ಮಹತ್ವದ ಸುದ್ದಿ….9,10ನೇ ತರಗತಿ ಆರಂಭಕ್ಕೆ ಮಾರ್ಗಸೂಚಿ ಬಿಡುಗಡೆ; ಪೋಷಕರ ಅನುಮತಿ ಪತ್ರ ಕಡ್ಡಾಯ

ಬೆಂಗಳೂರು: ಆಗಸ್ಟ್ 23ರಿಂದ ರಾಜ್ಯದಲ್ಲಿನ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಡ ಶಾಲೆಗಳಲ್ಲಿನ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಿ, ಬೋಧನಾ ತರಗತಿಗಳನ್ನು ನಡೆಸಲು, ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಕ್ರಮಗಳನ್ನು ಬಿಡುಗಡೆ ಮಾಡಲಾಗಿದೆ. ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. 2021-22ನೇ ಶೈಕ್ಷಣಿಕ … Continued

ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ಚುನಾವಣೆ: ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಮ್‌ ಆದ್ಮಿ ಪಕ್ಷ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಢ ಮಹಾನಗರ ಪಾಲಿಕೆ ಚುನಾವಣೆ ಸೆಪ್ಟೆಂಬರ್‌ 3ರಂದು ನಡೆಯಲಿದ್ದು, ಘೋಷಣೆಯಾದ ಬೆನ್ನಲ್ಲೇ ಆಮ್ ಆದ್ಮಿ ಪಕ್ಷ ತನ್ನ ಅಭ್ಯರ್ಥಿಗಳ ಒಂದನೇ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ.ಆ ಮೂಲಕ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಮೊದಲ ಪಕ್ಷವಾಗಿದೆ. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹತ್ತು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಪಕ್ಷದ ರಾಜ್ಯ ಸಹ ಸಂಚಾಲಕರು ಹಾಗೂ ಹು-ಧಾ … Continued

ಮೂಡಿಗೆರೆ: ಕಾರಿನ ಮೇಲೆ ಕಾಡಾನೆ ದಾಳಿ; ನಾಲ್ವರಿಗೆ ಗಂಭೀರ ಗಾಯ

ಚಿಕ್ಕಮಗಳೂರು: ಚಲಿಸುತ್ತಿದ್ದ ಓಮ್ನಿ ಕಾರೊಂದರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಗಂಭೀರ ಗಾಯಗೊಂಡ ಘಟನೆ ಮೂಡಿಗೆರೆ ತಾಲೂಕಿನ ಕುಂದೂರು ಬಳಿ ರವಿವಾರ ರಾತ್ರಿ ನಡೆದಿದೆ ಎಂದು ವರದಿಯಾಗಿದೆ. ಗಾಯಾಳುಗಳನ್ನು ಚಂದ್ರೇಗೌಡ, ಅವರ ಪತ್ನಿ ಮೋಹಿನಿ, ಪುತ್ರ ಅವನೀಶ, ಮತ್ತು ಸಂಬಂಧಿಕರಾದ ರಾಜಮ್ಮ ಎಂದು ಗುರುತಿಸಲಾಗಿದೆ. ಈ ಪೈಕಿ … Continued

ಬೆಂಗಳೂರಿನ ಮನೆಯಲ್ಲಿ ತಡರಾತ್ರಿ ನಿಗೂಢ ಸ್ಫೋಟ: ದಂಪತಿಗೆ ಗಾಯ

ಬೆಂಗಳೂರು: ಬೆಂಗಳೂರಿನ ವಿಜಯನಗರದ ಹಂಪಿನಗರದ ಮನೆಯೊಂದರಲ್ಲಿ ಭಾರಿ ಸ್ಫೋಟದಿಂದ ದಂಪತಿ ಗಾಯಗೊಂಡ ಘಟನೆ ನಡೆದಿದೆ. ತಡರಾತ್ರಿ 12.45ರ ಸುಮಾರಿಗೆ 2 ಮಹಡಿ ಕಟ್ಟಡದಲ್ಲಿ ಈ ಸ್ಫೋಟ ಸಂಭವಿಸಿದೆ. ಹಂಪಿನಗರದ ಎರಡು ಅಂತಸ್ತಿನ ಮನೆಯೊಂದರ ಮೊದಲ ಮಹಡಿಯಲ್ಲಿ ತಡರಾತ್ರಿ 12.45ರ ಸುಮಾರಿಗೆ ನಿಗೂಢ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಸೂರ್ಯನಾರಾಯಣ ಶೆಟ್ಟಿ, ಪತ್ನಿ ಪುಷ್ಪಾವತಮ್ಮ ವೃದ್ಧ ದಂಪತಿ ಗಾಯಗೊಂಡಿದ್ದು, … Continued

