ಎರಡೂ ಕೋವಿಡ್‌ ಅಲೆಗಳ ಸಮಯದಲ್ಲಿ 1ರಿಂದ 20 ವಯಸ್ಸಿನವರಲ್ಲಿ 12%ಕ್ಕಿಂತ ಕಡಿಮೆ ಸೋಂಕು: ಕೇಂದ್ರ

ನವದೆಹಲಿ: ಕೋವಿಡ್‌ನ ಎರಡನೇಲೆಯಲ್ಲಿ ಮಕ್ಕಳು ಮತ್ತು ಕಿರಿಯ ಜನಸಂಖ್ಯೆ ಹೆಚ್ಚು ಪರಿಣಾಮ ಬೀರಿದೆ ಎಂಬ ಊಹೆಗಳನ್ನು ತಳ್ಳಿಹಾಕಿದ ಸರ್ಕಾರ ಮಂಗಳವಾರ, 1ರಿಂದ 20ರ ವಯೋಮಾನದವರಲ್ಲಿ ಎರಡೂ ಅಲೆಗಳ ಸಂದರ್ಭದಲ್ಲಿ ದಾಖಲಾದ ಪ್ರಕರಣಗಳಲ್ಲಿ ಶೇಕಡಾ 12 ಕ್ಕಿಂತ ಕಡಿಮೆ ಪ್ರಕರಣಗಳಿವೆ ಎಂದು ಸರ್ಕಾರ ಹೇಳಿದೆ. ಪತ್ರಿಕಾಗೋಷ್ಠಿಯಲ್ಲಿ ಸರ್ಕಾರ ಹಂಚಿಕೊಂಡ ಮಾಹಿತಿಯ ಪ್ರಕಾರ, ಈ ವಯಸ್ಸಿನ ಸೋಂಕಿತರಲ್ಲಿ.1ರಿಂದ 20 … Continued

ಕೋವಿಡ್‌ನಿಂದ ಚೇತರಿಸಿಕೊಂಡ ವ್ಯಕ್ತಿಯಲ್ಲಿ ಭಾರತದ ಮೊದಲ ಗ್ರೀನ್‌ ಫಂಗಸ್‌ ಪ್ರಕರಣ ಪತ್ತೆ..!

ಇಂದೋರ್‌: ಕೋವಿಡ್‌ ಉಲ್ಬಣದ ಮಧ್ಯೆ ಈ ಫಂಗಸ್‌ಗಳು ಸೋಂಕು ಹೆಚ್ಚಾಗುತ್ತಿದೆ. ಈಗ ಗ್ರೀನ್‌ ಫಂಗಸ್‌ ಕಾಣಿಸಿಕೊಂಡಿದೆ..! ಈ ಮೊದಲು ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್, ಯೆಲ್ಲೋ ಫಂಗಸ್ ಕಾಣಿಸಿಒಂಡಿತ್ತು. ಈಗ ಹಸಿರು ಶಿಲೀಂಧ್ರ (ಗ್ರೀನ್‌ ಫಂಗಸ್‌) ಕಾಣಿಸಿಕೊಂಡಿದೆ. 34 ವರ್ಷದ ವ್ಯಕ್ತಿಯಲ್ಲಿ ಗ್ರೀನ್ ಫಂಗಸ್ ಪತ್ತೆಯಾಗಿದ್ದು ಆ ವ್ಯಕ್ತಿಯನ್ನು ಇಂದೋರ್‌ನಿಂದ ಮುಂಬೈನ ಹಿಂದೂಜಾ ಆಸ್ಪತ್ರೆಗೆ ಏರ್‌ಲಿಫ್ಟ್ … Continued

