ಸ್ಟ್ರೀಟ್ ಕ್ರಿಕೆಟ್ ಆಟದಲ್ಲಿ ವಿಕೆಟ್ ಕೀಪರ್ ಆದ ನಾಯಿ..! ವೈರಲ್ ವಿಡಿಯೊ ಶೇರ್‌ ಮಾಡಿದ ಸಚಿನ್ ತೆಂಡೂಲ್ಕರ್

ನಾಯಿಗಳು ನಿಸ್ಸಂದೇಹವಾಗಿ ಒಬ್ಬರು ಹೊಂದಬಹುದಾದ ಅತ್ಯುತ್ತಮ ಒಡನಾಡಿ ಮತ್ತು ಅಂತರ್ಜಾಲದಲ್ಲಿ ಹಲವಾರು ವಿಡಿಯೊಗಳು ಅದನ್ನು ಸಾಬೀತುಪಡಿಸುತ್ತವೆ. ಅದು ನಿಮ್ಮೊಂದಿಗೆ ಟಿವಿ ವೀಕ್ಷಿಸಬಹುದು ಮತ್ತು ನಿಮ್ಮೊಂದಿಗೆ ಕ್ರಿಕೆಟ್ ಆಡಬಹುದು. ಈಗ ಭಾರತದ ಕ್ರಿಕೆಟ್‌ ದಂತಕತೆ ಸಚಿನ್ ತೆಂಡೂಲ್ಕರ್ ಅವರು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಈ ವೈರಲ್ ವಿಡಿಯೊ ನಾಯಿಯ ವಿಶೇಷತೆ ಬಗ್ಗೆ ಹೇಳುತ್ತದೆ. ರಸ್ತೆಯೊಂದರಲ್ಲಿ ಕೋಲುಗಳಿಂದ ಮಾಡಿದ … Continued

ಶಬರಿಮಲೆಯಲ್ಲಿ ಹಲಾಲ್‌ ಬೆಲ್ಲ ಬಳಕೆ ಪ್ರಕರಣ: ಆಹಾರ -ಭದ್ರತಾ ಇಲಾಖೆ ಪ್ರತಿಕ್ರಿಯೆ ಕೇಳಿದ ಕೇರಳ ಹೈಕೋರ್ಟ್‌

ತಿರುವನಂತಪುರಂ: ಶಬರಿಮಲೆ ದೇವಸ್ಥಾನದಲ್ಲಿ ಅವಧಿ ಮುಗಿದ ಮತ್ತು ಇಸ್ಲಾಂ ಧರ್ಮಕ್ಕನುಗುಣವಾಗಿ ಹಲಾಲ್‌ ಮಾಡಲಾದ ಬೆಲ್ಲ ಬಳಸಿ ನೈವೇದ್ಯ ಅಥವಾ ಪ್ರಸಾದ ತಯಾರಿಸಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಆಹಾರ ಮತ್ತು ಭದ್ರತಾ ಇಲಾಖೆಯ ಆಯುಕ್ತರಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೋಮವಾರ ಕೇರಳ ಹೈಕೋರ್ಟ್‌ ನಿರ್ದೇಶಿಸಿದೆ. ಶಬರಿಮಲೆ ಕರ್ಮ ಸಮಿತಿಯ ಸಂಚಾಲಕರು ಅಶುದ್ಧವಾದ ಹಲಾಲ್‌ ಬೆಲ್ಲ ಬಳಕೆ ನಿಷಿದ್ಧಗೊಳಿಸುವಂತೆ ಕೋರಿ … Continued

