ಪಶ್ಚಿಮ ಬಂಗಾಳದಲ್ಲಿ ಕೋವಿಡ್ ಲಸಿಕಾ ಕೇಂದ್ರದ ಬಳಿ ಕಾಲ್ತುಳಿತಕ್ಕೆ 20 ಜನರಿಗೆ ಗಾಯ..!

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಜಲ ಪೈಗುರಿ ಜಿಲ್ಲೆಯ ಕೋವಿಡ್-19 ಲಸಿಕಾ ಕೇಂದ್ರವೊಂದರ ಬಳಿ ಕಾಲ್ತುಳಿತದಿಂದ ಸುಮಾರು 20 ಜನರು ಗಾಯಗೊಂಡಿದ್ದಾರೆ. ಸುಮಾರು 30 ಜನ ಗಾಯಗೊಂಡಿದ್ದರೂ ಪೊಲೀಸರು 20 ಜನ ಗಾಯಗೊಂಡಿರುವುದಾಗಿ ಸುಳ್ಳು ಹೇಳುತ್ತಿದ್ದಾರೆ. ಗಾಯಾಳುಗಳ ಪೈಕಿ ಐವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಉತ್ತರ ಬಂಗಾಳದ ಜಲಪೈ ಗುರಿಯ ದುಪ್ಗುರಿ ಬ್ಲಾಕ್ ನಲ್ಲಿ … Continued

ಡೆಲ್ಟಾ ಉಲ್ಬಣದ ಸಮಯದಲ್ಲಿ 25% ಆರೋಗ್ಯ ಕಾರ್ಯಕರ್ತರಲ್ಲಿ ಕೋವಿಡ್ -19 ಸೋಂಕು ಪತ್ತೆ: ಅಧ್ಯಯನ

ಡೆಲ್ಟಾ ವೇರಿಯಂಟ್ ಉಲ್ಬಣಗೊಳ್ಳುವಿಕೆಯ ಸಮಯದಲ್ಲಿ ಸಂಪೂರ್ಣವಾಗಿ ಲಸಿಕೆ ಹಾಕಿದರೂ ಶೇಕಡಾ 25 ಕ್ಕಿಂತ ಹೆಚ್ಚು ಆರೋಗ್ಯ ಕಾರ್ಯಕರ್ತರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಇತ್ತೀಚಿನ ಅಧ್ಯಯನವು ಬಹಿರಂಗಪಡಿಸಿದೆ. ಇದು ವ್ಯಾಕ್ಸಿನೇಷನ್ ನಂತರವೂ ಮಾಸ್ಕ್‌ಗಳ ನಿರಂತರ ಬಳಕೆಗೆ ಸೂಚಿಸುತ್ತದೆ. ಇನ್ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಅಂಡ್ ಇಂಟಿಗ್ರೇಟಿವ್ ಬಯಾಲಜಿ (ಐಜಿಐಬಿ) ಮತ್ತು ದೆಹಲಿ-ಎನ್‌ಸಿಆರ್‌ನಲ್ಲಿನ ಮ್ಯಾಕ್ಸ್ ಆಸ್ಪತ್ರೆಗಳು ನಡೆಸಿದ … Continued

ಮತ್ತೊಂದು ದಾಖಲೆ :ಒಂದೇ ದಿನದಲ್ಲಿ 1.21 ಕೋಟಿ ಕೋವಿಡ್‌ ಲಸಿಕೆ ಡೋಸ್ ನೀಡಿದ ಭಾರತ..!

ನವದೆಹಲಿ: ಭಾರತವು ಇಂದು (ಮಂಗಳವಾರ) 1.21 ಕೋಟಿ ಡೋಸ್‌ಗಳ ನೀಡುವುದರೊಂದಿಗೆ ಹೊಸ ಲಸಿಕೆ ಮೈಲಿಗಲ್ಲನ್ನು ಸಾಧಿಸಿದೆ. ಒಟ್ಟಾರೆಯಾಗಿ, ದೇಶದಲ್ಲಿ ಇದುವರೆಗೆ 65 ಕೋಟಿಗೂ ಅಧಿಕ ಡೋಸ್‌ಗಳನ್ನು ನೀಡಲಾಗಿದೆ. ಕೋ-ವಿನ್ ವೆಬ್‌ಸೈಟ್‌ನಲ್ಲಿನ ಇಂದಿನ ಅಂಕಿಅಂಶಗಳು ದಿನಕ್ಕೆ ಇಲ್ಲಿಯವರೆಗೆ 1,21,99,230 ಡೋಸ್‌ಗಳನ್ನು ನೀಡಲಾಗಿದೆ ಎಂದು ತೋರಿಸಿದೆ. ಭಾರತವು ಈ ವರ್ಷ ಆಗಸ್ಟ್ 27 ರಂದು ಮೊದಲ ಬಾರಿಗೆ ಒಂದು … Continued