ಉತ್ತರ ಪ್ರದೇಶ ಗಾಜಿಯಾಬಾದ್ ಹಲ್ಲೆ ಘಟನೆ:ಎಫ್‌ ಐಆರ್‌ನಲ್ಲಿ ಟ್ವಿಟರ್, ಪತ್ರಕರ್ತರ ಹೆಸರು

ಗಾಜಿಯಾಬಾದ್‌:ಗಾಜಿಯಾಬಾದ್‌ನ ಲೋನಿಯಲ್ಲಿ ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆದ ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರ ಟ್ವಿಟರ್, ಪತ್ರಕರ್ತರು ಮತ್ತು ಇಬ್ಬರು ಕಾಂಗ್ರೆಸ್ ಮುಖಂಡರ ವಿರುದ್ಧ ಎಫ್‌ಐಆರ್ ದಾಖಲಿಸಿದೆ ಎಂದು ವರದಿಯಾಗಿದೆ. ಸ್ಥಳೀಯ ಪೊಲೀಸರು ನೀಡಿದ ದೂರಿನ ಆಧಾರದ ಮೇಲೆ ಮಂಗಳವಾರ ರಾತ್ರಿ 11.30 ರ ಸುಮಾರಿಗೆ ಗಾಜಿಯಾಬಾದ್‌ನ ಲೋನಿ ಬಾರ್ಡರ್ ಪೊಲೀಸ್ ಠಾಣೆಯಲ್ಲಿ … Continued

ಹೊಸ ಐಟಿ ನಿಯಮ ಪಾಲಿಸದ ಕಾರಣ ಭಾರತದಲ್ಲಿ ಕಾನೂನು ರಕ್ಷಣೆ ಕಳೆದುಕೊಂಡ ಟ್ವಿಟರ್

  ಹೊಸ ಐಟಿ ನಿಯಮಗಳಿಗೆ ಅನುಸಾರವಾಗಿ ಶಾಸನಬದ್ಧ ಅಧಿಕಾರಿಗಳನ್ನು ನೇಮಿಸುವಲ್ಲಿ ವಿಫಲವಾದ ಕಾರಣ ಟ್ವಿಟ್ಟರ್ ಭಾರತದಲ್ಲಿ ಕಾನೂನು ರಕ್ಷಣೆ ಕಳೆದುಕೊಂಡಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಭಾರತದಲ್ಲಿ ಪ್ರಮುಖ ಅಧಿಕಾರಿಗಳನ್ನು ನೇಮಕ ಮಾಡುವ ಅಗತ್ಯವಿರುವ ಹೊಸ ಸಾಮಾಜಿಕ ಮಾಧ್ಯಮ ನಿಯಮಗಳನ್ನು ಪಾಲಿಸಲು ವಿಫಲವಾದ ಕಾರಣ ಭಾರತದಲ್ಲಿ ಕಾನೂನು ರಕ್ಷಣೆಯನ್ನು ಕಳೆದುಕೊಂಡಿದೆ ಎಂದು ಮೂಲಗಳು … Continued

ಭಾರತದಲ್ಲಿ ಮತ್ತಷ್ಟು ಕುಸಿತಕಂಡ ಕೋವಿಡ್‌ ಸಕಾರಾತ್ಮಕ ದರ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 62,224 ಹೊಸ ಕೋವಿಡ್‌ -19 ಪ್ರಕರಣಗಳನ್ನು ವರದಿ ಮಾಡಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು 8,65,432 ಕ್ಕೆ ಒಯ್ದಿದೆ. ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ದೇಶದ ಒಟ್ಟು ಪ್ರಕರಣ 2,96,33,105 ಕ್ಕೆ ಏರಿದೆ. ದೈನಂದಿನ ಸಕಾರಾತ್ಮಕ ದರವು ಶೇಕಡಾ 3.2ಕ್ಕೆ ಕುಸಿದಿದೆ. ಸತತ 9 ದಿನಗಳಿಂದ ಶೇಕಡಾ 5 ಕ್ಕಿಂತ … Continued