ವಿಧಾನ ಪರಿಷತ್‌ ಚುನಾವಣೆ: ಕಾಂಗ್ರೆಸ್ಸಿನಿಂದ 17 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿಗಳ ಪಟ್ಟಿ ಪ್ರಕಟ ಮಾಡಲಾಗಿದೆ. ಮಂಥರ್ ಗೌಡಗೆ ಕೊಡಗಿನಿಂದ ಟಿಕೆಟ್ ನೀಡಲಾಗಿದೆ. ಬಿಜೆಪಿ ನಾಯಕ ಎ. ಮಂಜು ಪುತ್ರನಿಗೆ ಕೊಡಗು ‘ಕೈ’ ಟಿಕೆಟ್ ನೀಡಲಾಗಿದೆ. ತುಮಕೂರಿನಲ್ಲಿ ಆರ್.ರಾಜೇಂದ್ರಗೆ ಕಾಂಗ್ರೆಸ್​ ಟಿಕೆಟ್ ಲಭಿಸಿದೆ. ಮಾಜಿ ಶಾಸಕ‌ ಕೆ.ಎನ್.ರಾಜಣ್ಣ ಪುತ್ರ ರಾಜೇಂದ್ರಗೆ ಟಿಕೆಟ್ ಲಭಿಸಿದೆ. ಬಳ್ಳಾರಿಯಿಂದ ಮಲ್ಲಿಕಾರ್ಜುನ ಖರ್ಗೆ ಬೆಂಬಲಿಗರಾಗಿರುವ ಕೆ.ಸಿ.ಕೊಂಡಯ್ಯಗೆ … Continued

ಆಘಾತಕಾರಿ…ರೈಲು ಹಾಯ್ದು ಪಬ್‌ಜೀ ಆಡುತ್ತ ಮೈಮರತಿದ್ದ ಇಬ್ಬರು ಹುಡುಗರು ಸಾವು

ಮಥುರಾ:  ಆಘಾತಕಾರಿ ಘಟನೆಯಲ್ಲಿ ಜನಪ್ರಿಯ ಆನ್‌ಲೈನ್ ಗೇಮ್‌ ಆಗಿರುವ ಪಬ್‌ಜೀ (PUBG) ಆಡುತ್ತಿದ್ದ ಇಬ್ಬರು ಬಾಲಕರು ಮಥುರಾ-ಕಾಸ್‌ಗಂಜ್ ಟ್ರ್ಯಾಕ್‌ನಲ್ಲಿ ಗೂಡ್ಸ್ ರೈಲಿಗೆ ಸಿಲುಕಿ ಮೃತಪಟ್ಟ ಘಟನೆ ಲಕ್ಷ್ಮಿನಗರ ಪ್ರದೇಶದಲ್ಲಿ ನಡೆದಿದೆ. ಅಪಘಾತ ಸಂಭವಿಸಿದಾಗ ಬಾಲಕರು ನಡೆದುಕೊಂಡು ಹೋಗುತ್ತಿದ್ದರು. ಜಮುನಾಪರ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಶಶಿ ಪ್ರಕಾಶ್ ಸಿಂಗ್ ಪ್ರಕಾರ, “ಅಪಘಾತ ಸಂಭವಿಸಿದಾಗ … Continued

ನಟ ಕಮಲ್ ಹಾಸನ್ ಗೆ ಕೊರೊನಾ ಸೋಂಕು

ಚೆನ್ನೈ: ಖ್ಯಾತ ನಟ ಕಮಲ್ ಹಾಸನ್ ಅವರಿಗೆ ಕೊರೊನಾ ದೃಢಪಟ್ಟಿದೆ. ಅವರಿಗೆ ಸಣ್ಣ ಪ್ರಮಾಣದ ಕೊವೀಡ್-19 ಲಕ್ಷಣಗಳಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಇತ್ತೀಚಿಗಷ್ಟೇ ಅಮೆರಿಕಕ್ಕೆ ಪ್ರವಾಸ ಹೋಗಿದ್ದರು. ಅಲ್ಲಿಂದ ಮರಳಿದ ನಂತರ ಅವರಿಗೆ ಸಣ್ಣ ಪ್ರಮಾಣದ ರೋಗ ಲಕ್ಷಣಗಳು ಕಾಣಿಸಿಕೊಂಡಿದೆ. ತಕ್ಷಣವೇ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿದ್ದರು. ವರದಿ ಬಂದಿದ್ದು, ಕೊರೊನಾ ಪಾಸಿಟಿವ್ ಆಗಿರುವುದು ದೃಢಪಟ್ಟಿದೆ. … Continued

