ಮಳೆಯಿಂದ ಹಾನಿಯಾದ ರಸ್ತೆ ದುರಸ್ತಿಗೆ ಆದ್ಯತೆ ನೀಡಿ; ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ‌ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ರಸ್ತೆಗಳು ಹಾಳಾಗಿವೆ. ಹಾಳಾದ ರಸ್ತೆಗಳ ದುರಸ್ತಿ ಕಾರ್ಯವನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು. ಅವರು ಮಂಗಳವಾರ) ಗೃಹ ಕಚೇರಿ ಕೃಷ್ಣಾದಲ್ಲಿ ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಈ ಸೂಚನೆ ನೀಡಿದ್ದಾರೆ. ಮಳೆಯಿಂದ ಹಾನಿಯಾದ ಪ್ರದೇಶಗಳ ರಸ್ತೆ ಸುಧಾರಣೆಗೆ 300 ಕೋಟಿ … Continued

ಕರ್ನಾಟಕದಲ್ಲಿ ಮಂಗಳವಾರ ಹೊಸದಾಗಿ 1,298 ಜನರಿಗೆ ಕೊರೊನಾ ದೃಢ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು (ಮಂಗಳವಾರ) ಹೊಸದಾಗಿ 1,298 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದೇ ಸಮಯದಲ್ಲಿ ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 32 ಜನರ ಸಾವು ಸಂಭವಿಸಿದೆ. ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 29,31,827 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 28,73,281 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. . ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ … Continued

ಕುಮಟಾ: ಯಕ್ಷಗಾನ ಕಲಾವಿದ ಗೋಪಾಲ ಗೌಡ ನಿಧನ

ಕುಮಟಾ: ಉತ್ತರಕನ್ನಡ ಜಿಲ್ಲೆ ಯಕ್ಷಗಾನ ಕಲಾವಿದ ಕುಮಟಾ ತಾಲೂಕಿನ ಕಂದವಳ್ಳಿ ಗೋಪಾಲ ಗೌಡ (29 ವರ್ಷ) ಆಗಸ್ಟ್ 14ರಂದು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು. ಮಂಗಳವಾರ (ಆಗಸ್ಟ್‌ 17ರಂದು) ಅವರ ಮೃತದೇಹ ಕುಮಟಾ ಹೆಡ್ ಬಂದರ್ ಬೀಚ್ ಬಳಿ ದೊರಕಿದೆ. ಕುಮಟಾ ಹಾಗೂ ಹೊನ್ನಾವರದ ಮಧ್ಯೆ ಮೀನುಗಾರಿಕೆಗೆ ತೆರಳಿದ ಸಂದರ್ಭದಲ್ಲಿ … Continued

ಕೋವಿಡ್ ಸೋಂಕು ಭಯದಲ್ಲಿ ಪೊಲಿಸ್‌ ಆಯುಕ್ತರಿಗೆ ವಾಯ್ಸ್ ಮೆಸೇಜ್ ಕಳುಹಿಸಿ ದಂಪತಿ ಆತ್ಮಹತ್ಯೆ

ಮಂಗಳೂರು : ಕೋವಿಡ್ ತಗುಲಿದೆ ಎಂಬ ಭಯದಲ್ಲಿ ದಂಪತಿ, ನಗರ ಪೊಲೀಸ್ ಕಮಿಷನರ್‌ಗೆ ವಾಟ್ಸ್‌ಆಪ್‌ನಲ್ಲಿ ಧ್ವನಿ ಮುದ್ರಣ ಕಳುಹಿಸಿ, ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೋವಿಡ್ ಬಂದಿರುವ ಕಾರಣಕ್ಕೆ ನಾವಿಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರಿಗೆ ಕಳುಹಿಸಿರುವ ಧ್ವನಿ ಮುದ್ರಣದಲ್ಲಿ ಅವರು ತಿಳಿಸಿದ್ದರು. ತಕ್ಷಣವೇ ಕರೆ ಮಾಡಿದರೂ ಆ ವ್ಯಕ್ತಿ ಕರೆ … Continued

