ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಮಹಿಳೆಯರ ಸೇರ್ಪಡೆಗೆ ಕೇಂದ್ರ ಸರ್ಕಾರ ಒಪ್ಪಿಗೆ: ಸುಪ್ರೀಂ ಕೋರ್ಟ್‌ಗೆ ಮಾಹಿತಿ

ನವದೆಹಲಿ: ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಯುವತಿಯರನ್ನು ಸೇರ್ಪಡೆಗೊಳಿಸುವುದಕ್ಕೆ ಸಂಬಂಧಿಸಿದಂತೆ ತಾನು ರಕ್ಷಣಾ ಪಡೆಗಳ ಜೊತೆ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಂಡಿರುವುದಾಗಿ ಕೇಂದ್ರ ಸರ್ಕಾರವು ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಈ ವಿಚಾರವನ್ನು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯಾ ಭಾಟಿ ನ್ಯಾಯಾಲಯಕ್ಕೆ ತಿಳಿಸಿದರು. “ಈ ವಿಚಾರವನ್ನು ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗುತ್ತಿದೆ. ಯುವತಿಯರು ಎನ್‌ಡಿಎಗೆ ಸೇರಲು ಅನುಮತಿಸಲಾಗುವುದು. … Continued

ಉತ್ತರಾಖಂಡ ರಾಜ್ಯಪಾಲೆ ಬೇಬಿ ರಾಣಿ ಮೌರ್ಯ ರಾಜೀನಾಮೆ

ಡೆಹ್ರಾಡೂನ್: ಉತ್ತರಾಖಂಡ ರಾಜ್ಯಪಾಲರಾದ ಬೇಬಿ ರಾಣಿ ಮೌರ್ಯ ಅವರು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸುವ ಎರಡು ವರ್ಷಗಳ ಮೊದಲೇ ಬುಧವಾರ ರಾಜೀನಾಮೆ ನೀಡಿದ್ದಾರೆ. ಅವರು ತಮ್ಮ ರಾಜೀನಾಮೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸಲ್ಲಿಸಿದರು ಎಂದು ರಾಜ್ ಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರು ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ. ಮೌರ್ಯ ಉತ್ತರಾಖಂಡದ ರಾಜ್ಯಪಾಲರಾಗಿ … Continued

ಪಶ್ಚಿಮ ಬಂಗಾಳ: ಬಿಜೆಪಿ ಸಂಸದ ಅರ್ಜುನ್‌ ಸಿಂಗ್‌ ಮನೆ ಗೇಟಿಗೆ ಕಚ್ಚಾ ಬಾಂಬ್‌ ಎಸೆತ

ಕೋಲ್ಕತ್ತಾ: ಬಿಜೆಪಿ ಸಂಸದ ಅರ್ಜುನ್‌ ಸಿಂಗ್‌ ಅವರ ಮನೆಯ ಸಮೀಪದಲ್ಲಿ ಇಂದು (ಬುಧವಾರ) ಬೆಳಗ್ಗೆ ಮೂರು ಕಚ್ಚಾ ಬಾಂಬ್‌ಗಳನ್ನು ಎಸೆಯಲಾಗಿದೆ. ಕೋಲ್ಕತ್ತಾದಿಂದ ಸುಮಾರು 100 ಕಿ.ಮೀ. ದೂರದ ಜಗತ್‌ದಲ್‌ನಲ್ಲಿರುವ ಅರ್ಜುನ್‌ ಸಿಂಗ್‌ ಅವರ ಮನೆಯ ಗೇಟಿಗೆ ಬಾಂಬ್‌ಗನನು ಎಸೆಯಲಾಗಿದ್ದು. ಹಾನಿಯಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಳಗ್ಗೆ 6:30ರ ಸುಮಾರಿಗೆ ಈ ಕಚ್ಚಾ ಬಾಂಬ್‌ಗಳು ಸ್ಫೋಟಿಸಿರುವುದಾಗಿ … Continued

ಪಿಎಚ್‌ಡಿ -ಸ್ನಾತಕೋತ್ತರ ಪದವಿ ಪಡೆದವರು ನಿಷ್ಪ್ರಯೋಜಕರು, ಅವುಗಳಿಲ್ಲದ ಮುಲ್ಲಾ ಅತ್ಯುತ್ತಮ: ತಾಲಿಬಾನ್‌ ಶಿಕ್ಷಣ ಸಚಿವ..!

