ಕೊರೊನಾ ಸೋಂಕು ತಗಲಿದೆ. ಬೆಂಗಳೂರು ನಗರದಲ್ಲಿ ಸೋಂಕಿತರ ಸಂಖ್ಯೆ ಐನೂರರ ಹತ್ತಿರ ಬಂದಿದೆ. ಕಳೆದ ಕೆಲ ತಿಂಗಳಿಂದ ಇಳಿಕೆಯಾಗಿದ್ದ ಸೋಂಕು ಪ್ರಕರಣಗಳು ಐದಾರು ದಿನಗಳಿಂದ ಏರಿಕೆಯಾಗುತ್ತಿದೆ. ಬೆಂಗಳೂರು ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದೆ. ರಾಜ್ಯದಲ್ಲಿ ಕಳೆದ 24 … Continued

ಕಲಬುರ್ಗಿ ಸರ್ಕಾರಿ ಪ್ರೌಢಶಾಲೆ ೧೫ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು

ಕಲಬುರ್ಗಿ : ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯ 9 ಮತ್ತು 10ನೇ ತರಗತಿಯ 15 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ಶಾಲೆಯನ್ನು ಸೀಲ್ ಡೌನ್ ಮಾಡಿ, ಒಂದು ವಾರ ರಜೆ ಘೋಷಿಸಲಾಗಿದೆ. ಸರ್ಕಾರಿ ಪ್ರೌಢ ಶಾಲೆಯಲ್ಲಿ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರ ಸಿಬ್ಬಂದಿ, ಮಾರ್ಚ್ 1 ರಂದು 63 ವಿದ್ಯಾರ್ಥಿಗಳನ್ನು ಕೋವಿಡ್ ಪರೀಕ್ಷೆ ಮಾಡಿ … Continued

ಒಂದು ರಾಷ್ಟ್ರ ಒಂದು ಚುನಾವಣೆ ಆರ್‌ಎಸ್‌ಎಸ್ ಅಜೆಂಡಾವಲ್ಲ : ಕಾಗೇರಿ

ಬೆಂಗಳೂರು: ಒಂದು ರಾಷ್ಟ್ರ ಒಂದು ಚುನಾವಣೆ ಆರ್‌ಎಸ್‌ಎಸ್ ಅಜೆಂಡಾವೂ ಅಲ್ಲ, ಪ್ರಧಾನಿ ಮೋದಿಯವರ ಅಜೆಂಡಾವೂ ಅಲ್ಲ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ವಿಧಾನಸಭೆಯ ತಮ್ಮ ಕೊಠಡಿಯಲ್ಲಿ ಸುದ್ದಿಗಾರರೊಂದಿಗೆ ಅನೌಪಚಾರಿಕವಾಗಿ ಮಾತನಾಡಿದ ಅವರು, ಸಂಸತ್ತಿನ ಸ್ಥಾಯಿ ಸಮಿತಿ ಒಂದು ರಾಷ್ಟ್ರ ಒಂದು ಚುನಾವಣೆ ಬಗ್ಗೆ ಹಿಂದೆಯೇ ಪ್ರಸ್ತಾಪಿಸಿತ್ತು. ಹಾಗೆಯೇ ಮಾಜಿ ರಾಷ್ಟ್ರಪತಿ ದಿ. ಪ್ರಣಬ್ … Continued

೪ ಕೋಟಿ ಮೌಲ್ಯದ ಡ್ರಗ್ಸ್‌ ವಶ

ಬೆಂಗಳೂರು: ನಗರದ ಪೂರ್ವ ವಿಭಾಗದ ಪೊಲೀಸರು ೪ ಕೋಟಿ ಮೌಲ್ಯದ ಡ್ರಗ್ಸ್‌ ವಶಪಡಿಸಿಕೊಂಡಿದ್ದಾರೆ. ಡ್ರಗ್ಸ್ ಸರಬರಾಜು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದ್ದು, ಮನೆ ಮಾಲೀಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೭ವಿದೇಶಿ ಪ್ರಜೆಗಳಿಂದ ೪೨.೫ ಕೆಜಿ ಗಾಂಜಾ, ೨೦೦ ಗ್ರಾಂ … Continued

ಸಾರಿಗೆ ನಿಗಮಕ್ಕೆ ೪ ಸಾವಿರ ಕೋಟಿ ರೂ.ನಷ್ಟ:ಸವದಿ

ಬೆಂಗಳೂರು: ಕೊವಿಡ್‌ ಪರಿಣಾಮದಿಂದ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಿಗೆ ೪ ಸಾವಿರ ಕೋಟಿಗೂ ಅಧಿಕ ನಷ್ಟವಾಗಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ವಿಧಾನ ಪರಿಷತ್ತಿಗೆ ಶುಕ್ರವಾರ ತಿಳಿಸಿದರು. ಶು ೨,೯೮೦ ಕೋಟಿ ರೂ. ನಿವ್ವಳ ಆದಾಯವೇ ನಷ್ಟವಾಗಿದೆ. ಹೀಗಾಗಿ ಸಾರಿಗೆ ಸಂಸ್ಥೆಗಳು ನಷ್ಟ ಅನುಭವಿಸುವಂತೆ ಆಗಿವೆ ಎಂದು ಹೇಳಿದರು. ಜೆಡಿಎಸ್ ನ ಕೆ.ಟಿ. ಶ್ರೀಕಂಠೇಗೌಡ ಪ್ರಶ್ನೆಗೆ … Continued