ವೇದ ಘೋಷ ,ಬ್ರಹ್ಮಸ್ಫೋಟದೊಂದಿಗೆ ಮಹಾಸಮಾಧಿ ಹೊಂದಿದ ಶ್ರೀರಾಮಾನಂದ ಅವಧೂತರು

ಕುಮಟಾ; ಶನಿವಾರ ರಾತ್ರಿ ಬ್ರಹ್ಮೀಭೂತರಾದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದಿವಗಿ ಮಠದ ಅವಧೂತ ಪರಂಪರೆಯ ಶ್ರೀರಾಮಾನಂದರು ಭಾನುವಾರ ಯತಿಪರಂಪರೆಯಂತೆ ಮಹಾಸಮಾಧಿ ಹೊಂದಿದರು. ಸ್ವಾಮೀಜಿ ಶನಿವಾರ ರಾತ್ರಿ ಮುಕ್ತಿಹೊಂದಿದ್ದರು. ಅವರಿಗೆ 98 ವರ್ಷ ವಯಸ್ಸಾಗಿತ್ತು. ಭಾನುವಾರದಂದು ಶ್ರೀಮಠದಲ್ಲಿ ಮುಂಜಾನೆಯಿಂದಲೇ ಶ್ರೀರಾಮಾನಂದರ ಸಮಾಧಿ ಪ್ರಕ್ರಿಯೇ ಆರಂಭವಾಗಿತ್ತು. ಬೆಳಿಗ್ಗೆ ಸಾವಿರಾರು ಭಕ್ತರು ಶ್ರೀಗಳ ಅಂತಿಮ ದರ್ಶನ ಪಡೆದರು. … Continued

ಕರ್ನಾಟಕದಲ್ಲಿ ಭಾನುವಾರ 12 ಜಿಲ್ಲೆಗಳಲ್ಲಿ 10ಕ್ಕಿಂತ ಕಡಿಮೆ ಹೊಸ ಸೋಂಕು, ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಪ್ರಕರಣ

ಬೆಂಗಳೂರು :ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 1,431 ಜನರಿಗೆ ಕೋವಿಡ್ ಸೋಂಕು ದೃಢಪಟ್ಟ ವರದಿಯಾಗಿದೆ ಇದೇವೇಳೆ 21 ಸೋಂಕಿತರು ಮೃತಪಟ್ಟಿದ್ದಾರೆ. ಈ ಕುರಿತು ರಾಜ್ಯ ಆರೋಗ್ಯ ಮತ್ತು ಕುಟುಂಬಕ ಕಲ್ಯಾಣ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಇದೇವೇಳೆ 1,611 ಜನರು ಚೇತರಿಸಿಕೊಂಡು ಸೋಂಕಿನಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 29,29,464ಕ್ಕೆ ಏರಿಕೆಯಾಗಿದೆ. … Continued