ಮಹತ್ವದ ಬೆಳವಣಿಗೆಯಲ್ಲಿ ತಾಲಿಬಾನ್ ಜೊತೆಗೆ ಭಾರತದ ಮೊದಲ ರಾಜತಾಂತ್ರಿಕ ಸಭೆ

ಕತಾರ್‌ನಲ್ಲಿರುವ ಭಾರತೀಯ ರಾಯಭಾರಿ ದೀಪಕ್ ಮಿತ್ತಲ್ ಅವರು ಮಂಗಳವಾರ ದೋಹಾದಲ್ಲಿ ತಾಲಿಬಾನ್‌ನ ರಾಜಕೀಯ ಕಚೇರಿಯ ಮುಖ್ಯಸ್ಥ ಶೇರ್ ಮೊಹಮ್ಮದ್ ಅಬ್ಬಾಸ್ ಸ್ತಾನೆಕ್‌ಜಾಯ್ ಅವರನ್ನು ಭೇಟಿ ಮಾಡಿದರು ಮತ್ತು ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆ, ಭದ್ರತೆ ಮತ್ತು ಆರಂಭಿಕ ವಾಪಸಾತಿ ಕುರಿತು ಚರ್ಚೆ ನಡೆಸಿದರು. ತಾಲಿಬಾನ್ ಕೋರಿಕೆಯ ಮೇರೆಗೆ ದೋಹಾದಲ್ಲಿರುವ ಭಾರತದ ರಾಯಭಾರ ಕಚೇರಿಯಲ್ಲಿ ಈ ಸಭೆ … Continued

ತೆಲಂಗಾಣದಲ್ಲಿ ಭಾರೀ ಮಳೆ: ಪ್ರವಾಹದಲ್ಲಿ ನವವಧು ಸೇರಿ ಏಳು ಮಂದಿ ಸಾವು

ಹೈದರಾಬಾದ್‌: ತೆಲಂಗಾಣದ ಹಲವು ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾದ ಪ್ರವಾಹದಲ್ಲಿ ನವ ವಿವಾಹಿತೆ ಸೇರಿದಂತೆ ಕನಿಷ್ಠ ಏಳು ಮಂದಿ ಕೊಚ್ಚಿ ಹೋಗಿದ್ದಾರೆ. ವಿಕಾರಾಬಾದ್‌ ಜಿಲ್ಲೆಯಲ್ಲಿ ಮದುವೆ ಮುಗಿಸಿಕೊಂಡು  ವಧು ಪ್ರವಾಲಿಕಾ ಮತ್ತು ವರ ನವಾಜ್‌ ರೆಡ್ಡಿ ಜೊತೆಗೆ ಇತರೆ ನಾಲ್ಕು ಜನ ಪ್ರಯಾಣಿಸುತ್ತಿದ್ದಾಗ  ಪ್ರವಾಹದ ರಭಸದಲ್ಲಿ ಸಿಲುಕಿದ್ದಾರೆ.  ಅತ್ತಿಗೆ ಶ್ವೇತಾ ಮತ್ತು ಅವರ ಎಂಟು … Continued

ನೋಯ್ಡಾ: 40 ಅಂತಸ್ತಿನ ಅವಳಿ ಕಟ್ಟಡ ಕೆಡವಲು ಸುಪ್ರೀಂಕೋರ್ಟ್ ಆದೇಶ

ನವದೆಹಲಿ: ಕಟ್ಟಡದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ನೋಯ್ಡಾದಲ್ಲಿರುವ ಸೂಪರ್ ಟೆಕ್ ಎಮರಾಲ್ಡ್‌ ಯೋಜನೆಯ 40 ಅಂತಸ್ತಿನ ಟವರುಗಳನ್ನು ಕೆಡವಲು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದು, ಮೂರು ತಿಂಗಳು ಗಡುವು ನೀಡಿದೆ. ಮನೆ ಖರೀದಿದಾರಿಗೆ ಬುಕಿಂಗ್ ಮಾಡಿದ ಸಮಯದಿಂದ ಸಂಪೂರ್ಣ ಮೊತ್ತವನ್ನು ಶೇ.12 ರ ಬಡ್ಡಿಯೊಂದಿಗೆ ಮರುಪಾವತಿ ಮಾಡಬೇಕು ಮತ್ತು ಅವಳಿ ಗೋಪುರಗಳ ನಿರ್ಮಾಣದಿಂದ ಉಂಟಾದ ಕಿರುಕುಳಕ್ಕೆ ನಿವಾಸಿಗಳ … Continued

ಮಹಿಳಾ ಅಧಿಕಾರಿಯ ಬೆರಳು ಕತ್ತರಿಸಿದ ಬೀದಿ ವ್ಯಾಪಾರಿ..!