ಕುಮಟಾ: ಪ್ರವಾಸಕ್ಕೆ ಬಂದ ವಿದ್ಯಾರ್ಥಿಗಳು ಸಮುದ್ರ ಪಾಲು

ಕುಮಟಾ: ಪ್ರವಾಸಕ್ಕೆಂದು ಬಂದಿದ್ದ ಇಬ್ಬರು ವಿದ್ಯಾರ್ಥಿನಿಗಳು ಸಮುದ್ರ ಪಾಲಾದ ಘಟನೆ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಬಾಡ ಬೀಚಿನಲ್ಲಿ ನಡೆದಿದೆ. ನೀರು ಪಾಲಾದ ವಿದ್ಯಾರ್ಥಿಗಳನ್ನು ಮೇಘಾ ಹಾಗೂ ರೇಣುಕಾ ಪ್ರಸಾದ್ ಎಂದು ಗುರುತಿಸಲಾಗಿದೆ. ದಾವಣಗೆರೆ ಮೂಲದ ಮೇಘಾ ಮತ್ತು ರೇಣುಕಾ ಪ್ರಸಾದ್ ಪ್ರವಾಸಕ್ಕೆ ಬಾಡದ ಹುಬ್ಬಣಗೇರಿ ಕಡಲತೀರಕ್ಕೆ ಬಂದಿದ್ದರು. ಈ ವೇಳೆ ಈಜಲು ತೆರಳಿದ್ದಾರೆ. … Continued

ದೇಶದ್ರೋಹದ ಪ್ರಕರಣದಲ್ಲಿ ಬೀದರ್ ವಿದ್ಯಾರ್ಥಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದು ಬಾಲಾಪರಾಧ ನ್ಯಾಯ ಕಾಯ್ದೆ ಉಲ್ಲಂಘನೆ: ಹೈಕೋರ್ಟ್

ಬೆಂಗಳೂರು: ಬೀದರ್ ಜಿಲ್ಲೆಯ ಶಾಹೀನ್ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ 2020 ರ ಫೆಬ್ರವರಿಯಲ್ಲಿ ಮಕ್ಕಳನ್ನು ವಿಚಾರಣೆಗೆ ಒಳಪಡಿಸುವಾಗ, ಸಮವಸ್ತ್ರದಲ್ಲಿ, ಶಸ್ತ್ರಾಸ್ತ್ರಗಳನ್ನು ಹೊತ್ತುಕೊಂಡು ಪೋಲಿಸರು ಇರುವುದು ಬಾಲಾಪರಾಧ ನ್ಯಾಯ ಕಾಯ್ದೆಯ ಅಡಿಯಲ್ಲಿ ಗಂಭೀರ ಉಲ್ಲಂಘನೆಯಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಸೋಮವಾರ ಗಮನಿಸಿದೆ. ಮಕ್ಕಳ ವಿಶೇಷ ನಿಯಮ 5ರ ಮಕ್ಕಳ ಬಾಲಾಪರಾಧ ಪೊಲೀಸ್ ಘಟಕವು ಮಕ್ಕಳೊಂದಿಗೆ ಸಂವಹನ ನಡೆಸುವಾಗ … Continued

ಬೆಂಗಳೂರಿನಲ್ಲಿ ಕುಸಿತ ಕಾಣುತ್ತಿರುವ ಕೋವಿಡ್ -19 ಸೂಚ್ಯಂಕಗಳು, ಮರಣ ಪ್ರಮಾಣ 1%ಕ್ಕಿಂತ ಕಡಿಮೆ

ಬೆಂಗಳೂರು: ಕರ್ನಾಟಕದ ಪ್ರಮುಖ ಕೋವಿಡ್ -19 ಸೂಚ್ಯಂಕಗಳು ಆಗಸ್ಟ್ 14 ಕ್ಕೆ ಕೊನೆಗೊಳ್ಳುವ ವಾರದ ವಾರದ ಆಧಾರದ ಮೇಲೆ ಸುಧಾರಣೆಯನ್ನು ಕಾಣುತ್ತಲೇ ಇವೆ. 9ರಿಂದ 12 ತರಗತಿಗಳಿಗೆ ದೈಹಿಕ ತರಗತಿಗಳು ಆಗಸ್ಟ್ 23 ರಿಂದ ಆರಂಭವಾಗಲಿವೆ. ಈ ಸಮಯದಲ್ಲಿ ಸೂಚ್ಯಂಗಳಲ್ಲಿ ಸುಧಾರಣೆ ಕಂಡುಬಂದಿದೆ. ಗಮನಾರ್ಹವಾಗಿ, ಕೋವಿಡ್ -19 ಆಸ್ಪತ್ರೆಯ ದಾಖಲಾತಿಗಳು ಆಗಸ್ಟ್ 7 ಕ್ಕೆ ಕೊನೆಗೊಂಡ … Continued