ತಾಲಿಬಾನ್ ಅಡಿಯಲ್ಲಿ ಅಫ್ಘಾನಿಸ್ತಾನದಲ್ಲಿ ವಿಶ್ವವಿದ್ಯಾನಿಲಯ ತೆರೆದಾಗ, ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರನ್ನು ಪರದೆ ಮೂಲಕ ಬೇರ್ಪಡಿಸಲಾಯಿತು. ಈಗ ತಾಲಿಬಾನ್ ಶಿಕ್ಷಣ ಸಚಿವ ಶೇಖ್ ಮೊರ್ವಿ ನೂರ್ಲಾ ಮುನೀರ್‌  ಮತ್ತೊಂದು ಬಾಂಬ್‌ ಸಿಡಿಸಿದ್ದಾರೆ. ಅವರ ಪ್ರಕಾರ, ಡಾಕ್ಟರೇಟ್ ಮತ್ತು ಸ್ನಾತಕೋತ್ತರ ಪದವಿಗಳು ಯೋಗ್ಯವಾಗಿಲ್ಲ ಯಾಕೆಂದರೆ ಅದು ಮುಲ್ಲಾರಲ್ಲಿ ಇಲ್ಲ ಎಂದು ಅವರು ಹೇಳಿದ್ದಾರೆ ಮತ್ತು ಅವರು “ಎಲ್ಲರಿಗಿಂತ ಬೆಸ್ಟ್‌” … Continued

ಭಾರತದಲ್ಲಿ 37,875 ಹೊಸ ಕೋವಿಡ್ -19 ಪ್ರಕರಣಗಳು ದಾಖಲು

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 37,875 ಹೊಸ ಪ್ರಕರಣಗಳನ್ನು ದಾಖಲಿಸಿದ್ದು, ದೇಶದ ಒಟ್ಟಾರೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 3,30,96,718 ಕ್ಕೆ ತಲುಪಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾರತ 369 ಸಾವುಗಳನ್ನು ವರದಿ ಮಾಡಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು … Continued

ತಾಲಿಬಾನ್ ಸರ್ಕಾರದೊಂದಿಗೆ ಭಾರತ ವ್ಯವಹರಿಸ ಕೂಡದು:ಯಶವಂತ್ ಸಿನ್ಹಾ

ನವದೆಹಲಿ: ಅಫ್ಘಾನಿಸ್ತಾನದಲ್ಲಿ ಹೊಸದಾಗಿ ರಚನೆಯಾದ ಸರ್ಕಾರದೊಂದಿಗೆ ಭಾರತ ಯಾವುದೇ ರೀತಿಯ ವ್ಯವಹಾರ ನಡೆಸಬಾರದು ಎಂದು ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವ ಯಶವಂತ್ ಸಿನ್ಹಾ ಮಂಗಳವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. “ಅಫ್ಘಾನಿಸ್ತಾನದಲ್ಲಿ ಹೊಸದಾಗಿ ರಚನೆಯಾಗಿರುವ ತಾಲಿಬಾನ್ ಸರ್ಕಾರದೊಂದಿಗೆ ಭಾರತ ಯಾವುದೇ ರೀತಿಯ ವ್ಯವಹಾರ ನಡೆಸಬಾರದು” ಎಂದು ಅವರು ಟ್ವೀಟ್ ಮಾಡಿದ್ದಾರೆ. ಇತ್ತೀಚಿಗೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ತಾಲಿಬಾನ್‌ನೊಂದಿಗೆ … Continued

ಆಜ್ ತಕ್ ಟ್ರೇಡ್‌ಮಾರ್ಕ್ ಉಲ್ಲಂಘಿಸುವ 25 ವೆಬ್‌ಸೈಟ್‌ ಖಾತೆಗಳ ನಿರ್ಬಂಧಿಸುವಂತೆ ಗೂಗಲ್, ಫೇಸ್‌ಬುಕ್‌ಗೆ ದೆಹಲಿ ಹೈಕೋರ್ಟ್ ನಿರ್ದೇಶನ

ನವದೆಹಲಿ: ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಅವರ ದೆಹಲಿ ಹೈಕೋರ್ಟ್ ಏಕಸದಸ್ಯ ಪೀಠವು ಸೋಮವಾರ 25 ವಿಭಿನ್ನ ವೆಬ್‌ಸೈಟ್‌ಗಳು, ಖಾತೆಗಳು ಮತ್ತು “ಆಜ್ ತಕ್” ಟ್ರೇಡ್‌ಮಾರ್ಕ್ ಅನ್ನು ಉಲ್ಲಂಘಿಸಿದ ಆರೋಪದ ಪುಟಗಳನ್ನು ನಿರ್ಬಂಧಿಸಲು ಗೂಗಲ್ ಮತ್ತು ಫೇಸ್‌ಬುಕ್‌ಗೆ ಆದೇಶಿಸಿದೆ. ಸೆಪ್ಟೆಂಬರ್ 2020ರಲ್ಲಿ, ಹೈಕೋರ್ಟ್ ನಾಲ್ಕು ಪ್ರತಿವಾದಿಗಳ ವಿರುದ್ಧ ಇದೇ ರೀತಿಯ ಆದೇಶವನ್ನು ನೀಡಿತ್ತು, ಅದನ್ನು ಈಗ … Continued