ಪಾಕ್ ಎಫ್-16 ವಿಮಾನ ಹೊಡೆದುರುಳಿಸಿದ ಅಭಿನಂದನ್ ವರ್ಧಮಾನಗೆ ವೀರಚಕ್ರ ಪ್ರಶಸ್ತಿ ಪ್ರದಾನ

ನವದೆಹಲಿ: ವೈಮಾನಿಕ ಯುದ್ಧದಲ್ಲಿ ಪಾಕಿಸ್ತಾನದ ಎಫ್-16 ಯುದ್ಧ ವಿಮಾನ ಹೊಡೆದುರುಳಿಸಿದ್ದ ವಿಂಗ್ ಕಮಾಂಡರ್ ಬಾಲಕೋಟ ಹೀರೋ ಅಭಿನಂದನ್ ವರ್ಧಮಾನ್ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ವೀರಚಕ್ರ ಪ್ರಶಸ್ತಿ ಪ್ರದಾನ ಮಾಡಿದರು. ಪುಲ್ವಾಮಾ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ವಾಯುಪಡೆಗಳ ನಡುವಿನ ವೈಮಾನಿಕ ಚಕಮಕಿಯಲ್ಲಿ ವರ್ಧಮಾನ್ ಪಾಕಿಸ್ತಾನದ ಯುದ್ಧವಿಮಾನ ಎಫ್-16 ಅನ್ನು ಹೊಡೆದುರುಳಿಸಿದ ನಂತರ … Continued

ಆಂಧ್ರಪ್ರದೇಶಕ್ಕೆ ಅಮರಾವತಿ ರಾಜಧಾನಿ: ಸಿಎಂ ಜಗನ್ ಮೋಹನ್ ರೆಡ್ಡಿ ಘೋಷಣೆ

ಅಮರಾವತಿ: ರಾಜಧಾನಿ ಬಗ್ಗೆ ವಿವಾದದ ನಡುವೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸೋಮವಾರ ರಾಜ್ಯಕ್ಕೆ ಒಂದೇ ರಾಜಧಾನಿ, ಅದು ಅಮರಾವತಿ ಎಂದು ಘೋಷಿಸಿದ್ದಾರೆ. ಈ ಘೋಷಣೆಯೊಂದಿಗೆ ಮೂರು ರಾಜಧಾನಿ ಮಸೂದೆಯನ್ನು ಹಿಂಪಡೆದು ಹೈಕೋರ್ಟ್‌ಗೆ ನಿರ್ಧಾರ ತಿಳಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಅಮರಾವತಿ ಶಾಸಕಾಂಗ ರಾಜಧಾನಿ, ವಿಶಾಖಪಟ್ಟಣಂ ಕಾರ್ಯಕಾರಿ ಮತ್ತು ಕರ್ನೂಲ್ ನ್ಯಾಯಾಂಗ ರಾಜಧಾನಿ … Continued

ಕೃಷಿ ಕಾನೂನು ವಾಪಸ್ ಬೆನ್ನಲ್ಲೇ ಪಂಜಾಬ್ ಚುನಾವಣೆಗೆ ಮುನ್ನ ಬಿಜೆಪಿ-ಅಮರಿಂದರ್ ಸಿಂಗ್ ಮೈತ್ರಿಯಾದ್ರೆ ಅಲ್ಲಿ ನಾಲ್ಕನೇ ರಂಗ ಉದಯ