ನನಗೆ ಯುವತಿ ಪರಿಚಯವಿಲ್ಲ, ಕುಟುಂಬದ ಸದಸ್ಯರೊಬ್ಬರು ಸಿಡಿ ಕೊಟ್ಟಿದ್ದಾರೆ

ಬೆಂಗಳೂರು: ನನಗೆ ಯುವತಿ ಪರಿಚಯ ಇಲ್ಲ,ಅವರ ಜೊತೆ ಯಾವುದೇ ಸಂಪರ್ಕವೂ ಇಲ್ಲ. ನನಗೆ ಸಂತ್ರಸ್ತ ಯುವತಿಯ ಕುಟುಂಬದ ಸದಸ್ಯರೊಬ್ಬರ ಪರಿಚಯವಿದೆ. ಅವರೇ ನನಗೆ ಸಿಡಿ ಕೊಟ್ಟಿದ್ದರು ಎಮದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ತಿಳಿಸಿದ್ದಾರೆ. ಶುಕ್ರವಾರ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ರಾಸಲೀಲೆ ಸಿಡಿ ಸಂಬಂಧವಿಚಾರಣೆಗೆ ಹಾಜರಾಗಿದ್ದ ಅವರನ್ನು ಇಂತಹ ಅವರನ್ನು ಡಿಸಿಪಿ ಅನುಚೇತ್ ನೇತೃತ್ವದಲ್ಲಿ … Continued

53 ಲಕ್ಷ ರೂ. ಹಿಂದಿರುಗಿಸಲು ಹೈಕೋರ್ಟ್‌ ಸೂಚನೆ

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪದ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆಪ್ತ ಸಚಿನ್‌ ನಾರಾಯಣ್‌ ಮನೆ ಮತ್ತವರ ಕಂಪನಿ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದ 53 ಲಕ್ಷ ರೂ. ಹಣ ಬಿಡುಗಡೆ ಮಾಡುವಂತೆ ಸಿಬಿಐಗೆ ಹೈಕೋರ್ಟ್‌ ಸೂಚಿಸಿದೆ. ಡಿ.ಕೆ.ಶಿವಕುಮಾರ್‌ ದೆಹಲಿಯ ಫ್ಲಾಟ್‌ ಹಾಗೂ ಮನೆಯಲ್ಲಿ 2017ರಲ್ಲಿ ಏಳುಕೋಟಿ ರೂಪಾಯಿಗೂ ಅಧಿಕ ನಗದು ದೊರೆತ … Continued

ರೂಪಾಂತರಿ ಕೊರೊನಾ ಸೋಂಕಿನ ವೇಗ ವಿಶ್ವದ ಎಲ್ಲೆಡೆಗಿಂತ ಬೆಂಗಳೂರಿನಲ್ಲಿಯೇ ಹೆಚ್ಚು

ಬೆಂಗಳೂರು: ರೂಪಾಂತರಿ ಕೊರೊನಾ ಸೋಂಕು ಇಡೀ ವಿಶ್ವ, ದೇಶಕ್ಕಿಂತ ಬೆಂಗಳೂರಿನಲ್ಲಿಯೇ ಹೆಚ್ಚು ವೇಗವಾಗಿ ಹರಡುತ್ತಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಅಧ್ಯಯನದಿಂದ ಬೆಳಿಕಿಗೆ ಬಂದಿದೆ. ರೂಪಾಂತರಿ ಸಾರ್ಸ್ ಕೋವಿಡ್-2 ರೂಪಾಂತರಗಳು ಎಷ್ಟು ಆಗಿದೆ ಎಂದು ಇನ್ನೂ ತಿಳಿದುಬಂದಿಲ್ಲ. ಅಧ್ಯಯನದ ನೇತೃತ್ವ ವಹಿಸಿದ್ದ ಐಐಎಸ್‌ಸಿಯ ಬಯೋಕೆಮಿಸ್ಟ್ರಿ ವಿಭಾಗದ ಪ್ರಾಧ್ಯಾಪಕ ಉತ್ಪಾಲ್ ಟಾಟು, ಮಾತನಾಡಿ, ರೂಪಾಂತರಿ ಸ್ಥಿರವಾದಾಗ … Continued

ರಮೇಶ ಜಾರಕಿಹೊಳಿ ಸಿಡಿ ಪ್ರಸಾರ ಮಾಡದಂತೆ ಕೋರ್ಟ್‌ ತಡೆ

ಬೆಂಗಳೂರು : ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಪ್ರಕರಣ ಸಂಬಂಧ, ಸಿಡಿಯಲ್ಲಿನ ದೃಶ್ಯಗಳನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡದಂತೆ ರಮೇಶ್ ಜಾರಕಿಹೊಳಿ ನ್ಯಾಯಾಲಯದಿಂದ ತಡೆ ತಂದಿದ್ದಾರೆ. ಸಿಡಿ ದೃಶ್ಯಾವಳಿಗಳನ್ನು ಪ್ರಸಾರ ಮಾಡದಂತೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ತಡೆ ನೀಡಿದೆ. ಜಾರಕಿಹೊಳಿ ಅವರದ್ದು ಎನ್ನಲಾದ ರಾಸಲೀಲೆ ಸಿಡಿ ಬಿಡುಗಡೆಯಾದ ನಂತರದಲ್ಲಿ ರಮೇಶ ಜಾರಕಿಹೊಳಿ ಸಚಿವ ಸ್ಥಾನಕ್ಕೆ … Continued