ಹೊಸ ಕೋವಿಡ್ ರೂಪಾಂತರ ತೀವ್ರವಾಗಿ ಹರಡದ ಹೊರತು ಭಾರತದಲ್ಲಿ ಮೂರನೇ ಅಲೆ ಉಲ್ಬಣ ಸಾಧ್ಯತೆ ಕಡಿಮೆ:ತಜ್ಞರು

ನವದೆಹಲಿ: ಹೊಸ ಕೋವಿಡ್ ರೂಪಾಂತರದಿಂದ ತೀವ್ರವಾಗಿ ಹರಡದ ಹೊರತು, ಮೂರನೇ ಅಲೆಯು ಭಾರತವನ್ನು ಬಾಧಿಸುವ ಸಾಧ್ಯತೆಗಳು ಈಗ ಕಡಿಮೆ ಎಂದು ಪ್ರಮುಖ ಸಾರ್ವಜನಿಕ ಆರೋಗ್ಯ ತಜ್ಞರು ಹೇಳುತ್ತಾರೆ. ಈ ವರ್ಷದ ಆರಂಭದಲ್ಲಿ ಡೆಲ್ಟಾ ಕೊರೊನಾ ರೂಪಾಂತರದಿಂದ ತೀವ್ರ ಹಾನಿಗೊಳಗಾದ ನಂತರ ದೇಶವು ಕೊರೊನಾ ವೈರಸ್‌ನ ಯಾವುದೇ ಹೊಸ ವಂಶಾವಳಿಯನ್ನು ಎದುರಿಸಲಿಲ್ಲ. ಸಾಂಕ್ರಾಮಿಕ ಕಾಯಿಲೆಯ ದೊಡ್ಡ ಉಲ್ಬಣವಾದಾಗ … Continued

ಮದುವೆಯಾದ ಒಂಬತ್ತು ವರ್ಷಗಳ ನಂತರ ಬೇರ್ಪಟ್ಟ ಆಯೇಷಾ-ಕ್ರಿಕೆಟ್‌ ತಾರೆ ಶಿಖರ್ ಧವನ್: ವರದಿ

ಭಾರತದ ಆರಂಭಿಕ ಕ್ರಿಕೆಟ್‌ ಆಟಗಾರ ಶಿಖರ್ ಧವನ್ ಮದುವೆಯಾದ ಒಂಬತ್ತು ವರ್ಷಗಳ ನಂತರ ಪತ್ನಿ ಆಯೇಷಾ ಮುಖರ್ಜಿಯಿಂದ ಬೇರ್ಪಡುವ ಹಾದಿಯಲ್ಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಆಯೆಷಾ ಅವರ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್ ದಂಪತಿಗಳು ಬೇರ್ಪಟ್ಟಿದ್ದಾರೆ ಎಂದು ಸೂಚಿಸುತ್ತದೆ. ಸೋಮವಾರದ ಸುದೀರ್ಘವಾದ ಪೋಸ್ಟ್‌ನಲ್ಲಿ, ತರಬೇತಿ ಪಡೆದ ಕಿಕ್ ಬಾಕ್ಸರ್ ಮತ್ತು ಕ್ರೀಡಾಭಿಮಾನಿ ಆಯೇಷಾ ನಾನು 2 ಬಾರಿ … Continued

ಬಿಎ ಕೋರ್ಸ್‌ ಮಾಡುತ್ತಿರುವ ಮಹಾರಾಷ್ಟ್ರದ ನಾಗಪುರ ಜೈಲಿನಲ್ಲಿರುವ ಗ್ಯಾಂಗಸ್ಟರ್‌ ಅರುಣ್ ಗಾವ್ಳಿ

ಮುಂಬೈ; ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ನಾಗ್ಪುರ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಗ್ಯಾಂಗಸ್ಟರ್‌ -ರಾಜಕಾರಣಿ ಅರುಣ್ ಗಾವ್ಳಿ, ಮಹಾರಾಷ್ಟ್ರದ ಮುಕ್ತ ವಿಶ್ವವಿದ್ಯಾನಿಲಯದಿಂದ ಕಲಾ ಪದವಿ ಪದವಿ ಪಡೆಯುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. 2017 ರಲ್ಲಿ ನಾಸಿಕ್ ಮೂಲದ ಯಶವಂತರಾವ್ ಚವ್ಹಾಣ ಮಹಾರಾಷ್ಟ್ರ ಮುಕ್ತ ವಿಶ್ವವಿದ್ಯಾಲಯದಿಂದ (ವೈಸಿಎಂಯುಯು) ಬ್ಯಾಚುಲರ್ ಆಫ್ ಆರ್ಟ್ಸ್ (ಬಿಎ) … Continued