ಥಾಣೆ: ಬೀದಿ ವ್ಯಾಪಾರಿಗಳ ಅತಿಕ್ರಮಣ ವಿರೋಧಿ ಅಭಿಯಾನದ ಸಮಯದಲ್ಲಿ ಬೀದ ವ್ಯಾಪಾಯೊಬ್ಬರಿ ಚಾಕು ಬೀಸಿದ ಪರಿಣಾಮ ಮಹಿಳಾ ಅಧಿಕಾರಿಯೊಬ್ಬರ ಮೂರು ಬೆರಳು ತುಂಡಾಗಿ ತಲೆಗೆ ಗಾಯವಾದ ಘಟನೆ ಮಹಾರಾಷ್ಟ್ರದಲ್ಲಿ ನೆಡದಿದೆ. ಮಜಿವಾಡ-ಮಾನ್ಪಡಾ ಪ್ರದೇಶದಲ್ಲಿ ಕಾಸರ್ವದಾವಲಿ ಜಂಕ್ಷನ್‍ನಲ್ಲಿ ಬೀದಿ ವ್ಯಾಪಾರಿಗಳ ಅತಿಕ್ರಮಣ ತೆರವು ನೋಡಿಕೊಳ್ಳುತ್ತಿದ್ದಾಗ, ಒಬ್ಬ ವ್ಯಾಪಾರಿ ಮಹಿಳಾ ಅಧಿಕಾರಿ ಕಲ್ಪಿತ ಪಿಂಪಲ್ ಎಂಬವರ ಮೇಲೆ ಚಾಕುವಿನಿಂದ … Continued

ಪಾಕ್‌ ಜೈಲಿನಲ್ಲಿದ್ದ ಇಬ್ಬರು ಭಾರತೀಯರು ಹಸ್ತಾಂತರ

ಲಾಹೋರ್: ಅಕ್ರಮ ಗಡಿ ಪ್ರವೇಶದ ಆರೋಪದ ಮೇಲೆ ಎಂಟು ವರ್ಷಗಳಿಂದ ಪಾಕಿಸ್ತಾನದ ಜೈಲಿನಲ್ಲಿದ್ದ ಇಬ್ಬರು ಭಾರತೀಯರನ್ನು ವಾಘಾ ಗಡಿಯಲ್ಲಿ ಗಡಿ ಭದ್ರತಾ ಪಡೆಯ ಸಿಬ್ಬಂದಿಗೆ ಹಸ್ತಾಂತರಿಸಲಾಗಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2013ರಲ್ಲಿ ಭಾರತೀಯ ಪ್ರಜೆಗಳಾದ ಶರ್ಮಾ ರಜಪೂತ್ ಮತ್ತು ರಾಮ್ ಬುಹಾದರ್ ಅವರನ್ನು ಕಾಶ್ಮೀರದಿಂದ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಪ್ರದೇಶವನ್ನು ಪ್ರವೇಶಿಸಿದರು ಎಂದು … Continued

ಭಾರತದ ಅನುಸರಣೆ ವರದಿ: ಜುಲೈ ತಿಂಗಳಲ್ಲಿ 95,680 ಕಂಟೆಂಟ್ ತೆಗೆದುಹಾಕಿದ ಗೂಗಲ್

ನವದೆಹಲಿ: ದೂರುಗಳನ್ನು ಆಧರಿಸಿ ಜುಲೈ ತಿಂಗಳಲ್ಲಿ ಗೂಗಲ್ ಸಂಸ್ಥೆ 95,680 ವಿಷಯದ ತುಣುಕುಗಳನ್ನು ತೆಗೆದುಹಾಕಿದೆ. ಗೂಗಲ್ ಸಂಸ್ಥೆಗೆ 36,934 ದೂರುಗಳನ್ನು ಸ್ವೀಕರಿಸಿದೆ. ಮಾಸಿಕ ಪಾರದರ್ಶಕ ಭಾರತದ ಅನುಸರಣೆ  ವರದಿಯಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಬಳಕೆದಾರರಿಂದ ದೂರನ್ನು ಆಧರಿಸಿ ಕಂಟೆಂಟ್ ತೆಗೆಯುವುದರ ಜೊತೆಗೆ ಸ್ವಯಂ ಚಾಲಿತವಾಗಿ 5,76,892 ಕಂಟೆಂಟ್ ತುಣುಕುಗಳನ್ನು ಗೂಗಲ್ ತೆಗೆದುಹಾಕಿದೆ. ಮೇ 26 ರಂದು … Continued