ಕೋವಿಡ್ ಚಿಕಿತ್ಸೆಗಾಗಿ ದೇಶದ ಮೊದಲ ಎಂಟಿ-ಮೈಕ್ರೋಬಿಯಲ್ ಆಯುರ್ವೇದ ಔಷಧ ಕೋವಿರಕ್ಷಾ ಬಿಡುಗಡೆ

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಆಯುರ್ವೇದದ ಸಂಶೋಧನೆಗಳತ್ತ ಗಮನ ಹರಿಸಬೇಕಾದ ಅಗತ್ಯತೆ ಮತ್ತು ಜೀವನಶೈಲಿ ಕಾಯಿಲೆಗಳಿಗೆ ಇದು ಹೇಗೆ ಉತ್ತಮ ಪರಿಹಾರವನ್ನು ನೀಡುತ್ತದೆ ಎಂಬುದನ್ನು ಒತ್ತಿಹೇಳಿದ ಒಂದು ದಿನದ ನಂತರ, ನ್ಯಾನೊತಂತ್ರಜ್ಞಾನ ಆಧಾರಿತ ಸ್ಟಾರ್ಟ್‌ ಅಪ್‌ ನೂತನ್ ಲ್ಯಾಬ್ಸ್ ಮಂಗಳವಾರ ಕೋವಿಡ್ ಅನ್ನು ತಡೆಗಟ್ಟಲು ಮತ್ತು ರೋಗದ ಚಿಕಿತ್ಸೆಯಲ್ಲಿ ಸಹಾಯ ಮಾಡುವ ಆಯುರ್ವೇದ … Continued

ಭಾರತಕ್ಕೆ ಮಧ್ಯಂತರ ಮುಖ್ಯ ಅನುಸರಣೆ ಅಧಿಕಾರಿ ನೇಮಿಸಿದ ಟ್ವಿಟರ್

ನವದೆಹಲಿ: ಹೊಸ ಐಟಿ ನಿಯಮಗಳನ್ನು ಪಾಲಿಸದ ಕಾರಣಕ್ಕಾಗಿ ಸರ್ಕಾರವು ಟ್ವಿಟ್ಟರ್ ಗೆ ನೋಟಿಸ್‌ ನೀಡಿದ ಕೆಲವೇ ದಿನಗಳ ನಂತರ, ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಮಂಗಳವಾರ ಮಧ್ಯಂತರ ಮುಖ್ಯ ಅನುಸರಣೆ ಅಧಿಕಾರಿಯನ್ನು ನೇಮಕ ಮಾಡಿದೆ ಎಂದು ಹೇಳಿದೆ ಮತ್ತು ಅಧಿಕಾರಿಯ ವಿವರಗಳನ್ನು ಶೀಘ್ರದಲ್ಲೇ ಐಟಿ ಸಚಿವಾಲಯದೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಕಂಪನಿ ತಿಳಿಸಿದೆ. ಕಂಪನಿಯು ಹೊಸ ಮಾರ್ಗಸೂಚಿಗಳನ್ನು ಅನುಸರಿಸಲು ಎಲ್ಲ … Continued

ಡೆಲ್ಟಾ ಪ್ಲಸ್‌ ರೂಪಾಂತರಿ ಬಗ್ಗೆ ಜಾಗೃತಿ ಬೇಕು, ಲಸಿಕಾ ಅಭಿಯಾನಕ್ಕೆ ವೇಗ :ಡಾ.ಪಾಲ್

ನವದೆಹಲಿ : ಭಾರತದಲ್ಲಿ ಪತ್ತೆಯಾದ ಹೊಸ ಕೋವಿಡ್ ರೂಪಾಂತರಿ ಡೆಲ್ಟಾ ಪ್ಲಸ್(ಎವೈ.1) ಸೋಂಕನ್ನು ಗಮನದಲ್ಲಿಟ್ಟು ದೇಶದಾದ್ಯಂತ ಲಸಿಕಾ ಅಭಿಯಾನಕ್ಕೆ ವೇಗ ನೀಡಲಾಗುತ್ತದೆ ಎಂದು ನೀತಿ (ಆರೋಗ್ಯ) ಆಯೋಗದ ಸದಸ್ಯ ವಿ. ಕೆ ಪಾಲ್ ಹೇಳಿದ್ದಾರೆ. ಮಂಗಳವಾರ ಆರೋಗ್ಯ ಸಚಿವಾಲಯದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕೊರೊನಾ ಸೋಂಕು ದೇಶದಲ್ಲಿ ಗಣನೀಯವಾಗಿ ಇಳಿಮುಖವಾಗುತ್ತಿದ್ದು, ಅನೇಕ ಕಡೆಗಳಲ್ಲಿ ಅನ್ ಲಾಕ್ ಮಾಡಲಾಗುತ್ತಿದೆ. … Continued