ನವದೆಹಲಿ: ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮೋದಿ ಸರ್ಕಾರದ ಕ್ರಮವು ಪಂಜಾಬ್ ಚುನಾವಣಾ ಅಖಾಡವನ್ನು ವಿಚಲಿತಗೊಳಿಸಿದೆ. ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರದ ಐದು ಚುನಾವಣೆಗೆ ಒಳಪಟ್ಟಿರುವ ರಾಜ್ಯಗಳಲ್ಲಿ, ಹೆಚ್ಚಾಗಿ ಕೃಷಿ ಪ್ರಧಾನ ರಾಜ್ಯವಾದ ಪಂಜಾಬ್ ಈ ಕ್ರಮದಿಂದ ಚುನಾವಣೆ ಮೇಲೆ ನೇರ ಪರಿಣಾಮ ಬೀರುತ್ತದೆ ಕೇಂದ್ರ ಸರ್ಕಾರ ಮೂರು ಕೃಷಿ ಕಾನೂನುಗಳನ್ನು … Continued

ಮುಂಬೈ ಮಾಜಿ ಪೊಲೀಸ್‌ ಆಯುಕ್ತ ಪರಮ್ ಬೀರ್ ಸಿಂಗ್ ಬಂಧಿಸದಂತೆ ಸುಪ್ರೀಂ ಕೋರ್ಟ್ ರಕ್ಷಣೆ, ತನಿಖೆಗೆ ಹಾಜರಾಗುವಂತೆ ಸೂಚನೆ

ನವದೆಹಲಿ: ಸುಲಿಗೆ ಪ್ರಕರಣದಲ್ಲಿ ಆರೋಪಿಯಾಗಿರುವ ಮುಂಬೈನ ಮಾಜಿ ಪೊಲೀಸ್‌ ಆಯುಕ್ತ ಪೋಲೀಸ್ ಪರಮ್ ಬೀರ್ ಸಿಂಗ್ ಅವರನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್ ರಕ್ಷಣೆ ನೀಡಿದೆ. ಸಿಂಗ್ ಅವರ ಮನವಿಯನ್ನು ಆಲಿಸಲು ಒಪ್ಪಿಗೆ ಸೂಚಿಸಿದ ನ್ಯಾಯಾಲಯವು ಮಹಾರಾಷ್ಟ್ರ ಸರ್ಕಾರ ಮತ್ತು ಸಿಬಿಐಗೆ ನೋಟಿಸ್ ಜಾರಿ ಮಾಡಿದೆ. ಮುಂದಿನ ವಿಚಾರಣೆಯನ್ನು ಡಿಸೆಂಬರ್ 6ಕ್ಕೆ ನಿಗದಿಪಡಿಸಲಾಗಿದೆ. ಇದನ್ನು ಪುರಸ್ಕರಿಸಿದ ನ್ಯಾಯಾಲಯವು … Continued

ಮನ ಗೆಲ್ಲುವ ಮೊಬೈಲ್​ನಲ್ಲಿ ವಿಡಿಯೊ ನೋಡಿದ ಮಂಗಗಳ ಪ್ರತಿಕ್ರಿಯೆ…! ವೀಕ್ಷಿಸಿ

ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ತಮಾಷೆಯ ವಿಡಿಯೊಗಳು ಮನ ಗೆಲ್ಲುತ್ತವೆ. ಇದೀಗ ವೈರಲ್ ಆದ ವಿಡಿಯೊದಲ್ಲಿ ಮೂರು ಕೋತಿಗಳು ಮೊಬೈಲ್ ನೋಡುತ್ತಿವೆ. ವಿಡಿಯೊ ನೋಡಿದ ಕೋತಿಗಳ ಪ್ರತಿಕ್ರಿಯೆ ಹೇಗೆ ಸ್ವಾರಸ್ಯಕರವಾಗಿತ್ತು ಎಂಬುದನ್ನು ಈ ವಿಡಿಯೊದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೊ ನೋಡಿದ ನೆಟ್ಟಿಗರು ಮಂಗಗಳ ಪ್ರತಿಕ್ರಿಯೆಗೆ ತಮಾಷೆ ಮಾಡಿದ್ದಾರೆ. ಮೂರು ಕೋತಿಗಳು ಸ್ಮಾರ್ಟ್ ಫೋನ್ ಹಿಡಿದು ವಿಡಿಯೊ ನೋಡುತ್ತಾ … Continued