ನರೇಗಾ ಕಾರ್ಮಿಕರಿಂದ ಕೃಷಿ ಹೊಂಡ ಸ್ಥಳದಲ್ಲಿ ವಿಶಿಷ್ಟ ಸ್ವಾತಂತ್ರೋತ್ಸವ ಆಚರಣೆ

ಯಾದಗಿರಿ :ಯಾದಗಿರಿ ತಾಲೂಕಿನ ಬಳಿಚಕ್ರ ಗ್ರಾಮದಲ್ಲಿ ನರೇಗಾ ಕೂಲಿ ಕಾರ್ಮಿಕರು ಕಾಮಗಾರಿ ಸ್ಥಳದಲ್ಲಿಯೇ 75 ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವನ್ನು ವಿಶಿಷ್ಟವಾಗಿ ಆಚರಣೆ ಮಾಡಿದ್ದಾರೆ. ನರೇಗಾ ಯೋಜನೆಯಡಿಯಲ್ಲಿ ಇಲ್ಲಿನ ಸಿದ್ಧಯ್ಯನ ಬೆಟ್ಟದ ಹತ್ತಿರ ನಿರ್ಮಾಣಗೊಂಡ ಕೃಷಿ ಹೊಂಡದಲ್ಲಿ ಸ್ವಾತಂತ್ರೋತ್ಸವಕ್ಕೆ ಮುನ್ನಾ ದಿನವೇ ನರೇಗಾ ಕೂಲಿ ಕಾರ್ಮಿಕರು ಶ್ರದ್ದೆಯಿಂದ ಕಲಾತ್ಮಕವಾಗಿ ಮಣ್ಣಿನಿಂದ ನರೇಗಾ, ಭಾರತ ನಕಾಶೆ ಮತ್ತು … Continued

ಕಲಘಟಗಿ: ಧ್ವಜ ಮೆರವಣಿಗೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ, 14 ಜನರ ಮೇಲೆ ಪ್ರಕರಣ ದಾಖಲು

ಕಲಘಟಗಿ: ಧ್ವಜ ಮೆರವಣಿಗೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ 14 ಜನರ ಮೇಲೆ ಪ್ರಕರಣ ದಾಖಲು ಕಲಘಟಗಿ: ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ತ್ರಿವರ್ಣ ಧ್ವಜದ ಮೆರವಣಿಗೆಯ ವೇಳೆ ಕೊವೀಡ್ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ 14 ಜನರ ಮೇಲೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೊಟ್ಟಿಲು ನಗರಿಯಾದ ಕಲಘಟಗಿಯಲ್ಲಿ ಮಾಜಿ ಸಚಿವ ಸಂತೋಷ ‌ಲಾಡ್‌ ನೇತೃತ್ವದಲ್ಲಿ … Continued

ಮಹದಾಯಿ ಡಿಪಿಆರ್‌ ತಯಾರಿಗಕೆಗೆ ಅನುಮತಿ ನೀಡುವಂತೆ ಮನವಿ

ಧಾರವಾಡ: ಮಹದಾಯಿ ನೀರಿನ ವಿಷಯದಲ್ಲಿ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ನಡುವಿನ ವ್ಯಾಜ್ಯ ಇರುವುದರಿಂದ ಕಾನೂನು ಪ್ರಕ್ರಿಯೆ ಮುಂದುವರಿದಿದೆ. ಸದ್ಯ ಡಿಪಿಆರ್ ತಯಾರಿಕೆಗೆ ಅನುಮತಿ ಕೇಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ಮೂರು ರಾಜ್ಯಗಳ ನಡುವಿನ ಸೂಕ್ಷ್ಮ ವಿಚಾರ. ಅನಗತ್ಯ ಚರ್ಚೆಗಳಿಂದ … Continued

ಬದುಕಿದ್ದರೆ ಇದೇ ಅವಧಿಗೆ ಸಿಎಂ ಆದರೂ ಆಗಬಹುದು: ಉಮೇಶ್ ಕತ್ತಿ

ಬಾಗಲಕೋಟೆ: ಬದುಕಿದ್ದರೆ ಇದೇ ಅವಧಿಯಲ್ಲಿ ಮುಂದಿನಗಳಲ್ಲಿ ಮುಖ್ಯಮಂತ್ರಿ ಆದರೂ ಆಗಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಮನದಿಂಗಿತ ವ್ಯಕ್ತಪಡಿಸಿದ್ದು ಹೀಗೆ. ನಗರದಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಸಚಿವರು, ತೆರೆದ ವಾಹನದ ಮೂಲಕ ಪರೇಡ್ ವೀಕ್ಷಣೆ ಮಾಡಿದರು. ನಂತರ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಯವರೇ ಆದಲ್ಲಿ … Continued