ಕರ್ನಾಟಕದಲ್ಲಿ ಸೋಮವಾರ ಕೊರೊನಾ ಹೊಸ ಸೋಂಕು ಕುಸಿತ

ಬೆಂಗಳೂರು: ರಾಜ್ಯದಲ್ಲಿ ಸೋಮವಾರ ಕೊರೊನಾ ಹೊಸ ಸೋಂಕಿನ ಪ್ರಕರಣ ಕಡಿಮೆಯಾಗಿದೆ. ಕಳೆದ 24 ತಾಸಿನಲ್ಲಿ 1,065 ಕೊರೊನಾ ಹೊಸ ಸೋಂಕು ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 29,30,529ಕ್ಕೆ ಏರಿಕೆಯಾಗಿದೆ. ಇದೇ ಸಮಯದಲ್ಲಿ 28 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 37,007ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಇದೇ ಸಮಯದಲ್ಲಿ ರಾಜ್ಯದಲ್ಲಿ 1,486 … Continued

ಬಿಜೆಪಿ ಜನಾಶೀರ್ವಾದ ಯಾತ್ರೆಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ ಚಾಲನೆ

ಹುಬ್ಬಳ್ಳಿ: ಬಿಜೆಪಿಯ ಜನಾಶ್ರೀರ್ವಾದ ಯಾತ್ರೆಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಇಂದು ಹುಬ್ಬಳ್ಳಿಯಲ್ಲಿ ಚಾಲನೆ ನೀಡಿದರು. ಇಲ್ಲಿನ ಕ್ಯೂಬಿಕ್ಸ್ ಹೊಟೇಲ್ಲಿನ ಐವರು ಕೋವಿಡ್ ವಾರಿಯರ್ಸಿಗೆ ಸನ್ಮಾನಿಸುವ ಮೂಲಕ ಜನಾಶೀರ್ವಾದ ಯಾತ್ರೆ ಉದ್ಘಾಟಿಸಿದ ರಾಜೀವ ಚಂದ್ರಶೇಖರ, ಭಾರತ ಬೆಳವಣಿಗೆ ಹೊಂದಲು ಸರಿಯಾದ ಸಮಯ ಬಂದಿದೆ. ಪ್ರಪಂಚ ನಮ್ಮ ದೇಶದತ್ತ ತಿರುಗಿ ನೋಡುತ್ತಿದೆ ಎಂದರು. ಮುಂದಿನ 25 ವರ್ಷಗಳಲ್ಲಿ … Continued

ಕರ್ನಾಟಕದಲ್ಲಿ ವಾಡಿಕೆಗಿಂತ ಶೇ.48ರಷ್ಟು ಮಳೆ ಕೊರತೆ..!

ಬೆಂಗಳೂರು: ರಾಜ್ಯ ದಲ್ಲಿ ಕಳೆದ ಎರಡು ವಾರಗಳಿಂದ ನೈರುತ್ಯ ಮುಂಗಾರು ದುರ್ಬಲಗೊಂಡಿದ್ದು, ವಾಡಿಕೆಗಿಂತ ಶೇ.48ರಷ್ಟು ಮಳೆ ಕೊರತೆ ಉಂಟಾಗಿದೆ. ಆ.1ರಿಂದ 15ರವರೆಗಿನ ಅವಧಿಯಲ್ಲಿ ರಾಜ್ಯದಲ್ಲಿ ಹಲವೆಡೆ ಮಳೆ ಕೊರತೆ ಮುಂದುವರೆದಿದೆ. ಚದುರಿದಂತೆ ಅಲ್ಲಲ್ಲಿ ಸಾಧಾರಣ ಪ್ರಮಾಣದ ಮಳೆ ಮುಂದುವರೆದಿದ್ದರೂ ಹಲವೆಡೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಜುಲೈನಲ್ಲಿ ಬಿದ್ದ ಉತ್ತಮ ಮಳೆಯಿಂದಾಗಿ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿಯಾಗುವ … Continued