ಮಹತ್ವದ ನಿರ್ಧಾರ.. ಕೊವಿಡ್ ಲಸಿಕೆ ಪಡೆಯಲು ಆನ್​ಲೈನ್ ನೋಂದಣಿ -ಬುಕಿಂಗ್ ಕಡ್ಡಾಯವಲ್ಲ: ಕೇಂದ್ರ ಸರ್ಕಾರ

ನವದೆಹಲಿ: ಕೋವಿಡ್‌ ವಿರುದ್ಧದ ಲಸಿಕೆ ಪಡೆಯಲು ನೋಂದಣಿ ಮಾಡಿಕೊಳ್ಳುವುದು ಅಥವಾ ಅಪಾಯಿಂಟ್​ಮೆಂಟ್ ಪಡೆದುಕೊಳ್ಳುವುದು ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ (ಜೂನ್ 15) ಮಾಹಿತಿ ನೀಡಿದೆ. ಗ್ರಾಮೀಣ ಭಾಗದ ಹಲವು ಮಂದಿ ಲಸಿಕೆ ಪಡೆಯುವಲ್ಲಿ ಕಷ್ಟ ಅನುಭವಿಸುತ್ತಿದ್ದ ಹಿನ್ನೆಲೆಯಲ್ಲಿ ನೋಂದಣಿ ಅವಶ್ಯಕತೆ ಇಲ್ಲ ಎಂದು ಸರ್ಕಾರ ತಿಳಿಸಿದೆ. 18ವರ್ಷ ಮೇಲ್ಪಟ್ಟ ವ್ಯಕ್ತಿಗಳು ನೇರವಾಗಿ ಹತ್ತಿರದ ಲಸಿಕಾ … Continued

ಗೋಕರ್ಣ ಕೋಟಿತೀರ್ಥ ಸ್ವಚ್ಛತೆ, ಅಭಿವೃದ್ಧಿ ಕಾರ್ಯಕ್ಕೆ ಸಚಿವ ಈಶ್ವರಪ್ಪ ಚಾಲನೆ

ಗೋಕರ್ಣ: ಗೋಕರ್ಣದ ಕೋಟಿತೀರ್ಥವು ಉತ್ತರದ ವಾರಣಾಸಿಯ ಪವಿತ್ರ ಗಂಗೆಯ ಸ್ಥಾನವನ್ನು ಪಡೆದಿದ್ದು, ಇದರ ಪುನರುಜ್ಜೀವನಗೊಳಿಸಲು ರಾಜ್ಯದ ಬಿಜೆಪಿ ಸರ್ಕಾರ ಹಣ ಮಂಜೂರಿ ಮಾಡಿದ್ದು, ಅದರ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಗೋಕರ್ಣದ ಕೋಟಿತೀರ್ಥದ  ಸ್ವಚ್ಛತೆ ಹಾಗೂ ಅಭಿವೃದ್ಧಿಯಿಂದ ದೇಶಕ್ಕೆ ಒಳಿತಾಗಲಿದೆ ಎಂದು ಸಚಿವ ಈಶ್ವರಪ್ಪ ಹೇಳಿದರು. ಅವರು ಮಂಗಳವಾರ ಸಂಜೆ ಗೋಕರ್ಣ ದಲ್ಲಿ ಕೋಟಿತೀರ್ಥ ಅಭಿವೃದ್ಧಿ ಯೋಜನೆಗೆ … Continued